Luke · chapter 23 · verse 18
Luke 23:18 in Kannada
ಆಗ ಅವರೆಲ್ಲರೂ ಆ ಕ್ಷಣವೇ--ಈತನನ್ನು ತೆಗೆದುಹಾಕಿ ನಮಗೆ ಬರಬ್ಬ ನನ್ನು ಬಿಟ್ಟುಕೊಡು ಎಂದು ಕೂಗುತ್ತಾ ಹೇಳಿದರು.
Aaga avarellaroo aa kshanave--eetanannu tegeduhaaki namage barabba nannu bittukodu endu kooguttaa helidaru.
Luke 23:18 in English
- King James Version (KJV)
- And they cried out all at once, saying, Away with this [man], and release unto us Barabbas:
- World English Bible (WEB)
- But they all cried out together, saying, “Away with this man! Release to us Barabbas!”—
- American Standard Version (ASV)
- But they cried out all together, saying, Away with this man, and release unto us Barabbas:—
- Bible in Basic English (BBE)
- But with loud voices they said all together, Put this man to death, and make Barabbas free.
- Darby Translation (DBY)
- But they cried out in a mass saying, Away with this [man] and release Barabbas to us;
- Webster's Bible (WBS)
- And they cried out all at once, saying, Away with this [man] , and release to us Barabbas:
- Young's Literal Translation (YLT)
- and they cried out — the whole multitude — saying, 'Away with this one, and release to us Barabbas,'
Read in context
- 16ಹೀಗಿರುವದರಿಂದ ನಾನು ಆತನನ್ನು ಹೊಡಿಸಿ ಬಿಟ್ಟುಬಿಡುವೆನು ಅಂದನು.
- 17ಯಾಕಂದರೆ ಅಧಿಪತಿಯು ಒಬ್ಬನನ್ನು ಹಬ್ಬದಲ್ಲಿ ಅವರಿಗಾಗಿ ಬಿಡಿಸು ವದು ಅವಶ್ಯವಾಗಿತ್ತು).
- 18ಆಗ ಅವರೆಲ್ಲರೂ ಆ ಕ್ಷಣವೇ--ಈತನನ್ನು ತೆಗೆದುಹಾಕಿ ನಮಗೆ ಬರಬ್ಬ ನನ್ನು ಬಿಟ್ಟುಕೊಡು ಎಂದು ಕೂಗುತ್ತಾ ಹೇಳಿದರು.
- 19(ಬರಬ್ಬನು ಪಟ್ಟಣದಲ್ಲಿ ನಡೆದ ಒಂದಾನೊಂದು ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಲ್ಪ ಟ್ಟವನಾಗಿದ್ದನು).
- 20ಆದದರಿಂದ ಪಿಲಾತನು ಯೇಸು ವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಅವರೊಂದಿಗೆ ಮಾತನಾಡಿದನು.
Cross references
- Acts 21:36 ಅಪೊಸ್ತಲರ ಕೃತ್ಯಗಳು 21:36ಯಾಕಂದರೆ ಗುಂಪಾಗಿ ಕೂಡಿದ ಜನರು ಹಿಂದಿನಿಂದ ಬಂದು--ಅವನನ್ನು ತೆಗೆದುಹಾಕು ಎಂದು ಕೂಗುತ್ತಿದ್ದರು.
- Acts 3:14 ಅಪೊಸ್ತಲರ ಕೃತ್ಯಗಳು 3:14ಹೀಗೆ ಪರಿಶುದ್ಧನೂ ನೀತಿವಂತನೂ ಆಗಿರುವಾತ ನನ್ನು ನೀವು ಬೇಡವೆಂದು ಹೇಳಿ ಒಬ್ಬ ಕೊಲೆಗಾರನನ್ನು ನಿಮಗಾಗಿ ಬಿಟ್ಟುಕೊಡುವಂತೆ ಅಪೇಕ್ಷಿಸಿ
- Acts 22:22 ಅಪೊಸ್ತಲರ ಕೃತ್ಯಗಳು 22:22ಈ ಮಾತಿನತನಕ ಅವನು ಹೇಳಿದ್ದನ್ನು ಅವರು ಕೇಳಿ ತಮ್ಮ ಧ್ವನಿಗಳನ್ನೆತ್ತಿ--ಇಂಥವನನ್ನು ಭೂಮಿ ಯಿಂದ ತೆಗೆದುಹಾಕಿರಿ; ಇವನು ಜೀವಿಸುವದು ಯುಕ್ತವಲ್ಲ ಎಂದು ಕೂಗಿದರು.
- John 18:39–40 ಯೋಹಾನನು 18:39–40ಆದರೆ ಪಸ್ಕ ದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ ಎಂದು ಕೇಳಿ ದನು.ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು. ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು.
- John 19:15–16 ಯೋಹಾನನು 19:15–16ಆದರೆ ಅವರು--ತೆಗೆದುಹಾಕು, ತೆಗೆದುಹಾಕು, ಅವನನ್ನು ಶಿಲುಬೆಗೆ ಹಾಕು ಅಂದರು. ಅದಕ್ಕೆ ಪಿಲಾತನು ಅವರಿಗೆ--ನಿಮ್ಮ ಅರಸನನ್ನು ಶಿಲುಬೆಗೆ ಹಾಕಲೋ ಅಂದಾಗ ಪ್ರಧಾನಯಾಜಕರು--ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ ಎಂದು ಉತ್ತರ ಕೊಟ್ಟರು. ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರಿಗೆ ಒಪ್ಪಿಸಲಾಗಿ ಅವರು ಆತನನ್ನು ಸಾಗಿಸಿಕೊಂಡು ಹೋದರು.
- Mark 15:6–15 ಮಾರ್ಕನು 15:6–15ಆ ಹಬ್ಬದಲ್ಲಿ ಜನರು ಬೇಡಿ ಕೊಂಡ ಒಬ್ಬ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು. ಆಗ ದಂಗೆ ಮಾಡಿದವರೊಂದಿಗೆ ಬಂಧಿಸಲ್ಪಟ್ಟು ಆ ದಂಗೆಯಲ್ಲಿ ಕೊಲೆ ಮಾಡಿದ ಬರಬ್ಬ ನೆಂಬ ಹೆಸರುಳ್ಳವನೊಬ್ಬನು ಅಲ್ಲಿ ಇದ್ದನು. ಆಗ ಜನಸಮೂಹವು ಗಟ್ಟಿಯಾಗಿ ಕೂಗುತ್ತಾ ಅವನು ತಮಗೆ ಯಾವಾಗಲೂ ಮಾಡಿದ ಪ್ರಕಾರ ಮಾಡ ಬೇಕೆಂದು ಬೇಡಿಕೊಳ್ಳಲಾರಂಭಿ ಸಿದರು. ಆದರೆ ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ--ಯೆಹೂದ್ಯರ ಅರಸನನ್ನು ನಿಮಗಾಗಿ ನಾನು ಬಿಡಿಸಬೇಕೋ ಎಂದು ಕೇಳಿದನು. ಯಾಕಂದರೆ ಪ್ರಧಾನಯಾಜಕರು ಹೊಟ್ಟೇಕಿಚ್ಚಿನಿಂದ ಆತನನ್ನು ಒಪ್ಪಿಸಿಕೊಟ್ಟಿದ್ದರೆಂದು ಅವನಿಗೆ ತಿಳಿದಿತ್ತು. ಆದರೆ ಪ್ರಧಾನಯಾಜಕರು ತಮಗೆ ಬರಬ್ಬನನ್ನೇ ಬಿಟ್ಟುಕೊಡ ಬೇಕೆಂದು ಜನರನ್ನು ಪ್ರೇರೇಪಿಸಿದರು. ಆಗ ಪಿಲಾತನು ಪ್ರತ್ಯುತ್ತರವಾಗಿ ಅವರಿಗೆ--ಹಾಗಾದರೆ ನೀವು ಯೆಹೂದ್ಯರ ಅರಸ ನೆಂದು ಕರೆಯುವ ಈತನಿಗೆ ನಾನೇನು ಮಾಡಬೇಕ ನ್ನುತ್ತೀರಿ ಎಂದು ತಿರಿಗಿ ಕೇಳಿದ್ದಕ್ಕೆ-- ಆತನನ್ನು ಶಿಲುಬೆಗೆ ಹಾಕಿಸು ಎಂದು ತಿರಿಗಿ ಅವರು ಕೂಗಿ ಕೊಂಡರು. ಆಗ ಪಿಲಾತನು ಅವರಿಗೆ--ಯಾಕೆ? ಆತನು ಕೆಟ್ಟದ್ದೇನು ಮಾಡಿದನು ಎಂದು ಹೇಳಲು ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು. ಹೀಗೆ ಪಿಲಾತನು ಜನರನ್ನು ತೃಪ್ತಿಪಡಿಸಲು ಮನಸ್ಸುಳ್ಳವನಾಗಿ ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಯಿಂದ ಹೊಡಿಸಿ ಶಿಲುಬೆಗೆ ಹಾಕುವದಕ್ಕೆ ಒಪ್ಪಿಸಿದನು.
- Matthew 27:15–26 ಮತ್ತಾಯನು 27:15–26ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯವನನ್ನು ಅಧಿಪತಿಯು ಬಿಟ್ಟುಬಿಡುವ ಪದ್ಧತಿ ಯಿತ್ತು. ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧನಾದ ಸೆರೆಯವನೊಬ್ಬನು ಅವರಲ್ಲಿ ಇದ್ದನು. ಆದದ ರಿಂದ ಅವರು ಕೂಡಿಬಂದಿದ್ದಾಗ ಪಿಲಾತನು ಅವರಿಗೆ--ನಿಮಗೆ ಯಾರನ್ನು ಬಿಟ್ಟುಕೊಡ ಬೇಕನ್ನುತ್ತೀರಿ? ಬರಬ್ಬನನ್ನೋ? ಇಲ್ಲವೆ ಕ್ರಿಸ್ತನನ್ನಿಸಿಕೊಳ್ಳುವ ಯೇಸು ವನ್ನೋ ಎಂದು ಕೇಳಿದನು. ಯಾಕಂದರೆ ಆತನನ್ನು ಅವರು ಹೊಟ್ಟೇಕಿಚ್ಚಿನಿಂದ ಹಿಡುಕೊಟ್ಟಿದ್ದಾರೆಂದು ಅವನಿಗೆ ಗೊತ್ತಿತ್ತು. ಅವನು ನ್ಯಾಯಾಸನದ ಮೇಲೆ ಕೂತಿದ್ದಾಗ ಅವನ ಹೆಂಡತಿಯು ಅವ ನಿಗೆ--ನೀನು ಆ ನೀತಿವಂತನ ಗೊಡವೆಗೆ ಹೋಗ ಬೇಡ; ಯಾಕಂದರೆ ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ ಎಂದು ಹೇಳಿಕಳುಹಿಸಿದಳು. ಆದರೆ ಪ್ರಧಾನ ಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸು ವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹ ವನ್ನು ಒಡಂಬಡಿಸಿದರು. ಅಧಿಪತಿಯು ಪ್ರತ್ಯುತ್ತರ ವಾಗಿ ಅವರಿಗೆ--ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕನ್ನುತ್ತೀರಿ ಅನ್ನಲು ಅವರು--ಬರಬ್ಬನನ್ನು ಅಂದರು. ಪಿಲಾತನು ಅವರಿಗೆ--ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಅನ್ನಲು ಅವರೆಲ್ಲರೂ--ಅವನನ್ನು ಶಿಲುಬೆಗೆ ಹಾಕಿಸು ಎಂದು ಅವನಿಗೆ ಹೇಳಿದರು. ಆಗ ಅಧಿಪತಿಯು--ಯಾಕೆ? ಆತನು ಕೆಟ್ಟದ್ದೇನು ಮಾಡಿ ದ್ದಾನೆ ಅಂದನು. ಆದರೆ ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಹೆಚ್ಚಾಗಿ ಕೂಗಿಕೊಂಡರು. ಪಿಲಾ ತನು ತನ್ನ ಯತ್ನ ನಡೆಯಲಿಲ್ಲ, ಗದ್ದಲವೇ ಹೆಚ್ಚಾಗುತ್ತದೆ ಎಂದು ನೋಡಿ ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು--ಈ ನೀತಿವಂತನ ರಕ್ತಕ್ಕೆ ನಾನು ನಿರಪರಾಧಿ, ಅದನ್ನು ನೀವೇ ನೋಡಿಕೊಳ್ಳಿರಿ ಅಂದನು. ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು. ಆಗ ಅವನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು.