Leviticus · chapter 17 · verse 16
Leviticus 17:16 in Kannada
ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
Aadare avanu avugalannu ogedukollade iddare illave taanu snaanamaadadiddare tanna aparaadhavannu taane hottukollabeku.
Leviticus 17:16 in English
- King James Version (KJV)
- But if he wash [them] not, nor bathe his flesh; then he shall bear his iniquity.
- World English Bible (WEB)
- But if he doesn’t wash them, or bathe his flesh, then he shall bear his iniquity.’”
- American Standard Version (ASV)
- But if he wash them not, nor bathe his flesh, then he shall bear his iniquity.
- Bible in Basic English (BBE)
- But if his clothing is not washed and his body bathed, his sin will be on him.
- Darby Translation (DBY)
- And if he wash them not nor bathe his flesh, then he shall bear his iniquity.
- Webster's Bible (WBS)
- But if he doth not wash [them] , nor bathe his flesh; then he shall bear his iniquity.
- Young's Literal Translation (YLT)
- and if he wash not, and his flesh bathe not — then he hath borne his iniquity.'
Read in context
- 14ಯಾಕಂದರೆ ರಕ್ತವೇ ಎಲ್ಲಾ ಶರೀರಗಳ ಜೀವವಾಗಿದೆ; ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ; ಆದದರಿಂದ ನಾನು ಇಸ್ರಾ ಯೇಲ್ ಮಕ್ಕಳಿಗೆ--ನೀವು ಯಾವ ಬಗೆಯ ಶರೀರದ ರಕ್ತವನ್ನೂ ತಿನ್ನಬಾರದೆಂದು ಹೇಳಿದ್ದೇನೆ. ಎಲ್ಲಾ ಶರೀರಗಳ ಜೀವವು ರಕ್ತದಲ್ಲಿಯೇ ಇದೆ; ಇದನ್ನು ತಿನ್ನುವ ಯಾವನಾದರೂ ತೆಗೆದುಹಾಕಲ್ಪಡಬೇಕು.
- 15ನಿಮ್ಮ ದೇಶದವನಾಗಲಿ ಪರಕೀಯನಾಗಲಿ ತನ್ನ ಷ್ಟಕ್ಕೆ ತಾನೇ ಸತ್ತುಹೋದದ್ದನ್ನು ಇಲ್ಲವೆ ಮೃಗಗಳಿಂದ ಹರಿಯಲ್ಪಟ್ಟಿರುವದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು, ತರುವಾಯ ಅವನು ಶುದ್ಧನಾಗಿರುವನು.ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
- 16ಆದರೆ ಅವನು ಅವುಗಳನ್ನು ಒಗೆದುಕೊಳ್ಳದೆ ಇದ್ದರೆ ಇಲ್ಲವೆ ತಾನು ಸ್ನಾನಮಾಡದಿದ್ದರೆ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳಬೇಕು.
Cross references
- Leviticus 5:1 ಯಾಜಕಕಾಂಡ 5:1ಯಾವನಾದರೂ ಆಣೆಯಿಡುವದನ್ನು ಕೇಳಿ ಸಾಕ್ಷಿಯಾಗಿದ್ದು ಪಾಪಮಾಡಿದರೆ ಅವನು ಅದನ್ನು ನೋಡಿಯೂ ಇಲ್ಲವೆ ತಿಳಿದೂ ಹೇಳದಿದ್ದರೆ ಅವನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು.
- Hebrews 9:28 ಇಬ್ರಿಯರಿಗೆ 9:28ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.
- Isaiah 53:11 ಯೆಶಾಯ 53:11ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Leviticus 20:19–20 ಯಾಜಕಕಾಂಡ 20:19–20ಇದಲ್ಲದೆ ನೀನು ನಿನ್ನ ತಾಯಿಯ ಸಹೋದರಿಯ ಇಲ್ಲವೆ ತಂದೆಯ ಸಹೋದರಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು, ಕಾಣುವಂತೆ ಮಾಡಿದವನು ತನ್ನ ಹತ್ತಿರದ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡಿದ್ದಾನೆ; ಅವರು ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು. ಒಬ್ಬನು ತನ್ನ ಚಿಕ್ಕಪ್ಪನ ಹೆಂಡತಿಯೊಂದಿಗೆ ಸಂಗಮಿಸಿದರೆ ಅವನು ತನ್ನ ಚಿಕ್ಕಪ್ಪನ ಬೆತ್ತಲೆತನವನ್ನು ಕಾಣುವಂತೆ ಮಾಡಿದ್ದಾನೆ; ಅವರು ತಮ್ಮ ಪಾಪವನ್ನು ಹೊತ್ತುಕೊಳ್ಳಬೇಕು; ಅವರು ಮಕ್ಕಳಿಲ್ಲದೆ ಸಾಯು ವರು.
- Leviticus 20:17 ಯಾಜಕಕಾಂಡ 20:17ಒಬ್ಬನು ತನ್ನ ತಂದೆಯ ಇಲ್ಲವೆ ತನ್ನ ತಾಯಿಯ ಮಗಳಾದ ತನ್ನ ಸಹೋದರಿಯನ್ನು ತೆಗೆದುಕೊಂಡು ಅವಳ ಬೆತ್ತಲೆ ತನವನ್ನು ನೋಡಿದರೆ ಇಲ್ಲವೆ ಅವಳು ಅವನ ಬೆತ್ತಲೆತನವನ್ನು ನೋಡಿದರೆ ಅದು ದುಷ್ಟತನವೇ; ಅವರು ತಮ್ಮ ಜನರ ದೃಷ್ಟಿಯಲ್ಲಿಯೇ ತೆಗೆದು ಹಾಕಲ್ಪಡಬೇಕು; ಅವರ ರಕ್ತವು ಅವರ ಮೇಲೆ ಇರುವದು. ಅವನು ತನ್ನ ಸಹೋದರಿಯ ಬೆತ್ತಲೆತನ ವನ್ನು ಕಾಣುವಂತೆ ಮಾಡಿದ್ದರಿಂದ ತನ್ನ ಅಪರಾಧ ವನ್ನು ತಾನೇ ಹೊತ್ತುಕೊಳ್ಳುವನು.
- Numbers 19:19–20 ಅರಣ್ಯಕಾಂಡ 19:19–20ಪವಿತ್ರನಾ ದವನು ಅಪವಿತ್ರನಾದವನ ಮೇಲೆ ಮೂರನೇ ದಿವಸ ದಲ್ಲಿಯೂ ಏಳನೇ ದಿವಸದಲ್ಲಿಯೂ ಚಿಮುಕಿಸಲಿ. ಏಳನೇ ದಿವಸದಲ್ಲಿ ಅವನು ತನ್ನನ್ನು ಪವಿತ್ರಮಾಡಿ ಕೊಂಡು ತನ್ನ ವಸ್ತ್ರಗಳನ್ನು ಒಗೆದುಕೊಂಡು ಅವನು ಸ್ನಾನಮಾಡಿ ಸಾಯಂಕಾಲದಲ್ಲಿ ಪವಿತ್ರನಾಗುವನು. ಆದರೆ ಅಪವಿತ್ರನಾಗಿದ್ದು ತನ್ನನ್ನು ಶುದ್ಧಪಡಿಸಿ ಕೊಳ್ಳದವನು ಸಭೆಯ ಮಧ್ಯದಿಂದ ತೆಗೆದು ಹಾಕಲ್ಪ ಡಲಿ; ಅವನು ಕರ್ತನ ಪರಿಶುದ್ಧ ಸ್ಥಳವನ್ನು ಅಪವಿತ್ರ ಮಾಡಿದ್ದಾನೆ; ಪ್ರತ್ಯೇಕಿಸಲ್ಪಟ್ಟ ನೀರು ಅವನ ಮೇಲೆ ಚಿಮುಕಿಸಲ್ಪಡಲಿಲ್ಲ; ಅವನು ಅಪವಿತ್ರನೇ.
- Leviticus 7:18 ಯಾಜಕಕಾಂಡ 7:18ತನ್ನ ಸಮಾಧಾನ ಬಲಿ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಸಮರ್ಪಣೆಯಾಗುವದಿಲ್ಲ ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರಿಸಲ್ಪಡುವದಿಲ್ಲ. ಅದು ಹೊಲೆಯಾಗಿರುವದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು.
- 1 Peter 2:24 1 ಪೇತ್ರನು 2:24ನಾವು ಪಾಪಗಳ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ಮರದ ಮೇಲೆ ನಮ್ಮ ಪಾಪ ಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು.ನೀವು ಕುರಿಗಳಂತೆ ದಾರಿ ತಪ್ಪಿದವರಾಗಿದ್ದೀರಿ; ಆದರೆ ಈಗ ನೀವು ತಿರಿಗಿ ನಿಮ್ಮ ಆತ್ಮಗಳ ಕುರುಬನೂ ಅಧ್ಯಕ್ಷನೂ ಆಗಿರುವಾತನ ಬಳಿಗೆ ಬಂದಿದ್ದೀರಿ.
- Leviticus 19:8 ಯಾಜಕಕಾಂಡ 19:8ಆದದರಿಂದ ಅದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು. ಕರ್ತನ ಪವಿತ್ರ ವಾದದ್ದನ್ನು ಅವನು ಅಶುದ್ಧಮಾಡಿದ್ದಾನೆ. ಅವನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಲ್ಪಡಬೇಕು.
- John 13:8 ಯೋಹಾನನು 13:8ಪೇತ್ರನು ಆತನಿಗೆ--ನೀನು ನನ್ನ ಕಾಲುಗಳನ್ನು ಎಂದಿಗೂ ತೊಳೆಯಬಾರದು ಅಂದನು; ಯೇಸು ಪ್ರತ್ಯುತ್ತರವಾಗಿ ಅವನಿಗೆ--ನಾನು ನಿನ್ನನ್ನು ತೊಳೆಯ ದಿದ್ದರೆ ನನ್ನೊಂದಿಗೆ ನಿನಗೆ ಪಾಲಿಲ್ಲ ಎಂದು ಹೇಳಿದನು.