Luke · chapter 14 · verse 17
Luke 14:17 in Kannada
ಔತಣದ ಸಮಯವಾದಾಗ ಕರೆಯಲ್ಪಟ್ಟವರಿಗೆ ಅವನು--ಎಲ್ಲವೂ ಸಿದ್ಧವಾಗಿದೆ, ಬನ್ನಿರಿ ಎಂದು ಹೇಳುವದಕ್ಕಾಗಿ ತನ್ನ ಸೇವಕನನ್ನು ಕಳುಹಿಸಿದನು.
Autanada samayavaadaaga kareyalpattavarige avanu--ellavoo siddhavaagide, banniri endu heluvadakkaagi tanna sevakanannu kaluhisidanu.
Luke 14:17 in English
- King James Version (KJV)
- And sent his servant at supper time to say to them that were bidden, Come; for all things are now ready.
- World English Bible (WEB)
- He sent out his servant at supper time to tell those who were invited, ‘Come, for everything is ready now.’
- American Standard Version (ASV)
- and he sent forth his servant at supper time to say to them that were bidden, Come; for [all] things are now ready.
- Bible in Basic English (BBE)
- And when the time had come, he sent his servants to say to them, Come, for all things are now ready.
- Darby Translation (DBY)
- And he sent his bondman at the hour of supper to say to those who were invited, Come, for already all things are ready.
- Webster's Bible (WBS)
- And sent his servant at supper-time, to say to them that were invited, Come, for all things are now ready.
- Young's Literal Translation (YLT)
- and he sent his servant at the hour of the supper to say to those having been called, Be coming, because now are all things ready.
Read in context
- 15ಆಗ ಆತನ ಸಂಗಡ ಊಟಕ್ಕೆ ಕೂತವರಲ್ಲಿ ಒಬ್ಬನು ಈ ಸಂಗತಿಗಳನ್ನು ಕೇಳಿ ಆತನಿಗೆ--ದೇವರ ರಾಜ್ಯದಲ್ಲಿ ಊಟಮಾಡುವವನು ಧನ್ಯನು ಎಂದು ಹೇಳಿದನು.
- 16ಆಗ ಆತನು ಅವನಿಗೆ--ಒಬ್ಬಾನೊಬ್ಬ ಮನುಷ್ಯನು ಒಂದು ದೊಡ್ಡ ಔತಣಮಾಡಿಸಿ ಅನೇಕರನ್ನು ಕರೆದನು.
- 17ಔತಣದ ಸಮಯವಾದಾಗ ಕರೆಯಲ್ಪಟ್ಟವರಿಗೆ ಅವನು--ಎಲ್ಲವೂ ಸಿದ್ಧವಾಗಿದೆ, ಬನ್ನಿರಿ ಎಂದು ಹೇಳುವದಕ್ಕಾಗಿ ತನ್ನ ಸೇವಕನನ್ನು ಕಳುಹಿಸಿದನು.
- 18ಆದರೆ ಅವರೆಲ್ಲರೂ ಒಂದೇ ಮನ ಸ್ಸಿನಿಂದ ನೆವ ಹೇಳಲಾರಂಭಿಸಿ ಮೊದಲನೆಯವನು ಅವನಿಗೆ--ನಾನು ಒಂದು ತುಂಡು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
- 19ಬೇರೊಬ್ಬನು-- ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿ ದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕಾಗಿ ಹೋಗುತ್ತೇನೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
Cross references
- Proverbs 9:1–5 ಜ್ಞಾನೋಕ್ತಿಗಳು 9:1–5ಜ್ಞಾನವೆಂಬಾಕೆಯು ತನ್ನ ಮನೆಯನ್ನು ಕಟ್ಟಿ ಕೊಂಡಿದ್ದಾಳೆ; ಆಕೆಯು ತನ್ನ ಏಳು ಕಂಬ ಗಳನ್ನು ಕೆತ್ತಿಸಿದ್ದಾಳೆ. ಆಕೆಯು ತನ್ನ ಪಶುಗಳನ್ನು ವಧಿಸಿ, ತನ್ನ ದ್ರಾಕ್ಷಾರಸವನ್ನು ಬೆರಸಿ, ತನ್ನ ಮೇಜನ್ನು ಸಹ ಸಿದ್ಧಪಡಿಸಿದಳು. ಆಕೆಯು ತನ್ನ ಕನ್ನಿಕೆಯರನ್ನು ಕಳುಹಿಸುತ್ತಾಳೆ. ಆಕೆಯು ಪಟ್ಟಣದ ಅತಿ ಉನ್ನತ ಸ್ಥಳಗಳಲ್ಲಿ-- ಮೂರ್ಖನು ಯಾವನೋ ಅವನು ಇಲ್ಲಿಗೆ ತಿರುಗಲಿ ಎಂದು ಕೂಗುತ್ತಾಳೆ. ತಿಳುವಳಿಕೆ ಇಲ್ಲದೆ ಇರುವವನಿಗೆ ಆಕೆಯು-- ಬಾ, ನನ್ನ ರೊಟ್ಟಿಯನ್ನು ತಿಂದು ನಾನು ಬೆರಸಿದ ದ್ರಾಕ್ಷಾ ರಸವನ್ನು ಕುಡಿ ಎಂದೂ
- Matthew 22:3–4 ಮತ್ತಾಯನು 22:3–4ಅವನು ಮದುವೆಗೆ ಬರ ಹೇಳಿದವರನ್ನು ಕರೆಯು ವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು; ಆದರೆ ಅವರು ಬರಲೊಲ್ಲದೆ ಇದ್ದರು. ಅವನು ತಿರಿಗಿ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ--ಇಗೋ, ನಾನು ಔತಣವನ್ನು ಸಿದ್ಧಮಾಡಿದ್ದೇನೆ, ನನ್ನ ಎತ್ತುಗಳೂ ಕೊಬ್ಬಿದ ಪಶುಗಳೂ ಕೊಯ್ಯಲ್ಪಟ್ಟಿವೆ ಮತ್ತು ಎಲ್ಲವು ಗಳು ಸಿದ್ಧವಾಗಿವೆ; ಮದುವೆಗೆ ಬನ್ನಿರಿ ಎಂದು ಕರೆಯಲ್ಪಟ್ಟವರಿಗೆ ಹೇಳಿರಿ ಅಂದನು.
- Matthew 10:1–4 ಮತ್ತಾಯನು 10:1–4ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ತನ್ನ ಬಳಿಗೆ ಕರೆದು ಅಶುದ್ಧಾತ್ಮಗಳನ್ನು ಬಿಡಿಸುವಂತೆಯೂ ಎಲ್ಲಾ ತರವಾದ ರೋಗವನ್ನು ಮತ್ತು ಎಲ್ಲಾ ತರವಾದ ಅಸ್ವಸ್ಥತೆಯನ್ನು ಸ್ವಸ್ಥ ಮಾಡು ವಂತೆಯೂ ಅವರಿಗೆ ಅಧಿಕಾರ ಕೊಟ್ಟನು. ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು: ಮೊದಲನೆಯವನು ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ ಮತ್ತು ಅವನ ಸಹೋದರನಾದ ಯೋಹಾನ, ಫಿಲಿಪ್ಪ, ಬಾರ್ತೊ ಲೊಮಾಯ, ತೋಮ, ಸುಂಕದವನಾದ ಮತ್ತಾಯ ಅಲ್ಫಾಯನ ಮಗನಾದ ಯಾಕೋಬ, ತದ್ದಾಯನೆಂಬ ಅಡ್ಡ ಹೆಸರಿನ ಲೆಬ್ಬಾಯ, ಕಾನಾನ್ಯನಾದ ಸೀಮೋನ ಮತ್ತು ಆತನನ್ನು ಹಿಡಿದುಕೊಟ್ಟ ಯೂದ ಇಸ್ಕರಿಯೋತ ಎಂಬಿವುಗಳೇ.
- John 7:37 ಯೋಹಾನನು 7:37ಹಬ್ಬದ ಆ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು--ಯಾವನಿಗಾದರೂ ನೀರಡಿಕೆ ಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ.
- Luke 3:4–6 ಲೂಕನು 3:4–6ಪ್ರವಾದಿಯಾದ ಯೆಶಾಯನ ವಾಕ್ಯಗಳ ಪುಸ್ತಕ ದಲ್ಲಿ--ಕರ್ತನ ಮಾರ್ಗವನ್ನು ಸಿದ್ಧ ಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂದೂ ಪ್ರತಿಯೊಂದು ತಗ್ಗು ಮುಚ್ಚಿಸಲ್ಪಡುವದು, ಪ್ರತಿಯೊಂದು ಬೆಟ್ಟವು ತಗ್ಗಿಸಲ್ಪಡುವದು, ಡೊಂಕಾದವುಗಳು ನೆಟ್ಟಗಾಗುವವು ಮತ್ತು ಕೊರಕಲಾದ ದಾರಿಗಳು ಸಮವಾಗುವವು; ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು.
- Acts 13:26 ಅಪೊಸ್ತಲರ ಕೃತ್ಯಗಳು 13:26ಜನರೇ, ಸಹೋದರರೇ, ಅಬ್ರಹಾಮನ ವಂಶ ಸ್ಥರೇ, ನಿಮ್ಮಲ್ಲಿ ದೇವರಿಗೆ ಭಯಪಡುವವರೇ, ನಿಮಗೆ ಈ ರಕ್ಷಣೆಯ ವಾಕ್ಯವು ಕಳುಹಿಸಿಯದೆ.
- Matthew 11:27–29 ಮತ್ತಾಯನು 11:27–29ನನ್ನ ತಂದೆಯು ಎಲ್ಲವನ್ನೂ ನನಗೆ ಒಪ್ಪಿಸಿದ್ದಾನೆ. ತಂದೆಯೇ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ; ಇಲ್ಲವೆ ಮಗನೇ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದ ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ ಎಂದು ಹೇಳಿದನು.
- Luke 10:1–12 ಲೂಕನು 10:1–12ಇವುಗಳಾದ ಮೇಲೆ ಕರ್ತನು ಬೇರೆ ಎಪ್ಪತ್ತು ಮಂದಿಯನ್ನು ಸಹ ನೇಮಿಸಿ ತಾನೇ ಸ್ವತಃ ಹೋಗಬೇಕೆಂದಿದ್ದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಇಬ್ಬಿಬ್ಬರನ್ನಾಗಿ ತನ್ನ ಮುಂದಾಗಿ ಕಳುಹಿಸಿದನು. ಆತನು ಅವರಿಗೆ--ಬೆಳೆಯು ನಿಜವಾಗಿಯೂ ಬಹಳ; ಆದರೆ ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನು ತನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ನೀವು ಪ್ರಾರ್ಥನೆಮಾಡಿರಿ. ಹೋಗಿರಿ, ಇಗೋ, ತೋಳಗಳ ಮಧ್ಯದಲ್ಲಿ ಕುರಿಮರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಹವ್ಮೆಾಣಿಯನ್ನಾಗಲೀ ಚೀಲವನ್ನಾಗಲೀ ಕೆರಗಳನ್ನಾಗಲೀ ತಕ್ಕೊಳ್ಳಬೇಡಿರಿ; ಮತ್ತು ದಾರಿಯಲ್ಲಿ ಯಾರನ್ನೂ ವಂದಿಸಬೇಡಿರಿ. ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ. ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು. ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ; ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ. ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿರಿ; ಮತ್ತು ಅವರಿಗೆ--ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂದು ಹೇಳಿರಿ. ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ-- ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ. ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.
- Matthew 3:1–12 ಮತ್ತಾಯನು 3:1–12ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ-- ನೀವು ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು. ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ. ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು. ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು. ಅವರು ತಮ್ಮ ಪಾಪಗಳನ್ನು ಅರಿಕೆಮಾಡಿ ಯೊರ್ದನಿನಲ್ಲಿ ಅವನಿಂದ ಬಾಪ್ತಿಸ್ಮ ಮಾಡಿಕೊಂಡರು. ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ; ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು. ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ. ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು. ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.
- Acts 2:38–39 ಅಪೊಸ್ತಲರ ಕೃತ್ಯಗಳು 2:38–39ಆಗ ಪೇತ್ರನು ಅವರಿಗೆ--ನೀವು ಮಾನಸಾಂತರಪಟ್ಟು ಪಾಪಗಳ ಪರಿಹಾರಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬನು ಯೇಸು ಕ್ರಿಸ್ತನ ಹೆಸರಿನಲ್ಲಿ ಬಾಪ್ತಿಸ್ಮ ಮಾಡಿಸಿಕೊಳ್ಳಿರಿ; ಆಗ ನೀವು ಪವಿತ್ರಾತ್ಮನ ದಾನವನ್ನು ಹೊಂದುವಿರಿ. ಯಾಕಂದರೆ ಆ ವಾಗ್ದಾನವು ನಿಮಗೂ ನಿಮ್ಮ ಮಕ್ಕಳಿಗೂ ದೂರವಾಗಿರುವವರೆಲ್ಲರಿಗೂ ಅಂತೂ ನಮ್ಮ ದೇವರಾದ ಕರ್ತನು ಕರೆಯುವವರೆಲ್ಲರಿಗೂ ಮಾಡಿಯದೆ ಎಂದು ಹೇಳಿದನು.
- Luke 9:1–5 ಲೂಕನು 9:1–5ತರುವಾಯ ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳನ್ನು ಬಿಡಿಸುವದಕ್ಕೂ ರೋಗಗಳನ್ನು ಸ್ವಸ್ಥ ಮಾಡುವದಕ್ಕೂ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟನು. ದೇವರ ರಾಜ್ಯವನ್ನು ಸಾರುವದಕ್ಕೂ ರೋಗಿಗಳನ್ನು ಸ್ವಸ್ಥಮಾಡುವದಕ್ಕೂ ಆತನು ಅವರನ್ನು ಕಳುಹಿಸಿಕೊಟ್ಟನು. ಆತನು ಅವರಿಗೆ--ನೀವು ಪ್ರಯಾಣಕ್ಕಾಗಿ ಕೋಲುಗಳನ್ನಾಗಲೀ ಚೀಲವನ್ನಾ ಗಲೀ ರೊಟ್ಟಿಯನ್ನಾಗಲೀ ಹಣವನ್ನಾಗಲೀ ಏನೂ ತಕ್ಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು. ನೀವು ಯಾವದಾದರೂ ಮನೆಯನ್ನು ಪ್ರವೇಶಿಸಿದಾಗ ಅಲ್ಲೇ ಇದ್ದು ಅಲ್ಲಿಂದಲೇ ಹೊರಡಿರಿ. ಯಾರಾದರೂ ನಿಮ್ಮನ್ನು ಅಂಗೀಕರಿಸದೆ ಹೋದರೆ ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದ ಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ ಅಂದನು.