Luke · chapter 19 · verse 21
Luke 19:21 in Kannada
ಯಾಕಂದರೆ ನೀನು ಕಠಿಣವಾದ ಮನುಷ್ಯನು ಎಂದು ನಾನು ನಿನಗೆ ಭಯಪಟ್ಟೆನು; ನೀನು ಇಡದೆ ಇರುವದನ್ನು ತಕ್ಕೊಳ್ಳು ವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ ಅಂದನು.
Yaakandare neenu kathinavaada manushyanu endu naanu ninage bhayapattenu; neenu idade iruvadannu takkollu vavanoo bittade iruvalli koyyuvavanoo aagiddee andanu.
Luke 19:21 in English
- King James Version (KJV)
- For I feared thee, because thou art an austere man: thou takest up that thou layedst not down, and reapest that thou didst not sow.
- World English Bible (WEB)
- for I feared you, because you are an exacting man. You take up that which you didn’t lay down, and reap that which you didn’t sow.’
- American Standard Version (ASV)
- for I feared thee, because thou art an austere man: thou takest up that which thou layedst not down, and reapest that which thou didst not sow.
- Bible in Basic English (BBE)
- Because I was in fear of you, for you are a hard man: you take up what you have not put down, and get in grain where you have not put seed.
- Darby Translation (DBY)
- For I feared thee because thou art a harsh man: thou takest up what thou hast not laid down, and thou reapest what thou hast not sowed.
- Webster's Bible (WBS)
- For I feared thee, because thou art an austere man: thou takest up what thou layedst not down, and reapest what thou didst not sow.
- Young's Literal Translation (YLT)
- for I was afraid of thee, because thou art an austere man; thou takest up what thou didst not lay down, and reapest what thou didst not sow.
Read in context
- 19ಅದಕ್ಕೆ ಅವನು ಅದೇ ಪ್ರಕಾರ--ನೀನು ಸಹ ಐದು ಪಟ್ಟಣಗಳ ಮೇಲಿರು ಎಂದು ಅವನಿಗೆ ಹೇಳಿದನು.
- 20ಆಗ ಮತ್ತೊಬ್ಬನು ಬಂದು--ಒಡೆಯನೇ, ಇಗೋ, ನಾನು ಕರವಸ್ತ್ರದಲ್ಲಿ ಕಟ್ಟಿ ಇಟ್ಟಿದ್ದ ನಿನ್ನ ಮೊಹರಿ ಇದೇ.
- 21ಯಾಕಂದರೆ ನೀನು ಕಠಿಣವಾದ ಮನುಷ್ಯನು ಎಂದು ನಾನು ನಿನಗೆ ಭಯಪಟ್ಟೆನು; ನೀನು ಇಡದೆ ಇರುವದನ್ನು ತಕ್ಕೊಳ್ಳು ವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆಗಿದ್ದೀ ಅಂದನು.
- 22ಆಗ ಅವನು--ನೀನು ಕೆಟ್ಟ ಆಳು, ನಿನ್ನ ಮಾತಿನ ಮೇಲೆಯೇ ನಿನಗೆ ನ್ಯಾಯತೀರಿ ಸುವೆನು. ನಾನು ಇಡದೆ ಇರುವಲ್ಲಿ ತಕ್ಕೊಳ್ಳುವವನೂ ಬಿತ್ತದೆ ಇರುವಲ್ಲಿ ಕೊಯ್ಯುವವನೂ ಆದ ಕಠಿಣ ಮನುಷ್ಯನೆಂದು ನಿನಗೆ ತಿಳಿದಿತ್ತಲ್ಲಾ.
- 23ಹಾಗಿದ್ದರೆ ನನ್ನ ಹಣವನ್ನು ಧನ ವ್ಯವಹಾರದ ಸಂಸ್ಥೆಯಲ್ಲಿ ಯಾಕೆ ಹಾಕಲಿಲ್ಲ? ನಾನು ಬಂದಾಗ ಅದನ್ನು ಬಡ್ಡಿಯ ಸಹಿತ ತೆಗೆದುಕೊಳ್ಳುತ್ತಿದ್ದೆನು ಎಂದು ಅವನಿಗೆ ಹೇಳಿದನು.
Cross references
- Matthew 25:24–25 ಮತ್ತಾಯನು 25:24–25ಆಗ ಒಂದು ತಲಾಂತು ಹೊಂದಿದ್ದ ವನು ಬಂದು--ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು; ಅದಕ್ಕೆ ನಾನು ಭಯಪಟ್ಟು ಹೋಗಿ ನಿನ್ನ ತಲಾಂತನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ಇಗೋ, ನಿನ್ನದು ನಿನಗೆ ಸಲ್ಲಿದೆ ಅಂದನು.
- 2 Timothy 1:7 2 ತಿಮೊಥೆಯನಿಗೆ 1:7ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಸ್ವಸ್ಥಬುದ್ಧಿಯ ಆತ್ಮವೇ ಹೊರತು ಭಯದ ಆತ್ಮವಲ್ಲ.
- Jude 1:15 ಯೂದನು 1:15ಎಲ್ಲರಿಗೆ ನ್ಯಾಯ ತೀರಿಸುವದಕ್ಕೂ ಅವರಲ್ಲಿ ಭಕ್ತಿಹೀನರೆಲ್ಲರು ಮಾಡಿದ ಭಕ್ತಿಯಿಲ್ಲದ ಅವರ ಎಲ್ಲಾ ಕೃತ್ಯಗಳ ವಿಷಯವಾಗಿ ಮತ್ತು ಭಕ್ತಿಯಿಲ್ಲದ ಪಾಪಿಷ್ಠರು ತನಗೆ ವಿರೋಧವಾಗಿ ಆಡಿದ ಎಲ್ಲಾ ಕಠಿಣವಾದ ಮಾತುಗಳ ವಿಷಯವಾಗಿ ಅವರಿಗೆ ಮನದಟ್ಟು ಮಾಡುವದಕ್ಕೂ ಬಂದನು ಎಂಬ ದಾಗಿ ಪ್ರವಾದಿಸಿದನು.
- James 2:10 ಯಾಕೋಬನು 2:10ಯಾಕಂದರೆ ಯಾವನಾದರೂ ನ್ಯಾಯಪ್ರಮಾಣವನ್ನೆಲ್ಲಾ ಕೈಕೊಂಡು ನಡೆದು ಒಂದೇ ಒಂದರಲ್ಲಿ ತಪ್ಪಿದರೆ ಅವನು ಎಲ್ಲಾ ವಿಷಯದಲ್ಲಿಯೂ ಅಪರಾಧಿಯಾಗುತ್ತಾನೆ.
- Ezekiel 18:25–29 ಯೆಹೆಜ್ಕೇಲನು 18:25–29ಆದರೆ ನೀವು, ಕರ್ತನ ಮಾರ್ಗವು ಸರಿಯಲ್ಲ ಅನ್ನುತ್ತೀರಿ; ಓ ಇಸ್ರಾ ಯೇಲಿನ ಮನೆಯವರೇ, ಈಗ ಕೇಳಿರಿ, ನನ್ನ ಮಾರ್ಗವು ಸಮವಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವು ಗಳೇ. ನೀತಿವಂತನು ತನ್ನ ನೀತಿಯನ್ನು ಬಿಟ್ಟು ತಿರುಗಿಕೊಂಡು ಅನ್ಯಾಯಮಾಡಿ ಇವುಗಳಲ್ಲಿ ಸತ್ತರೆ, ಅವನು ಮಾಡಿದ ಅನ್ಯಾಯದಿಂದಲೇ ಸಾಯುವನು. ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು ನ್ಯಾಯವನ್ನೂ ನೀತಿಯನ್ನೂ ಅನುಸರಿಸಿದರೆ ತನ್ನ ಪ್ರಾಣವನ್ನು ಉಳಿಸಿಕೊಂಡು ಬದುಕುವನು. ತಾನು ಆಲೋಚಿಸಿ ತಾನು ಮಾಡುವ ಎಲ್ಲಾ ದುಷ್ಕೃತ್ಯಗಳನ್ನು ಬಿಟ್ಟು ತಿರುಗಿ ಕೊಳ್ಳುವದರಿಂದ ಸಾಯದೆ ನಿಶ್ಚಯವಾಗಿ ಬದುಕು ವನು. ಆದರೆ ಇಸ್ರಾಯೇಲಿನ ಮನೆತನದವರು ಕರ್ತನ ಮಾರ್ಗ ಸಮವಲ್ಲ ಎನ್ನುತ್ತಾರೆ. ಇಸ್ರಾಯೇಲಿನ ಮನೆತನದವರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಸಮವಲ್ಲದವುಗಳೇ.
- 2 Samuel 6:9–11 2 ಸಮುವೇಲನು 6:9–11ದಾವೀದನು ಆ ದಿನ ಕರ್ತನಿಗೆ ಭಯಪಟ್ಟು--ಕರ್ತನ ಮಂಜೂಷವು ನನ್ನ ಬಳಿಗೆ ಬರುವದು ಹೇಗೆ ಅಂದನು. ದಾವೀದನು ಕರ್ತನ ಮಂಜೂಷವನ್ನು ತಾನು ದಾವೀದನ ಪಟ್ಟಣಕ್ಕೆ ತರಲು ಮನಸ್ಸಿಲ್ಲದೆ ಗತ್ ಊರಿನ ಒಬೇದೆದೋಮನ ಮನೆಗೆ ಹೊತ್ತುಕೊಂಡು ಹೋದನು. ಕರ್ತನ ಮಂಜೂ ಷವು ಗತ್ ಊರಿನ ಒಬೇದೆದೋಮನ ಮನೆಯಲ್ಲಿ ಮೂರು ತಿಂಗಳು ಇದ್ದದ್ದರಿಂದ ಕರ್ತನು ಒಬೇದೆ ದೋಮನನ್ನೂ ಅವನ ಮನೆಯವರೆಲ್ಲರನ್ನೂ ಆಶೀರ್ವದಿಸಿದನು.
- Job 21:14–15 ಯೋಬನು 21:14–15ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ. ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.
- Exodus 20:19–20 ವಿಮೋಚನಕಾಂಡ 20:19–20ಅವರು ಮೋಶೆಗೆ--ನೀನೇ ನಮ್ಮ ಸಂಗಡ ಮಾತನಾಡು, ಆಗ ನಾವು ಕೇಳುವೆವು. ನಾವು ಸಾಯದ ಹಾಗೆ ದೇವರು ನಮ್ಮ ಸಂಗಡ ಮಾತನಾಡದಿರಲಿ ಅಂದರು. ಆಗ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ, ನಿಮ್ಮನ್ನು ಪರೀಕ್ಷಿಸುವದಕ್ಕೂ ನೀವು ಪಾಪ ಮಾಡದಂತೆ ಆತನ ಭಯವು ನಿಮಗಿರುವದಕ್ಕೂ ದೇವರು ಬಂದಿದ್ದಾನೆ ಅಂದನು.
- 1 Samuel 6:19–21 1 ಸಮುವೇಲನು 6:19–21ಆದರೆ ಬೇತ್ಷೆ ಮೆಷಿನ ಜನರು ಕರ್ತನ ಮಂಜೂಷದಲ್ಲಿ ನೋಡಿದ್ದ ರಿಂದ ಕರ್ತನು ಅವರೊಳಗೆ ಐವತ್ತು ಸಾವಿರದ ಎಪ್ಪತ್ತು ಮಂದಿಯನ್ನು ಸಾಯಿಸಿದನು. ತಮ್ಮಲ್ಲಿ ದೊಡ್ಡ ಸಂಹಾರವಾಗಿ ಜನರನ್ನು ಕರ್ತನು ಸಾಯಿಸಿದ್ದರಿಂದ ಅವರು ದುಃಖಪಟ್ಟು--ಈ ಪರಿಶುದ್ಧ ದೇವರಾದ ಕರ್ತನ ಮುಂದೆ ನಿಲ್ಲತಕ್ಕವನಾರು? ನಮ್ಮ ಬಳಿಯಿಂದ ಆತನು ಹೋಗತಕ್ಕ ಸ್ಥಳ ಯಾವದು ಎಂದು ಹೇಳಿದರು.ಅವರು ಕಿರ್ಯತ್ಯಾರೀಮಿನ ನಿವಾಸಿಗಳಿಗೆ ದೂತ ರನ್ನು ಕಳುಹಿಸಿ--ಫಿಲಿಷ್ಟಿಯರು ಕರ್ತನ ಮಂಜೂಷ ವನ್ನು ತಿರಿಗಿ ಕಳುಹಿಸಿದ್ದಾರೆ; ನೀವು ಇಳಿದು ಬಂದು ಅದನ್ನು ನಿಮ್ಮ ಬಳಿಗೆ ತಕ್ಕೊಂಡು ಹೋಗಿರಿ ಎಂದು ಹೇಳಿದರು. ಅವರು ಕಿರ್ಯತ್ಯಾರೀಮಿನ ನಿವಾಸಿಗಳಿಗೆ ದೂತ ರನ್ನು ಕಳುಹಿಸಿ--ಫಿಲಿಷ್ಟಿಯರು ಕರ್ತನ ಮಂಜೂಷ ವನ್ನು ತಿರಿಗಿ ಕಳುಹಿಸಿದ್ದಾರೆ; ನೀವು ಇಳಿದು ಬಂದು ಅದನ್ನು ನಿಮ್ಮ ಬಳಿಗೆ ತಕ್ಕೊಂಡು ಹೋಗಿರಿ ಎಂದು ಹೇಳಿದರು.
- Romans 8:15 ರೋಮಾಪುರದವರಿಗೆ 8:15ನೀವು ತಿರಿಗಿ ಭಯವುಳ್ಳವರಾಗಿರುವಂತೆ ದಾಸನ ಭಾವವನ್ನು ಹೊಂದಿದವರಲ್ಲ; ಆದರೆ ದತ್ತುಪುತ್ರ ಸ್ವೀಕಾರದ ಆತ್ಮನನ್ನು ಹೊಂದಿರುವದರಿಂದ ದೇವರನ್ನು ನಾವು ಅಪ್ಪಾ, ತಂದೆಯೇ ಎಂದು ಕೂಗುತ್ತೇವೆ.
- 1 John 4:18 1 ಯೋಹಾನನು 4:18ಪ್ರೀತಿಯಲ್ಲಿ ಹೆದರಿಕೆಯಿಲ್ಲ; ಆದರೆ ಪೂರ್ಣ ಪ್ರೀತಿಯು ಹೆದರಿಕೆ ಯನ್ನು ಹೊರಡಿಸಿಬಿಡುತ್ತದೆ. ಯಾಕಂದರೆ ಭಯವಿರು ವಲ್ಲಿ ಯಾತನೆಯಿರುವದು. ಭಯಪಡುವವನು ಪ್ರೀತಿ ಯಲ್ಲಿ ಸಿದ್ಧಿಗೆ ಬಂದವನಲ್ಲ.
- Romans 8:7 ರೋಮಾಪುರದವರಿಗೆ 8:7ಶರೀರ ಸಂಬಂಧವಾದ ಮನಸ್ಸು ದೇವರಿಗೆ ಶತ್ರುತ್ವವು; ಕಾರಣವೇನಂದರೆ ಅಂಥ ಮನಸ್ಸು ದೇವರ ನಿಯಮಕ್ಕೆ ಒಳಪಡುವದಿಲ್ಲ, ಒಳಪಡುವದಕ್ಕಾಗುವದೂ ಇಲ್ಲ.