Luke · chapter 2 · verse 12
Luke 2:12 in Kannada
ಆ ಶಿಶುವು ಬಟ್ಟೆಯಿಂದ ಸುತ್ತಲ್ಪಟ್ಟು ಗೋದಲಿಯಲ್ಲಿ ಮಲಗಿರುವದನ್ನು ನೀವು ಕಾಣುವಿರಿ; ಇದೇ ನಿಮಗೆ ಗುರುತು ಎಂದು ಹೇಳಿದನು.
Aa shishuvu batteyinda suttalpattu godaliyalli malagiruvadannu neevu kaanuviri; ide nimage gurutu endu helidanu.
Luke 2:12 in English
- King James Version (KJV)
- And this [shall be] a sign unto you; Ye shall find the babe wrapped in swaddling clothes, lying in a manger.
- World English Bible (WEB)
- This is the sign to you: you will find a baby wrapped in strips of cloth, lying in a feeding trough.”
- American Standard Version (ASV)
- And this [is] the sign unto you: Ye shall find a babe wrapped in swaddling clothes, and lying in a manger.
- Bible in Basic English (BBE)
- And this is the sign to you: you will see a young child folded in linen, in the place where the cattle have their food.
- Darby Translation (DBY)
- And this is the sign to you: ye shall find a babe wrapped in swaddling-clothes, and lying in a manger.
- Webster's Bible (WBS)
- And this [shall be] a sign to you; Ye shall find the babe wrapped in swaddling-clothes, lying in a manger.
- Young's Literal Translation (YLT)
- and this [is] to you the sign: Ye shall find a babe wrapped up, lying in the manger.'
Read in context
- 10ಆದರೆ ದೂತನು ಅವರಿಗೆ--ಹೆದರಬೇಡಿರಿ; ಯಾಕಂದರೆ ಇಗೋ, ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಒಳ್ಳೇಸಮಾಚಾರ ವನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ.
- 11ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಆತನು ಕರ್ತನಾಗಿರುವ ಕ್ರಿಸ್ತನೇ.
- 12ಆ ಶಿಶುವು ಬಟ್ಟೆಯಿಂದ ಸುತ್ತಲ್ಪಟ್ಟು ಗೋದಲಿಯಲ್ಲಿ ಮಲಗಿರುವದನ್ನು ನೀವು ಕಾಣುವಿರಿ; ಇದೇ ನಿಮಗೆ ಗುರುತು ಎಂದು ಹೇಳಿದನು.
- 13ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ--
- 14ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
Cross references
- Isaiah 7:14 ಯೆಶಾಯ 7:14ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್ ಎಂದು ಕರೆಯುವರು.
- Isaiah 53:1–2 ಯೆಶಾಯ 53:1–2ನಮ್ಮ ಸುದ್ಧಿಯನ್ನು ಯಾರು ನಂಬಿದ್ದಾರೆ? ಕರ್ತನ ತೋಳು ಯಾರಿಗೆ ಪ್ರಕಟವಾ ಯಿತು? ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.
- Isaiah 7:11 ಯೆಶಾಯ 7:11ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು.
- Psalm 22:6 ಕೀರ್ತನೆಗಳು 22:6ನಾನು ಹುಳವೇ, ಮನುಷ್ಯನಲ್ಲ; ಮನುಷ್ಯರಿಂದ ನಿಂದಿಸಲ್ಪಟ್ಟವನೂ ಜನರಿಂದ ತಿರಸ್ಕರಿಸಲ್ಪಟ್ಟವನೂ ಆಗಿದ್ದೇನೆ.
- 2 Kings 19:29 2 ಅರಸುಗಳು 19:29ನಿನಗೆ ಗುರುತು ಇದೇ--ಈ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೇ ವರುಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ; ಆದರೆ ಮೂರನೇ ವರುಷ ದಲ್ಲಿ ನೀವು ಬಿತ್ತಿ ಕೊಯ್ಯಿರಿ; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ಫಲಗಳನ್ನು ತಿನ್ನಿರಿ.
- 1 Samuel 2:34 1 ಸಮುವೇಲನು 2:34ಇದ ಲ್ಲದೆ ನಿನಗೆ ಗುರುತಾಗಿ ಹೊಫ್ನಿಯು ಫೀನೆಹಾಸನು ಎಂಬ ನಿನ್ನ ಇಬ್ಬರು ಮಕ್ಕಳಿಗೆ ಬರುವದೇನಂದರೆ, ಅವರಿಬ್ಬರೂ ಒಂದೇ ದಿವಸದಲ್ಲಿ ಸಾಯುವರು.
- 1 Samuel 10:2–7 1 ಸಮುವೇಲನು 10:2–7ನೀನು ಈ ಹೊತ್ತು ನನ್ನನ್ನು ಬಿಟ್ಟು ಹೋದಾಗ ಬೆನ್ಯಾವಿಾನನ ಮೇರೆಯಾದ ಚೆಲ್ಚಹಿ ನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವಿ. ಅವರು ನಿನಗೆ--ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು; ಇದಲ್ಲದೆ ಇಗೋ, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು ನಿನಗೋಸ್ಕರ ಚಿಂತೆಪಟ್ಟು--ನನ್ನ ಮಗನಿಗೋ ಸ್ಕರ ಏನು ಮಾಡಲಿ? ಅನ್ನುತ್ತಾನೆಂದು ಹೇಳುವರು. ನೀನು ಆ ಸ್ಥಳವನ್ನು ಬಿಟ್ಟು ಆ ಕಡೆ ದಾಟಿ ತಾಬೋರಿನ ಬಯಲಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿ ಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವಿ. ಅವರು ನಿನ್ನ ಕ್ಷೇಮ ಸಮಾಚಾರವನ್ನು ವಿಚಾರಿಸಿ ನಿನಗೆ ಎರಡು ರೊಟ್ಟಿಗಳನ್ನು ಕೊಡುವರು; ಅವುಗಳನ್ನು ನೀನು ಅವರ ಕೈಯಿಂದ ತೆಗೆದುಕೊಳ್ಳುವಿ. ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು. ಆಗ ಕರ್ತನ ಆತ್ಮನು ನಿನ್ನ ಮೇಲೆ ಬರುವನು; ನೀನು ಅವರ ಸಂಗಡ ಪ್ರವಾದಿಸುವಿ; ಬೇರೆ ಮನುಷ್ಯನಾಗಿ ಮಾರ್ಪಡುವಿ. ಈ ಗುರುತು ಗಳೆಲ್ಲಾ ನಿನಗೆ ಸಂಭವಿಸಿದಾಗ ದೇವರು ನಿನ್ನ ಸಂಗಡ ಇರುವದರಿಂದ ನೀನು ಆ ವೇಳೆಯಲ್ಲಿ ನಿನಗೆ ಅನು ಕೂಲವಾದದ್ದನ್ನು ಮಾಡು.
- 2 Kings 20:8 2 ಅರಸುಗಳು 20:8ಆದರೆ ಹಿಜ್ಕೀಯನು ಯೆಶಾಯನಿಗೆ--ಕರ್ತನು ನನ್ನನ್ನು ಸ್ವಸ್ಥ ಮಾಡುವನೆಂಬದಕ್ಕೂ ನಾನು ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವೆನೆಂಬದಕ್ಕೂ ನನಗೆ ಗುರುತೇನು ಅಂದನು.
- Exodus 3:12 ವಿಮೋಚನಕಾಂಡ 3:12ಆಗ ಆತನು--ನಿಶ್ಚಯವಾಗಿ ನಾನು ನಿನ್ನ ಸಂಗಡ ಇರುವೆನು; ನಾನು ನಿನ್ನನ್ನು ಕಳುಹಿಸುತ್ತೇನೆಂಬದಕ್ಕೆ ಇದೇ ನಿನಗೆ ಗುರುತು. ನೀನು ಜನರನ್ನು ಐಗುಪ್ತದೊಳಗಿಂದ ಹೊರಗೆ ತಂದ ತರುವಾಯ ನೀವು ಈ ಬೆಟ್ಟದಮೇಲೆ ದೇವರನ್ನು ಆರಾಧಿಸುವಿರಿ ಅಂದನು.