Matthew · chapter 5 · verse 42
Matthew 5:42 in Kannada
ನಿನ್ನನ್ನು ಕೇಳುವವನಿಗೆ ಕೊಡು; ಮತ್ತು ನಿನ್ನಿಂದ ಕಡಾ ತಕ್ಕೊಳ್ಳಬೇಕೆಂದಿರುವವನಿಂದ ನೀನು ತಿರುಗಿಕೊಳ್ಳಬೇಡ.
Ninnannu keluvavanige kodu; mattu ninninda kadaa takkollabekendiruvavaninda neenu tirugikollabeda.
Matthew 5:42 in English
- King James Version (KJV)
- Give to him that asketh thee, and from him that would borrow of thee turn not thou away.
- World English Bible (WEB)
- Give to him who asks you, and don’t turn away him who desires to borrow from you.
- American Standard Version (ASV)
- Give to him that asketh thee, and from him that would borrow of thee turn not thou away.
- Bible in Basic English (BBE)
- Give to him who comes with a request, and keep not your property from him who would for a time make use of it.
- Darby Translation (DBY)
- To him that asks of thee give, and from him that desires to borrow of thee turn not away.
- Webster's Bible (WBS)
- Give to him that asketh thee, and from him that would borrow of thee, turn not thou away.
- Young's Literal Translation (YLT)
- to him who is asking of thee be giving, and him who is willing to borrow from thee thou mayest not turn away.
Read in context
- 40ಯಾವನಾದರೂ ನಿನ್ನ ಸಂಗಡ ವ್ಯಾಜ್ಯವಾಡಿ ನಿನ್ನ ಮೇಲಂಗಿಯನ್ನು ತಕ್ಕೊಳ್ಳ ಬೇಕೆಂದಿದ್ದರೆ ಒಳಂಗಿಯನ್ನೂ ಕೊಟ್ಟುಬಿಡು.
- 41ಮತ್ತು ಯಾವನಾದರೂ ಒಂದು ಮೈಲು ಹೋಗುವಂತೆ ನಿನ್ನನ್ನು ಬಲವಂತ ಮಾಡಿದರೆ ಅವನೊಂದಿಗೆ ಎರಡು ಮೈಲು ಹೋಗು.
- 42ನಿನ್ನನ್ನು ಕೇಳುವವನಿಗೆ ಕೊಡು; ಮತ್ತು ನಿನ್ನಿಂದ ಕಡಾ ತಕ್ಕೊಳ್ಳಬೇಕೆಂದಿರುವವನಿಂದ ನೀನು ತಿರುಗಿಕೊಳ್ಳಬೇಡ.
- 43ನೀನು ನಿನ್ನ ನೆರೆಯವನನ್ನು ಪ್ರೀತಿಸಿ ನಿನ್ನ ವೈರಿಯನ್ನು ಹಗೆಮಾಡಬೇಕು ಎಂದು ಹೇಳಿರು ವದನ್ನು ನೀವು ಕೇಳಿದ್ದೀರಿ.
- 44ಆದರೆ ನಾನು ನಿಮಗೆ ಹೇಳುವದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ; ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ; ನಿಮ್ಮನ್ನು ನಿಂದಿಸುವವರಿಗಾಗಿಯೂ ಹಿಂಸಿಸುವವರಿಗಾಗಿಯೂ ಪ್ರಾರ್ಥಿಸಿರಿ.
Cross references
- Proverbs 19:17 ಜ್ಞಾನೋಕ್ತಿಗಳು 19:17ಬಡವರಿಗೆ ದಯೆತೋರಿಸು ವವನು. ಕರ್ತನಿಗೆ ಸಾಲ ಕೊಡುತ್ತಾನೆ; ಅವನು ಕೊಟ್ಟದ್ದನ್ನು ಆತನು ತಿರುಗಿ ಅವನಿಗೆ ಕೊಡುತ್ತಾನೆ.
- Hebrews 13:16 ಇಬ್ರಿಯರಿಗೆ 13:16ಇದಲ್ಲದೆ ಒಳ್ಳೆಯದನ್ನು ಮಾಡುವದನ್ನೂ ಉದಾರವಾಗಿ ಕೊಡುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.
- Luke 6:30–36 ಲೂಕನು 6:30–36ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ. ಜನರು ನಿಮಗೆ ಏನು ಮಾಡಬೇಕೆಂದು ನೀವು ಕೋರುತ್ತೀರೋ ನೀವು ಸಹ ಅವರಿಗೆ ಅದ ರಂತೆಯೇ ಮಾಡಿರಿ. ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವ ರನ್ನೇ ಪ್ರೀತಿಸುತ್ತಾರೆ. ನಿಮಗೆ ಒಳ್ಳೇದನ್ನು ಮಾಡು ವವರಿಗೆ ನೀವು ಒಳ್ಳೇದನ್ನು ಮಾಡಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಅದರಂತೆಯೇ ಮಾಡುತ್ತಾರೆ. ಯಾರಿಂದ ತಿರಿಗಿ ಪಡಕೊಳ್ಳಬೇಕೆಂದು ನಿರೀಕ್ಷಿಸುತ್ತಿರೋ ಅಂಥವರಿಗೆ ಸಾಲಕೊಟ್ಟರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟಷ್ಟು ತಿರಿಗಿ ಪಡೆಯುವಂತೆ ಪಾಪಿಗಳಿಗೆ ಸಾಲ ಕೊಡುತ್ತಾರೆ. ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ, ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರ ನೀವೂ ಕರುಣೆಯುಳ್ಳವರಾಗಿರ್ರಿ.
- 1 Timothy 6:17–19 1 ತಿಮೊಥೆಯನಿಗೆ 6:17–19ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು. ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥ ವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು.
- Psalm 112:5–9 ಕೀರ್ತನೆಗಳು 112:5–9ಒಳ್ಳೇಮನುಷ್ಯನು ದಯೆ ತೋರಿಸಿ ಸಾಲಕೊಡುತ್ತಾನೆ; ತನ್ನ ಕಾರ್ಯಗಳನ್ನು ನ್ಯಾಯದಿಂದ ನಡಿಸುವನು. ನಿಶ್ಚಯವಾಗಿ ಅವನು ಎಂದೆಂದಿಗೂ ಕದಲನು; ನೀತಿವಂತನು ನಿತ್ಯವಾಗಿ ಜ್ಞಾಪಕದಲ್ಲಿ ಇರುವನು. ಅವನು ಕೆಟ್ಟಸುದ್ದಿಗೆ ಭಯಪಡನು; ಅವನ ಹೃದಯವು ಕರ್ತನಲ್ಲಿ ಭರವಸವಿಟ್ಟು ಸ್ಥಿರವಾಗಿದೆ. ಅವನ ಹೃದಯವು ದೃಢವಾಗಿದೆ; ತನ್ನ ವೈರಿಗಳ ಮೇಲೆ ತನ್ನ ಇಷ್ಟವನ್ನು ನೋಡುವ ಮಟ್ಟಿಗೂ ಭಯಪಡನು. ಅವನು ಬಡವರಿಗೆ ಧಾರಾಳವಾಗಿ ಕೊಡುತ್ತಾನೆ; ಅವನ ನೀತಿ ಎಂದೆಂದಿಗೂ ನಿಲ್ಲು ತ್ತದೆ; ಅವನ ಕೊಂಬು ಘನದಿಂದ ಎತ್ತಲ್ಪಡುವದು.ದುಷ್ಟನು ನೋಡಿ ದುಃಖಪಡುವನು; ತನ್ನ ಹಲ್ಲು ಗಳನ್ನು ಕಡಿದು ಕರಗಿಹೋಗುವನು; ದುಷ್ಟರ ಆಶೆಯು ನಾಶವಾಗುವದು.
- Psalm 37:21 ಕೀರ್ತನೆಗಳು 37:21ದುಷ್ಟನು ಸಾಲಮಾಡಿ ತಿರಿಗಿ ಸಲ್ಲಿಸುವದಿಲ್ಲ; ನೀತಿವಂತನು ದಯಾಳುವಾಗಿ ಕೊಡುತ್ತಾನೆ.
- 1 John 3:16–18 1 ಯೋಹಾನನು 3:16–18ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. ಆದರೆ ಈ ಲೋಕದ ಸಂಪತ್ತುಳ್ಳ ಯಾವನಾದರೂ ಕೊರತೆಯಲ್ಲಿರುವ ತನ್ನ ಸಹೋದರನನ್ನು ನೋಡಿ ಕರುಣಿಸದೆ ಬಿಟ್ಟರೆ ದೇವರ ಪ್ರೀತಿಯು ಅವನಲ್ಲಿ ನೆಲೆಗೊಂಡಿರುವದು ಹೇಗೆ? ನನ್ನ ಚಿಕ್ಕ ಮಕ್ಕಳೇ, ನೀವು ಮಾತಿನಿಂದಾಗಲಿ ನಾಲಿಗೆಯಿಂದಾಗಲಿ ಪ್ರೀತಿಸುವವರಾಗಿರದೆ ಕ್ರಿಯೆಯಲ್ಲಿಯೂ ಸತ್ಯದ ಲ್ಲಿಯೂ ಪ್ರೀತಿಸುವವರಾಗಿರಬೇಕು.
- Deuteronomy 15:7–14 ಧರ್ಮೋಪದೇಶಕಾಂಡ 15:7–14ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ. ನಿನ್ನ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು; ಅವನಿಗೆ ಬೇಕಾಗುವದರಲ್ಲಿ ಬೇಕಾದಷ್ಟು ಸಾಲ ಅವನಿಗೆ ಕೊಡಬೇಕು. ಬಿಡುಗಡೆಯ ವರುಷ ವಾದ ಏಳನೇ ವರುಷವು ಸವಿಾಪವಾಯಿತೆಂಬ ದುಷ್ಟಾಲೋಚನೆ ನಿನ್ನ ಹೃದಯದಲ್ಲಿ ಹುಟ್ಟಿ ನಿನ್ನ ಬಡ ಸಹೋದರನ ಮೇಲೆ ನಿನ್ನ ಕಣ್ಣು ಕೆಟ್ಟದ್ದಾಗಿ ನೀನು ಅವನಿಗೆ ಏನೂ ಕೊಡದೆ ಇರುವದರಿಂದ ಅವನು ನಿನಗೆ ವಿರೋಧವಾಗಿ ಕರ್ತನಿಗೆ ಕೂಗುವಾಗ ನಿನ್ನಲ್ಲಿ ಪಾಪ ಉಂಟಾಗದ ಹಾಗೆ ನೋಡಿಕೋ. ಅವನಿಗೆ ಕೊಟ್ಟೇ ಕೊಡಬೇಕು; ಅವನಿಗೆ ಕೊಡುವಾಗ ನಿನ್ನ ಹೃದಯದಲ್ಲಿ ದುಃಖವಾಗಬಾರದು; ಯಾಕಂದರೆ ಇದಕ್ಕೋಸ್ಕರವೇ ನಿನ್ನ ದೇವರಾದ ಕರ್ತನು ನಿನ್ನನ್ನು ನಿನ್ನ ಎಲ್ಲಾ ಕೆಲಸಗಳಲ್ಲಿಯೂ ನೀನು ಕೈ ಹಾಕುವ ದೆಲ್ಲಾದರಲ್ಲಿಯೂ ಆಶೀರ್ವದಿಸುವನು. ಬಡವರು ದೇಶದಲ್ಲಿ ಇಲ್ಲದೆ ಹೋಗುವದಿಲ್ಲ: ಆದದರಿಂದನಿನ್ನ ಸಹೋದರನಿಗೂ ದರಿದ್ರನಿಗೂ ಬಡವನಿಗೂ ದೇಶದಲ್ಲಿ ನಿನ್ನ ಕೈಯನ್ನು ವಿಶಾಲವಾಗಿ ತೆರೆಯ ಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ. ನಿನ್ನ ಸಹೋದರನಾದ ಇಬ್ರಿಯನಾಗಲಿ ಒಬ್ಬ ಇಬ್ರಿಯ ಸ್ತ್ರೀಯಾಗಲಿ ನಿನಗೆ ಮಾರಲ್ಪಟ್ಟು ಆರು ವರುಷ ನಿನಗೆ ಸೇವೆಮಾಡಿದ್ದರೆ ಏಳನೇ ವರುಷದಲ್ಲಿ ಅವನನ್ನು ಬಿಡುಗಡೆಮಾಡಿ ಕಳುಹಿಸಬೇಕು. ಅವ ನನ್ನು ಬಿಡುಗಡೆಮಾಡಿ ನಿನ್ನಿಂದ ಕಳುಹಿಸುವಾಗ ಬರೀ ಕೈಯಾಗಿ ಕಳುಹಿಸಿಬಿಡಬೇಡ. ನಿನ್ನ ಕುರಿಮಂದೆ ಯಿಂದಲೂ ಕಣದಿಂದಲೂ ಆಲೆಯಿಂದಲೂ ಅವನಿಗೆ ಧಾರಾಳವಾಗಿ ಕೊಡಬೇಕು; ನಿನ್ನ ದೇವರಾದ ಕರ್ತನು ನಿನಗೆ ಆಶೀರ್ವಾದವಾಗಿ ಕೊಟ್ಟದ್ದರಲ್ಲಿ ಅವನಿಗೆ ಕೊಡಬೇಕು.
- Romans 12:20 ರೋಮಾಪುರದವರಿಗೆ 12:20ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡುವದರಿಂದ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು.ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.
- 2 Corinthians 9:6–15 2 ಕೊರಿಂಥದವರಿಗೆ 9:6–15ಆದರೆ--ಸ್ವಲ್ಪವಾಗಿ ಬಿತ್ತುವವನು (ಪೈರನ್ನು) ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿಯೇ ಕೊಯ್ಯುವನು ಎಂದು ನಾನು ಹೇಳು ತ್ತೇನೆ. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿ ಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನನ್ನು ದೇವರು ಪ್ರೀತಿ ಮಾಡುತ್ತಾನೆ. ದೇವರು ಸಕಲ ವಿಧವಾದ ಕೃಪೆಯನ್ನು ನಿಮಗೆ ಧಾರಾಳವಾಗಿ ಅನುಗ್ರಹಿಸುವದಕ್ಕೆ ಶಕ್ತನಾದ್ದರಿಂದ ನೀವು ಯಾವಾ ಗಲೂ ಎಲ್ಲಾ ವಿಷಯಗಳಲ್ಲಿ ಪರಿಪೂರ್ಣತೆ ಯುಳ್ಳವರಾಗಿ ಸಕಲಸತ್ಕಾರ್ಯಗಳನ್ನು ಹೇರಳವಾಗಿ ಮಾಡುವವರಾಗಿರುವಿರಿ. (ಬರೆದಿರುವ ಪ್ರಕಾರ--ಆತನು ಬಡವರಿಗೆ ಧಾರಾಳವಾಗಿ ಹಂಚಿಕೊಟ್ಟನು; ಆತನ ನೀತಿಯು ಸದಾಕಾಲವೂ ಇರುವದು ಎಂಬದೇ. ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರ ವನ್ನೂ ಕೊಡುವಾತನು ನಿಮಗೂ ಬಿತ್ತುವದಕ್ಕೆ ಬೀಜವನ್ನು ಕೊಟ್ಟು ಹೆಚ್ಚಿಸಿ ನಿಮ್ಮ ನೀತಿಯಿಂದಾದ ಕಾರ್ಯಗಳ ಫಲಗಳನ್ನು ವೃದ್ಧಿಪಡಿಸುವನು.) ಹೀಗೆ ನೀವು ಎಲ್ಲಾ ವಿಷಯಗಳಲ್ಲಿ ಐಶ್ವರ್ಯವಂತರಾಗಿದ್ದು ಉದಾರವಾಗಿ ಕೊಡಲು ಶಕ್ತರಾಗುವಿರಿ; ಅದು ನಮ್ಮ ಮೂಲಕ ದೇವರಿಗೆ ಕೃತಜ್ಞತಾಸ್ತುತಿಯನ್ನುಂಟು ಮಾಡುವದು. ಹೇಗಂದರೆ ಈ ನಿಮ್ಮ ಸೇವೆಯ ಪರಿಚರ್ಯವು ಪರಿಶುದ್ಧರ ಕೊರತೆಗಳನ್ನು ನೀಗು ವದು ಮಾತ್ರವಲ್ಲದೆ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿಯನ್ನು ಹುಟ್ಟಿಸುವದು. ಈ ಸಹಾಯ ದಿಂದ ತೋರಿಬಂದ ನಿಮ್ಮ ಯೋಗ್ಯ ಭಾವವನ್ನು ಅವರು ನೋಡುವಾಗ ನೀವು ಕ್ರಿಸ್ತನ ಸುವಾರ್ತೆಗೆ ವಿಧೇಯರಾದದ್ದರಿಂದಲೂ ತಮಗೂ ಎಲ್ಲರಿಗೂ ನೀವು ಉದಾರವಾಗಿ ಸಹಾಯ ಮಾಡಿದ್ದರಿಂದಲೂ ದೇವರನ್ನು ಕೊಂಡಾಡುವರು. ಇದಲ್ಲದೆ ನಿಮ್ಮಲ್ಲಿ ರುವ ದೇವರ ಅಪಾರವಾದ ಕೃಪೆಯ ನಿಮಿತ್ತ ಅವರು ಪ್ರಾರ್ಥನೆ ಮಾಡುವವರಾಗಿ ನಿಮಗೋಸ್ಕರ ಹಂಬಲಿ ಸುತ್ತಾರೆ.ವರ್ಣಿಸಲಶಕ್ಯವಾದ ದೇವರದಾನಕ್ಕಾಗಿ ಆತನಿಗೆ ಸ್ತೋತ್ರವಾಗಲಿ. ವರ್ಣಿಸಲಶಕ್ಯವಾದ ದೇವರದಾನಕ್ಕಾಗಿ ಆತನಿಗೆ ಸ್ತೋತ್ರವಾಗಲಿ.
- Proverbs 3:27–28 ಜ್ಞಾನೋಕ್ತಿಗಳು 3:27–28ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ. ಕೊಡತಕ್ಕದ್ದು ನಿನ್ನಲ್ಲಿರುವಾಗ--ಹೋಗಿ ಬಾ, ನಾಳೆ ನಿನಗೆ ಕೊಡು ವೆನು ಎಂದು ನಿನ್ನ ನೆರೆಯವನಿಗೆ ಹೇಳಬೇಡ.
- Matthew 25:35–40 ಮತ್ತಾಯನು 25:35–40ಯಾಕಂದರೆ ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ; ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವದಕ್ಕೆ ಕೊಟ್ಟಿರಿ; ನಾನು ಪರದೇಶಿಯಾಗಿ ದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಂಡಿರಿ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿ ದಿರಿ; ನಾನು ಅಸ್ವಸ್ಥನಾಗಿದ್ದೆನು; ನೀವು ನನ್ನನ್ನು ಸಂಧಿಸಿ ದಿರಿ; ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ ಎಂದು ಹೇಳುವನು. ಆಗ ಆ ನೀತಿವಂತರು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ಯಾವಾಗ ನೀನು ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿ ದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವದಕ್ಕೆ ಕೊಟ್ಟೆವು? ಯಾವಾಗ ನೀನು ಪರದೇಶಿಯಾ ಗಿರುವದನ್ನು ನಾವು ನೋಡಿ ನಿನ್ನನ್ನು ಒಳಕ್ಕೆ ಸೇರಿಸಿ ಕೊಂಡೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು? ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನನ್ನು ನೋಡಿ ನಿನ್ನ ಬಳಿಗೆ ಬಂದೆವು ಎಂದು ಹೇಳುವರು. ಅದಕ್ಕೆ ಅರಸನು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜವಾಗಿ ಹೇಳುತ್ತೇನೆ--ನೀವು ಈ ನನ್ನ ಸಹೋದರ ರಲ್ಲಿ ಅತ್ಯಲ್ಪನಾದವನೊಬ್ಬನಿಗೆ ಮಾಡಿದ್ದು ನನಗೂ ಮಾಡಿದಂತಾಯಿತು ಅಂದನು.