Leviticus · chapter 18 · verse 21
Leviticus 18:21 in Kannada
ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
Ninna devara hesarannu ashuddhapadisuvante ninna santaanavannu molekanige benkiya moolaka arpisabaaradu; naane kartanu.
Leviticus 18:21 in English
- King James Version (KJV)
- And thou shalt not let any of thy seed pass through [the fire] to Molech, neither shalt thou profane the name of thy God: I [am] the LORD.
- World English Bible (WEB)
- “‘You shall not give any of your children as a sacrifice to Molech. You shall not profane the name of your God. I am the LORD.
- American Standard Version (ASV)
- And thou shalt not give any of thy seed to make them pass through [the fire] to Molech; neither shalt thou profane the name of thy God: I am Jehovah.
- Bible in Basic English (BBE)
- And you may not make any of your children go through the fire as an offering to Molech, and you may not put shame on the name of your God: I am the Lord.
- Darby Translation (DBY)
- And thou shalt not give of thy seed to let them pass through [the fire] to Molech, neither shalt thou profane the name of thy God: I am Jehovah.
- Webster's Bible (WBS)
- And thou shalt not let any of thy seed pass through [the fire] to Molech, neither shalt thou profane the name of thy God: I [am] the LORD.
- Young's Literal Translation (YLT)
- 'And of thy seed thou dost not give to pass over to the Molech; nor dost thou pollute the name of thy God; I [am] Jehovah.
Read in context
- 19ಇದು ಮಾತ್ರವಲ್ಲದೆ ಒಬ್ಬಳು ತನ್ನ ಅಶುದ್ಧತ್ವದ ನಿಮಿತ್ತವಾಗಿ ಪ್ರತ್ಯೇಕಿಸಲ್ಪಟ್ಟಾಗ ನೀನು ಆ ಸ್ತ್ರೀಯ ಬೆತ್ತಲೆತನವನ್ನು ನೋಡುವಂತೆ ಅವಳ ಹತ್ತಿರ ಹೋಗ ಬೇಡ.
- 20ಇದಲ್ಲದೆ ಅವಳಿಂದ ನಿನ್ನನ್ನು ಹೊಲೆಮಾಡಿ ಕೊಳ್ಳದಂತೆ ನಿನ್ನ ನೆರೆಯವನ ಹೆಂಡತಿಯೊಂದಿಗೆ ನೀನು ಸಂಗಮಿಸಬೇಡ.
- 21ನಿನ್ನ ದೇವರ ಹೆಸರನ್ನು ಅಶುದ್ಧಪಡಿಸುವಂತೆ ನಿನ್ನ ಸಂತಾನವನ್ನು ಮೋಲೆಕನಿಗೆ ಬೆಂಕಿಯ ಮೂಲಕ ಅರ್ಪಿಸಬಾರದು; ನಾನೇ ಕರ್ತನು.
- 22ಸ್ತ್ರೀಯೊಂದಿಗೆ ಮಲಗಿಕೊಳ್ಳುವಂತೆ ಪುರು ಷನೊಂದಿಗೆ ಮಲಗಬಾರದು; ಅದು ಅಸಹ್ಯವಾದದ್ದು.
- 23ಇದಲ್ಲದೆ ಪಶುವಿನೊಂದಿಗೆ ನೀನು ಮಲಗಿ ನಿನ್ನನ್ನು ಹೊಲೆಮಾಡಿಕೊಳ್ಳಬಾರದು; ಯಾವ ಸ್ತ್ರೀಯೂ ಅದರಿಂದ ಸಂಗಮಿಸಿಕೊಳ್ಳುವದಕ್ಕೆ ಪಶುವಿನ ಮುಂದೆ ನಿಲ್ಲಬಾರದು; ಅದು ಗಲಿಬಿಲಿಯಾದದ್ದು.
Cross references
- Deuteronomy 12:31 ಧರ್ಮೋಪದೇಶಕಾಂಡ 12:31ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
- Leviticus 20:2–5 ಯಾಜಕಕಾಂಡ 20:2–5ನೀನು ತಿರಿಗಿ ಇಸ್ರಾಯೇಲ್ ಮಕ್ಕಳಿಗೆ ಹೀಗೆ ಹೇಳಬೇಕು--ಇಸ್ರಾಯೇಲ್ ಮಕ್ಕಳಲ್ಲಾಗಲಿ ಇಸ್ರಾಯೇಲಿ ನಲ್ಲಿ ಪ್ರವಾಸಿಯಾದ ಪರಕೀಯರಲ್ಲಾಗಲಿ ಯಾವನಾ ದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು; ದೇಶದ ಜನರು ಅವನಿಗೆ ಕಲ್ಲೆಸೆಯಬೇಕು. ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ. ಆ ಮನು ಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ ಹೇಗಾದರೂ ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ ಅವನನ್ನು ಕೊಲ್ಲದೆ ಹೋದರೆ ಆಗ ನಾನು ಆ ಮನುಷ್ಯನಿಗೂ ಅವನ ಕುಟುಂಬಕ್ಕೂ ವಿರೋಧವಾ ಗಿಯೂ ವಿಮುಖನಾಗಿಯೂ ಇರುವೆನು. ಮೋಲೆಕ ನೊಂದಿಗೆ ವ್ಯಭಿಚಾರಮಾಡಿದ್ದಕ್ಕಾಗಿ ಅವನನೂ ವ್ಯಭಿಚಾರಮಾಡುವದಕ್ಕೆ ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
- Deuteronomy 18:10 ಧರ್ಮೋಪದೇಶಕಾಂಡ 18:10ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ
- Leviticus 19:12 ಯಾಜಕಕಾಂಡ 19:12ಇದಲ್ಲದೆ ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣಮಾಡಬಾರದು ನಿಮ್ಮ ದೇವರ ಹೆಸರನ್ನು ಅಪವಿತ್ರಮಾಡಬಾರದು; ನಾನೇ ಕರ್ತನು.
- Leviticus 22:32 ಯಾಜಕಕಾಂಡ 22:32ಆದರೆ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಾನು ಪರಿಶುದ್ಧ ಮಾಡಲ್ಪಡುವ ಹಾಗೆ ನನ್ನ ಪರಿಶುದ್ಧವಾದ ಹೆಸರನ್ನು ಅಪವಿತ್ರಮಾಡಬಾರದು;ನಿಮಗೆ ದೇವರಾಗಿರು ವದಕ್ಕೆ ನಿಮ್ಮನ್ನು ಐಗುಪ್ತದೇಶದೊಳಗಿಂದ ಹೊರಗೆ ತಂದವನೂ ನಿಮ್ಮನ್ನು ಪರಿಶುದ್ಧ ಮಾಡುವ ಕರ್ತನೂ ನಾನೇ; ನಾನೇ ಕರ್ತನು.
- Jeremiah 19:5 ಯೆರೆಮೀಯ 19:5ತಮ್ಮ ಮಕ್ಕಳನ್ನು ಬಾಳನಿಗೆ ದಹನ ಬಲಿಗಳಾಗಿ ಬೆಂಕಿಯಲ್ಲಿ ಸುಡುವದಕ್ಕೆ ಬಾಳನ ಉನ್ನತ ಸ್ಥಳಗಳನ್ನು ಕಟ್ಟಿದ್ದಾರೆ. ಇಂಥದ್ದನ್ನು ನಾನು ಆಜ್ಞಾ ಪಿಸಲಿಲ್ಲ, ನಾನು ಹೇಳಲಿಲ್ಲ, ನನ್ನ ಮನಸ್ಸಿಗೆ ಬರಲಿಲ್ಲ.
- 1 Kings 11:33 1 ಅರಸುಗಳು 11:33ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ ನ್ಯಾಯಗಳನ್ನೂ ಕೈಕೊಳ್ಳು ವದಕ್ಕೂ ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡು ವದಕ್ಕೂ ಅವರು ನನ್ನ ಮಾರ್ಗಗಳಲ್ಲಿ ನಡೆಯದೆ ನನ್ನನ್ನು ಬಿಟ್ಟು ಚೀದೋನ್ಯರ ದೇವತೆಯಾದ ಅಷ್ಟೋ ರೆತನ್ನೂ ಮೋವಾಬ್ಯರ ದೇವರಾದ ಕೆಮೋಷನ್ನೂ ಅಮ್ಮೋನನ ಮಕ್ಕಳ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ.
- 1 Kings 11:7 1 ಅರಸುಗಳು 11:7ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷ್ಗೋಸ್ಕ ರವೂ ಅಮ್ಮೋನನ ಮಕ್ಕಳ ಅಸಹ್ಯಕರವಾದ ಮೋಲೆ ಕ್ನಿಗೋಸ್ಕರವೂ ಯೆರೂಸಲೇಮಿಗೆ ಎದುರಾಗಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು.
- Malachi 1:12 ಮಲಾಕಿಯ 1:12ಆದರೆ ನೀವು--ಕರ್ತನ ಮೇಜು ಅಶುದ್ಧವಾ ದದ್ದೆಂದೂ ಅದರ ಫಲವೂ ಅದರ ಊಟವೂ ಹೀನ ವಾದದ್ದೆಂದೂ ಹೇಳಿ ಅದನ್ನು ಅಪವಿತ್ರಮಾಡಿದ್ದೀರಿ.
- Leviticus 22:2 ಯಾಜಕಕಾಂಡ 22:2ಆರೋನನೊಂದಿಗೂ ಅವನ ಕುಮಾರರೊಂದಿಗೂ ಮಾತನಾಡು; ಅವರು ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡದಂತೆ ಇಸ್ರಾಯೇಲ್ ಮಕ್ಕಳು ನನಗೆ ಸಲ್ಲಿಸುವ ಪರಿಶುದ್ಧವಾದವುಗಳಿಂದ ಅವರು ಪ್ರತ್ಯೇಕ ವಾಗಿರಬೇಕು; ನಾನೇ ಕರ್ತನು.
- Acts 7:43 ಅಪೊಸ್ತಲರ ಕೃತ್ಯಗಳು 7:43ಹೌದು, ನೀವು ಪೂಜಿಸಬೇಕೆಂದು ಮಾಡಿಕೊಂಡ ಮೂರ್ತಿಗಳನ್ನು ಅಂದರೆ ಮೊಲೋಖನ ಗುಡಾರವನ್ನು ರೊಂಫಾ ದೇವತೆಯ ನಕ್ಷತ್ರವನ್ನೂ ಹೊತ್ತುಕೊಂಡು ಹೋದಿರಿ. ಆದದರಿಂದ ನಾನು ನಿಮ್ಮನ್ನು ಬಾಬೆಲಿನ ಆಚೆಗೆ ಅಟ್ಟಿಬಿಡುವೆನು ಎಂಬದು.
- Ezekiel 20:31 ಯೆಹೆಜ್ಕೇಲನು 20:31ನಿಮ್ಮ ದಾನ ಗಳನ್ನು ತರುವಾಗಲೂ ನಿಮ್ಮ ಕುಮಾರರನ್ನು ಬೆಂಕಿ ಯಿಂದ ದಾಟಿಸುವಾಗಲೂ ನೀವು ಇಂದಿನ ವರೆಗೂ ನಿಮ್ಮ ಎಲ್ಲಾ ವಿಗ್ರಹಗಳಿಂದ ನಿಮ್ಮನ್ನು ಅಪವಿತ್ರಪಡಿಸಿ ಕೊಳ್ಳುತ್ತೀರಿ; ಹೀಗಾದರೆ ನಾನು ನಿಮ್ಮಿಂದ ವಿಚಾರಿಸ ಲ್ಪಟ್ಟೆನೊ? ನನ್ನ ಜೀವದಾಣೆ ನಾನು ನಿಮ್ಮಿಂದ ವಿಚಾರಿಸ ಲ್ಪಡುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ;