Leviticus · chapter 2 · verse 14
Leviticus 2:14 in Kannada
ನೀನು ನಿನ್ನ ಪ್ರಥಮ ಫಲಗಳ ಆಹಾರ ಸಮ ರ್ಪಣೆಯನ್ನು ಕರ್ತನಿಗೆ ಮಾಡಿದರೆ ನಿನ್ನ ಪ್ರಥಮ ಫಲದ ಆಹಾರ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆ ಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸ ಬೇಕು.
Neenu ninna prathama phalagala aahaara sama rpaneyannu kartanige maadidare ninna prathama phalada aahaara kaanikeyannu benkiyinda sutta kaalina hasiru tenegalannoo allade tumbida tene galinda badida onagida kaalugalannoo samarpisa beku.
Leviticus 2:14 in English
- King James Version (KJV)
- And if thou offer a meat offering of thy firstfruits unto the LORD, thou shalt offer for the meat offering of thy firstfruits green ears of corn dried by the fire, [even] corn beaten out of full ears.
- World English Bible (WEB)
- “‘If you offer a meal offering of first fruits to the LORD, you shall offer for the meal offering of your first fruits fresh heads of grain parched with fire and crushed.
- American Standard Version (ASV)
- And if thou offer a meal-offering of first-fruits unto Jehovah, thou shalt offer for the meal-offering of thy first-fruits grain in the ear parched with fire, bruised grain of the fresh ear.
- Bible in Basic English (BBE)
- And if you give a meal offering of first-fruits to the Lord, give, as your offering of first-fruits, new grain, made dry with fire, crushed new grain.
- Darby Translation (DBY)
- And if thou present an oblation of thy first-fruits to Jehovah, thou shalt present as the oblation of thy first-fruits green ears of corn roasted in fire, corn beaten out of full ears.
- Webster's Bible (WBS)
- And if thou shalt offer a meat-offering of thy first-fruits to the LORD, thou shalt offer for the meat-offering of thy first-fruits, green ears of corn dried by the fire, [even] corn beaten out of full ears.
- Young's Literal Translation (YLT)
- 'And if thou bring near a present of first-ripe [fruits] to Jehovah, — of green ears, roasted with fire, beaten out [corn] of a fruitful field thou dost bring near the present of thy first-ripe [fruits],
Read in context
- 12ಪ್ರಥಮ ಫಲದ ಕಾಣಿಕೆಯ ವಿಷಯ ದಲ್ಲಿಯಾದರೋ ನೀವು ಅವುಗಳನ್ನು ಕರ್ತನಿಗೆ ಸಮ ರ್ಪಿಸಬೇಕು; ಆದರೆ ಅವುಗಳನ್ನು ಯಜ್ಞವೇದಿಯ ಮೇಲೆ ಸುವಾಸನೆಗಾಗಿ ಸುಡಬಾರದು.
- 13ನಿನ್ನ ಪ್ರತಿ ಯೊಂದು ಆಹಾರ ಸಮರ್ಪಣೆಯೂ ಉಪ್ಪಿನಲ್ಲಿ ಬೆರಿಕೆ ಯಾಗಿರಬೇಕು; ನಿನ್ನ ದೇವರ ಒಡಂಬಡಿಕೆಯನ್ನು ಸೂಚಿಸುವ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು; ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು.
- 14ನೀನು ನಿನ್ನ ಪ್ರಥಮ ಫಲಗಳ ಆಹಾರ ಸಮ ರ್ಪಣೆಯನ್ನು ಕರ್ತನಿಗೆ ಮಾಡಿದರೆ ನಿನ್ನ ಪ್ರಥಮ ಫಲದ ಆಹಾರ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆ ಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸ ಬೇಕು.
- 15ನೀನು ಅದರ ಮೇಲೆ ಎಣ್ಣೆಯನ್ನು ಹಾಕಿ ಅದರ ಮೇಲೆ ಸಾಂಬ್ರಾಣಿಯನ್ನು ಇಡಬೇಕು; ಅದು ಆಹಾರ ಸಮರ್ಪಣೆಯಾಗಿದೆ.ಯಾಜಕನು ಬಡಿದ ಕಾಳುಗಳಲ್ಲಿ ಸ್ವಲ್ಪ ಭಾಗವನ್ನು ಮತ್ತು ಎಣ್ಣೆಯ ಸ್ವಲ್ಪ ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿ ಯನ್ನು ಜ್ಞಾಪಕಾರ್ಥವಾಗಿ ಸುಡಬೇಕು: ಇದು ಕರ್ತ ನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.
- 16ಯಾಜಕನು ಬಡಿದ ಕಾಳುಗಳಲ್ಲಿ ಸ್ವಲ್ಪ ಭಾಗವನ್ನು ಮತ್ತು ಎಣ್ಣೆಯ ಸ್ವಲ್ಪ ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿ ಯನ್ನು ಜ್ಞಾಪಕಾರ್ಥವಾಗಿ ಸುಡಬೇಕು: ಇದು ಕರ್ತ ನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ.
Cross references
- Leviticus 23:10 ಯಾಜಕಕಾಂಡ 23:10ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು.
- Isaiah 53:2–10 ಯೆಶಾಯ 53:2–10ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ. ಆತನು ಮನುಷ್ಯರಿಂದ ತಳ್ಳಲ್ಪಟ್ಟವನೂ ತಿರಸ್ಕರಿಸ ಲ್ಪಟ್ಟವನೂ ದುಃಖಿತ ಮನುಷ್ಯನೂ ಕಷ್ಟವನ್ನು ಅರಿತ ವನೂ; ನಾವು ನಮ್ಮ ಮುಖಗಳನ್ನು ಆತನಿಂದ ಮರೆ ಮಾಡಿಕೊಳ್ಳುವ ಹಾಗೆ ಧಿಕ್ಕರಿಸಲ್ಪಟ್ಟವನೂ ಆಗಿದ್ದನು. ನಾವು ಆತನನ್ನು ಲಕ್ಷಕ್ಕೆ ತರಲಿಲ್ಲ. ನಿಶ್ಚಯವಾಗಿಯೂ ಆತನು ನಮ್ಮ ಸಂಕಟಗಳನ್ನು ಸಹಿಸಿಕೊಂಡು ನಮ್ಮ ದುಃಖಗಳನ್ನು ಹೊತ್ತನು; ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಹೊಡೆಯಲ್ಪಟ್ಟವನು, (ಶಿಕ್ಷಿಸಲ್ಪಟ್ಟವನು) ಹಿಂಸಿಸಲ್ಪಟ್ಟವನು ಎಂದು ಭಾವಿಸಿ ಕೊಂಡೆವು. ನಮ್ಮ ದ್ರೋಹಗಳ ನಿಮಿತ್ತ ಆತನಿಗೆ ಗಾಯವಾಯಿತು, ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಲ್ಪಟ್ಟನು; ನಮ್ಮ ಸಮಾಧಾನಕ್ಕೆ ಕಾರಣವಾದ ಶಿಕ್ಷೆಯು ಆತನ ಮೇಲೆ ಬಿತ್ತು; ಆತನ ಬಾಸುಂಡೆ ಗಳಿಂದ ನಮಗೆ ಸ್ವಸ್ಥವಾಯಿತು. ನಾವೆಲ್ಲರೂ ದಾರಿ ತಪ್ಪಿದ ಕುರಿಗಳಂತಿದ್ದೆವು; ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು; ಕರ್ತನು ನಮ್ಮ ದುಷ್ಕೃತ್ಯಗಳನ್ನೆಲ್ಲಾ ಆತನ ಮೇಲೆ ಹಾಕಿದನು. ಆತನು ಪೀಡಿಸಲ್ಪಟ್ಟವನೂ ಮತ್ತು ಹಿಂಸಿಸಲ್ಪಟ್ಟವನೂ ಆಗಿದ್ದನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ; ವಧಿಸುವದಕ್ಕೆ ತರಲ್ಪ ಡುವ ಕುರಿಮರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನ ವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ. ಆತನು ಸೆರೆಯಿಂದಲೂ ನ್ಯಾಯತೀರ್ಪಿ ನಿಂದಲೂ ತೆಗೆಯಲ್ಪಟ್ಟನು; ಆತನ ಸಂತತಿಯನ್ನು ತಿಳಿಯಪಡಿಸಿದವರು ಯಾರು? ಆತನು ಜೀವಿತರ ದೇಶದಿಂದ ಕಡಿಯಲ್ಪಟ್ಟವನು (ತೆಗೆಯಲ್ಪಟ್ಟನು); ತನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಪೆಟ್ಟು ತಿಂದನು. ಆತನು ಮರಣವನ್ನು ಧನಿಕರೊಂದಿಗೂ ಆತನ ಸಮಾಧಿಯನ್ನು ದುಷ್ಟರೊಂದಿಗೂ ಮಾಡಿಕೊಂಡನು. ಆತನು ಯಾವ ಬಲಾತ್ಕಾರವನ್ನೂ ಮಾಡಲಿಲ್ಲ ಇಲ್ಲವೆ ಆತನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ. ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು.
- Numbers 28:2 ಅರಣ್ಯಕಾಂಡ 28:2ನೀನು ಇಸ್ರಾಯೇಲ್ ಮಕ್ಕಳಿಗೆ ಆಜ್ಞಾಪಿಸಿ ಅವರಿಗೆ--ನನ್ನ ಸುವಾಸನೆಗೋಸ್ಕರ ಬೆಂಕಿ ಯಿಂದ ಮಾಡಿದ ಬಲಿಗಳಿಗೋಸ್ಕರವಾಗಿರುವ ನನ್ನ ರೊಟ್ಟಿಯ ಅರ್ಪಣೆಯನ್ನು ಅದರ ನೇಮಕವಾದ ಸಮಯದಲ್ಲಿ ನನಗೆ ಅರ್ಪಿಸುವದಕ್ಕೆ ನೀವು ನೋಡಿ ಕೊಳ್ಳಿರಿ.
- Revelation 14:4 ಪ್ರಕಟನೆ 14:4ಸ್ತ್ರೀಯ ರೊಂದಿಗೆ ಮಲಿನರಾಗದವರು ಇವರೇ. ಯಾಕಂದರೆ ಇವರು ಕನ್ನಿಕೆಯರು. ಕುರಿಮರಿಯಾದಾತನು ಎಲ್ಲಿಗೆ ಹೋದರೂ ಆತನ ಹಿಂದೆ ಹೋಗುವವರು ಇವರೇ. ದೇವರಿಗೂ ಕುರಿಮರಿಯಾದಾತನಿಗೂ ಪ್ರಥಮ ಫಲ ವಾಗಿರುವ ಇವರು ಮನುಷ್ಯರೊಳಗಿಂದ ವಿಮೋಚಿಸ ಲ್ಪಟ್ಟವರು.
- Malachi 1:11 ಮಲಾಕಿಯ 1:11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Proverbs 3:9–10 ಜ್ಞಾನೋಕ್ತಿಗಳು 3:9–10ನಿನ್ನ ಆಸ್ತಿಯಿಂದಲೂ ಅಭಿವೃದ್ಧಿಯ ಎಲ್ಲಾ ಪ್ರಥಮ ಫಲಗಳಿಂದಲೂ ಕರ್ತನನ್ನು ಸನ್ಮಾನಿಸು. ಹೀಗೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬಲ್ಪಡುವವು, ಹೊಸ ದ್ರಾಕ್ಷಾರಸದಿಂದ ನಿನ್ನ ತೊಟ್ಟಿಗಳು ತುಂಬಿ ತುಳುಕುವವು.
- 1 Corinthians 15:20 1 ಕೊರಿಂಥದವರಿಗೆ 15:20ಆದರೆ ಈಗ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದು ನಿದ್ರೆಹೋದವರಲ್ಲಿ ಪ್ರಥಮಫಲವಾದನು.
- Leviticus 23:14–17 ಯಾಜಕಕಾಂಡ 23:14–17ಅದೇ ದಿನದಲ್ಲಿ ನೀವು ನಿಮ್ಮ ದೇವರಿಗೆ ಸಮರ್ಪಣೆಯನ್ನು ತರುವ ವರೆಗೆ ರೊಟ್ಟಿಯನ್ನಾಗಲಿ ಹುರಿದ ಕಾಳನ್ನಾಗಲಿ ಇಲ್ಲವೆ ಹಸಿರಾದ ತೆನೆಗಳನ್ನಾಗಲಿ ತಿನ್ನಬಾರದು. ಇದು ನಿಮಗೆ ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು. ಸಬ್ಬತ್ತಿನ ಮಾರನೆಯ ದಿನ ನೀವು ಆಡಿಸುವ ಬಲಿಯಾದ ಸಿವುಡನ್ನು ತಂದ ದಿನದಿಂದ ಏಳು ಸಬ್ಬತ್ತು ಗಳು ಪೂರ್ಣವಾಗುವ ವರೆಗೆ ಲೆಕ್ಕಿಸಬೇಕು. ಏಳ ನೆಯ ಸಬ್ಬತ್ತಿನ ಮಾರನೆಯ ದಿನದಿಂದ ನೀವು ಐವತ್ತು ದಿನಗಳನ್ನು ಲೆಕ್ಕಿಸಬೇಕು. ನೀವು ಕರ್ತನಿಗೆ ಹೊಸ ಆಹಾರ ಬಲಿಯನ್ನು ಅರ್ಪಿಸಬೇಕು. ಇದಲ್ಲದೆ ನೀವು ನಿಮ್ಮ ನಿವಾಸಗಳಿಂದ ಹತ್ತನೆಯ ಎರಡು ಭಾಗ ಗಳ ಆಡಿಸುವ ಎರಡು ರೊಟ್ಟಿಗಳನ್ನು ಹೊರಗೆ ತರ ಬೇಕು. ಅವು ನಯವಾದ ಹಿಟ್ಟಿನಿಂದಾದವುಗಳಾಗಿರ ಬೇಕು. ಅವುಗಳು ಹುಳಿ ಕಲಸಿ ಸುಟ್ಟವುಗಳಾಗಿರಬೇಕು. ಅವು ಕರ್ತನಿಗೆ ಪ್ರಥಮ ಫಲಗಳು.
- Leviticus 22:29 ಯಾಜಕಕಾಂಡ 22:29ನೀವು ಕೃತಜ್ಞತೆಯ ಯಜ್ಞಾರ್ಪಣೆಯನ್ನು ಸಮರ್ಪಿಸುವಾಗ ನಿಮ್ಮ ಸ್ವಇಷ್ಟದಿಂದ ಅರ್ಪಿಸಿರಿ.
- Deuteronomy 26:2 ಧರ್ಮೋಪದೇಶಕಾಂಡ 26:2ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು.
- 2 Kings 4:42 2 ಅರಸುಗಳು 4:42ಇದಲ್ಲದೆ ಬಾಳ್ಷಾಲಿಷಾದಿಂದ ಒಬ್ಬ ಮನು ಷ್ಯನು ದೇವರ ಮನುಷ್ಯನಿಗೆ ಮೊದಲ ಫಲವಾದ ಜವೆಗೋದಿಯ ಇಪ್ಪತ್ತು ರೊಟ್ಟಿಗಳನ್ನೂ ಕಾಳಿ ನಿಂದ ತುಂಬಿದ ತೆನೆಗಳನ್ನೂ ತಕ್ಕೊಂಡು ಬಂದನು.
- Leviticus 23:20 ಯಾಜಕಕಾಂಡ 23:20ಯಾಜಕನು ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಗಾಗಿ ಪ್ರಥಮ ಫಲದ ರೊಟ್ಟಿಯೊಂದಿಗೂ ಎರಡು ಕುರಿಮರಿಗಳೊಂದಿಗೂ ಅವುಗಳನ್ನು ಆಡಿಸ ಬೇಕು. ಅವು ಕರ್ತನಿಗೆ ಪರಿಶುದ್ಧವಾಗಿದ್ದು ಯಾಜಕ ನಿಗೋಸ್ಕರ ಇರಬೇಕು.
Original words (Hebrew)
- offer · H7126קָרַב qârab
- offering · H4503מִנְחָה minchâh
- firstfruits · H1061בִּכּוּר bikkûwr
- offer · H7126קָרַב qârab
- offering · H4503מִנְחָה minchâh
- firstfruits · H1061בִּכּוּר bikkûwr
- ears · H24אָבִיב ʼâbîyb
- dried · H7033קָלָה qâlâh
- fire · H784אֵשׁ ʼêsh
- beaten · H1643גֶּרֶשׂ geres
- ears · H3759כַּרְמֶל karmel