Leviticus · chapter 26 · verse 30
Leviticus 26:30 in Kannada
ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು.
Idallade naanu nimma unnata sthalagalannu haalumaadi nimma pratimegalannu kadiduhaaki vigrahagala mele nimma henagalannu haakuvenu; nanna praanavu nimmannu hesikollu vadu.
Leviticus 26:30 in English
- King James Version (KJV)
- And I will destroy your high places, and cut down your images, and cast your carcases upon the carcases of your idols, and my soul shall abhor you.
- World English Bible (WEB)
- I will destroy your high places, and cut down your incense altars, and cast your dead bodies upon the bodies of your idols; and my soul will abhor you.
- American Standard Version (ASV)
- And I will destroy your high places, and cut down your sun-images, and cast your dead bodies upon the bodies of your idols; and my soul shall abhor you.
- Bible in Basic English (BBE)
- And I will send destruction on your high places, overturning your perfume altars, and will put your dead bodies on your broken images, and my soul will be turned from you in disgust.
- Darby Translation (DBY)
- And I will lay waste your high places, and cut down your sun-pillars, and cast your carcases upon the carcases of your idols; and my soul shall abhor you.
- Webster's Bible (WBS)
- And I will destroy your high places, and cut down your images, and cast your carcasses upon the carcasses of your idols, and my soul shall abhor you.
- Young's Literal Translation (YLT)
- And I have destroyed your high places, and cut down your images, and have put your carcases on the carcases of your idols, and My soul hath loathed you;
Read in context
- 28ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು.
- 29ನೀವು ನಿಮ್ಮ ಕುಮಾರ ಕುಮಾರ್ತೆಯರ ಮಾಂಸವನ್ನು ತಿನ್ನುವಿರಿ.
- 30ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು.
- 31ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು.
- 32ನಾನು ದೇಶವನ್ನು ಹಾಳುಮಾಡುವೆನು; ಅದರಲ್ಲಿ ವಾಸ ವಾಗುವ ನಿಮ್ಮ ಶತ್ರುಗಳು ಅದಕ್ಕೆ ಆಶ್ಚರ್ಯಪಡುವರು.
Cross references
- 2 Kings 23:20 2 ಅರಸುಗಳು 23:20ಆ ಸ್ಥಳಗಳಲ್ಲಿದ್ದ ಉನ್ನತ ಸ್ಥಳಗಳ ಯಾಜಕರನ್ನೆಲ್ಲಾ ಬಲಿಪೀಠಗಳ ಮೇಲೆ ಕೊಂದುಹಾಕಿ, ಅವುಗಳ ಮೇಲೆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ತಿರಿಗಿ ಬಂದನು.
- Isaiah 27:9 ಯೆಶಾಯ 27:9ಹೀಗಿರಲು (ಈ ಕಾರಣದಿಂದ) ಯಾಕೋಬು ಯಜ್ಞವೇದಿಯ ಕಲ್ಲುಗಳನ್ನೆಲ್ಲಾ ಒಡೆದುಹೋದ ಸುಣ್ಣದ ಕಲ್ಲುಗಳಂತೆ ಮಾಡುವಾಗ ವಿಗ್ರಹಸ್ತಂಭಗಳೂ ಸೂರ್ಯಸ್ತಂಭ ಗಳೂ ಏಳುವದಿಲ್ಲ ಮತ್ತು ಅದರ ಪಾಪಪರಿಹಾರಕ್ಕೆ ಗುರುತಾದ ಪೂರ್ಣಫಲವು ಇದೇ.
- Ezekiel 6:13 ಯೆಹೆಜ್ಕೇಲನು 6:13ಆಮೇಲೆ ನೀವು ಅವರಲ್ಲಿ ಹತವಾದ ಮನುಷ್ಯರು ಅವರಲ್ಲಿರುವಾಗ ಅವರ ವಿಗ್ರಹಗಳ ಮಧ್ಯದಲ್ಲಿ ಅವರ ಯಜ್ಞವೇದಿಗಳ ಸುತ್ತ ಲಾಗಿಯೂ ಎತ್ತರವಾದ ಪ್ರತಿಯೊಂದು ಗುಡ್ಡದ ಮೇಲೆಯೂ ಸಮಸ್ತ ಪರ್ವತಗಳ ತುದಿಯಲ್ಲಿಯ ಪ್ರತಿಯೊಂದು ಹಸುರಾದ ಮರದ ಕೆಳಗೂ ಪ್ರತಿ ಯೊಂದು ದಪ್ಪವಾದ ಓಕ್ ಮರದ ಕೆಳಗಡೆಯೂ ಅವರು ತಮ್ಮ ವಿಗ್ರಹಗಳಿಗೆಲ್ಲಾ ಸುವಾಸನೆಯನ್ನು ಅರ್ಪಿಸುವದರಲ್ಲಿಯೂ ನಾನೇ ಕರ್ತನೆಂದು ತಿಳಿಯು ವಿರಿಹೀಗೆ ನಾನು ನನ್ನ ಕೈಯನ್ನು ಅವರ ಮೇಲೆ ಚಾಚಿ ಅವರ ದೇಶವನ್ನು ನಾಶಮಾಡುವೆನು. ಹೌದು, ಅವರ ಎಲ್ಲಾ ನಿವಾಸಸ್ಥಳಗಳನ್ನು ದಿಬ್ಲದ ಅರಣ್ಯ ಕ್ಕಿಂತಲೂ ಹೆಚ್ಚಾಗಿ ಹಾಳುಮಾಡುವೆನು; ನಾನೇ ಕರ್ತನೆಂದು ಅವರು ತಿಳಿದುಕೊಳ್ಳುವರು.
- Ezekiel 6:3–6 ಯೆಹೆಜ್ಕೇಲನು 6:3–6ಇಸ್ರಾಯೇ ಲಿನ ಪರ್ವತಗಳೇ, ದೇವರಾದ ಕರ್ತನ ವಾಕ್ಯವನ್ನು ಕೇಳಿರಿ; ದೇವರಾದ ಕರ್ತನು ಪರ್ವತಗಳಿಗೂ ಗುಡ್ಡ ಗಳಿಗೂ ನದಿಗಳಿಗೂ ಕಣಿವೆಗಳಿಗೂ ಹೀಗೆ ಹೇಳು ತ್ತಾನೆ--ಇಗೋ, ನಾನು, ನಾನೇ ನಿಮ್ಮ ಮೇಲೆ ಕತ್ತಿ ಯನ್ನು ತಂದು ನಿಮ್ಮ ಎತ್ತರ ಸ್ಥಳಗಳನ್ನು (ಮೇಡುಗ ಳನ್ನು) ನಾಶಮಾಡುತ್ತೇನೆ. ನಿಮ್ಮ ಯಜ್ಞವೇದಿಗಳು ಹಾಳಾಗುವವು; ನಿಮ್ಮ ಪ್ರತಿಮೆಗಳು ಮುರಿಯಲ್ಪಡು ವವು; ನಿಮ್ಮಲ್ಲಿ ಹತರಾದ ಮನುಷ್ಯರನ್ನು ನಿಮ್ಮ ವಿಗ್ರ ಹಗಳ ಮುಂದೆ ನಾನು ಬಿಸಾಡುವೆನು. ಇಸ್ರಾ ಯೇಲನ ಮಕ್ಕಳ ಹೆಣಗಳನ್ನು ದೇವತಾ ವಿಗ್ರಹಗಳ ಮುಂದೆ ಹಾಕುವೆನು. ನಿಮ್ಮ ಯಜ್ಞವೇದಿಗಳ ಸುತ್ತಲೂ ನಿಮ್ಮ ಎಲುಬುಗಳನ್ನು ಎರಚಿಬಿಡುವೆನು. ನಿಮ್ಮ ನಗರದಲ್ಲಿ ವಾಸಮಾಡುವ ನಿಮ್ಮ ಎಲ್ಲಾ ಸ್ಥಳಗಳು ಹಾಳುಮಾಡಲ್ಪಡುವವು; ಎತ್ತರವಾದ ಸ್ಥಳಗಳೂ ನಾಶ ಮಾಡಲ್ಪಡುವವು; ಹೀಗೆ ನಿಮ್ಮ ಯಜ್ಞವೇದಿಗಳು ನಾಶವಾಗಿಯೂ ಹಾಳಾಗಿಯೂ ಹೋಗುವವು. ನಿಮ್ಮ ವಿಗ್ರಹಗಳು ಒಡೆಯಲ್ಪಟ್ಟು ಇಲ್ಲದಂತಾಗುವವು. ನೀವು ರೂಪಿಸಿದ ಪ್ರತಿಮೆಗಳು ಕಡಿದುಹಾಕಲ್ಪಟ್ಟು ಅಳಿಸ ಲ್ಪಡುವವು.
- 2 Chronicles 34:3–7 2 ಪೂರ್ವಕಾಲವೃತ್ತಾಂತ 34:3–7ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು. ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು, ಯೆಹೂ ದವನ್ನೂ ಯೆರೂಸಲೇಮನ್ನೂ ಶುಚಿಮಾಡಿದರು. ಹೀಗೆಯೇ ಅವರು ತಮ್ಮ ಗುದ್ದಲಿಗಳಿಂದ ಮನಸ್ಸೆ ಎಫ್ರಾಯಾಮ್ ಸಿಮೆಯೋನ್ ಪಟ್ಟಣಗಳು ಮೊದಲು ಗೊಂಡು ನಫ್ತ್ತಾಲಿಯ ವರೆಗೂ ಸುತ್ತಲೂ ಮಾಡಿದರು. ಅವನು ಬಲಿಪೀಠಗಳನ್ನೂ ತೋಪುಗಳನ್ನೂ ಕೆಡವಿ ಹಾಕಿ ಕೆತ್ತಿದ ವಿಗ್ರಹಗಳನ್ನು ಕುಟ್ಟಿ ಪುಡಿಪುಡಿ ಮಾಡಿ ಇಸ್ರಾಯೇಲ್ ದೇಶದಲ್ಲೆಲ್ಲಿಯೂ ಇರುವ ಸಮಸ್ತ ವಿಗ್ರಹಗಳನ್ನು ಕೆಡಿಸಿದ ತರುವಾಯ ಯೆರೂಸಲೇಮಿಗೆ ಹಿಂತಿರುಗಿದನು.
- 2 Chronicles 14:3–5 2 ಪೂರ್ವಕಾಲವೃತ್ತಾಂತ 14:3–5ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ, ತಮ್ಮ ಪಿತೃಗಳ ದೇವರಾದ ಕರ್ತನನ್ನು ಹುಡುಕಲೂ ನ್ಯಾಯಪ್ರಮಾಣವನ್ನು ಆಜ್ಞೆಯನ್ನು ಕೈಕೊಳ್ಳಲೂ ಯೆಹೂದ್ಯರಿಗೆ ಆಜ್ಞಾಪಿ ಸಿದನು. ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು.
- 2 Kings 23:8 2 ಅರಸುಗಳು 23:8ಇದಲ್ಲದೆ ಅವನು ಯೆಹೂದದ ಪಟ್ಟಣಗಳಿಂದ ಯಾಜಕರೆಲ್ಲರನ್ನು ಬರ ಮಾಡಿ ಗೆಬ ಮೊದಲುಗೊಂಡು ಬೇರ್ಷೆಬದ ವರೆಗೂ ಯಾಜಕರು ಧೂಪ ಸುಡುತ್ತಿದ್ದ ಉನ್ನತ ಸ್ಥಳಗಳನ್ನು ಹೊಲೆಮಾಡಿ ಪಟ್ಟಣದ ಬಾಗಲಿನ ಎಡಪಾರ್ಶ್ವದಲ್ಲಿದ್ದ ಪಟ್ಟಣದ ಅಧಿಪತಿಯಾದ ಯೆಹೋಶುವನ ಬಾಗಲಿನ ದ್ವಾರದಲ್ಲಿದ್ದ ಬಾಗಲುಗಳ ಉನ್ನತ ಸ್ಥಳಗಳನ್ನು ಕೆಡವಿ ಹಾಕಿದನು.
- 2 Kings 23:16 2 ಅರಸುಗಳು 23:16ಯೋಷೀಯನು ತಿರುಗಿಕೊಂಡು ಅಲ್ಲಿ ಬೆಟ್ಟದಲ್ಲಿದ್ದ ಸಮಾಧಿಗಳನ್ನು ಕಂಡು, ಕಳುಹಿಸಿ, ಸಮಾಧಿಗಳಿಂದ ಎಲುಬುಗಳನ್ನು ತೆಗೆದುಕೊಂಡು ಈ ಮಾತುಗಳನ್ನು ಪ್ರಕಟಿಸಿದ ದೇವರ ಮನುಷ್ಯನು ಸಾರಿದ ಕರ್ತನ ವಾಕ್ಯದ ಪ್ರಕಾರ ಬಲಿಪೀಠದ ಮೇಲೆ ಅವುಗಳನ್ನು ಸುಟ್ಟುಬಿಟ್ಟು ಅದನ್ನು ಹೊಲೆಮಾಡಿದನು.
- Psalm 89:38 ಕೀರ್ತನೆಗಳು 89:38ಆದರೆ ನೀನು ಅಸಹ್ಯಿಸಿಬಿಟ್ಟು ತಿರಸ್ಕರಿಸಿ ನಿನ್ನ ಅಭಿಷಕ್ತನ ಮೇಲೆ ಉಗ್ರನಾದಿ;
- 2 Chronicles 23:17 2 ಪೂರ್ವಕಾಲವೃತ್ತಾಂತ 23:17ಸಮಸ್ತ ಜನರು ಬಾಳನ ಮನೆಗೆ ಹೋಗಿ ಅದನ್ನು ಕೆಡವಿಹಾಕಿ ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿ ಪೀಠಗಳ ಮುಂದೆ ಕೊಂದುಹಾಕಿದರು.
- Leviticus 26:11 ಯಾಜಕಕಾಂಡ 26:11ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು.
- Leviticus 26:15 ಯಾಜಕಕಾಂಡ 26:15ನನ್ನ ನಿಯಮಗಳನ್ನು ನೀವು ಅಸಡ್ಡೆಮಾಡಿದರೆ ಇಲ್ಲವೆ ನನ್ನ ನಿರ್ಣಯಗಳಲ್ಲಿ ನಿಮ್ಮ ಪ್ರಾಣವು ಅಸಹ್ಯಪಟ್ಟರೆ ನೀವು ನನ್ನ ಒಡಂಬಡಿ ಕೆಯನ್ನು ವಿಾರಿ ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ