Luke · chapter 4 · verse 31
Luke 4:31 in Kannada
ಆತನು ಗಲಿಲಾಯ ಪಟ್ಟಣವಾದ ಕಪೆ ರ್ನೌಮಿಗೆ ಬಂದು ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದನು.
Aatanu galilaaya pattanavaada kape rnaumige bandu sabbat dinagalalli avarige bodhisuttiddanu.
Luke 4:31 in English
- King James Version (KJV)
- And came down to Capernaum, a city of Galilee, and taught them on the sabbath days.
- World English Bible (WEB)
- He came down to Capernaum, a city of Galilee. He was teaching them on the Sabbath day,
- American Standard Version (ASV)
- And he came down to Capernaum, a city of Galilee. And he was teaching them on the sabbath day:
- Bible in Basic English (BBE)
- And he came down to Capernaum, a town of Galilee; and he was giving them teaching on the Sabbath.
- Darby Translation (DBY)
- and descended to Capernaum, a city of Galilee, and taught them on the sabbaths.
- Webster's Bible (WBS)
- And came down to Capernaum, a city of Galilee, and taught them on the sabbath-days.
- Young's Literal Translation (YLT)
- And he came down to Capernaum, a city of Galilee, and was teaching them on the sabbaths,
Read in context
- 29ಅವರು ಮೇಲಕ್ಕೆದ್ದು ಆತನನ್ನು ಪಟ್ಟಣದ ಹೊರಗೆ ದೂಡಿ ಕೊಂಡು ಹೋಗಿ ತಲೆ ಕೆಳಗೆ ಮಾಡಿ ದೊಬ್ಬಬೇಕೆಂದು ತಮ್ಮ ಪಟ್ಟಣವು ಕಟ್ಟಲ್ಪಟ್ಟಿದ್ದ ಬೆಟ್ಟದ ಕಡಿದಾದ ಸ್ಥಳಕ್ಕೆ ಆತನನ್ನು ನಡಿಸಿಕೊಂಡು ಹೋದರು.
- 30ಆದರೆ ಆತನು ಅವರ ಮಧ್ಯದಿಂದ ಹಾದು ಹೊರಟು ಹೋದನು.
- 31ಆತನು ಗಲಿಲಾಯ ಪಟ್ಟಣವಾದ ಕಪೆ ರ್ನೌಮಿಗೆ ಬಂದು ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದನು.
- 32ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
- 33ಆ ಸಭಾಮಂದಿರ ದಲ್ಲಿ ಅಶುದ್ಧ ದೆವ್ವ ಆತ್ಮವಿದ್ದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕೂಗುತ್ತಾ--
Cross references
- Mark 1:21–28 ಮಾರ್ಕನು 1:21–28ಆಗ ಅವರು ಕಪೆರ್ನೌಮಿಗೆ ಹೋದರು; ಕೂಡಲೆ ಆತನು ಸಬ್ಬತ್ ದಿನದಲ್ಲಿ ಸಭಾಮಂದಿರ ದೊಳಗೆ ಪ್ರವೇಶಿಸಿ ಬೋಧಿಸಿದನು. ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು. ಆಗ ಅವರ ಸಭಾಮಂದಿ ರದಲ್ಲಿ ಅಶುದ್ಧಾತ್ಮವಿದ್ದ ಒಬ್ಬ ಮನುಷ್ಯನಿದ್ದನು. ಅವನು--ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು. ಆಗ ಯೇಸು ಅವನನ್ನು ಗದರಿಸಿ--ಸುಮ್ಮನಿರು, ಅವನೊಳ ಗಿಂದ ಹೊರಗೆ ಬಾ ಅಂದನು. ಆಗ ಅಶುದ್ಧಾತ್ಮವು ಅವನನ್ನು ಒದ್ದಾಡಿಸಿದ ಮೇಲೆ ಮಹಾಶಬ್ದದಿಂದ ಕೂಗಿ ಅವನೊಳಗಿಂದ ಹೊರಗೆ ಬಂದಿತು. ಅದಕ್ಕೆ ಅವರೆಲ್ಲರೂ--ಇದು ಏನಾಗಿರಬಹುದು? ಈ ಹೊಸ ಬೋಧನೆ ಯಾವದು? ಯಾಕಂದರೆ ಆತನು ಅಶುದ್ಧಾತ್ಮಗಳಿಗೂ ಅಧಿಕಾರದಿಂದ ಅಪ್ಪಣೆಕೊಡು ತ್ತಾನೆ; ಅವು ಆತನಿಗೆ ವಿಧೇಯವಾಗುತ್ತವಲ್ಲಾ ಎಂದು ತಮ್ಮಲ್ಲಿ ತಾವೇ ಪ್ರಶ್ನಿಸಿಕೊಳ್ಳುವಷ್ಟು ವಿಸ್ಮಯಗೊಂಡರು. ಕೂಡಲೆ ಆತನ ಕೀರ್ತಿಯು ಗಲಿಲಾಯದ ಸುತ್ತಮುತ್ತಲಿನ ಎಲ್ಲಾ ಪ್ರದೇಶದಲ್ಲಿ ಹಬ್ಬಿತು.
- Matthew 4:13 ಮತ್ತಾಯನು 4:13ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್, ನೆಫ್ತಲೀಮ್ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು.
- Acts 17:1–3 ಅಪೊಸ್ತಲರ ಕೃತ್ಯಗಳು 17:1–3ಮುಂದೆ ಅವರು ಅಂಫಿಪೊಲಿ ಅಪೊ ಲೊನ್ಯಗಳನ್ನು ದಾಟಿ ಥೆಸಲೊನೀಕಕ್ಕೆ ಬಂದರು; ಅಲ್ಲಿ ಯೆಹೂದ್ಯರದೊಂದು ಸಭಾಮಂದಿರ ವಿತ್ತು. ಪೌಲನು ತನ್ನ ಪದ್ಧತಿಯ ಪ್ರಕಾರ ಅಲ್ಲಿದ್ದವರ ಬಳಿಗೆ ಹೋಗಿ ಮೂರು ಸಬ್ಬತ್ ದಿನಗಳಲ್ಲಿ ಬರಹಗಳಿಂದ ಅವರ ಸಂಗಡ ವಾದಿಸಿ ಕ್ರಿಸ್ತನು ಬಾಧೆಯನ್ನನುಭವಿಸಿ ಸತ್ತವರೊಳಗಿಂದ ತಿರಿಗಿ ಎದ್ದು ಬರುವದು ಅಗತ್ಯವೆಂತಲೂ--ನಾನು ನಿಮಗೆ ಪ್ರಸಿದ್ಧಿ ಪಡಿಸುವ ಈ ಯೇಸುವೇ ಕ್ರಿಸ್ತನೆಂತಲೂ ದೃಢವಾಗಿ ಹೇಳಿ ಸ್ಥಾಪಿಸಿದನು.
- Matthew 10:23 ಮತ್ತಾಯನು 10:23ಇದಲ್ಲದೆ ಈ ಪಟ್ಟಣದಲ್ಲಿ ಅವರು ನಿಮ್ಮನ್ನು ಹಿಂಸಿಸಿದರೆ ಮತ್ತೊಂದು ಪಟ್ಟಣಕ್ಕೆ ಓಡಿಹೋಗಿರಿ; ಯಾಕಂದರೆ-- ಮನುಷ್ಯ ಕುಮಾರನು ಬರುವದರೊಳಗಾಗಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವದಕ್ಕಾಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- Acts 14:6–7 ಅಪೊಸ್ತಲರ ಕೃತ್ಯಗಳು 14:6–7ಅಪೊಸ್ತಲರು ಅದನ್ನು ತಿಳಿದು ಲುಕವೋನ್ಯದಲ್ಲಿದ್ದ ಲುಸ್ತ್ರ ದೆರ್ಬೆ ಎಂಬ ಊರುಗಳಿಗೂ ಅವುಗಳ ಸುತ್ತಲಿರುವ ಸೀಮೆಗೂ ಓಡಿಹೋಗಿ ಅಲ್ಲಿ ಸುವಾರ್ತೆಯನ್ನು ಸಾರಿದರು.
- Acts 14:19–21 ಅಪೊಸ್ತಲರ ಕೃತ್ಯಗಳು 14:19–21ತರುವಾಯ ಅಂತಿಯೋಕ್ಯದಿಂದಲೂ ಇಕೋನ್ಯ ದಿಂದಲೂ ಕೆಲವು ಯೆಹೂದ್ಯರು ಅಲ್ಲಿಗೆ ಬಂದು ಜನರನ್ನು ಪ್ರೇರೇಪಿಸಿ ಪೌಲನ ಮೇಲೆ ಕಲ್ಲೆಸೆದು ಅವನು ಸತ್ತನೆಂದು ಭಾವಿಸಿ ಪಟ್ಟಣದ ಹೊರಕ್ಕೆ ಎಳೆದುಬಿಟ್ಟರು. ಆದಾಗ್ಯೂ ಶಿಷ್ಯರು ಅವನ ಸುತ್ತಲು ನಿಂತುಕೊಂಡಿರುವಾಗ ಅವನು ಎದ್ದು ಪಟ್ಟಣ ದೊಳಕ್ಕೆ ಬಂದನು. ಮರುದಿನ ಬಾರ್ನಬನ ಜೊತೆ ಯಲ್ಲಿ ದೆರ್ಬೆಗೆ ಹೊರಟನು. ಆ ಪಟ್ಟಣದವರಿಗೆ ಸುವಾರ್ತೆಯನ್ನು ಸಾರಿ ಅನೇಕರಿಗೆ ಬೋಧಿಸಿದ ಮೇಲೆ ಪುನಃ ಹಿಂತಿರುಗಿ ಲುಸ್ತ್ರಕ್ಕೂ ಇಕೋನ್ಯಕ್ಕೂ ಅಂತಿಯೋಕ್ಯಕ್ಕೂ ಬಂದು ಶಿಷ್ಯರ ಮನಸ್ಸುಗಳನ್ನು ದೃಢಪಡಿಸಿದರು.
- Acts 17:10–11 ಅಪೊಸ್ತಲರ ಕೃತ್ಯಗಳು 17:10–11ಕೂಡಲೆ ಸಹೊದರರು ರಾತ್ರಿಯಲ್ಲಿ ಪೌಲಸೀಲ ರನ್ನು ಬೆರೋಯಕ್ಕೆ ಕಳುಹಿಸಿಬಿಟ್ಟರು; ಅವರು ಅಲ್ಲಿಗೆ ಸೇರಿ ಯೆಹೂದ್ಯರ ಸಭಾಮಂದಿರದೊಳಕ್ಕೆ ಹೋದರು. ಅಲ್ಲಿಯವರು ಥೆಸಲೊನೀಕದವರಿಗಿಂತ ಸದ್ಗುಣ ವುಳ್ಳವರಾಗಿದ್ದು ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀ ಕರಿಸಿ ಇವರು ಹೇಳುವ ಮಾತುಗಳು ಹೌದೋ ಏನೋ ಎಂದು ಪ್ರತಿದಿನವೂ ಬರಹಗಳನ್ನು ಶೋಧಿ ಸುತ್ತಿದ್ದರು.
- Acts 20:1–2 ಅಪೊಸ್ತಲರ ಕೃತ್ಯಗಳು 20:1–2ಆ ಗದ್ದಲವು ನಿಂತ ತರುವಾಯ ಪೌಲನು ಶಿಷ್ಯರನ್ನು ತನ್ನ ಹತ್ತಿರಕ್ಕೆ ಕರೆದು ಅವರನ್ನು ಅಪ್ಪಿಕೊಂಡನು; ಇದಾದ ಮೇಲೆ ಅವನು ಮಕೆ ದೋನ್ಯಕ್ಕೆ ಹೋಗಲು ಹೊರಟನು. ಆ ಭಾಗಗಳಲ್ಲಿ ಸಂಚಾರ ಮಾಡಿ ಅಲ್ಲಿಯವರನ್ನು ಬಹಳವಾಗಿ ಪ್ರಬೋಧಿಸಿ ಗ್ರೀಸ್ಗೆ ಬಂದನು.
- Acts 20:23–24 ಅಪೊಸ್ತಲರ ಕೃತ್ಯಗಳು 20:23–24ಆದರೂ ಎಲ್ಲಾ ಪಟ್ಟಣಗಳಲ್ಲಿ ನನಗೆ ಬೇಡಿಗಳೂ ಸಂಕಟಗಳೂ ಕಾದುಕೊಂಡಿವೆ ಎಂದು ಪವಿತ್ರಾತ್ಮನು ಸಾಕ್ಷಿ ಕೊಡುವದನ್ನು ಮಾತ್ರ ಬಲ್ಲೆನು. ಆದಾಗ್ಯೂ ಇವುಗಳಲ್ಲಿ ಯಾವದೊಂದು ನನ್ನನ್ನು ಕದಲಿಸುವದಿಲ್ಲ; ಇಲ್ಲವೆ ನನ್ನ ಪ್ರಾಣವು ನನಗೆ ಪ್ರಿಯವಾದದ್ದೆಂದು ನಾನು ಎಣಿಸುವದಿಲ್ಲ; ಹೀಗೆ ದೇವರ ಕೃಪೆಯ ಸುವಾರ್ತೆಯನ್ನು ಸಾಕ್ಷಿಕರಿಸು ವದಕ್ಕಾಗಿ ನಾನು ಕರ್ತನಾದ ಯೇಸುವಿನಿಂದ ಹೊಂದಿದ ಸೇವೆಯೆಂಬ ಓಟವನ್ನು ಸಂತೋಷದಿಂದ ಕೊನೆಗಾಣಿಸುವ
- Acts 17:16–17 ಅಪೊಸ್ತಲರ ಕೃತ್ಯಗಳು 17:16–17ಪೌಲನು ಅವರಿಗೋಸ್ಕರ ಅಥೇನೆಯಲ್ಲಿ ಕಾದುಕೊಂಡಿರುವಾಗ ಆ ಪಟ್ಟಣವೆಲ್ಲಾ ವಿಗ್ರಹಾರಾ ಧನೆಯಿಂದ ತುಂಬಿರುವದನ್ನು ನೋಡಿ ಅವನ ಮನಸ್ಸು ಅವನೊಳಗೆ ಕುದಿಯಿತು. ಆದದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರ ಸಂಗಡಲೂ ಭಕ್ತಿವಂತರ ಸಂಗಡಲೂ ಪ್ರತಿದಿನ ಪೇಟೆಯಲ್ಲಿ ತನ್ನನ್ನು ಸಂಧಿಸಿದವರ ಸಂಗಡಲೂ ವಾದಿಸಿದನು.
- Luke 4:23 ಲೂಕನು 4:23ಆತನು ಅವರಿಗೆ--ವೈದ್ಯನೇ, ನಿನ್ನನ್ನು ನೀನೇ ವಾಸಿ ಮಾಡಿಕೋ ಎಂಬ ಈ ನಾನ್ನುಡಿಯನ್ನು ನೀವು ನನಗೆ ನಿಶ್ಚಯವಾಗಿ ಹೇಳಿ ಕಪೆರ್ನೌಮಿನಲ್ಲಿ ಯಾವದು ನಡೆಯಿತೆಂದು ನಾವು ಕೇಳಿದೆವೋ ಅದನ್ನು ಇಲ್ಲಿ ನಿನ್ನ ದೇಶದಲ್ಲಿಯೂ ಮಾಡು ಎಂದು ಹೇಳುವಿರಿ ಅಂದನು.