Leviticus · chapter 9 · verse 16
Leviticus 9:16 in Kannada
ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು.
Avanu dahanabali yannu tandu kramada prakaarave adannu samarpisidanu.
Leviticus 9:16 in English
- King James Version (KJV)
- And he brought the burnt offering, and offered it according to the manner.
- World English Bible (WEB)
- He presented the burnt offering, and offered it according to the ordinance.
- American Standard Version (ASV)
- And he presented the burnt-offering, and offered it according to the ordinance.
- Bible in Basic English (BBE)
- And he took the burned offering, offering it in the ordered way;
- Darby Translation (DBY)
- And he presented the burnt-offering and offered it according to the ordinance.
- Webster's Bible (WBS)
- And he brought the burnt-offering, and offered it according to the manner.
- Young's Literal Translation (YLT)
- and he bringeth near the burnt-offering, and maketh it, according to the ordinance;
Read in context
- 14ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು.
- 15ಅವನು ಜನರ ಬಲಿಯನ್ನು ತಂದು, ಮೇಕೆಯನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಬಲಿಯಾಗಿರು ವದನ್ನು ವಧಿಸಿ, ಮೊದಲನೆಯದರ ಹಾಗೆ ಪಾಪಕ್ಕಾಗಿ ಅದನ್ನು ಸಮರ್ಪಿಸಿದನು.
- 16ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು.
- 17ಅವನು ಆಹಾರ ಸಮರ್ಪಣೆ ಯನ್ನು ತಂದು ಅದರಲ್ಲಿ ಒಂದು ಹಿಡಿ ತೆಗೆದುಕೊಂಡು ಯಜ್ಞವೇದಿಯ ಮೇಲೆ ಬೆಳಗಿನ ದಹನಬಲಿಯ ಪಕ್ಕದಲ್ಲಿ ಅದನ್ನು ಸುಟ್ಟನು.
- 18ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
Cross references
- Hebrews 10:1–22 ಇಬ್ರಿಯರಿಗೆ 10:1–22ನ್ಯಾಯಪ್ರಮಾಣವು ಬರಬೇಕಾಗಿದ್ದ ಮೇಲುಗಳ ಛಾಯೆಯಾಗಿದೆ; ಆದರೆ ಅದು ಅವುಗಳ ನಿಜಸ್ವರೂಪವಲ್ಲವಾದದರಿಂದ ಆ ನ್ಯಾಯ ಪ್ರಮಾಣವು ವರುಷ ವರುಷಕ್ಕೆ ಯಾವಾ ಗಲೂ ಅರ್ಪಿತವಾಗುವ ಯಜ್ಞಗಳನ್ನು ಅರ್ಪಿಸುವದಕ್ಕೆ ಬರುವವರನ್ನು ಎಂದಿಗೂ ಸಿದ್ಧಿಗೆ ತರಲಾರದು. ತಂದಿದ್ದ ಪಕ್ಷದಲ್ಲಿ ಆ ಯಜ್ಞಗಳ ಸಮರ್ಪಣೆಯು ನಿಂತು ಹೋಗುತ್ತಿತ್ತಲ್ಲಾ. ಯಾಕಂದರೆ ಆರಾಧನೆ ಮಾಡುವವರು ಒಂದು ಸಾರಿ ಶುದ್ಧೀಕರಿಸಲ್ಪಟ್ಟ ಮೇಲೆ ಅವರಿಗೆ ಎಂದಿಗೂ ಪಾಪಗಳ ಮನಸ್ಸಾಕ್ಷಿ ಇರುತ್ತಿರಲಿಲ್ಲ. ಆದರೆ ಪ್ರತಿ ವರುಷವು ಆ ಯಜ್ಞಗಳಲ್ಲಿ ತಿರಿಗಿ ಪಾಪಗಳ ಜ್ಞಾಪಕವಾಗುವದುಂಟು. ಹೋರಿಗಳ ಮತ್ತು ಹೋತಗಳ ರಕ್ತವು ಪಾಪಗಳನ್ನು ತೆಗೆದು ಹಾಕುವದು ಅಸಾಧ್ಯವಾಗಿದೆ. ಆದದರಿಂದ ಆತನು ಭೂಲೋಕದೊಳಗೆ ಬರುವಾಗ--(ದೇವರೇ,) ಯಜ್ಞವೂ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ, ಆದರೆ ನನಗೆ ದೇಹವನ್ನು ಸಿದ್ಧಮಾಡಿಕೊಟ್ಟೀ; ದಹನ ಬಲಿಗಳಲ್ಲಿಯೂ ಪಾಪಪರಿಹಾರಕ ಯಜ್ಞಗಳಲ್ಲಿಯೂ ನೀನು ಸಂತೋಷಪಡಲಿಲ್ಲ; ಆಗ ನಾನು--ಇಗೋ, ಓ ದೇವರೇ, ಗ್ರಂಥದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ; ನಿನ್ನ ಚಿತ್ತವನ್ನು ನೇರವೇರಿಸುವದಕ್ಕೆ ಬಂದಿ ದ್ದೇನೆ ಎಂದು ಹೇಳಿದೆನು ಅನ್ನುತ್ತಾನೆ. ಆಮೇಲೆ ಆತನು--ನ್ಯಾಯಪ್ರಮಾಣದಂತೆ ಅರ್ಪಿಸಲ್ಪಡುವಂಥ ಯಜ್ಞವೂ ಅರ್ಪಣೆಯೂ ದಹನ ಬಲಿಗಳೂ ಪಾಪ ಕ್ಕಾಗಿ ಅರ್ಪಣೆಯೂ ನಿನಗೆ ಇಷ್ಟವಾಗಿರಲಿಲ್ಲ ಇಲ್ಲವೆ ಅವುಗಳಲ್ಲಿ ನಿನಗೆ ಸಂತೋಷವಿರಲಿಲ್ಲ ಎಂದು ಹೇಳಿ ದ್ದಾನೆ. ತರು ವಾಯ--ಇಗೋ, ಓ ದೇವರೇ, ನಿನ್ನ ಚಿತ್ತವನ್ನು ನೆರವೇರಿಸುವದಕ್ಕೆ ಬಂದಿದ್ದೇನೆ ಎಂತಲೂ ಹೇಳಿದ್ದಾನೆ. ಆತನು ಎರಡನೆಯದನ್ನು ಸ್ಥಾಪಿಸುವ ದಕ್ಕಾಗಿ ಮೊದಲನೆಯದನ್ನು ತೆಗೆದುಹಾಕುತ್ತಾನೆ. ಯೇಸು ಕ್ರಿಸ್ತನು ಒಂದೇ ಸಾರಿ ಎಂದೆಂದಿಗೂ ಅರ್ಪಿಸಿದ ತನ್ನ ದೇಹದ ಮೂಲಕ ಆತನ ಚಿತ್ತದಿಂದ ನಾವು ಶುದ್ಧರಾದೆವು. ಇದಲ್ಲದೆ ಪ್ರತಿ ಯಾಜಕನು ದಿನಾಲು ಸೇವೆ ಮಾಡುತ್ತಾ ಎಂದಿಗೂ ಪಾಪವನ್ನು ತೆಗೆದು ಹಾಕಲಾರ ದಂಥ ಒಂದೇ ವಿಧವಾದ ಯಜ್ಞಗಳನ್ನು ಪದೇ ಪದೇ ಅರ್ಪಿಸುತ್ತಾ ನಿಂತುಕೊಂಡಿರುವನು. ಆದರೆ ಈ ಮನುಷ್ಯನು ಪಾಪಗಳಿಗೋಸ್ಕರ ನಿರಂತರವಾದ ಒಂದೇ ಯಜ್ಞವನ್ನು ಅರ್ಪಿಸಿದ ಮೇಲೆ ದೇವರ ಬಲ ಗಡೆಯಲ್ಲಿ ಕೂತುಕೊಂಡನು. ಅಂದಿನಿಂದ ತನ್ನ ವಿರೋಧಿಗಳು ತನ್ನ ಪಾದ ಪೀಠವಾಗಿ ಮಾಡಲ್ಪಡುವ ತನಕ ಆತನು ಎದುರುನೋಡುವನು. ಆತನು ಪವಿತ್ರರಾಗುವವರನ್ನು ಒಂದೇ ಅರ್ಪಣೆಯಿಂದ ನಿರಂ ತರಕ್ಕೂ ಸಂಪೂರ್ಣರನ್ನಾಗಿ ಮಾಡಿದ್ದಾನೆ. ಪವಿ ತ್ರಾತ್ಮನು ಸಹ ಇದರ ವಿಷಯವಾಗಿ ನಮಗೆ ಸಾಕ್ಷಿ ಕೊಡುವಾತನಾಗಿದ್ದಾನೆ; ಹೇಗೆಂದರೆ ಆತನು ಮೊದಲು ಹೇಳಿದಂತೆ--ಆ ದಿನಗಳಾದ ಮೇಲೆ ನನ್ನ ಆಜ್ಞೆಗಳನ್ನು ಅವರ ಹೃದಯಗಳಲ್ಲಿ ಇಡುವೆನು, ಅವರ ಮನಸ್ಸುಗಳಲ್ಲಿ ಅವುಗಳನ್ನು ಬರೆಯುವೆನು. ನಾನು ಅವರ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯು ಇದೇ. ಇದಲ್ಲದೆ ಅವರ ಪಾಪಗಳನ್ನೂ ದುಷ್ಕೃತ್ಯ ಗಳನ್ನೂ ನನ್ನ ನೆನಪಿಗೆ ಇನ್ನೆಂದಿಗೂ ತರುವದಿಲ್ಲ ಎಂದು ಕರ್ತನು ಹೇಳುತ್ತಾನೆ. ಪಾಪವು ಪರಿಹಾರವಾದಲ್ಲಿ ಇನ್ನು ಎಂದಿಗೂ ಅದಕ್ಕಾಗಿ ಅರ್ಪಣೆ ಇರುವದಿಲ್ಲ. ಹೀಗಿರುವಲ್ಲಿ ಸಹೋದರರೇ, ಯೇಸುವಿನ ರಕ್ತದ ಮೂಲಕ ಅತಿಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವದಕ್ಕೆ ನಮಗೆ ಧೈರ್ಯವುಂಟಾಯಿತು. ಹೇಗೆಂದರೆ, ಆತನು ನಮಗೋಸ್ಕರ ಪ್ರತಿಷ್ಠಿಸಿದ ಮತ್ತು ಹೊಸ ಜೀವವುಳ್ಳ ದಾರಿಯಲ್ಲಿ ಆತನ ಶರೀರವೆಂಬ ತೆರೆಯ ಮುಖಾಂತರವೇ ಇದಾಯಿತು. ದೇವರ ಮನೆಯ ಮೇಲೆ ಮಹಾಯಾಜಕನು ನಮಗಿರುವದರಿಂದ ನಾವು ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂರ್ಣ ನಿಶ್ಚಯತ್ವದಿಂದಲೂ ಕೆಟ್ಟ ಮನಸ್ಸಾಕ್ಷಿಯ ಪರಿಹಾರಕ್ಕಾಗಿ ಚಿಮುಕಿಸಲ್ಪಟ್ಟ ಹೃದಯಗಳುಳ್ಳವ ರಾಗಿಯೂ ನಮ್ಮ ಶರೀರಗಳನ್ನು ನಿರ್ಮೂಲವಾದ ನೀರಿನಿಂದ ತೊಳೆದು ಕೊಂಡವರಾಗಿಯೂ ಆತನ ಸವಿಾಪಕ್ಕೆ ಬರೋಣ.
- Leviticus 9:12–14 ಯಾಜಕಕಾಂಡ 9:12–14ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು. ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು. ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು.
- Leviticus 1:1–13 ಯಾಜಕಕಾಂಡ 1:1–13ಕರ್ತನು ಮೋಶೆಯನ್ನು ಕರೆದು ಸಭೆಯಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- ಇಸ್ರಾಯೇಲ್ ಮಕ್ಕ ಳೊಂದಿಗೆ ಮಾತನಾಡಿ ಅವರಿಗೆ--ನಿಮ್ಮಲ್ಲಿ ಯಾವನಾ ದರೂ ಕರ್ತನಿಗೆ ಕಾಣಿಕೆಯನ್ನು ತರುವದಾದರೆ ನೀವು ನಿಮ್ಮ ಯಜ್ಞಗಳನ್ನು ಪಶುಗಳಿಂದಲೂ ಹಿಂಡು ಗಳಿಂದಲೂ ಮಂದೆಗಳಿಂದಲೂ ತರಬೇಕು. ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು. ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು. ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಅವನು ಆ ದಹನಬಲಿಯ ಚರ್ಮವನ್ನು ಸುಲಿದು ಅದನ್ನು ತುಂಡುಗಳನ್ನಾಗಿ ಮಾಡಬೇಕು. ಯಾಜಕನಾದ ಆರೋನನ ಕುಮಾ ರರು ಯಜ್ಞವೇದಿಯ ಮೇಲೆ ಬೆಂಕಿ ಇಟ್ಟು ಆ ಬೆಂಕಿಯ ಮೇಲೆ ಕ್ರಮವಾಗಿ ಕಟ್ಟಿಗೆಯನ್ನು ಇಡಬೇಕು. ಆಗ ಆರೋನನ ಕುಮಾರರಾದ ಯಾಜಕರು ಅದರ ಭಾಗಗಳನ್ನು ಅಂದರೆ ತಲೆಯನ್ನೂ ಕೊಬ್ಬನ್ನೂ ಯಜ್ಞವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಕ್ರಮವಾಗಿ ಇಡಬೇಕು; ಅದರ ಕರುಳುಗಳನ್ನೂ ಕಾಲುಗಳನ್ನೂ ಅವನು ನೀರಿನಲ್ಲಿ ತೊಳೆಯಬೇಕು; ಯಾಜಕನು ಎಲ್ಲವನ್ನೂ ಯಜ್ಞವೇದಿಯ ಮೇಲೆ ಬೆಂಕಿಯಿಂದ ಸಮರ್ಪಿಸುವ ದಹನಬಲಿಯಂತೆಯೂ ಕರ್ತನಿಗೆ ಸುವಾಸನೆಯಾಗು ವಂತೆಯೂ ಸುಡಬೇಕು. ದಹನಬಲಿಗೋಸ್ಕರ ತನ್ನ ಕಾಣಿಕೆಯು ಮಂದೆ ಯಿಂದಾದರೆ ಅವನು ಕುರಿಯನ್ನಾಗಲಿ ಆಡನ್ನಾಗಲಿ ದೋಷವಿಲ್ಲದ ಒಂದು ಗಂಡನ್ನು ತರಬೇಕು. ಅವನು ಅದನ್ನು ಯಜ್ಞವೇದಿಯ ಉತ್ತರದ ಕಡೆಯಲ್ಲಿ ಕರ್ತನ ಮುಂದೆ ವಧಿಸಬೇಕು. ಇದಲ್ಲದೆ ಆರೋನನ ಕುಮಾರ ರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು. ಅವನು ಅದರ ತಲೆ ಮತ್ತು ಕೊಬ್ಬಿನೊಂದಿಗೆ ತುಂಡುಗಳನ್ನಾಗಿ ಮಾಡ ಬೇಕು. ಯಾಜಕನು ಅವುಗಳನ್ನು ಕ್ರಮವಾಗಿ ಯಜ್ಞ ವೇದಿಯ ಮೇಲಿನ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ಇಡಬೇಕು. ಆದರೆ ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಿಂದ ತೊಳೆಯಬೇಕು; ಆಗ ಯಾಜಕನು ಅವೆಲ್ಲವುಗಳನ್ನು ತಂದು ಯಜ್ಞವೇದಿಯ ಮೇಲೆ ಸುಡಬೇಕು. ಬೆಂಕಿಯಿಂದ ಸಮರ್ಪಿಸುವ ದಹನಬಲಿಯ ಹಾಗೆಯೂ ಕರ್ತನಿಗೆ ಸುವಾಸನೆ ಯಾಗುವಂತೆಯೂ ಸುಡಬೇಕು.
- Leviticus 8:18–21 ಯಾಜಕಕಾಂಡ 8:18–21ದಹನಬಲಿಗಾಗಿ ಟಗರನ್ನು ತಂದನು. ಆರೋ ನನು ಅವನ ಕುಮಾರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಟ್ಟರು. ಮೋಶೆಯು ಅದನ್ನು ವಧಿಸಿ ರಕ್ತವನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿ ಅವನು ಆ ಟಗರನ್ನು ತುಂಡು ತುಂಡಾಗಿ ಮಾಡಿ ತಲೆಯನ್ನು ಆ ತುಂಡುಗಳನ್ನು ಆ ಕೊಬ್ಬನ್ನು ಸುಟ್ಟನು. ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣ ವಾಗಿ ಯಜ್ಞವೇದಿಯ ಮೇಲೆ ಸುಟ್ಟನು. ಅದು ದಹನ ಬಲಿಯಾಗಿ ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ಸಮರ್ಪಣೆಯಾಗಿತ್ತು.