Luke · chapter 15 · verse 17
Luke 15:17 in Kannada
ಅವನಿಗೆ ಬುದ್ದಿ ಬಂದಾಗ ಅವನು--ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.
Avanige buddi bandaaga avanu--nanna tandeya eshto kooliyaalugalige saakaagi uliyuvashtu aahaaravideyallaa! Naanaadaro hasiveyinda saayuttiddene.
Luke 15:17 in English
- King James Version (KJV)
- And when he came to himself, he said, How many hired servants of my father’s have bread enough and to spare, and I perish with hunger!
- World English Bible (WEB)
- But when he came to himself, he said, ‘How many hired servants of my father’s have bread enough to spare, and I’m dying with hunger!
- American Standard Version (ASV)
- But when he came to himself he said, How many hired servants of my father’s have bread enough and to spare, and I perish here with hunger!
- Bible in Basic English (BBE)
- But when he came to his senses, he said, What numbers of my father's servants have bread enough, and more, while I am near to death here through need of food!
- Darby Translation (DBY)
- And coming to himself, he said, How many hired servants of my father's have abundance of bread, and I perish here by famine.
- Webster's Bible (WBS)
- And when he came to himself, he said, How many hired servants of my father have bread enough and to spare, and I am perishing with hunger!
- Young's Literal Translation (YLT)
- 'And having come to himself, he said, How many hirelings of my father have a superabundance of bread, and I here with hunger am perishing!
Read in context
- 15ಆಗ ಅವನು ಹೋಗಿ ಆ ದೇಶದ ನಿವಾಸಿಯಾಗಿದ್ದವನೊಂದಿಗೆ ಸೇರಿ ಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸು ವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು.ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ
- 16ಅವನು ಹಂದಿಗಳು ತಿನ್ನುತ್ತಿದ್ದ ಹೊಟ್ಟಿನಿಂದ ಲಾದರೂ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವದಕ್ಕೆ ಇಷ್ಟಪಟ್ಟನು. ಆದರೆ ಯಾವನೂ ಅವನಿಗೆ ಕೊಡಲಿಲ್ಲ.
- 17ಅವನಿಗೆ ಬುದ್ದಿ ಬಂದಾಗ ಅವನು--ನನ್ನ ತಂದೆಯ ಎಷ್ಟೋ ಕೂಲಿಯಾಳುಗಳಿಗೆ ಸಾಕಾಗಿ ಉಳಿಯುವಷ್ಟು ಆಹಾರವಿದೆಯಲ್ಲಾ! ನಾನಾದರೋ ಹಸಿವೆಯಿಂದ ಸಾಯುತ್ತಿದ್ದೇನೆ.
- 18ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ--ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ;
- 19ಇನ್ನೆಂದಿಗೂ ನಾನು ನಿನ್ನ ಮಗನೆಂದು ಕರೆಯಲ್ಪಡುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಅನ್ನುವೆನು ಎಂದು ಅಂದುಕೊಂಡು
Cross references
- Ezekiel 18:28 ಯೆಹೆಜ್ಕೇಲನು 18:28ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು.
- Ephesians 2:4–5 ಎಫೆಸದವರಿಗೆ 2:4–5ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;)
- Luke 15:18–19 ಲೂಕನು 15:18–19ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ--ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ನಾನು ಪಾಪಮಾಡಿದ್ದೇನೆ; ಇನ್ನೆಂದಿಗೂ ನಾನು ನಿನ್ನ ಮಗನೆಂದು ಕರೆಯಲ್ಪಡುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಅನ್ನುವೆನು ಎಂದು ಅಂದುಕೊಂಡು
- Ephesians 5:14 ಎಫೆಸದವರಿಗೆ 5:14ಆದದರಿಂದ-- ನಿದ್ರೆ ಮಾಡುವವನೇ, ಎಚ್ಚರವಾಗು, ಸತ್ತವರಿಂದ ಎದ್ದೇಳು; ಕ್ರಿಸ್ತನು ನಿನಗೆ ಪ್ರಕಾಶಕೊಡುವನು ಎಂದು ಆತನು ಹೇಳುತ್ತಾನೆ.
- Acts 16:29–30 ಅಪೊಸ್ತಲರ ಕೃತ್ಯಗಳು 16:29–30ಆಗ ಅವನು ದೀಪ ತರಬೇಕೆಂದು ಹೇಳಿ ಒಳಕ್ಕೆ ಹಾರಿ ನಡುಗುತ್ತಾ ಪೌಲ ಸೀಲರ ಮುಂದೆ ಬಿದ್ದನು. ಅವರನ್ನು ಹೊರಗೆ ಕರಕೊಂಡು ಬಂದು--ಅಯ್ಯಗಳಿರಾ, ನಾನು ರಕ್ಷಣೆ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಲು
- Titus 3:4–6 ತೀತನಿಗೆ 3:4–6ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ.
- Acts 26:11–19 ಅಪೊಸ್ತಲರ ಕೃತ್ಯಗಳು 26:11–19ಇದಲ್ಲದೆ ಪ್ರತಿಯೊಂದು ಸಭಾ ಮಂದಿರದಲ್ಲಿ ನಾನು ಅನೇಕ ಸಾರಿ ಅವರನ್ನು ಶಿಕ್ಷಿಸಿ ಅವರು ದೇವದೂಷಣೆ ಮಾಡುವಂತೆ ಒತ್ತಾಯ ಮಾಡಿದೆನು ಮತ್ತು ಅವರ ಮೇಲೆ ಮಹಾಕೋಪೋ ದ್ರೇಕದಿಂದ ಬೇರೆ ಪಟ್ಟಣಗಳ ತನಕ ಅವರನ್ನು ಹಿಂಸಿಸಿದೆನು. ಇದಲ್ಲದೆ ಪ್ರಧಾನಯಾಜಕರಿಂದ ಅಧಿಕಾರವನ್ನೂ ಆಜ್ಞೆಯನ್ನೂ ಪಡೆದು ದಮಸ್ಕಕ್ಕೆ ನಾನು ಹೋಗುತ್ತಿದ್ದೆನು. ಓ ರಾಜನೇ, ನಾನು ದಾರಿಯಲ್ಲಿದ್ದಾಗ ಮಧ್ಯಾಹ್ನದಲ್ಲಿ ನನ್ನ ಮತ್ತು ನನ್ನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಸೂರ್ಯನ ಪ್ರಕಾಶಕ್ಕಿಂತ ಹೆಚ್ಚಾದ ಬೆಳಕು ಪರಲೋಕ ದಿಂದ ಪ್ರಕಾಶಿಸುತ್ತಿರುವದನ್ನು ನಾನು ಕಂಡೆನು. ನಾವೆಲ್ಲರೂ ನೆಲಕ್ಕೆ ಬಿದ್ದಾಗ--ಸೌಲನೇ, ಸೌಲನೇ, ಯಾಕೆ ನನ್ನನ್ನು ನೀನು ಹಿಂಸಿಸುತ್ತೀ, ಮುಳ್ಳು ಗೋಲನ್ನು ಒದೆಯುವದು ನಿನಗೆ ಕಷ್ಟ ಎಂದು ನನ್ನೊಂದಿಗೆ ಇಬ್ರಿಯ ಭಾಷೆಯಲ್ಲಿ ಮಾತನಾಡಿದ ಒಂದು ಧ್ವನಿಯನ್ನು ನಾನು ಕೇಳಿದೆನು. ಅದಕ್ಕೆ ನಾನು--ಕರ್ತನೇ, ನೀನು ಯಾರು ಎಂದು ಕೇಳಿದೆನು. ಆಗ ಆತನು--ನೀನು ಹಿಂಸೆಪಡಿಸುವ ಯೇಸುವೇ ನಾನು. ಆದರೆ ನೀನು ಎದ್ದು ನಿಂತುಕೋ; ನೀನು ನೋಡಿದವುಗಳ ಮತ್ತು ನಾನು ನಿನಗೆ ಪ್ರತ್ಯಕ್ಷವಾಗಿ ತಿಳಿಯಪಡಿಸುವವುಗಳ ವಿಷಯವಾಗಿ ನಿನ್ನನ್ನು ಸೇವಕನನ್ನಾಗಿಯೂ ಸಾಕ್ಷಿಯನ್ನಾಗಿಯೂ ಮಾತ್ರ ವಲ್ಲದೆ ಈ ಜನರಿಂದ ಮತ್ತು ಈಗ ನಾನು ನಿನ್ನನ್ನು ಕಳುಹಿಸುವ ಅನ್ಯಜನರಿಂದ ನಿನ್ನನ್ನು ಬಿಡಿಸುವದಕ್ಕೂ ಅವರ ಕಣ್ಣುಗಳನ್ನು ತೆರೆಯುವದಕ್ಕೂ ಮತ್ತು ಕತ್ತಲೆಯಿಂದ ಬೆಳಕಿಗೂ ಸೈತಾನನ ಅಧಿಕಾರದಿಂದ ದೇವರ ಕಡೆಗೆ ಅವರನ್ನು ತಿರುಗಿಸುವದಕ್ಕೂ ಅವರು ನನ್ನಲ್ಲಿ ಇಡುವ ನಂಬಿಕೆಯಿಂದಾಗುವ ಪಾಪಕ್ಷಮಾ ಪಣೆಯನ್ನೂ ಪವಿತ್ರರಾದವರಲ್ಲಿ ಸ್ವಾಸ್ಥ್ಯವನ್ನೂ ಹೊಂದುವಂತೆ ಮಾಡುವದಕ್ಕಾಗಿ ನಾನು ಆದ ಕಾರಣ ಓ ಅಗ್ರಿಪ್ಪ ರಾಜನೇ, ಪರಲೋಕದ ಆ ದರ್ಶನಕ್ಕೆ ನಾನು ಅವಿಧೇಯನಾಗಲಿಲ್ಲ.
- Acts 2:37 ಅಪೊಸ್ತಲರ ಕೃತ್ಯಗಳು 2:37ಅವರು ಇದನ್ನು ಕೇಳಿ ತಮ್ಮ ಹೃದಯದಲ್ಲಿ ತಿವಿಯಲ್ಪಟ್ಟವರಾಗಿ ಪೇತ್ರನಿಗೂ ಉಳಿದ ಅಪೊಸ್ತಲರಿಗೂ--ಜನರೇ, ಸಹೋದರರೇ, ನಾವು ಏನು ಮಾಡಬೇಕು ಎಂದು ಕೇಳಿದರು.
- Jeremiah 31:19 ಯೆರೆಮೀಯ 31:19ನಿಶ್ಚಯವಾಗಿ ನಾನು ತಿರುಗಿಕೊಂಡ ಮೇಲೆ ಪಶ್ಚಾತ್ತಾಪಪಟ್ಟೆನು; ಉಪದೇಶಹೊಂದಿದ ಮೇಲೆ ತೊಡೆಯ ಮೇಲೆ ಬಡಕೊಂಡೆನು; ನಾಚಿಕೆಪಟ್ಟೆನು, ಹೌದು, ಅವಮಾನ ಹೊಂದಿದೆನು; ನನ್ನ ಯೌವನದ ನಿಂದೆಯನ್ನು ತಾಳಿಕೊಂಡೆನು.
- Luke 8:35 ಲೂಕನು 8:35ಆಗ ಜನರು ನಡೆದ ಸಂಗತಿ ಏನೆಂದು ನೋಡುವದಕ್ಕಾಗಿ ಹೊರಟು ಹೋಗಿ ಯೇಸುವಿನ ಬಳಿಗೆ ಬಂದು ದೆವ್ವಗಳು ಬಿಟ್ಟು ಹೋಗಿದ್ದ ಆ ಮನುಷ್ಯನು ಬಟ್ಟೆಯನ್ನು ಧರಿಸಿಕೊಂಡು ಸ್ವಸ್ಥಬುದ್ಧಿ ಯುಳ್ಳವನಾಗಿ ಯೇಸುವಿನ ಪಾದಗಳ ಬಳಿಯಲ್ಲಿ ಕೂತಿರುವದನ್ನು ಕಂಡು ಭಯಪಟ್ಟರು.
- Psalm 73:20 ಕೀರ್ತನೆಗಳು 73:20ಎಚ್ಚತ್ತ ಮೇಲೆ ಕನಸು ಹೇಗೋ ಹಾಗೆಯೇ ಓ ಕರ್ತನೇ, ನೀನು ಎಚ್ಚರವಾದಾಗ ಅವರ ರೂಪವನ್ನು ತಿರಸ್ಕರಿಸುವಿ.
- Lamentations 1:7 ಪ್ರಲಾಪಗಳು 1:7ಯೆರೂಸಲೇಮು ಕಷ್ಟ ಮತ್ತು ಸಂಕಟದಲ್ಲಿದ್ದಾಗ ಪೂರ್ವದಿನಗಳಲ್ಲಿ ತನಗಿದ್ದ ರಮ್ಯವಾದವುಗಳೆಲ್ಲವನ್ನು ಜ್ಞಾಪಕಮಾಡಿಕೊಂಡಿದ್ದಾಳೆ. ಆಕೆಯ ಜನರು ಶತ್ರುವಿನ ಕೈಯಲ್ಲಿ ಬಿದ್ದಾಗ ಯಾವನೂ ಸಹಾಯಮಾಡಲಿಲ್ಲ. ವೈರಿಗಳು ಅವಳನ್ನು ನೋಡಿ ಅವಳ ಸಬ್ಬತ್ತುಗಳ ವಿಷಯದಲ್ಲಿ ಅಪಹಾಸ್ಯಮಾಡಿದರು.