Luke · chapter 2 · verse 14
Luke 2:14 in Kannada
ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
Mahonnata dalliruva devarige mahime, bhoomiya mele samaadhaana, manushyara kadege daye endu helidaru.
Luke 2:14 in English
- King James Version (KJV)
- Glory to God in the highest, and on earth peace, good will toward men.
- World English Bible (WEB)
- “Glory to God in the highest, on earth peace, good will toward men.”
- American Standard Version (ASV)
- Glory to God in the highest, And on earth peace among men in whom he is well pleased.
- Bible in Basic English (BBE)
- Glory to God in the highest, and on the earth peace among men with whom he is well pleased.
- Darby Translation (DBY)
- Glory to God in the highest, and on earth peace, good pleasure in men.
- Webster's Bible (WBS)
- Glory to God in the highest, and on earth peace, good will towards men.
- Young's Literal Translation (YLT)
- 'Glory in the highest to God, and upon earth peace, among men — good will.'
Read in context
- 12ಆ ಶಿಶುವು ಬಟ್ಟೆಯಿಂದ ಸುತ್ತಲ್ಪಟ್ಟು ಗೋದಲಿಯಲ್ಲಿ ಮಲಗಿರುವದನ್ನು ನೀವು ಕಾಣುವಿರಿ; ಇದೇ ನಿಮಗೆ ಗುರುತು ಎಂದು ಹೇಳಿದನು.
- 13ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ--
- 14ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು.
- 15ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
- 16ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು.
Cross references
- Romans 5:1 ರೋಮಾಪುರದವರಿಗೆ 5:1ಹೀಗಿರಲಾಗಿ ನಾವು ನಂಬಿಕೆಯಿಂದ ನೀತಿವಂತರಾದ ಕಾರಣ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ದೇವರೊಂದಿಗೆ ಸಮಾಧಾನ ಉಂಟಾಗಿದೆ.
- Luke 19:38 ಲೂಕನು 19:38ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು.
- Luke 1:79 ಲೂಕನು 1:79ಕತ್ತಲೆಯಲ್ಲಿಯೂ ಮರಣದ ನೆರಳಿನಲ್ಲಿಯೂ ಕೂತವರಿಗೆ ಬೆಳಕನ್ನು ಕೊಡುವದಕ್ಕೂ ನಮ್ಮ ಪಾದಗಳನ್ನು ಸಮಾಧಾನದ ಮಾರ್ಗದಲ್ಲಿ ನಡಿಸುವದಕ್ಕೂ ಆಗುವದು ಎಂದು ಹೇಳಿದನು.ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
- Colossians 1:20 ಕೊಲೊಸ್ಸೆಯವರಿಗೆ 1:20ಆತನ ಶಿಲುಬೆಯ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ ಆತನಿಂದ ಭೂಪರ ಲೋಕಗಳಲ್ಲಿರುವ ಎಲ್ಲವುಗಳನ್ನು ಆತನ ಮೂಲಕ ತನಗೆ ಸಂಧಾನಪಡಿಸಿಕೊಂಡನು.
- Isaiah 9:6–7 ಯೆಶಾಯ 9:6–7ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು. ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.
- Hebrews 13:20–21 ಇಬ್ರಿಯರಿಗೆ 13:20–21ಶಾಶ್ವತವಾದ ಒಡಂಬಡಿಕೆಯ ರಕ್ತದ ಮೂಲಕ ಕುರಿ ಹಿಂಡಿಗೆ ದೊಡ್ಡ ಕುರುಬನಾಗಿರುವ ನಮ್ಮ ಕರ್ತನಾದ ಯೇಸುವನ್ನು ಸತ್ತವರೊಳಗಿಂದ ಬರ ಮಾಡಿದ ಶಾಂತಿದಾಯಕನಾದ ದೇವರು ನಿಮ್ಮನ್ನು ಸಕಲ ಸತ್ಕಾರ್ಯಗಳಲ್ಲಿ ಆತನ ಚಿತ್ತವನ್ನು ಮಾಡುವಂತೆ ಪರಿಪೂರ್ಣ ಮಾಡಲಿ. ತನ್ನ ದೃಷ್ಟಿಯಲ್ಲಿ ಮೆಚ್ಚಿಕೆಯಾದ ದ್ದನ್ನು ಯೇಸು ಕ್ರಿಸ್ತನ ಮೂಲಕ ನಿಮ್ಮಲ್ಲಿ ನಡಿಸಲಿ. ಯುಗಯುಗಾಂತರಗಳಲ್ಲಿಯೂ ಆತನಿಗೆ ಮಹಿಮೆ ಉಂಟಾಗಲಿ. ಆಮೆನ್.
- Psalm 85:9–12 ಕೀರ್ತನೆಗಳು 85:9–12ನಿಶ್ಚ ಯವಾಗಿ ಘನವು ನಮ್ಮ ದೇಶದಲ್ಲಿ ವಾಸವಾಗಿರುವ ಹಾಗೆ, ಆತನಿಗೆ ಭಯಪಡುವವರಿಗೆ ಆತನ ರಕ್ಷಣೆಯು ಸವಿಾಪವಾಗಿದೆ. ಕೃಪೆಯೂ ಸತ್ಯವೂ ಸಂಧಿಸಿ ಕೊಳ್ಳುತ್ತವೆ; ನೀತಿಯೂ ಸಮಾಧಾನವೂ ಮುದ್ದಿಟ್ಟು ಕೊಳ್ಳುತ್ತವೆ. ಸತ್ಯವು ಭೂಮಿಯಿಂದ ಮೊಳೆಯು ವದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. ಹೌದು, ಕರ್ತನು ಒಳ್ಳೇದನ್ನು ಮಾಡುವನು. ನಮ್ಮ ಭೂಮಿಯು ಅದರ ಬೆಳೆಯನ್ನು ಕೊಡುವದು.ನೀತಿಯು ಆತನ ಮುಂದೆ ಹೋಗುತ್ತಾ ನಾವು ಆತನ ಹೆಜ್ಜೆಗಳಲ್ಲಿ ನಡೆಯುವಂತೆ ಮಾರ್ಗವನ್ನು ಮಾಡುವದು.
- Revelation 5:13 ಪ್ರಕಟನೆ 5:13ಇದಲ್ಲದೆ ಆಕಾಶ ದಲ್ಲಿಯೂ ಭೂಮಿಯ ಮೇಲೆಯೂ ಭೂಮಿಯ ಕೆಳಗೂ ಸಮುದ್ರದಲ್ಲಿಯೂ ಅವುಗಳಲ್ಲಿರುವ ಎಲ್ಲಾ ಸೃಷ್ಟಿಗಳೂ--ಸಿಂಹಾಸನಾಸೀನನಾಗಿರುವಾತನಿಗೂ ಕುರಿಮರಿಯಾದಾತನಿಗೂ ಸ್ತೋತ್ರಮಾನ ಪ್ರಭಾವ ಬಲವು ಯುಗಯುಗಾಂತರಗಳಲ್ಲಿಯೂ ಇರಲಿ ಎಂದು ಹೇಳುವದನ್ನು ನಾನು ಕೇಳಿದೆನು.ಆಗ ನಾಲ್ಕು ಜೀವಿಗಳು--ಆಮೆನ್ ಅಂದವು; ಇಪ್ಪತ್ತನಾಲ್ಕು ಮಂದಿ ಹಿರಿಯರು ಅಡ್ಡ ಬಿದ್ದು ಯುಗಯುಗಾಂತರಗಳಲ್ಲಿ ಜೀವಿಸುವಾತನನ್ನು ಆರಾಧಿಸಿದರು.
- Titus 3:4–7 ತೀತನಿಗೆ 3:4–7ಆದರೆ ನಮ್ಮ ರಕ್ಷಕನಾದ ದೇವರ ದಯೆಯೂ ಪ್ರೀತಿಯೂ ಮನುಷ್ಯನ ಕಡೆಗೆ ಪ್ರತ್ಯಕ್ಷವಾದಾಗ ನಾವು ಮಾಡಿದ ನೀತಿಯ ಕ್ರಿಯೆ ಗಳಿಂದಲ್ಲ, ಆತನ ಕರುಣೆಯಿಂದಲೇ ಪುನರ್ಜನ್ಮದ ತೊಳೆಯುವಿಕೆಯಿಂದಲೂ ಪವಿತ್ರಾತ್ಮನು ನೂತನ ಸ್ವಭಾವವನ್ನುಂಟು ಮಾಡುವದರಿಂದಲೂ ಆತನು ನಮ್ಮನ್ನು ರಕ್ಷಿಸಿದನು. ಆತನು (ದೇವರು) ನಮ್ಮ ರಕ್ಷಕನಾದ ಯೇಸು ಕ್ರಿಸ್ತನ ಮೂಲಕ ಆತನನ್ನು (ಪವಿತ್ರಾತ್ಮನನ್ನು) ನಮ್ಮ ಮೇಲೆ ಧಾರಾಳವಾಗಿ ಸುರಿಸಿ ದ್ದಾನೆ. ನಾವು ಹೀಗೆ ಆತನ ಕೃಪೆಯಿಂದ ನೀತಿವಂತ ರೆಂದು ನಿರ್ಣಯಿಸಲ್ಪಟ್ಟು ನಿತ್ಯಜೀವದ ನಿರೀಕ್ಷೆಗನು ಸಾರವಾಗಿ ಬಾಧ್ಯರಾದೆವು.
- Ephesians 3:20–21 ಎಫೆಸದವರಿಗೆ 3:20–21ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತನಾದಾತನಿಗೆಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್. ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತ ರಕ್ಕೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ. ಆಮೆನ್.
- Psalm 96:11–13 ಕೀರ್ತನೆಗಳು 96:11–13ಆಕಾಶಗಳು ಸಂತೋಷಿಸಲಿ; ಭೂಮಿಯು ಉಲ್ಲಾಸಪಡಲಿ; ಸಮುದ್ರವೂ ಅದರ ಪರಿಪೂರ್ಣ ತೆಯೂ ಘೋಷಿಸಲಿ. ಹೊಲವೂ ಅದರಲ್ಲಿರುವ ಸಮಸ್ತವೂ ಉತ್ಸಾಹಪಡಲಿ; ಅಡವಿಯ ಮರಗಳೆಲ್ಲಾ ಕರ್ತನ ಮುಂದೆಯೇ ಉತ್ಸಾಹಧ್ವನಿ ಮಾಡಲಿ.ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು. ಆತನು ಬರುತ್ತಾನೆ, ಭೂಮಿಗೆ ನ್ಯಾಯತೀರಿಸಲು ಬರುತ್ತಾನೆ; ಲೋಕಕ್ಕೆ ನೀತಿಯಿಂದಲೂ ಜನಗಳಿಗೆ ತನ್ನ ಸತ್ಯದಿಂದಲೂ ನ್ಯಾಯತೀರಿಸುವನು.
- Isaiah 57:19 ಯೆಶಾಯ 57:19ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.