Leviticus · chapter 18 · verse 24
Leviticus 18:24 in Kannada
ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.
Neevu ee yaava vishayagalalliyoo nimmannu hole maadikollabaaradu. Nimma munde naanu horadisibitta janaangagalu ivellavugalalli holeyaagive.
Leviticus 18:24 in English
- King James Version (KJV)
- Defile not ye yourselves in any of these things: for in all these the nations are defiled which I cast out before you:
- World English Bible (WEB)
- “‘Don’t defile yourselves in any of these things; for in all these the nations which I am casting out before you were defiled.
- American Standard Version (ASV)
- Defile not ye yourselves in any of these things: for in all these the nations are defiled which I cast out from before you;
- Bible in Basic English (BBE)
- Do not make yourself unclean in any of these ways; for so have those nations whom I am driving out from before you made themselves unclean:
- Darby Translation (DBY)
- Make not yourselves unclean in any of these things; for in all these have the nations which I am casting out before you made themselves unclean.
- Webster's Bible (WBS)
- Defile not ye yourselves in any of these things; for in all these the nations are defiled which I cast out before you:
- Young's Literal Translation (YLT)
- 'Ye are not defiled with all these, for with all these have the nations been defiled which I am sending away from before you;
Read in context
- 22ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರು ಷನೊಂದಿಗೆ ಮಲಗಬಾರದು; ಅದು ಅಸಹ್ಯವಾದದ್ದು.
- 23ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಹೊಲೆಮಾಡಿಕೊಳ್ಳಬಾರದು; ಯಾವ ಸ್ತ್ರೀಯೂ ಅದರಿಂದ ಸಂಗಮಿಸಿಕೊಳ್ಳುವದಕ್ಕೆ ಪಶುವಿನ ಮುಂದೆ ನಿಲ್ಲಬಾರದು; ಅದು ಗಲಿಬಿಲಿಯಾದದ್ದು.
- 24ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.
- 25ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು.
- 26ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.
Cross references
- Deuteronomy 18:12 ಧರ್ಮೋಪದೇಶಕಾಂಡ 18:12ಇಂಥವುಗಳನ್ನು ಮಾಡುವ ವರೆಲ್ಲಾ ಕರ್ತನಿಗೆ ಅಸಹ್ಯ; ಈ ಅಸಹ್ಯ ಕಾರ್ಯಗಳ ನಿಮಿತ್ತ ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
- Leviticus 18:30 ಯಾಜಕಕಾಂಡ 18:30ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
- Leviticus 20:22–23 ಯಾಜಕಕಾಂಡ 20:22–23ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ. ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು; ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ; ಆದಕಾರಣ ನಾನು ಅವರನ್ನು ಅಸಹ್ಯಿಸಿಕೊಂಡಿದ್ದೇನೆ.
- Matthew 15:18–20 ಮತ್ತಾಯನು 15:18–20ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವುಗಳು ಹೃದಯದೊಳಗಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ. ಯಾಕಂದರೆ ಹೃದಯದೊಳಗಿಂದ ಕೆಟ್ಟ ಆಲೋಚನೆಗಳು, ಕೊಲೆಗಳು, ಹಾದರಗಳು, ಜಾರತ್ವ ಗಳು, ಕಳ್ಳತನಗಳು, ಸುಳ್ಳುಸಾಕ್ಷಿ, ದೇವ ದೂಷಣೆಗಳು ಹೊರಗೆ ಬರುತ್ತವೆ. ಇಂಥವುಗಳೇ ಮನುಷ್ಯನನ್ನು ಹೊಲೆಮಾಡುತ್ತವೆ; ಆದರೆ ಕೈತೊಳಕೊಳ್ಳದೆ ಊಟ ಮಾಡುವದು ಮನುಷ್ಯನನ್ನು ಹೊಲೆಮಾಡುವದಿಲ್ಲ ಅಂದನು.
- 1 Corinthians 3:17 1 ಕೊರಿಂಥದವರಿಗೆ 3:17ಯಾವನಾದರೂ ದೇವರ ಆಲಯವನ್ನು ಹೊಲೆಮಾಡಿದರೆ ದೇವರು ಅವನನ್ನು ನಾಶಮಾಡುವನು; ಯಾಕಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.
- Deuteronomy 12:31 ಧರ್ಮೋಪದೇಶಕಾಂಡ 12:31ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
- Leviticus 18:3 ಯಾಜಕಕಾಂಡ 18:3ನೀವು ವಾಸವಾಗಿದ್ದ ಐಗುಪ್ತದೇಶದ ಕೃತ್ಯಗಳಂತೆ ಮಾಡಬಾರದು; ನಾನು ನಿಮ್ಮನ್ನು ತರುವದಕ್ಕಿರುವ ಕಾನಾನ್ದೇಶದ ಕೃತ್ಯಗಳಂತೆ ನೀವು ಮಾಡಬಾರದು ಇಲ್ಲವೆ ನೀವು ಅವರ ನಿಯಮಗಳಿಗನುಸಾರವೂ ನಡೆ ಯಬಾರದು.
- Jeremiah 44:4 ಯೆರೆಮೀಯ 44:4ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು.
- Mark 7:10–23 ಮಾರ್ಕನು 7:10–23ಯಾಕಂದರೆ ಮೋಶೆಯು--ನಿನ್ನ ತಂದೆಯನ್ನು ನಿನ್ನ ತಾಯಿಯನ್ನು ಸನ್ಮಾನಿಸಬೇಕೆಂತಲೂ ಮತ್ತು--ತಂದೆಯನ್ನಾಗಲೀ ತಾಯಿಯನ್ನಾಗಲೀ ಶಪಿಸುವವನು ಸಾಯಲೇ ಬೇಕೆಂತಲೂ ಹೇಳಿದ್ದಾನೆ. ಆದರೆ ನೀವು--ಒಬ್ಬ ಮನುಷ್ಯನು ತನ್ನ ತಂದೆಗಾಗಲೀ ಅಥವಾ ತಾಯಿ ಗಾಗಲೀ--ನೀನು ನನ್ನಿಂದ ಹೊಂದಲಿಕ್ಕಿರುವ ಪ್ರಯೋಜನವು ಕೊರ್ಬಾನ್ (ಅಂದರೆ ಒಂದು ದಾನ) ಆಗಿದೆ ಎಂದು ಹೇಳಿದರೆ ಅವನು ಸ್ವತಂತ್ರ ನಾಗುವನು ಎಂದು ಅನ್ನುತ್ತೀರಿ; ಅವನು ತನ್ನ ತಂದೆಗಾದರೂ ತಾಯಿಗಾದರೂ ಏನನ್ನೂ ನೀವು ಮಾಡಗೊಡಿಸದೆ ನೀವು ಕಲಿಸಿರುವ ನಿಮ್ಮ ಸಂಪ್ರದಾಯದ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ, ಇಂಥ ಅನೇಕವಾದವುಗಳನ್ನು ನೀವು ಮಾಡುತ್ತೀರಿ ಅಂದನು. ಆಮೇಲೆ ಆತನು ಜನರನ್ನೆಲ್ಲಾ ತನ್ನ ಬಳಿಗೆ ಕರೆದು ಅವರಿಗೆ--ನಿಮ್ಮಲ್ಲಿ ಪ್ರತಿಯೊಬ್ಬನು ನಾನು ಹೇಳುವದನ್ನು ಕೇಳಿ ಗ್ರಹಿಸಿರಿ; ಹೊರಗಿನಿಂದ ಮನುಷ್ಯನೊಳಗೆ ಸೇರಿ ಅವನನ್ನು ಹೊಲೆಮಾಡು ವಂಥದ್ದು ಯಾವದೂ ಇಲ್ಲ. ಆದರೆ ಅವನೊಳಗಿಂದ ಹೊರಗೆ ಬರುವಂಥವುಗಳೇ ಮನುಷ್ಯನನ್ನು ಹೊಲೆ ಮಾಡುವವುಗಳಾಗಿವೆ. ಯಾವನಿಗಾದರೂ ಕೇಳು ವದಕ್ಕೆ ಕಿವಿಗಳಿದ್ದರೆ ಅವನು ಕೇಳಲಿ ಅಂದನು. ಆತನು ಜನರನ್ನು ಬಿಟ್ಟು ಮನೆಯೊಳಗೆ ಬಂದ ಮೇಲೆ ಆತನ ಶಿಷ್ಯರು ಆ ಸಾಮ್ಯದ ವಿಷಯವಾಗಿ ಆತನನ್ನು ಕೇಳಿದರು. ಆಗ ಆತನು ಅವರಿಗೆ-- ನೀವು ಸಹ ಗ್ರಹಿಕೆ ಇಲ್ಲದವರಾಗಿದ್ದೀರಾ? ಹೊರಗಿ ನಿಂದ ಮನುಷ್ಯನೊಳಗೆ ಸೇರುವಂಥದ್ದು ಯಾವದೂ ಅವನನ್ನು ಹೊಲೆಮಾಡಲಾರದು ಎಂದು ನೀವು ತಿಳಿದುಕೊಳ್ಳುವದಿಲ್ಲವೋ? ಯಾಕಂದರೆ ಅದು ಅವನ ಹೃದಯದೊಳಗೆ ಸೇರದೆ ಹೊಟ್ಟೆಯೊಳಗೆ ಸೇರಿ ಎಲ್ಲಾ ಆಹಾರ ಪದಾರ್ಥಗಳನ್ನು ಶುದ್ಧಮಾಡುತ್ತಾ ಬಹಿರ್ಭೂಮಿಗೆ ಹೋಗುತ್ತದೆ ಅಂದನು. ಮತ್ತು ಆತನು--ಮನುಷ್ಯನೊಳಗಿಂದ ಹೊರಡುವಂಥದ್ದೇ ಮನುಷ್ಯನನ್ನು ಹೊಲೆಮಾಡುತ್ತದೆ. ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು ಕಳ್ಳತನಗಳು ದುರಾಶೆ ಕೆಟ್ಟತನ ಮೋಸ ಕಾಮಾಭಿಲಾಷೆ ಕೆಟ್ಟದೃಷಿ ದೇವದೂಷಣೆ ಗರ್ವ ಬುದ್ಧಿಗೇಡಿತನ ಈ ಎಲ್ಲಾ ಕೆಟ್ಟವುಗಳು ಒಳಗಿನಿಂದ ಬಂದು ಮನುಷ್ಯನನ್ನು ಹೊಲೆ ಮಾಡುತ್ತವೆ ಅಂದನು.
- Leviticus 18:6–23 ಯಾಜಕಕಾಂಡ 18:6–23ನಿಮ್ಮಲ್ಲಿ ಯಾವನಾದರೂ ತನ್ನ ಹತ್ತಿರ ಸಂಬಂಧಿಯ ಬೆತ್ತಲೆತನವನ್ನು ಬಯಲು ಮಾಡುವದಕ್ಕೆ ಅವಳ ಸವಿಾಪಕ್ಕೆ ಹೋಗಬಾರದು; ನಾನೇ ಕರ್ತನು. ನಿನ್ನ ತಂದೆತಾಯಿಯ ಬೆತ್ತಲೆತನವನ್ನಾಗಲಿ ನೀನು ಕಾಣಿಸು ವಂತೆ ಮಾಡಬಾರದು; ಆಕೆಯು ನಿನ್ನ ತಾಯಿಯಾಗಿ ದ್ದಾಳೆ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನಿನ್ನ ತಂದೆಯ ಹೆಂಡತಿಯ ಬೆತ್ತಲೆ ತನವನ್ನು ನೀನು ಕಾಣುವಂತೆ ಮಾಡಬಾರದು; ಅದು ನಿನ್ನ ತಂದೆಯ ಬೆತ್ತಲೆತನ. ನಿನ್ನ ಸಹೋದರಿಯ ಇಲ್ಲವೆ ನಿನ್ನ ತಂದೆಯ ಮಗಳ, ಅಂದರೆ ಅವಳು ಮನೆಯಲ್ಲಿ ಹುಟ್ಟಿದವಳಾಗಿರಲಿ ಹೊರಗೆ ಹುಟ್ಟಿದ ವಳಾಗಿರಲಿ ಅವರ ಬೆತ್ತಲೆತನವನ್ನು ಕಾಣುವಂತೆ ನೀನು ಮಾಡಬಾರದು. ನಿನ್ನ ಮಗನ ಮಗಳ ಇಲ್ಲವೆ ನಿನ್ನ ಮಗಳ ಮಗಳ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು. ಅವನ ಬೆತ್ತಲೆತನವು ನಿನ್ನ ಸ್ವಂತ ಬೆತ್ತಲೆತನವಾಗಿದೆ. ನಿನ್ನ ತಂದೆಗೆ ಹುಟ್ಟಿ ದಂಥ ನಿನ್ನ ತಂದೆಯ ಮಗಳು ನಿನಗೆ ಸಹೋದರಿ ಯಾಗಿರುವದರಿಂದ ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನಿನ್ನ ತಂದೆಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಂದೆಗೆ ಹತ್ತಿರ ಸಂಬಂಧಿ ಯಾಗಿದ್ದಾಳೆ. ನಿನ್ನ ತಾಯಿಯ ಸಹೋದರಿಯ ಬೆತ್ತಲೆತನವನ್ನು ನೀನು ಕಾಣುವಂತೆ ಮಾಡಬಾರದು; ಅವಳು ನಿನ್ನ ತಾಯಿಗೆ ಹತ್ತಿರದ ಸಂಬಂಧಿಯಾಗಿ ದ್ದಾಳೆ. ನೀನು ನಿನ್ನ ತಂದೆಯ ಸಹೋದರನ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನೀನು ಅವನ ಹೆಂಡತಿಯ ಬಳಿಗೆ ಹೋಗಬಾರದು; ಅವಳು ನಿನಗೆ ದೊಡ್ಡ ತಾಯಿ (ಚಿಕ್ಕತಾಯಿ). ನಿನ್ನ ಸೊಸೆಯ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು; ಅವಳು ನಿನ್ನ ಮಗನ ಹೆಂಡತಿ; ನೀನು ಅವಳ ಬೆತ್ತಲೆತನವನ್ನು ಕಾಣುವಂತೆ ಮಾಡಬಾರದು. ನೀನು ನಿನ್ನ ಸಹೋ ದರನ ಹೆಂಡತಿಯ ಬೆತ್ತಲೆತನವನ್ನು ಕಾಣುವಂತೆ ಮಾಡ ಬಾರದು; ಅದು ನಿನ್ನ ಸಹೋದರನ ಬೆತ್ತಲೆತನ. ನೀನು ಒಬ್ಬ ಸ್ತ್ರೀಯ ಮತ್ತು ಅವಳ ಮಗಳ ಬೆತ್ತಲೆ ತನವನ್ನು ಕಾಣುವಂತೆ ಮಾಡಬಾರದು ಇಲ್ಲವೆ ಅವಳ ಮಗನ ಮಗಳ ಅಥವಾ ಮಗಳ ಮಗಳ ಬೆತ್ತಲೆತನ ವನ್ನು ಕಾಣುವಂತೆ ಮಾಡಬಾರದು. ಅವರು ಅವಳ ಹತ್ತಿರದ ಸಂಬಂಧಿಯಾಗಿದ್ದಾರೆ. ಅದು ದುಷ್ಟತನ ವಾಗಿದೆ. ಇಲ್ಲವೆ ಅವಳಿಗೆ ವೈರಿಯಾಗುವ ಹಾಗೆ ಅವಳ ಸಹೋದರಿಯನ್ನು ಹೆಂಡತಿಯಾಗಿ ತೆಗೆದು ಕೊಳ್ಳಬೇಡ. ಒಬ್ಬಳು ಜೀವದಿಂದ ಇರುವಾಗ ಮತ್ತೊ ಬ್ಬಳ ಬೆತ್ತಲೆತನವನ್ನು ಕಾಣುವಂತೆ ಮಾಡಬೇಡ. ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ. ಇದಲ್ಲದೆ ಅವಳಿಂದ ನಿನ್ನನ್ನು ಹೊಲೆಮಾಡಿ ಕೊಳ್ಳದಂತೆ ನಿನ್ನ ನೆರೆಯವನ ಹೆಂಡತಿಯೊಂದಿಗೆ ನೀನು ಸಂಗಮಿಸಬೇಡ. ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು. ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರು ಷನೊಂದಿಗೆ ಮಲಗಬಾರದು; ಅದು ಅಸಹ್ಯವಾದದ್ದು. ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಹೊಲೆಮಾಡಿಕೊಳ್ಳಬಾರದು; ಯಾವ ಸ್ತ್ರೀಯೂ ಅದರಿಂದ ಸಂಗಮಿಸಿಕೊಳ್ಳುವದಕ್ಕೆ ಪಶುವಿನ ಮುಂದೆ ನಿಲ್ಲಬಾರದು; ಅದು ಗಲಿಬಿಲಿಯಾದದ್ದು.