2 Kings · chapter 20 · verse 8
2 Kings 20:8 in Kannada
ಆದರೆ ಹಿಜ್ಕೀಯನು ಯೆಶಾಯನಿಗೆ--ಕರ್ತನು ನನ್ನನ್ನು ಸ್ವಸ್ಥ ಮಾಡುವನೆಂಬದಕ್ಕೂ ನಾನು ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವೆನೆಂಬದಕ್ಕೂ ನನಗೆ ಗುರುತೇನು ಅಂದನು.
Aadare hijkeeyanu yeshaayanige--kartanu nannannu svastha maaduvanembadakkoo naanu moorane divasadalli kartana manege hoguvenembadakkoo nanage gurutenu andanu.
2 Kings 20:8 in English
- King James Version (KJV)
- And Hezekiah said unto Isaiah, What [shall be] the sign that the LORD will heal me, and that I shall go up into the house of the LORD the third day?
- World English Bible (WEB)
- Hezekiah said to Isaiah, “What will be the sign that the LORD will heal me, and that I will go up to the LORD’s house the third day?”
- American Standard Version (ASV)
- And Hezekiah said unto Isaiah, What shall be the sign that Jehovah will heal me, and that I shall go up unto the house of Jehovah the third day?
- Bible in Basic English (BBE)
- And Hezekiah said to Isaiah, What is to be the sign that the Lord will make me well, and that I will go up to the house of the Lord on the third day?
- Darby Translation (DBY)
- And Hezekiah said to Isaiah, What [shall be] the sign that Jehovah will heal me, and that I shall go up into the house of Jehovah the third day?
- Webster's Bible (WBS)
- And Hezekiah said to Isaiah, What [shall be] the sign that the LORD will heal me, and that I shall go up into the house of the LORD the third day?
- Young's Literal Translation (YLT)
- And Hezekiah saith unto Isaiah, 'What [is] the sign that Jehovah doth give healing to me, that I have gone up on the third day to the house of Jehovah?'
Read in context
- 6ಇದಲ್ಲದೆ ನಾನು ನಿನ್ನ ಆಯುಷ್ಯಕ್ಕೆ ಹದಿನೈದು ವರುಷ ಹೆಚ್ಚಾಗಿ ಕೂಡಿ ಸುತ್ತೇನೆ; ನಿನ್ನನ್ನೂ ಈ ಪಟ್ಟಣವನ್ನೂ ಅಶ್ಶೂರಿನ ಅರಸನ ಕೈಗೆ ಬೀಳದಂತೆ ತಪ್ಪಿಸಿಬಿಡುವೆನು. ಈ ಪಟ್ಟಣವನ್ನು ನನ್ನ ನಿಮಿತ್ತವಾಗಿಯೂ ನನ್ನ ಸೇವಕನಾದ ದಾವೀದನ ನಿಮಿತ್ತವಾಗಿಯೂ ಕಾಪಾಡುವೆನೆಂದು ನಿನ್ನ ತಂದೆಯಾದ ದಾವೀದನ ದೇವರಾದ ಕರ್ತನು ಹೇಳು ತ್ತಾನೆ ಎಂಬದೇ.
- 7ಇದಲ್ಲದೆ ಯೆಶಾಯನು ಅಂಜೂರದ ಹಣ್ಣುಗಳ ಉಂಡೆಯನ್ನು ತಕ್ಕೊಂಡು ಬರ ಹೇಳಿದನು. ಅವರು ಹಾಗೆಯೇ ತಕ್ಕೊಂಡು ಹುಣ್ಣಿನ ಮೇಲೆ ಹಾಕಿದ್ದರಿಂದ ಅವನು ಗುಣ ಹೊಂದಿದನು.
- 8ಆದರೆ ಹಿಜ್ಕೀಯನು ಯೆಶಾಯನಿಗೆ--ಕರ್ತನು ನನ್ನನ್ನು ಸ್ವಸ್ಥ ಮಾಡುವನೆಂಬದಕ್ಕೂ ನಾನು ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವೆನೆಂಬದಕ್ಕೂ ನನಗೆ ಗುರುತೇನು ಅಂದನು.
- 9ಆಗ ಯೆಶಾಯನು --ಕರ್ತನು, ತಾನು ಹೇಳಿದ ಕಾರ್ಯವನ್ನು ಮಾಡುವ ನೆಂಬದಕ್ಕೆ ಕರ್ತನ ಕಡೆಯಿಂದ ನಿನಗೆ ಉಂಟಾಗುವ ಗುರುತು ಇದೇ--ನೆರಳು ಹತ್ತು ಮೆಟ್ಟಲು ಮುಂದಕ್ಕೆ ಹೋಗಬೇಕೋ? ಇಲ್ಲವೆ ಹತ್ತು ಮೆಟ್ಟಲು ಹಿಂದಕ್ಕೆ ಹೋಗಬೇಕೋ ಎಂದು ಕೇಳಿದನು.
- 10ಅದಕ್ಕೆ ಹಿಜ್ಕೀ ಯನು--ನೆರಳು ಹತ್ತು ಮೆಟ್ಟಲು ಇಳಿಯುವದು ಅಲ್ಪವಾದದ್ದು; ಹಾಗಲ್ಲ, ನೆರಳು ಹತ್ತು ಮೆಟ್ಟಲು ಹಿಂದಕ್ಕೆ ತಿರುಗಲಿ ಅಂದನು.
Cross references
- Judges 6:17 ನ್ಯಾಯಸ್ಥಾಪಕರು 6:17ಅದಕ್ಕವನುಈಗ ನಿನ್ನ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ ನನ್ನ ಸಂಗಡ ಮಾತಾಡುವಾತನು ನೀನೇ ಎಂಬದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು.
- Isaiah 7:11 ಯೆಶಾಯ 7:11ನಿನ್ನ ದೇವರಾದ ಕರ್ತನಿಂದ ಒಂದು ಗುರುತನ್ನು ಕೇಳು; ಅದು ಕೆಳಗೆ ಆಳದಲ್ಲಾದರೂ ಇಲ್ಲವೆ ಮೇಲೆ ಎತ್ತರದ ಲ್ಲಿದ್ದರೂ ಅದನ್ನು ಕೇಳಿಕೋ ಎಂದು ಹೇಳಿದನು.
- 2 Kings 19:29 2 ಅರಸುಗಳು 19:29ನಿನಗೆ ಗುರುತು ಇದೇ--ಈ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೇ ವರುಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ; ಆದರೆ ಮೂರನೇ ವರುಷ ದಲ್ಲಿ ನೀವು ಬಿತ್ತಿ ಕೊಯ್ಯಿರಿ; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ಫಲಗಳನ್ನು ತಿನ್ನಿರಿ.
- 2 Kings 20:5 2 ಅರಸುಗಳು 20:5ನೀನು ತಿರುಗಿಕೊಂಡು ನನ್ನ ಜನರ ನಾಯಕನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇ ನಂದರೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ; ನಿನ್ನ ಕಣ್ಣೀರನ್ನು ನೋಡಿದ್ದೇನೆ; ಇಗೋ, ನಾನು ನಿನ್ನನ್ನು ಸ್ವಸ್ಥಮಾಡುತ್ತೇನೆ; ಮೂರನೇ ದಿವಸದಲ್ಲಿ ಕರ್ತನ ಮನೆಗೆ ಹೋಗುವಿ.
- Hosea 6:2 ಹೋಶೇಯ 6:2ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
- Isaiah 38:22 ಯೆಶಾಯ 38:22ಇದಲ್ಲದೆ ಹಿಜ್ಕೀಯನು--ನಾನು ಕರ್ತನ ಆಲಯಕ್ಕೆ ಹೋಗುವದಕ್ಕೆ ಗುರುತೇನು ಎಂದು ಕೇಳಿದ್ದನು.
- Isaiah 7:14 ಯೆಶಾಯ 7:14ಆದಕಾರಣ ಕರ್ತನು ತಾನೇ ಒಂದು ಗುರುತನ್ನು ನಿನಗೆ ಕೊಡು ವನು; ಇಗೋ, ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆಯುವಳು. ಆತನನ್ನು ಇಮ್ಮಾನು ವೇಲ್ ಎಂದು ಕರೆಯುವರು.
- Judges 6:37–40 ನ್ಯಾಯಸ್ಥಾಪಕರು 6:37–40ಇಗೋ, ಉಣ್ಣೆಯ ಗುಜ್ಜನ್ನು ಕಣದಲ್ಲಿ ಹಾಕುವೆನು. ಮಂಜು ಉಣ್ಣೆಯ ಮೇಲೆ ಮಾತ್ರವೇ ಇದ್ದು ಭೂಮಿಯೆಲ್ಲಾ ಒಣಗಿದ್ದರೆ ನೀನು ಹೇಳಿದ ಹಾಗೆ ಇಸ್ರಾಯೇಲನ್ನು ನನ್ನ ಕೈಯಿಂದ ರಕ್ಷಿಸುವಿ ಎಂಬದನ್ನು ನಾನು ತಿಳಿಯುವೆನು ಅಂದನು. ಅದು ಹಾಗೆಯೇ ಆಯಿತು. ಅವನು ಮರುದಿನ ಉದಯ ದಲ್ಲಿ ಎದ್ದು ಉಣ್ಣೆಯನ್ನು ತೆಗೆದುಕೊಂಡು ಅದರೊಳ ಗಿದ್ದ ಮಂಜಿನ ನೀರನ್ನು ಒಂದು ಬೋಗುಣಿ ತುಂಬಾ ಹಿಂಡಿದನು. ಗಿದ್ಯೋನನು ದೇವರಿಗೆ--ನಾನು ಇನ್ನೊಂದು ಸಾರಿ ಮಾತನಾಡುವದರಿಂದ ನಿನ್ನ ಕೋಪವು ನನ್ನ ಮೇಲೆ ಉರಿಯಬಾರದು. ಉಣ್ಣೆ ಯಿಂದ ಇನ್ನೊಂದು ಸಾರಿ ನಾನು ನಿನ್ನನ್ನು ಶೋಧಿಸು ವೆನು. ಉಣ್ಣೆ ಮಾತ್ರವೇ ಒಣಗುವ ಹಾಗೆಯೂ ಭೂಮಿಯಲ್ಲೆಲ್ಲಾ ಮಂಜು ಇರುವ ಹಾಗೆಯೂ ಅಪ್ಪಣೆ ಆಗಲಿ ಅಂದನು.ಹಾಗೆಯೇ ದೇವರು ಆ ರಾತ್ರಿ ಯಲ್ಲಿ ಮಾಡಿದನು. ಉಣ್ಣೆ ಮಾತ್ರವೇ ಒಣಗಿ ಭೂಮಿಯಲ್ಲೆಲ್ಲಿಯೂ ಮಂಜು ಇತ್ತು. ಹಾಗೆಯೇ ದೇವರು ಆ ರಾತ್ರಿ ಯಲ್ಲಿ ಮಾಡಿದನು. ಉಣ್ಣೆ ಮಾತ್ರವೇ ಒಣಗಿ ಭೂಮಿಯಲ್ಲೆಲ್ಲಿಯೂ ಮಂಜು ಇತ್ತು.