Leviticus · chapter 19 · verse 12
Leviticus 19:12 in Kannada
ಇದಲ್ಲದೆ ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣಮಾಡಬಾರದು ನಿಮ್ಮ ದೇವರ ಹೆಸರನ್ನು ಅಪವಿತ್ರಮಾಡಬಾರದು; ನಾನೇ ಕರ್ತನು.
Idallade nanna hesarinalli sullu pramaanamaadabaaradu nimma devara hesarannu apavitramaadabaaradu; naane kartanu.
Leviticus 19:12 in English
- King James Version (KJV)
- And ye shall not swear by my name falsely, neither shalt thou profane the name of thy God: I [am] the LORD.
- World English Bible (WEB)
- “‘You shall not swear by my name falsely, and profane the name of your God. I am the LORD.
- American Standard Version (ASV)
- And ye shall not swear by my name falsely, and profane the name of thy God: I am Jehovah.
- Bible in Basic English (BBE)
- And do not take an oath in my name falsely, putting shame on the name of your God: I am the Lord.
- Darby Translation (DBY)
- And ye shall not swear by my name falsely, and profane the name of thy God: I am Jehovah.
- Webster's Bible (WBS)
- And ye shall not swear by my name falsely, neither shalt thou profane the name of thy God: I [am] the LORD.
- Young's Literal Translation (YLT)
- 'And ye do not swear by My name to falsehood, or thou hast polluted the name of thy God; I [am] Jehovah.
Read in context
- 10ನಿಮ್ಮ ದ್ರಾಕ್ಷೇ ತೋಟದಲ್ಲಿ ಹಕ್ಕಲಾಯಬಾರದು ಇಲ್ಲವೆ ಪ್ರತಿಯೊಂದು ದ್ರಾಕ್ಷೆ ಯನ್ನೂ ಕೂಡಿಸಬಾರದು; ನೀವು ಅವುಗಳನ್ನು ಬಡವ ರಿಗಾಗಿಯೂ ಪರಕೀಯರಿಗಾಗಿಯೂ ಬಿಟ್ಟುಬಿಡ ಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
- 11ನೀವು ಕದಿಯಬಾರದು; ಒಬ್ಬರಿಗೊಬ್ಬರು ಸುಳ್ಳಾಡಿ ಮೋಸಮಾಡಬಾರದು.
- 12ಇದಲ್ಲದೆ ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣಮಾಡಬಾರದು ನಿಮ್ಮ ದೇವರ ಹೆಸರನ್ನು ಅಪವಿತ್ರಮಾಡಬಾರದು; ನಾನೇ ಕರ್ತನು.
- 13ನಿನ್ನ ನೆರೆಯವನನ್ನು ವಂಚಿಸಬಾರದು ಅವನನ್ನು ಸುಲುಕೊಳ್ಳಬಾರದು. ಕೂಲಿಯವನ ಕೂಲಿಯು ನಿನ್ನ ಬಳಿಯಲ್ಲಿ ಮುಂಜಾನೆಯ ವರೆಗೆ ಇರಬಾರದು.
- 14ಕಿವುಡನನ್ನು ಶಪಿಸಬಾರದು; ಕುರು ಡನು ಮುಗ್ಗರಿಸುವಂತೆ ಅವನ ಮುಂದೆ ಕಲ್ಲನ್ನು ಇಡ ಬಾರದು, ಆದರೆ ನಿನ್ನ ದೇವರಿಗೆ ಭಯಪಡಬೇಕು; ನಾನೇ ಕರ್ತನು.
Cross references
- Exodus 20:7 ವಿಮೋಚನಕಾಂಡ 20:7ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬಾರದು. ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿ ಯೆಂದು ಎಣಿಸುವದಿಲ್ಲ.
- Deuteronomy 5:11 ಧರ್ಮೋಪದೇಶಕಾಂಡ 5:11ನಿನ್ನ ದೇವರಾದ ಕರ್ತನ ಹೆಸರನ್ನು ವ್ಯರ್ಥವಾಗಿ ಎತ್ತಬೇಡ; ಕರ್ತನು ತನ್ನ ಹೆಸರನ್ನು ವ್ಯರ್ಥವಾಗಿ ಎತ್ತುವವನನ್ನು ನಿರ್ದೋಷಿಯೆಂದು ಎಣಿಸುವದಿಲ್ಲ.
- Leviticus 18:21 ಯಾಜಕಕಾಂಡ 18:21ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
- Leviticus 6:3 ಯಾಜಕಕಾಂಡ 6:3ಕಳೆದುಹೋಗಿದ್ದು ಸಿಕ್ಕಿ ಅದರ ವಿಷಯದಲ್ಲಿ ಸುಳ್ಳಾ ಡಿದರೆ ಮತ್ತು ಸುಳ್ಳಾಗಿ ಪ್ರಮಾಣಮಾಡಿದರೆ ಇವೆಲ್ಲವುಗಳಲ್ಲಿ ಯಾವದನ್ನಾದರೂ ಒಬ್ಬ ಮನುಷ್ಯನು ಮಾಡಿದ್ದರೆ ಅವುಗಳಲ್ಲಿ ಪಾಪಮಾಡುವನು.
- James 5:12 ಯಾಕೋಬನು 5:12ಮುಖ್ಯವಾಗಿ ನನ್ನ ಸಹೋದರರೇ, ಆಣೆ ಇಡಲೇ ಬೇಡಿರಿ; ಆಕಾಶದ ಮೇಲಾಗಲಿ ಭೂಮಿಯ ಮೇಲಾಗಲಿ ಇನ್ನಾವದರ ಮೇಲಾಗಲಿ ಆಣೆ ಇಡ ಬೇಡಿರಿ. ಹೌದೆಂದು ಹೇಳಬೇಕಾದರೆ ಹೌದೆನ್ನಿರಿ, ಅಲ್ಲವೆನ್ನಬೇಕಾದರೆ ಅಲ್ಲವೆನ್ನಿರಿ; ಹೀಗಾದರೆ ನೀವು ನ್ಯಾಯವಿಚಾರಣೆಗೆ ಗುರಿಯಾಗುವದಿಲ್ಲ.
- Matthew 5:33–34 ಮತ್ತಾಯನು 5:33–34ನೀನು ಸುಳ್ಳಾಣೆ ಇಡಬೇಡ; ಆದರೆ ನಿನ್ನ ಪ್ರಮಾಣಗಳನ್ನು ಕರ್ತನಿಗೆ ಸಲ್ಲಿಸಬೇಕು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ. ಆದರೆ ನಾನು ನಿಮಗೆ ಹೇಳುವದೇನಂದರೆ--ಎಷ್ಟು ಮಾತ್ರಕ್ಕೂ ಅಣೆಯನ್ನು ಇಡಬೇಡ. ಪರಲೋಕದ ಮೇಲೆ ಬೇಡ; ಯಾಕಂದರೆ ಅದು ದೇವರ ಸಿಂಹಾಸನವು.
- Leviticus 24:11 ಯಾಜಕಕಾಂಡ 24:11ಇಸ್ರಾಯೇಲ್ ಸ್ತ್ರೀಯ ಮಗನು ಕರ್ತನ ನಾಮವನ್ನು ದೂಷಿಸಿ ಶಪಿಸಿ ದನು. ಅವರು ಅವನನ್ನು ಮೋಶೆಯ ಬಳಿಗೆ ತಂದರು; (ಅವನ ತಾಯಿಯ ಹೆಸರು ದಾನನ ಕುಲದವನಾದ ದಿಬ್ರೀಯ ಮಗಳಾದ ಶೆಲೋವಿಾತ್).
- Leviticus 24:15–16 ಯಾಜಕಕಾಂಡ 24:15–16ನೀನು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳಬೇಕು--ತನ್ನ ದೇವರನ್ನು ಶಪಿಸುವವನು ತನ್ನ ಪಾಪವನ್ನು ಹೊತ್ತುಕೊಳ್ಳಬೇಕು. ಕರ್ತನ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು ಮತ್ತು ಸಭೆಯವರೆಲ್ಲರು ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ದೇಶದೊಳಗೆ ಹುಟ್ಟಿದ ಪರಕೀಯನು ಕರ್ತನ ಹೆಸರನ್ನು ದೂಷಣೆ ಮಾಡಿದಾಗ ಅವನನ್ನು ಮರಣಕ್ಕೆ ಒಳಪಡಿಸಬೇಕು.
- Ezekiel 36:20–23 ಯೆಹೆಜ್ಕೇಲನು 36:20–23ಅವರು ಆ ಅನ್ಯಜನಾಂಗಗಳೊಳಗೆ ಸೇರಿಕೊಂಡ ಮೇಲೆ--ಇವರೇ ಕರ್ತನ ಜನರು ಮತ್ತು ಇವರು ಆತನ ದೇಶದಿಂದ ಹೊರಟುಹೋದರು ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡುವರು. ಆದರೆ ಇಸ್ರಾಯೇಲಿನ ಮನೆತನದವರು ತಾವು ಹೋದ ಅನ್ಯಜನಾಂಗಗಳಲ್ಲಿ ಅಪವಿತ್ರಮಾಡಿದ ನನ್ನ ಪರಿಶುದ್ಧವಾದ ಹೆಸರನ್ನು ನಾನು ಕನಿಕರಿಸಿದೆನು. ಆದದರಿಂದ ನೀನು ಇಸ್ರಾ ಯೇಲನ ಮನೆತನದವರಿಗೆ ಹೇಳು--ದೇವರಾದ ಕರ್ತನು ಹೀಗೆ ಹೇಳುತ್ತಾನೆಂದು--ಓ ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡು ತ್ತಿಲ್ಲ, ಆದರೆ ನೀವು ಹೋಗುವಾಗ ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಪರಿಶುದ್ಧನಾಮಕ್ಕಾಗಿ ಮಾಡುತ್ತೇನೆ. ನೀವು ಅನ್ಯಜನಾಂಗಗಳ ಮಧ್ಯೆ ಅಪವಿತ್ರಪಡಿಸಿದ ನನ್ನ ಮಹತ್ತರ ನಾಮವನ್ನು ನಾನು ಪರಿಶುದ್ಧಮಾಡುವೆನು; ಹಾಗೆ ನಾನು ಅವರ ಕಣ್ಣುಗಳ ಮುಂದೆ ನಿಮ್ಮಲ್ಲಿ ಪರಿಶುದ್ಧನಾದ ಮೇಲೆ ಆ ಅನ್ಯ ಜನಾಂಗಗಳವರು ನಾನೇ ಕರ್ತನೆಂದು ತಿಳಿಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.
- Jeremiah 4:2 ಯೆರೆಮೀಯ 4:2ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿ ಯಿಂದಲೂ ಕರ್ತನ ಜೀವದಾಣೆ ಎಂದು ಪ್ರಮಾಣಮಾಡುವಿ; ಆಗ ಜನಾಂಗಗಳು ಆತನಲ್ಲಿ ಆಶೀರ್ವದಿಸಿ ಕೊಳ್ಳುವವು; ಮತ್ತು ಆತನಲ್ಲಿ ಹೊಗಳಿಕೊಳ್ಳುವವು.
- Malachi 3:5 ಮಲಾಕಿಯ 3:5ನ್ಯಾಯಕ್ಕೋಸ್ಕರ ನಿಮ್ಮನ್ನು ನಾನು ಸವಿಾಪಿ ಸುತ್ತೇನೆ; ಆಗ ಕಣಿಹೇಳುವವರಿಗೂ ವ್ಯಭಿಚಾರಿ ಗಳಿಗೂ ಸುಳ್ಳು ಪ್ರಮಾಣಮಾಡುವವರಿಗೂ ಸಂಬಳ ದಲ್ಲಿ ಕೂಲಿಯವನಿಗೂ ವಿಧವೆಗೂ ದಿಕ್ಕಿಲ್ಲದವನಿಗೂ ಬಲಾತ್ಕಾರ ಮಾಡುವವರಿಗೂ ಅನ್ಯನ ನ್ಯಾಯವನ್ನು ತಿರಿಗಿಸಿ ಬಿಡುವವರಿಗೂ ನನಗೆ ಭಯಪಡದವರಿಗೂ ವಿರೋಧವಾಗಿ ಶೀಘ್ರವಾದ ಸಾಕ್ಷಿಗಾರನಾಗಿರು ವೆನೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Zechariah 5:4 ಜೆಕರ್ಯ 5:4ನಾನು ಅದನ್ನು ಹೊರಗೆ ತರುತ್ತೇನೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಅದು ಕಳ್ಳನ ಮನೆಯಲ್ಲಿಯೂ ನನ್ನ ಹೆಸರಿನಿಂದ ಸುಳ್ಳಾಗಿ ಆಣೆಯಿಡುವವನ ಮನೆಯ ಲ್ಲಿಯೂ ಪ್ರವೇಶಿಸಿ ಅವನ ಮನೆಯ ಮಧ್ಯದಲ್ಲಿ ನಿಂತು ಅದರ ಮರಗಳನ್ನೂ ಅದರ ಕಲ್ಲುಗಳನ್ನೂ ಅಳಿಸಿಬಿಡುವದು ಅಂದನು.