Luke · chapter 4 · verse 32
Luke 4:32 in Kannada
ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
Avaru aatana bodhanege aashcharyapattaru; yaakandare aatana vaakyavu adhikaaradinda koodiddaagittu.
Luke 4:32 in English
- King James Version (KJV)
- And they were astonished at his doctrine: for his word was with power.
- World English Bible (WEB)
- and they were astonished at his teaching, for his word was with authority.
- American Standard Version (ASV)
- and they were astonished at his teaching; for his word was with authority.
- Bible in Basic English (BBE)
- And they were surprised at his teaching, for his word was with authority.
- Darby Translation (DBY)
- And they were astonished at his doctrine, for his word was with authority.
- Webster's Bible (WBS)
- And they were astonished at his doctrine: for his word was with power.
- Young's Literal Translation (YLT)
- and they were astonished at his teaching, because his word was with authority.
Read in context
- 30ಆದರೆ ಆತನು ಅವರ ಮಧ್ಯದಿಂದ ಹಾದು ಹೊರಟು ಹೋದನು.
- 31ಆತನು ಗಲಿಲಾಯ ಪಟ್ಟಣವಾದ ಕಪೆ ರ್ನೌಮಿಗೆ ಬಂದು ಸಬ್ಬತ್ ದಿನಗಳಲ್ಲಿ ಅವರಿಗೆ ಬೋಧಿಸುತ್ತಿದ್ದನು.
- 32ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನ ವಾಕ್ಯವು ಅಧಿಕಾರದಿಂದ ಕೂಡಿದ್ದಾಗಿತ್ತು.
- 33ಆ ಸಭಾಮಂದಿರ ದಲ್ಲಿ ಅಶುದ್ಧ ದೆವ್ವ ಆತ್ಮವಿದ್ದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾಗಿ ಕೂಗುತ್ತಾ--
- 34ನಮ್ಮನ್ನು ಬಿಟ್ಟು ಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೆ ಯಾಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನು ಎಂದು ಹೇಳಿದನು.
Cross references
- Luke 4:36 ಲೂಕನು 4:36ಆಗ ಅವರೆ ಲ್ಲರೂ ಬೆರಗಾಗಿ--ಇದೆಂಥ ಮಾತಾಗಿದೆ! ಈತನು ಅಧಿಕಾರದಿಂದಲೂ ಬಲದಿಂದಲೂ ಅಶುದ್ಧಾತ್ಮಗಳಿಗೆ ಅಪ್ಪಣೆ ಕೊಡಲು ಅವು ಹೊರಗೆ ಬರುತ್ತವಲ್ಲಾ ಎಂದು ತಮ್ಮ ತಮ್ಮೊಳಗೆ ಮಾತನಾಡಿಕೊಂಡರು.
- Matthew 7:28–29 ಮತ್ತಾಯನು 7:28–29ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು. ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
- Hebrews 4:12–13 ಇಬ್ರಿಯರಿಗೆ 4:12–13ಯಾಕಂದರೆ ದೇವರ ವಾಕ್ಯವು ಸಜೀವ ವಾದದ್ದು, ಶಕ್ತಿಯುಳ್ಳದ್ದು, ಯಾವ ಇಬ್ಬಾಯಿ ಕತ್ತಿ ಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟರ ಮಟ್ಟಿಗೆ ತೂರಿ ಹೋಗುವಂಥದ್ದೂ ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದ್ದೂ ಆಗಿದೆ. ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲ ದ್ದಾಗಿಯೂ ಬೈಲಾದದ್ದಾಗಿಯೂ ಆದರೆ ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ.
- 2 Corinthians 10:4–5 2 ಕೊರಿಂಥದವರಿಗೆ 10:4–5(ನಾವು ಉಪಯೋಗಿಸುವ ಯುದ್ಧಾಯುಧಗಳು ಶರೀರ ಸಂಬಂಧವಾದ ಆಯುಧ ಗಳಲ್ಲ; ಅವು ದೇವರ ಮೂಲಕ ಬಲವಾಗಿದ್ದು ಬಲ ವಾದ ಕೋಟೆಗಳನ್ನು ಕೆಡವಿಹಾಕುವಂಥವುಗಳಾಗಿವೆ). ನಾವು ಊಹೆಗಳನ್ನು ದೇವಜ್ಞಾನವನ್ನೂ ವಿರೋಧಿ ಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದವುಗಳೆಲ್ಲವನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು
- 1 Thessalonians 1:5 1 ಥೆಸಲೊನೀಕದವರಿಗೆ 1:5ನಮ್ಮ ಸುವಾರ್ತೆಯು ನಿಮಗೆ ಬರೀ ಮಾತಾಗಿ ಬಾರದೆ ಶಕ್ತಿಯಲ್ಲಿಯೂ ಪವಿತ್ರಾತ್ಮ ದಲ್ಲಿಯೂ ಬಹು ನಿಶ್ಚಯತ್ವದಲ್ಲಿಯೂ ಬಂತೆಂಬದನ್ನು ತಿಳಿದಿದ್ದೇವೆ. ನಾವು ನಿಮ್ಮಲ್ಲಿದ್ದು ನಿಮಗೋಸ್ಕರ ಎಂಥವರಾಗಿ ವರ್ತಿಸಿದೆವೆಂಬದನ್ನು ನೀವೂ ತಿಳಿದಿ ದ್ದೀರಿ.
- Titus 2:15 ತೀತನಿಗೆ 2:15ಈ ಕಾರ್ಯಗಳ ವಿಷಯದಲ್ಲಿ ಮಾತನಾಡುತ್ತಾ ಎಚ್ಚರಿಸುತ್ತಾ ಪೂರ್ಣ ಅಧಿಕಾರದಿಂದ ಖಂಡಿಸುತ್ತಾ ಇರು. ಯಾರೂ ನಿನ್ನನ್ನು ತಿರಸ್ಕರಿಸದಿರಲಿ.
- John 6:63 ಯೋಹಾನನು 6:63ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ.
- 1 Corinthians 14:24–25 1 ಕೊರಿಂಥದವರಿಗೆ 14:24–25ಆದರೆ ಎಲ್ಲರೂ ಪ್ರವಾದಿಸುವಾಗ ಒಬ್ಬ ಅವಿಶ್ವಾಸಿ ಯಾಗಲಿ ಇಲ್ಲವೆ ತಿಳುವಳಿಕೆಯಿಲ್ಲದವನಾಗಲಿ ಒಳಗೆ ಬಂದರೆ ಅವನು ಎಲ್ಲರಿಂದ ಅರುಹು ಹೊಂದುತ್ತಾನೆ, ಎಲ್ಲರಿಂದ ಪರಿಶೋಧಿತನಾಗುತ್ತಾನೆ. ಹೀಗೆ ಅವನ ಹೃದಯದ ರಹಸ್ಯಗಳು ತೋರಿಬರುತ್ತವೆ; ಅವನು ಸಾಷ್ಟಾಂಗವೆರಗಿ ದೇವರನ್ನು ಆರಾಧಿಸಿ ನಿಜಕ್ಕೂ ನಿಮ್ಮಲ್ಲಿ ದೇವರಿದ್ದಾನೆಂದು ಹೇಳುವನು.
- Mark 1:22 ಮಾರ್ಕನು 1:22ಅವರು ಆತನ ಬೋಧನೆಗೆ ಆಶ್ಚರ್ಯಪಟ್ಟರು; ಯಾಕಂದರೆ ಆತನು ಶಾಸ್ತ್ರಿಗಳಂತೆ ಅಲ್ಲ, ಅಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
- 1 Corinthians 2:4–5 1 ಕೊರಿಂಥದವರಿಗೆ 2:4–5ನನ್ನ ಬೋಧನೆಯಲ್ಲಿಯೂ ಪ್ರಸಂಗದಲ್ಲಿಯೂ ಮನವೊಲಿಸುವ ಮನುಷ್ಯಜ್ಞಾನ ವಾಕ್ಯಗಳನ್ನು ನಾನು ಪ್ರಯೋಗಿಸದೆ ಆತ್ಮನ ಬಲವನ್ನು ತೋರ್ಪಡಿಸುವ ವಾಕ್ಯಗಳನ್ನೇ ಪ್ರಯೋಗಿಸಿದೆನು. ಹೀಗೆ ನಿಮ್ಮ ನಂಬಿಕೆಯು ಮನುಷ್ಯಜ್ಞಾನವನ್ನು ಆಧಾರ ಮಾಡಿಕೊಂಡಿರದೆ ದೇವರ ಶಕ್ತಿಯನ್ನೇ ಆಧಾರ ಮಾಡಿಕೊಂಡಿರಬೇಕು.
- Jeremiah 23:28–29 ಯೆರೆಮೀಯ 23:28–29ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ. ನನ್ನ ವಾಕ್ಯವು ಬೆಂಕಿಯ ಹಾಗಲ್ಲವೋ ಎಂದು ಕರ್ತನು ಅನ್ನುತ್ತಾನೆ. ಅದು ಬಂಡೆಯನ್ನು ತುಂಡು ಮಾಡುವ ಸುತ್ತಿಗೆಯ ಹಾಗಲ್ಲವೋ?
- 2 Corinthians 4:2 2 ಕೊರಿಂಥದವರಿಗೆ 4:2ಆದರೆ ನಾಚಿಕೆಗೆ ಕಾರಣ ವಾಗುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆಯೂ ವಂಚನೆಯಿಂದ ದೇವರ ವಾಕ್ಯವನ್ನು ಕೆಡಿಸದೆಯೂ ಸತ್ಯವನ್ನು ಪರಿಷ್ಕಾರವಾಗಿ ಬೋಧಿಸುತ್ತಾ ನಾವು ಯೋಗ್ಯರೆಂದು ಪ್ರತಿ ಮನುಷ್ಯನ ಮನಸ್ಸಾಕ್ಷಿಯು ದೇವರ ಮುಂದೆ ಒಪ್ಪಬೇಕಾದ ರೀತಿಯಲ್ಲಿ ನ