Mark · chapter 15 · verse 6
Mark 15:6 in Kannada
ಆ ಹಬ್ಬದಲ್ಲಿ ಜನರು ಬೇಡಿ ಕೊಂಡ ಒಬ್ಬ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
Aa habbadalli janaru bedi konda obba sereyavanannu avarige bittukoduva paddhatiyittu.
Mark 15:6 in English
- King James Version (KJV)
- Now at [that] feast he released unto them one prisoner, whomsoever they desired.
- World English Bible (WEB)
- Now at the feast he used to release to them one prisoner, whomever they asked of him.
- American Standard Version (ASV)
- Now at the feast he used to release unto them one prisoner, whom they asked of him.
- Bible in Basic English (BBE)
- Now at the feast every year he let one prisoner go free at their request.
- Darby Translation (DBY)
- But at [the] feast he released to them one prisoner, whomsoever they begged [of him].
- Webster's Bible (WBS)
- Now at [that] feast he released to them one prisoner, whom they desired.
- Young's Literal Translation (YLT)
- And at every feast he was releasing to them one prisoner, whomsoever they were asking;
Read in context
- 4ಆಗ ಪಿಲಾತನು ತಿರಿಗಿ ಆತ ನಿಗೆ--ನೀನು ಏನೂ ಉತ್ತರಕೊಡುವದಿಲ್ಲವೋ? ಇವರು ನಿನಗೆ ವಿರೋಧವಾಗಿ ಎಷ್ಟು ದೂರುಗಳನ್ನು ಹೇಳುತ್ತಾರೆ ನೋಡು ಎಂದು ಕೇಳಿದನು.
- 5ಆದರೂ ಯೇಸು ಉತ್ತರಕೊಡದೆ ಇರಲಾಗಿ ಪಿಲಾತನು ಆಶ್ಚರ್ಯಪಟ್ಟನು.
- 6ಆ ಹಬ್ಬದಲ್ಲಿ ಜನರು ಬೇಡಿ ಕೊಂಡ ಒಬ್ಬ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವ ಪದ್ಧತಿಯಿತ್ತು.
- 7ಆಗ ದಂಗೆ ಮಾಡಿದವರೊಂದಿಗೆ ಬಂಧಿಸಲ್ಪಟ್ಟು ಆ ದಂಗೆಯಲ್ಲಿ ಕೊಲೆ ಮಾಡಿದ ಬರಬ್ಬ ನೆಂಬ ಹೆಸರುಳ್ಳವನೊಬ್ಬನು ಅಲ್ಲಿ ಇದ್ದನು.
- 8ಆಗ ಜನಸಮೂಹವು ಗಟ್ಟಿಯಾಗಿ ಕೂಗುತ್ತಾ ಅವನು ತಮಗೆ ಯಾವಾಗಲೂ ಮಾಡಿದ ಪ್ರಕಾರ ಮಾಡ ಬೇಕೆಂದು ಬೇಡಿಕೊಳ್ಳಲಾರಂಭಿ ಸಿದರು.
Cross references
- John 18:39–40 ಯೋಹಾನನು 18:39–40ಆದರೆ ಪಸ್ಕ ದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿ ಉಂಟಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವದು ನಿಮಗೆ ಇಷ್ಟವೋ ಎಂದು ಕೇಳಿ ದನು.ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು. ಅದಕ್ಕೆ ಅವರೆಲ್ಲರೂ ತಿರಿಗಿ--ಈ ಮನುಷ್ಯ ನನ್ನಲ್ಲ; ಆದರೆ ಬರಬ್ಬನನ್ನು ಬಿಟ್ಟು ಕೊಡು ಎಂದು ಕೂಗಿಕೊಂಡರು. ಈ ಬರಬ್ಬನು ಕಳ್ಳನಾಗಿದ್ದನು.
- Acts 25:9 ಅಪೊಸ್ತಲರ ಕೃತ್ಯಗಳು 25:9ಆದರೆ ಯೆಹೂದ್ಯರನ್ನು ಸಂತೋಷ ಪಡಿಸುವದಕ್ಕಾಗಿ ಫೆಸ್ತನು ಪೌಲನಿಗೆ--ನೀನು ಯೆರೂಸಲೇಮಿಗೆ ಬಂದು ನನ್ನ ಮುಂದೆ ಇವುಗಳ ವಿಷಯವಾಗಿ ವಿಚಾರಿಸಲ್ಪಡುವದಕ್ಕೆ ನಿನಗೆ ಇಷ್ಟ ವಿದೆಯೋ ಎಂದು ಕೇಳಿದನು.
- Acts 24:27 ಅಪೊಸ್ತಲರ ಕೃತ್ಯಗಳು 24:27ಎರಡು ವರುಷಗಳಾದ ಮೇಲೆ ಫೇಲಿಕ್ಸನ ಸ್ಥಳಕ್ಕೆ ಪೋರ್ಕಿಯ ಫೆಸ್ತನು ಬಂದನು. ಆಗ ಫೇಲಿಕ್ಸನು ಯೆಹೂದ್ಯರನ್ನು ಸಂತೋಷಪಡಿಸುವ ಮನಸ್ಸುಳ್ಳವನಾಗಿ ಪೌಲನನ್ನು ಬಂಧನದಲ್ಲಿಯೇ ಬಿಟ್ಟನು.
- Matthew 26:5 ಮತ್ತಾಯನು 26:5ಆದರೆ ಅವರು ಜನರಲ್ಲಿ ಗದ್ದಲವಾದೀತು ಹಬ್ಬದಲ್ಲಿ ಬೇಡ ಅಂದರು.
- Luke 23:16–25 ಲೂಕನು 23:16–25ಹೀಗಿರುವದರಿಂದ ನಾನು ಆತನನ್ನು ಹೊಡಿಸಿ ಬಿಟ್ಟುಬಿಡುವೆನು ಅಂದನು. ಯಾಕಂದರೆ ಅಧಿಪತಿಯು ಒಬ್ಬನನ್ನು ಹಬ್ಬದಲ್ಲಿ ಅವರಿಗಾಗಿ ಬಿಡಿಸು ವದು ಅವಶ್ಯವಾಗಿತ್ತು). ಆಗ ಅವರೆಲ್ಲರೂ ಆ ಕ್ಷಣವೇ--ಈತನನ್ನು ತೆಗೆದುಹಾಕಿ ನಮಗೆ ಬರಬ್ಬ ನನ್ನು ಬಿಟ್ಟುಕೊಡು ಎಂದು ಕೂಗುತ್ತಾ ಹೇಳಿದರು. (ಬರಬ್ಬನು ಪಟ್ಟಣದಲ್ಲಿ ನಡೆದ ಒಂದಾನೊಂದು ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಯಲ್ಲಿ ಹಾಕಲ್ಪ ಟ್ಟವನಾಗಿದ್ದನು). ಆದದರಿಂದ ಪಿಲಾತನು ಯೇಸು ವನ್ನು ಬಿಡಿಸಬೇಕೆಂದು ಮನಸ್ಸುಳ್ಳವನಾಗಿ ಮತ್ತೊಮ್ಮೆ ಅವರೊಂದಿಗೆ ಮಾತನಾಡಿದನು. ಆದರೆ ಅವರು--ಅವನನ್ನು ಶಿಲುಬೆಗೆ ಹಾಕಿಸು, ಅವನನ್ನು ಶಿಲುಬೆಗೆ ಹಾಕಿಸು ಎಂದು ಕೂಗುತ್ತಾ ಹೇಳಿದರು. ಆದರೆ ಅವನು ಮೂರನೆಯ ಸಾರಿ ಅವ ರಿಗೆ--ಯಾಕೆ? ಈತನು ಕೆಟ್ಟದ್ದೇನು ಮಾಡಿದ್ದಾನೆ? ಈತನಲ್ಲಿ ಮರಣಕ್ಕೆ ಕಾರಣವಾದದ್ದೇನೂ ನನಗೆ ಕಾಣ ಲಿಲ್ಲ; ಆದದರಿಂದ ನಾನು ಈತನನ್ನು ಹೊಡಿಸಿ ಬಿಟ್ಟು ಬಿಡುತ್ತೇನೆ ಅಂದನು. ಆದರೆ ಆತನು ಶಿಲುಬೆಗೆ ಹಾಕಲ್ಪಡಬೇಕೆಂದು ಅವರು ಮಹಾಧ್ವನಿಯಿಂದ ಒತ್ತಾಯ ಮಾಡಿದರು. ಹೀಗೆ ಅವರ ಕೂಗಾಟವೂ ಪ್ರಧಾನಯಾಜಕರ ಕೂಗಾಟವೂ ಗೆದ್ದಿತು. ಆಗ ಪಿಲಾತನು ಅವರು ಕೇಳಿಕೊಂಡಂತೆ ಆಗಲಿ ಎಂದು ನಿರ್ಣಯಿಸಿದನು. ಇದಲ್ಲದೆ ಅವರು ಇಷ್ಟಪಟ್ಟವ ನನ್ನು ಅಂದರೆ ದಂಗೆಯ ಮತ್ತು ಕೊಲೆಯ ನಿಮಿತ್ತ ಸೆರೆಮನೆಯೊಳಗೆ ಹಾಕಲ್ಪಟ್ಟವನನ್ನು ಅವರಿಗೆ ಬಿಟ್ಟು ಕೊಟ್ಟು ಯೇಸುವನ್ನು ಅವರ ಇಷ್ಟಕ್ಕೆ ಒಪ್ಪಿಸಿದನು.
- Matthew 26:2 ಮತ್ತಾಯನು 26:2ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
- Matthew 27:15–26 ಮತ್ತಾಯನು 27:15–26ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯವನನ್ನು ಅಧಿಪತಿಯು ಬಿಟ್ಟುಬಿಡುವ ಪದ್ಧತಿ ಯಿತ್ತು. ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧನಾದ ಸೆರೆಯವನೊಬ್ಬನು ಅವರಲ್ಲಿ ಇದ್ದನು. ಆದದ ರಿಂದ ಅವರು ಕೂಡಿಬಂದಿದ್ದಾಗ ಪಿಲಾತನು ಅವರಿಗೆ--ನಿಮಗೆ ಯಾರನ್ನು ಬಿಟ್ಟುಕೊಡ ಬೇಕನ್ನುತ್ತೀರಿ? ಬರಬ್ಬನನ್ನೋ? ಇಲ್ಲವೆ ಕ್ರಿಸ್ತನನ್ನಿಸಿಕೊಳ್ಳುವ ಯೇಸು ವನ್ನೋ ಎಂದು ಕೇಳಿದನು. ಯಾಕಂದರೆ ಆತನನ್ನು ಅವರು ಹೊಟ್ಟೇಕಿಚ್ಚಿನಿಂದ ಹಿಡುಕೊಟ್ಟಿದ್ದಾರೆಂದು ಅವನಿಗೆ ಗೊತ್ತಿತ್ತು. ಅವನು ನ್ಯಾಯಾಸನದ ಮೇಲೆ ಕೂತಿದ್ದಾಗ ಅವನ ಹೆಂಡತಿಯು ಅವ ನಿಗೆ--ನೀನು ಆ ನೀತಿವಂತನ ಗೊಡವೆಗೆ ಹೋಗ ಬೇಡ; ಯಾಕಂದರೆ ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ ಎಂದು ಹೇಳಿಕಳುಹಿಸಿದಳು. ಆದರೆ ಪ್ರಧಾನ ಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸು ವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹ ವನ್ನು ಒಡಂಬಡಿಸಿದರು. ಅಧಿಪತಿಯು ಪ್ರತ್ಯುತ್ತರ ವಾಗಿ ಅವರಿಗೆ--ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕನ್ನುತ್ತೀರಿ ಅನ್ನಲು ಅವರು--ಬರಬ್ಬನನ್ನು ಅಂದರು. ಪಿಲಾತನು ಅವರಿಗೆ--ಹಾಗಾದರೆ ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ ಅನ್ನಲು ಅವರೆಲ್ಲರೂ--ಅವನನ್ನು ಶಿಲುಬೆಗೆ ಹಾಕಿಸು ಎಂದು ಅವನಿಗೆ ಹೇಳಿದರು. ಆಗ ಅಧಿಪತಿಯು--ಯಾಕೆ? ಆತನು ಕೆಟ್ಟದ್ದೇನು ಮಾಡಿ ದ್ದಾನೆ ಅಂದನು. ಆದರೆ ಅವರು--ಆತನನ್ನು ಶಿಲುಬೆಗೆ ಹಾಕಿಸು ಎಂದು ಹೆಚ್ಚಾಗಿ ಕೂಗಿಕೊಂಡರು. ಪಿಲಾ ತನು ತನ್ನ ಯತ್ನ ನಡೆಯಲಿಲ್ಲ, ಗದ್ದಲವೇ ಹೆಚ್ಚಾಗುತ್ತದೆ ಎಂದು ನೋಡಿ ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು--ಈ ನೀತಿವಂತನ ರಕ್ತಕ್ಕೆ ನಾನು ನಿರಪರಾಧಿ, ಅದನ್ನು ನೀವೇ ನೋಡಿಕೊಳ್ಳಿರಿ ಅಂದನು. ಅದಕ್ಕೆ ಜನರೆ ಲ್ಲರೂ ಪ್ರತ್ಯುತ್ತರವಾಗಿ--ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ ಅಂದರು. ಆಗ ಅವನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ ಶಿಲುಬೆಗೆ ಹಾಕುವಂತೆ ಒಪ್ಪಿಸಿದನು.
- John 19:16 ಯೋಹಾನನು 19:16ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವದಕ್ಕೆ ಅವರಿಗೆ ಒಪ್ಪಿಸಲಾಗಿ ಅವರು ಆತನನ್ನು ಸಾಗಿಸಿಕೊಂಡು ಹೋದರು.