Luke · chapter 14 · verse 18
Luke 14:18 in Kannada
ಆದರೆ ಅವರೆಲ್ಲರೂ ಒಂದೇ ಮನ ಸ್ಸಿನಿಂದ ನೆವ ಹೇಳಲಾರಂಭಿಸಿ ಮೊದಲನೆಯವನು ಅವನಿಗೆ--ನಾನು ಒಂದು ತುಂಡು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
Aadare avarellaroo onde mana ssininda neva helalaarambhisi modalaneyavanu avanige--naanu ondu tundu bhoomiyannu kondukondiddene, hogi adannu noduvadu avashyavaagide; nannannu kshamisabekendu ninnannu bedikolluttene andanu.
Luke 14:18 in English
- King James Version (KJV)
- And they all with one [consent] began to make excuse. The first said unto him, I have bought a piece of ground, and I must needs go and see it: I pray thee have me excused.
- World English Bible (WEB)
- They all as one began to make excuses. “The first said to him, ‘I have bought a field, and I must go and see it. Please have me excused.’
- American Standard Version (ASV)
- And they all with one [consent] began to make excuse. The first said unto him, I have bought a field, and I must needs go out and see it; I pray thee have me excused.
- Bible in Basic English (BBE)
- And they all gave reasons why they were not able to come. The first said to him, I have got a new field, and it is necessary for me to go and see it: I am full of regret that I am unable to come.
- Darby Translation (DBY)
- And all began, without exception, to excuse themselves. The first said to him, I have bought land, and I must go out and see it; I pray thee hold me for excused.
- Webster's Bible (WBS)
- And they all with one [consent] began to make excuse. The first said to him, I have bought a piece of ground, and I must needs go and see it: I pray thee have me excused.
- Young's Literal Translation (YLT)
- 'And they began with one consent all to excuse themselves: The first said to him, A field I bought, and I have need to go forth and see it; I beg of thee, have me excused.
Read in context
- 16ಆಗ ಆತನು ಅವನಿಗೆ--ಒಬ್ಬಾನೊಬ್ಬ ಮನುಷ್ಯನು ಒಂದು ದೊಡ್ಡ ಔತಣಮಾಡಿಸಿ ಅನೇಕರನ್ನು ಕರೆದನು.
- 17ಔತಣದ ಸಮಯವಾದಾಗ ಕರೆಯಲ್ಪಟ್ಟವರಿಗೆ ಅವನು--ಎಲ್ಲವೂ ಸಿದ್ಧವಾಗಿದೆ, ಬನ್ನಿರಿ ಎಂದು ಹೇಳುವದಕ್ಕಾಗಿ ತನ್ನ ಸೇವಕನನ್ನು ಕಳುಹಿಸಿದನು.
- 18ಆದರೆ ಅವರೆಲ್ಲರೂ ಒಂದೇ ಮನ ಸ್ಸಿನಿಂದ ನೆವ ಹೇಳಲಾರಂಭಿಸಿ ಮೊದಲನೆಯವನು ಅವನಿಗೆ--ನಾನು ಒಂದು ತುಂಡು ಭೂಮಿಯನ್ನು ಕೊಂಡುಕೊಂಡಿದ್ದೇನೆ, ಹೋಗಿ ಅದನ್ನು ನೋಡುವದು ಅವಶ್ಯವಾಗಿದೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
- 19ಬೇರೊಬ್ಬನು-- ನಾನು ಐದು ಜೊತೆ ಎತ್ತುಗಳನ್ನು ಕೊಂಡುಕೊಂಡಿ ದ್ದೇನೆ, ಅವುಗಳನ್ನು ಪರೀಕ್ಷಿಸುವದಕ್ಕಾಗಿ ಹೋಗುತ್ತೇನೆ; ನನ್ನನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
- 20ಇನ್ನೊಬ್ಬನು--ನಾನು ಒಬ್ಬಳನ್ನು ಮದುವೆ ಮಾಡಿಕೊಂಡಿದ್ದೇನೆ, ಅದಕೋಸ್ಕರ ನಾನು ಬರ ಲಾರೆನು ಅಂದನು.
Cross references
- 1 Timothy 6:9–10 1 ತಿಮೊಥೆಯನಿಗೆ 6:9–10ಆದರೆ ಐಶ್ವರ್ಯವಂತರಾಗ ಬೇಕೆಂದು ಮನಸ್ಸು ಮಾಡುವವರು ಶೋಧನೆಯಲ್ಲಿಯೂ ಉರ್ಲಿನಲ್ಲಿಯೂ ಸಿಕ್ಕಿಕೊಂಡು ಅನೇಕ ಬುದ್ಧಿಹೀನತೆಯ ಮತ್ತು ಹಾನಿಕರವಾದ ದುರಾಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರ ನಾಶನಗಳಲ್ಲಿ ಮುಳುಗಿಸುತ್ತವೆ. ಹಣದ ಪ್ರೀತಿಯು ಸಕಲ ವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು ನಂಬಿಕೆಯಿಂದ ತಪ್ಪಿಹೋಗಿ ಅನೇಕ ದುಃಖಗಳಿಂದ ತಮ್ಮನ್ನು ತಾವೇ ತಿವಿಸಿ ಕೊಳ್ಳುತ್ತಾರೆ.
- Luke 17:26–31 ಲೂಕನು 17:26–31ನೋಹನ ದಿವಸಗಳಲ್ಲಿ ಹೇಗೆ ಇತ್ತೋ ಅದೇ ರೀತಿಯಲ್ಲಿ ಮನುಷ್ಯಕುಮಾರನ ದಿವಸಗಳಲ್ಲಿಯೂ ಇರುವದು. ನೋಹನು ನಾವೆಯಲ್ಲಿ ಸೇರಿದ ದಿನದ ವರೆಗೂ ಅವರು ತಿನ್ನುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮತ್ತು ಮದುವೆಮಾಡಿ ಕೊಡುತ್ತಾ ಇದ್ದರು. ಆಗ ಜಲಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತ್ತು. ಅದೇ ಪ್ರಕಾರ ಲೋಟನ ದಿವಸಗಳಲ್ಲಿಯೂ ಇತ್ತು. ಅವರು ತಿನ್ನು ತ್ತಿದ್ದರು, ಕುಡಿಯುತ್ತಿದ್ದರು; ಅವರು ಕೊಂಡುಕೊಳ್ಳು ತ್ತಿದ್ದರು, ಮಾರುತ್ತಿದ್ದರು; ಅವರು ನೆಡುತ್ತಿದ್ದರು ಮತ್ತು ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮಿನಿಂದ ಹೊರಗೆ ಹೋದ ದಿನವೇ ಆಕಾಶದಿಂದ ಬೆಂಕಿಯೂ ಗಂಧಕವೂ ಸುರಿದು ಎಲ್ಲರನ್ನು ನಾಶಪಡಿಸಿದವು. ಮನುಷ್ಯಕುಮಾರನು ಪ್ರತ್ಯಕ್ಷನಾಗುವ ದಿನದಲ್ಲಿ ಹೀಗೆಯೇ ಇರುವದು. ಆ ದಿನದಲ್ಲಿ ಮನೆಯ ಮಾಳಿಗೆಯ ಮೇಲೆ ಇದ್ದವನು ಮನೆಯಲ್ಲಿದ್ದ ತನ್ನ ಸಾಮಾನುಗಳನ್ನು ತೆಗೆದುಕೊಳ್ಳಲು ಕೆಳಗಿಳಿದು ಬಾರ ದಿರಲಿ. ಹಾಗೆಯೇ ಹೊಲದಲ್ಲಿದ್ದವನು ಹಿಂದಿರುಗಿ ಬಾರದಿರಲಿ.
- Luke 18:24 ಲೂಕನು 18:24ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ನೋಡಿ--ಐಶ್ವರ್ಯ ವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.
- Isaiah 29:11–12 ಯೆಶಾಯ 29:11–12ದರ್ಶನವೆಲ್ಲಾ ನಿಮಗೆ ಮುದ್ರೆ ಹಾಕಿ ದ ವಾಕ್ಯಗಳ ಪುಸ್ತಕದ ಹಾಗಾಯಿತು; ಅದನ್ನು ಅಕ್ಷರ ಬಲ್ಲವನಿಗೆ ಕೊಟ್ಟು ಇದನ್ನು ಓದು ಎಂದು ಬೇಡಿದರೆ ಅವನು--ಮುದ್ರೆ ಹಾಕಿದೆಯಲ್ಲಾ, ಆಗುವದಿಲ್ಲ ಅನ್ನು ವನು; ಅಕ್ಷರವಿಲ್ಲದವನಿಗೆ ಆ ಪುಸ್ತಕವನ್ನು ಒಪ್ಪಿಸಿದರೆ ಅವನು--ನನಗೆ ವಿದ್ಯೆಯಿಲ್ಲ ಅನ್ನುವನು.
- John 5:40 ಯೋಹಾನನು 5:40ಆದರೆ ನೀವು ಜೀವವನ್ನು ಹೊಂದುವಂತೆ ನನ್ನ ಬಳಿಗೆ ಬರುವದಿಲ್ಲ.
- Isaiah 28:12–13 ಯೆಶಾಯ 28:12–13ಆತನು ಮೊದಲು--ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ. ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪ ಶಮನ ಇದೇ ಎಂದು ಹೇಳಿದಾಗ್ಯೂ ಅವರು ಕೇಳ ಲಿಲ್ಲ. ಆದರೆ ಅವರು ಹೋಗಿ ಹಿಂದಕ್ಕೆ ಎಡವಿ ಮುರಿದುಕೊಳ್ಳುವ ಹಾಗೆಯೂ ಬೋನಿನಲ್ಲಿ ಹಿಡಿ ಯಲ್ಪಟ್ಟು ಸಿಕ್ಕಿಬೀಳುವ ಹಾಗೆಯೂ ಕರ್ತನ ವಾಕ್ಯವು ಅವರಿಗೆ ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಇರುವದು.
- Acts 18:5–6 ಅಪೊಸ್ತಲರ ಕೃತ್ಯಗಳು 18:5–6ಸೀಲ ತಿಮೊಥೆಯರು ಮಕೆದೋನ್ಯದಿಂದ ಬಂದಾಗ ಪೌಲನು ಆತ್ಮದಲ್ಲಿ ಒತ್ತಾಯ ಮಾಡಲ್ಪಟ್ಟು ಯೇಸುವೇ ಕ್ರಿಸ್ತನೆಂದು ಯೆಹೂದ್ಯರಿಗೆ ಸಾಕ್ಷಿಕೊಟ್ಟನು. ಅವರು ಎದುರಿಸಿ ದೇವದೂಷಣೆ ಮಾಡಲಾಗಿ ಅವನು ತನ್ನ ವಸ್ತ್ರವನ್ನು ಝಾಡಿಸಿ ಅವರಿಗೆ--ನಿಮ್ಮ ರಕ್ತವು ನಿಮ್ಮ ತಲೆಗಳ ಮೇಲೆ ಇರಲಿ; ನಾನು ಇಂದಿನಿಂದ ದೋಷರಹಿತನಾಗಿ ಅನ್ಯಜನರ ಬಳಿಗೆ ಹೋಗುತ್ತೇನೆ ಎಂದು ಹೇಳಿ
- 1 John 2:15–16 1 ಯೋಹಾನನು 2:15–16ಲೋಕವನ್ನಾಗಲಿ ಲೋಕದಲ್ಲಿರುವವುಗಳ ನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕ ವನ್ನು ಪ್ರೀತಿಸಿದರೆ ತಂದೆಯ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವವುಗಳೆಲ್ಲವು ಅಂದರೆ ಶರೀರದಾಶೆ, ಕಣ್ಣಿನಾಶೆ, ಜೀವನದ ಗರ್ವ ಇವು ತಂದೆಗೆ ಸಂಬಂಧ ಪಟ್ಟವುಗಳಲ್ಲ, ಲೋಕಕ್ಕೆ ಸಂಬಂಧಪಟ್ಟವುಗಳಾಗಿವೆ.
- 2 Timothy 4:4 2 ತಿಮೊಥೆಯನಿಗೆ 4:4ಅವರು ಸತ್ಯಕ್ಕೆ ಕಿವಿಗೊಡದೆ ಕಲ್ಪನಾಕಥೆಗಳನ್ನು ಕೇಳುವದಕ್ಕೆ ತಿರುಗಿಕೊಳ್ಳುವರು.
- Luke 8:14 ಲೂಕನು 8:14ಮುಳ್ಳುಗಳ ಮಧ್ಯದಲ್ಲಿ ಬಿದ್ದ ಬೀಜದವರು ಯಾರಂದರೆ ಅವರು ಕೇಳಿದ ಮೇಲೆ ಮುಂದರಿದು ಈ ಜೀವನದ ಚಿಂತೆಗಳಿಂದಲೂ ಐಶ್ವರ್ಯಗಳಿಂದಲೂ ಭೋಗಗಳಿಂದಲೂ ಅಡಗಿಸ ಲ್ಪಟ್ಟು ಪರಿಪೂರ್ಣವಾಗಿ ಫಲಿಸದವರು.
- Matthew 24:38–39 ಮತ್ತಾಯನು 24:38–39ನೋಹನು ನಾವೆಯಲ್ಲಿ ಸೇರಿದ ದಿವಸದ ವರೆಗೆ ಪ್ರಳಯವು ಬರುವದಕ್ಕಿಂತ ಮುಂಚಿನ ಆ ದಿವಸಗಳಲ್ಲಿ ಜನರು ತಿನ್ನುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದರು. ಪ್ರಳಯವು ಬಂದು ಅವರನ್ನು ಬಡುಕೊಂಡು ಹೊಗುವವರೆಗೂ ಅವರಿಗೆ ತಿಳಿದಿರಲಿಲ್ಲ; ಹಾಗೆಯೇ ಮನುಷ್ಯ ಕುಮಾರನ ಬರೋಣವೂ ಇರುವದು.
- Jeremiah 6:10 ಯೆರೆಮೀಯ 6:10ನಾನು ಯಾರ ಸಂಗಡ ಮಾತನಾಡಲಿ? ಅವರು ಕೇಳುವ ಹಾಗೆ ಯಾರನ್ನು ಎಚ್ಚರಿಸಲಿ? ಇಗೋ, ಅವರು ಆಲೈಸಲಾರದ ಹಾಗೆ ಅವರ ಕಿವಿ ಪರಿಛೇದನೆ ಯಿಲ್ಲದಾಗಿದೆ; ಇಗೋ, ಕರ್ತನ ವಾಕ್ಯವು ಅವರಿಗೆ ನಿಂದೆಯಾಗಿದೆ, ಅದರಲ್ಲಿ ಅವರಿಗೆ ಸಂತೋಷವಿಲ್ಲ.