Leviticus · chapter 9 · verse 18
Leviticus 9:18 in Kannada
ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
Avanu janarigaagi horiyannoo tagarannoo samaadhaana baligala yajnyakkaagi vadhisidanu; aaronana kumaararu raktavannu avana balige taralu avanu adannu yajnyavediya mele suttaloo chimukisidanu.
Leviticus 9:18 in English
- King James Version (KJV)
- He slew also the bullock and the ram [for] a sacrifice of peace offerings, which [was] for the people: and Aaron’s sons presented unto him the blood, which he sprinkled upon the altar round about,
- World English Bible (WEB)
- He also killed the bull and the ram, the sacrifice of peace offerings, which was for the people. Aaron’s sons delivered to him the blood, which he sprinkled around on the altar;
- American Standard Version (ASV)
- He slew also the ox and the ram, the sacrifice of peace-offerings, which was for the people: and Aaron’s sons delivered unto him the blood, which he sprinkled upon the altar round about,
- Bible in Basic English (BBE)
- And he put to death the ox and the sheep, which were the peace-offerings for the people; and Aaron's sons gave him the blood and he put some of it on and round the altar;
- Darby Translation (DBY)
- And he slaughtered the bullock and the ram of the sacrifice of peace-offering which was for the people. And Aaron's sons delivered to him the blood, and he sprinkled it on the altar round about;
- Webster's Bible (WBS)
- He slew also the bullock and the ram [for] a sacrifice of peace-offerings, which [was] for the people: and Aaron's sons presented to him the blood, which he sprinkled around upon the altar,
- Young's Literal Translation (YLT)
- And he slaughtereth the bullock and the ram, a sacrifice of the peace-offerings, which [are] for the people, and sons of Aaron present the blood unto him (and he sprinkleth it on the altar round about),
Read in context
- 16ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು.
- 17ಅವನು ಆಹಾರ ಸಮರ್ಪಣೆ ಯನ್ನು ತಂದು ಅದರಲ್ಲಿ ಒಂದು ಹಿಡಿ ತೆಗೆದುಕೊಂಡು ಯಜ್ಞವೇದಿಯ ಮೇಲೆ ಬೆಳಗಿನ ದಹನಬಲಿಯ ಪಕ್ಕದಲ್ಲಿ ಅದನ್ನು ಸುಟ್ಟನು.
- 18ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
- 19ಹೋರಿ ಟಗರಿನ ಕೊಬ್ಬನ್ನೂ ಹಿಂಭಾಗವನ್ನೂ ಕರುಳುಗಳನ್ನು ಮುಚ್ಚುವ ಮೂತ್ರಜನಕಾಂಗಗಳನ್ನೂ ಕಲಿಜದ ಮೇಲಿರುವ ಪೊರೆಯನ್ನೂ
- 20ಅವರು ಎದೆ ಭಾಗಗಳ ಮೇಲೆ ಕೊಬ್ಬನ್ನು ಇಟ್ಟಾಗ ಅವನು ಯಜ್ಞ ವೇದಿಯ ಮೇಲೆ ಸುಟ್ಟನು.
Cross references
- Colossians 1:20 ಕೊಲೊಸ್ಸೆಯವರಿಗೆ 1:20ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು.
- Ephesians 2:14–17 ಎಫೆಸದವರಿಗೆ 2:14–17ನಿಮ್ಮನ್ನೂ ನಮ್ಮನ್ನೂ ಒಂದು ಮಾಡಿದ ಆತನೇ ನಮ್ಮ ಸಮಾಧಾನವಾಗಿ ನಮ್ಮಿಬ್ಬರನ್ನು ಅಗಲಿ ಸಿದ ಅಡ್ಡಗೋಡೆಯನ್ನು ಆತನು ಕೆಡವಿಹಾಕಿದನು. ಆತನು ಇದ್ದ ದ್ವೇಷವನ್ನು ಅಂದರೆ ಶಾಸನಗಳ ಆಜ್ಞೆಗಳುಳ್ಳ ನ್ಯಾಯಪ್ರಮಾಣವನ್ನು ತನ್ನ ಶರೀರದ ಮೂಲಕ ರದ್ದುಗೊಳಿಸಿ ಸಮಾಧಾನ ಮಾಡುವವನಾಗಿ ಉಭಯರನ್ನು ತನ್ನಲ್ಲಿ ಒಬ್ಬ ನೂತನ ಪುರಷನನ್ನಾಗಿ ಮಾಡಿದನು. ಇದ್ದ ದ್ವೇಷವನ್ನು ತನ್ನ ಶಿಲುಬೆಯ ಮೇಲೆ ಕೊಂದು ಅದರಿಂದ ಉಭಯರನ್ನು ಒಂದೇ ದೇಹದಂತಾಗ ಮಾಡಿ ದೇವರೊಂದಿಗೆ ಸಮಾಧಾನ ಪಡಿಸಿದ್ದಾನೆ. ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.
- Romans 5:1 ರೋಮಾಪುರದವರಿಗೆ 5:1ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ.
- Leviticus 7:11–18 ಯಾಜಕಕಾಂಡ 7:11–18ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ: ಅವನು ಉಪಕಾರಸ್ತುತಿಗಾಗಿ ಅರ್ಪಿಸುವದಾದರೆ, ಉಪಕಾರಸ್ತುತಿ ಬಲಿಯನ್ನು ಹುಳಿಯಿಲ್ಲದ ಎಣ್ಣೆ ಬೆರೆ ಸಿದ ರೊಟ್ಟಿಗಳೊಂದಿಗೆ ಹುಳಿಯಿಲ್ಲದ ಎಣ್ಣೆಹೊಯ್ದ ದೋಸೆಗಳೊಂದಿಗೂ ಮತ್ತು ನಯವಾದ ಹಿಟ್ಟಿನ ಎಣ್ಣೆ ಬೆರೆಸಿದ ಹುರಿದರೊಟ್ಟಿಗಳೊಂದಿಗೂ ಸಮರ್ಪಿಸ ಬೇಕು. ರೊಟ್ಟಿಗಳಲ್ಲದೆ ಅವನು ಸಮಾಧಾನದ ಬಲಿಗಳನ್ನು ಉಪಕಾರಸ್ತುತಿ ಯಜ್ಞದೊಂದಿಗೆ ತನ್ನ ಸಮರ್ಪಣೆಗಾಗಿ ಹುಳಿರೊಟ್ಟಿಗಳನ್ನು ಸಮರ್ಪಿಸ ಬೇಕು. ಅವನು ಇಡೀ ಕಾಣಿಕೆಯಲ್ಲಿ ಒಂದನ್ನು ಎತ್ತುವ ಕಾಣಿಕೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. ಅದು ಸಮಾಧಾನ ಬಲಿಗಳ ರಕ್ತವನ್ನು ಚಿಮುಕಿಸುವ ಯಾಜಕನದಾಗಬೇಕು. ಉಪಕಾರಸ್ತುತಿಗಾಗಿ ಅವನ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ಅರ್ಪಿ ಸಲ್ಪಟ್ಟ ದಿನವೇ ತಿನ್ನಬೇಕು; ಅವನು ಅದರಲ್ಲಿ ಬೆಳಗಿನ ವರೆಗೆ ಯಾವದನ್ನೂ ಉಳಿಸಬಾರದು. ಆದರೆ ಅವನ ಯಜ್ಞ ಸಮರ್ಪಣೆಯು ಒಂದು ಹರಕೆಯಾಗಿದ್ದರೆ ಇಲ್ಲವೆ ಸ್ವಇಚ್ಛೆಯಾದ ಸಮರ್ಪಣೆ ಯಾಗಿದ್ದರೆ ಅವನು ತನ್ನ ಯಜ್ಞವನ್ನು ಅರ್ಪಿಸಿದ ದಿನದಲ್ಲಿಯೇ ತಿನ್ನಬೇಕು; ಅದರಲ್ಲಿ ಉಳಿದದ್ದನ್ನು ಮಾರನೆಯ ದಿನದಲ್ಲಿ ಸಹ ತಿನ್ನಬೇಕು. ಉಳಿದಿರುವ ಯಜ್ಞದ ಮಾಂಸವನ್ನು ಮೂರನೆಯ ದಿನದಲ್ಲಿ ಬೆಂಕಿ ಯಿಂದ ಸುಡಬೇಕು. ತನ್ನ ಸಮಾಧಾನ ಬಲಿ ಯಜ್ಞದ ಮಾಂಸದಲ್ಲಿ ಯಾವ ಭಾಗವನ್ನಾದರೂ ಮೂರನೆಯ ದಿನದಲ್ಲಿ ತಿಂದರೆ ಅದು ಸಮರ್ಪಣೆಯಾಗುವದಿಲ್ಲ ಇಲ್ಲವೆ ಅರ್ಪಿಸುವವನ ಲೆಕ್ಕಕ್ಕೆ ಸೇರಿಸಲ್ಪಡುವದಿಲ್ಲ. ಅದು ಹೊಲೆಯಾಗಿರುವದು, ಅದನ್ನು ತಿನ್ನುವವನು ತನ್ನ ಅಪರಾಧವನ್ನು ಹೊರುವನು.
- Leviticus 3:1–17 ಯಾಜಕಕಾಂಡ 3:1–17ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ. ಅವನು ಸಮರ್ಪಿ ಸುವದರ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ವಧಿಸ ಬೇಕು; ಯಾಜಕರಾದ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸ ಬೇಕು. ಅವನು ಸಮಾಧಾನದ ಕಾಣಿಕೆಯ ಯಜ್ಞಾ ರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿ ಯಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನ ಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಕರ್ತನಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು. ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು. ಅವನ ಕಾಣಿಕೆಯು ಸಮಾಧಾನದ ಸಮರ್ಪಣೆಯ ಯಜ್ಞವಾಗಿ ಅದು ತನ್ನ ಹಿಂಡಿನಿಂದಾದ ಕಾಣಿಕೆ ಯಾಗಿದ್ದರೆ ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ದೋಷ ವಿಲ್ಲದ್ದಾಗಿ ಅದನ್ನು ಅವನು ಕರ್ತನಿಗೆ ಸಮರ್ಪಿಸಬೇಕು. ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವದಾದರೆ ಅದನ್ನು ಅವನು ಕರ್ತನ ಎದುರಿ ನಲ್ಲಿ ಸಮರ್ಪಿಸಬೇಕು. ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು. ಅದರ ಇಡೀ ಹಿಂಭಾಗವನ್ನೂ ಕೊಬ್ಬನ್ನೂ ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳು ಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ತೆಗೆದುಕೊಂಡು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಕರ್ತನಿಗೆ ಸಮರ್ಪಿಸಬೇಕು. ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುತ್ತದೆ. ಅವನ ಸಮರ್ಪಣೆಯು ಮೇಕೆಯಾಗಿದ್ದರೆ ಅದನ್ನು ಅವನು ಕರ್ತನ ಎದುರಿನಲ್ಲಿ ಸಮರ್ಪಿಸಬೇಕು. ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಸಭೆಯ ಗುಡಾರದ ಮುಂದೆ ಅದನ್ನು ವಧಿಸಬೇಕು; ಆಗ ಆರೋನನ ಕುಮಾರರು ಅದರ ರಕ್ತವನ್ನು ಯಜ್ಞ ವೇದಿಯ ಸುತ್ತಲೂ ಚಿಮುಕಿಸಬೇಕು. ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಎರಡು ಮೂತ್ರಜನಕಾಂಗ ಗಳನ್ನೂ ಪಕ್ಕೆಯ ಬದಿಗಳಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆದುಕೊಂಡು ಅರ್ಪಿಸುವ ಸಮರ್ಪಣೆಯನ್ನು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. ಯಾಜಕನು ಅವುಗಳನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಯಜ್ಞಾ ರ್ಪಣೆಯು ಸುವಾಸನೆಯ ಆಹಾರವಾಗಿರುವದು. ಎಲ್ಲಾ ಕೊಬ್ಬು ಕರ್ತನದೇ.ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು. ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು.
- Romans 5:10 ರೋಮಾಪುರದವರಿಗೆ 5:10ವೈರಿ ಗಳಾಗಿದ್ದ ನಾವು ದೇವರ ಮಗನ ಮರಣದ ಮೂಲಕ ಆತನೊಂದಿಗೆ ಸಮಾಧಾನವಾಗಿದ್ದರೆ ಸಮಾಧಾನವಾದ ನಮಗೆ ಆತನ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ.
Original words (Hebrew)
- slew · H7819שָׁחַט shâchaṭ
- bullock · H7794שׁוֹר shôwr
- ram · H352אַיִל ʼayil
- sacrifice · H2077זֶבַח zebach
- offerings · H8002שֶׁלֶם shelem
- people · H5971עַם ʻam
- Aaron’s · H175אַהֲרוֹן ʼAhărôwn
- sons · H1121בֵּן bên
- presented · H4672מָצָא mâtsâʼ
- blood · H1818דָּם dâm
- sprinkled · H2236זָרַק zâraq
- altar · H4196מִזְבֵּחַ mizbêach
- about · H5439סָבִיב çâbîyb