Luke · chapter 15 · verse 5
Luke 15:5 in Kannada
ಅವನು ಆ ಕುರಿಯನ್ನು ಕಂಡುಕೊಂಡ ಮೇಲೆ ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲುಗಳ ಮೇಲೆ ಹೊತ್ತು ಕೊಳ್ಳುವನು.
Avanu aa kuriyannu kandukonda mele santosha paduttaa adannu tanna hegalugala mele hottu kolluvanu.
Luke 15:5 in English
- King James Version (KJV)
- And when he hath found [it], he layeth [it] on his shoulders, rejoicing.
- World English Bible (WEB)
- When he has found it, he carries it on his shoulders, rejoicing.
- American Standard Version (ASV)
- And when he hath found it, he layeth it on his shoulders, rejoicing.
- Bible in Basic English (BBE)
- And when he has got it again, he takes it in his arms with joy.
- Darby Translation (DBY)
- and having found it, he lays it upon his own shoulders, rejoicing;
- Webster's Bible (WBS)
- And when he hath found [it] , he layeth [it] on his shoulders, rejoicing.
- Young's Literal Translation (YLT)
- and having found, he doth lay [it] on his shoulders rejoicing,
Read in context
- 3ಆತನು ಅವರಿಗೆ ಈ ಸಾಮ್ಯವನ್ನು ಹೇಳಿ ದನು--
- 4ನಿಮ್ಮಲ್ಲಿ ಯಾವ ಮನುಷ್ಯನು ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದನ್ನು ಕಳೆದು ಕೊಂಡರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದುಹೋದದ್ದು ಸಿಕ್ಕುವ ವರೆಗೆ ಅದನ್ನು ಹುಡುಕಿಕೊಂಡು ಹೋಗದಿರುವನೇ?
- 5ಅವನು ಆ ಕುರಿಯನ್ನು ಕಂಡುಕೊಂಡ ಮೇಲೆ ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲುಗಳ ಮೇಲೆ ಹೊತ್ತು ಕೊಳ್ಳುವನು.
- 6ಆಮೇಲೆ ಅವನು ಮನೆಗೆ ಬಂದು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ--ನನ್ನ ಸಂಗಡ ಸಂತೋಷಪಡಿರಿ;ಯಾಕಂದರೆ ಕಳೆದುಹೋದ ನನ್ನ ಕುರಿಯನ್ನು ನಾನು ಕಂಡು ಕೊಂಡೆನು ಅನ್ನುವನು.
- 7ಆದರಂತೆಯೇ ಮಾನಸಾಂತ ರಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ನೀತಿವಂತರಿಗಿಂತ ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.
Cross references
- Hebrews 12:2 ಇಬ್ರಿಯರಿಗೆ 12:2ನಮ್ಮ ನಂಬಿಕೆಯನ್ನೂ ಹುಟ್ಟಿಸುವಾತನೂ ಅದನ್ನು ಪೂರೈಸುವಾತನೂ ಆಗಿ ರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮ್ಮ ಮುಂದೆ ಇಟ್ಟಿರುವ ಓಟವನ್ನು ತಾಳ್ಮೆಯಿಂದ ಓಡೋಣ. ಆತನು ತನ್ನ ಮುಂದೆ ಇಟ್ಟಿದ ಸಂತೋಷಕ್ಕೋಸ್ಕರ ಶಿಲುಬೆ ಯನ್ನು ಸಹಿಸಿಕೊಂಡು ಅವಮಾನವನ್ನು ಅಲಕ್ಷ್ಯಮಾಡಿ ದೇವರ
- Luke 19:9 ಲೂಕನು 19:9ಆಗ ಯೇಸು ಅವನಿಗೆ--ಈ ದಿನ ಈ ಮನೆಗೆ ರಕ್ಷಣೆ ಆಯಿತು. ಯಾಕಂದರೆ ಇವನು ಸಹ ಅಬ್ರಹಾಮನ ಮಗ ನಲ್ಲವೇ.
- Isaiah 40:10–11 ಯೆಶಾಯ 40:10–11ಇಗೋ, ಕರ್ತನಾದ ದೇವರು ಬಲವುಳ್ಳ ಕೈಯಿಂದ ಬರುತ್ತಾನೆ, ಆತನ ತೋಳು ತನಗೋಸ್ಕರ ಆಳುವದು. ಇಗೋ, ಆತನ ಬಹುಮಾನವು ಆತನ ಸಂಗಡಲೂ ಆತನ ಪ್ರತಿಫಲವು ಆತನ ಮುಂದೆಯೂ ಇದೆ. ಆತನು ತನ್ನ ಮಂದೆಯನ್ನು ಕುರುಬನಂತೆ ಮೇಯಿ ಸುವನು. ಕುರಿಮರಿಗಳನ್ನು ಕೂಡಿಸಿ ಅವುಗಳನ್ನು ತನ್ನ ಎದೆಗಪ್ಪಿಕೊಳ್ಳುವನು ಎಳೇಮರಿಗಳನ್ನು ಮೆಲ್ಲಗೆ ನಡಿಸುವನು ಎಂದು ಸಾರು.
- Isaiah 46:3–4 ಯೆಶಾಯ 46:3–4ಓ ಯಾಕೋಬನ ಮನೆತನದವರೇ, ಇಸ್ರಾ ಯೇಲ್ ಮನೆತನದಲ್ಲಿ ಉಳಿದಿರುವವರೆಲ್ಲರೇ, ನಿಮ್ಮನ್ನು ಗರ್ಭದಲ್ಲಿ ಹೊತ್ತು, ಹುಟ್ಟಿದಂದಿನಿಂದ ವಹಿಸುತ್ತಿದ್ದಾತನ ಮಾತನ್ನು ಕೇಳಿರಿ-- ನಿಮ್ಮ ಮುಪ್ಪಿನ ಪ್ರಾಯದ ವರೆಗೆ ನಾನೇ (ಆಧಾರ) ನರೆಗೂದಲು ಬಂದಾಗಲೂ ನಾನು ನಿಮ್ಮನ್ನು ಹೊರುವೆನು, ನಾನೇ ಉಂಟುಮಾಡಿದೆನು, ನಾನೇ ಹೊರುವೆನು, ಅಂತೂ ನಾನು ನಿಮ್ಮನ್ನು ಹೊತ್ತು ಬಿಡುಗಡೆ ಮಾಡುವೆನು.
- Micah 7:18 ಮೀಕ 7:18ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ.
- Luke 15:32 ಲೂಕನು 15:32ಆದರೆ ಈ ನಿನ್ನ ತಮ್ಮನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋದ ವನಾಗಿದ್ದನು, ಸಿಕ್ಕಿದ್ದಾನೆ. ಆದಕಾರಣ ನಾವು ಸಂತೋ ಷಿಸಿ ಆನಂದಪಡುವದು ಯುಕ್ತವಾದದ್ದೇ ಎಂದು ಹೇಳಿದನು ಅಂದನು.
- Ezekiel 18:23 ಯೆಹೆಜ್ಕೇಲನು 18:23ದುಷ್ಟನು ಸಾಯುವದರಲ್ಲಿ ನನಗೆ ಸ್ವಲ್ಪವಾದರೂ ಸಂತೋಷವಿ ರುವದೋ ಎಂದು ದೇವರಾದ ಕರ್ತನು ಹೇಳುತ್ತಾನೆ; ಅವನು ತನ್ನ ನಡತೆಗಳಿಂದ ಹಿಂತಿರುಗಿಕೊಂಡು ಬದು ಕಿದರೆ ನನಗೆ ಸಂತೋಷವಲ್ಲವೇ?
- Isaiah 53:10–11 ಯೆಶಾಯ 53:10–11ಆದಾಗ್ಯೂ ಆತನನ್ನು ಜಜ್ಜುವದು ಕರ್ತನಿಗೆ ಮೆಚ್ಚಿಕೆ ಯಾಗಿತ್ತು. ಆತನು (ದೇವರು) ಆತನನ್ನು ಸಂಕಟಕ್ಕೆ ಒಳಪಡಿಸಿದನು; ನೀನು ಆತನ ಪ್ರಾಣವನ್ನು ಪಾಪ ಕ್ಕೋಸ್ಕರ ಬಲಿಯನ್ನಾಗಿ ಮಾಡುವಾಗ ಆತನು ತನ್ನ ಸಂತಾನವನ್ನು ನೋಡುವನು. ಆತನು ತನ್ನ ದಿವಸ ಗಳನ್ನು ಹೆಚ್ಚಿಸುವನು, ಕರ್ತನ ಸಂತೋಷವು ಆತನ ಕೈಯಲ್ಲಿ ಸಫಲವಾಗುವದು. ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.
- Zephaniah 3:17 ಚೆಫನ್ಯ 3:17ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Isaiah 62:5 ಯೆಶಾಯ 62:5ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
- Titus 3:3–7 ತೀತನಿಗೆ 3:3–7ನಾವು ಸಹ ಮೊದಲು ಅವಿವೇಕಿಗಳೂ ಅವಿಧೇಯರೂ ಮೋಸಹೋದ ವರೂ ನಾನಾ ವಿಧವಾದ ದುರಾಶೆಗಳಿಗೆ ಮತ್ತು ಭೋಗಗಳಿಗೆ ದಾಸರೂ ಕೆಟ್ಟತನ ಹೊಟ್ಟೇಕಿಚ್ಚುಗಳಲ್ಲಿ ಜೀವಿಸುವವರೂ ಅಸಹ್ಯರೂ ಒಬ್ಬರನ್ನೊಬ್ಬರು ಹಗೆ ಮಾಡುವವರೂ ಆಗಿದ್ದೆವು. ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ. ನಾವು ಹೀಗೆ ಆತನ ಕೃಪೆಯಿಂದ ನೀತಿವಂತ ರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗನು ಸಾರವಾಗಿ ಬಾಧ್ಯರಾದೆವು.
- Ephesians 2:3–6 ಎಫೆಸದವರಿಗೆ 2:3–6ನಾವೆಲ್ಲರೂ ಪೂರ್ವದಲ್ಲಿ ಶರೀರಭಾವದ ಆಶೆಗಳಿಗೆ ಅಧೀನರಾಗಿ ಶರೀರಕ್ಕೂ ಮನಸ್ಸಿಗೂ ಸಂಬಂಧಪಟ್ಟ ಇಚ್ಛೆಗಳನ್ನು ನೆರವೇರಿಸುತ್ತಾ ನಡೆದು ಮಿಕ್ಕಾದವರಂತೆ ಸ್ವಭಾವ ಸಿದ್ಧವಾಗಿ ದೇವರ ಕೋಪದ ಮಕ್ಕಳಾಗಿದ್ದೆವು. ಆದರೆ ಕರುಣಾನಿಧಿಯಾದ ದೇವರು ತನ್ನ ಅಪಾರ ವಾದ ಪ್ರೀತಿಯ ನಿಮಿತ್ತ ನಮ್ಮನ್ನು ಪ್ರೀತಿಸಿ ಪಾಪಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ಬದುಕಿಸಿದನು. (ನೀವು ಕೃಪೆಯಿಂದಲೇ ರಕ್ಷಣೆ ಹೊಂದಿದವರಾಗಿದ್ದೀರಿ;) ನಮ್ಮನ್ನು ಆತನ ಕೂಡ ಎಬ್ಬಿಸಿ ಕ್ರಿಸ್ತ ಯೇಸುವಿನಲ್ಲಿ ಆತನೊಂದಿಗೆ ಪರ ಲೋಕದ ಸ್ಥಳಗಳಲ್ಲಿ ಕೂಡ್ರಿಸಿದ್ದಾನೆ.