Luke · chapter 7 · verse 23
Luke 7:23 in Kannada
ನನ್ನ ವಿಷಯದಲ್ಲಿ ಸಂದೇಹಪಡದವನೇ ಧನ್ಯನು ಅಂದನು.
Nanna vishayadalli sandehapadadavane dhanyanu andanu.
Luke 7:23 in English
- King James Version (KJV)
- And blessed is [he], whosoever shall not be offended in me.
- World English Bible (WEB)
- Blessed is he who finds no occasion for stumbling in me.”
- American Standard Version (ASV)
- And blessed is he, whosoever shall find no occasion of stumbling in me.
- Bible in Basic English (BBE)
- And a blessing will be on him who has no doubts about me.
- Darby Translation (DBY)
- and blessed is whosoever shall not be offended in me.
- Webster's Bible (WBS)
- And blessed is [he] , to whom I shall not be a stumbling block.
- Young's Literal Translation (YLT)
- and happy is he whoever may not be stumbled in me.'
Read in context
- 21ಅದೇಗಳಿಗೆಯಲ್ಲಿ ರೋಗ ಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಆತನು ಗುಣಪಡಿಸಿದನು; ಕುರುಡರಾದ ಅನೇಕರಿಗೆ ದೃಷ್ಟಿಕೊಟ್ಟನು.
- 22ತರು ವಾಯ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕುರು ಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠ ರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತದೆ ಎಂದು ನೀವು ಕಂಡು ಕೇಳಿದ ಇವು ಗಳನ್ನು
- 23ನನ್ನ ವಿಷಯದಲ್ಲಿ ಸಂದೇಹಪಡದವನೇ ಧನ್ಯನು ಅಂದನು.
- 24ಯೋಹಾನನ ದೂತರು ಹೊರಟು ಹೋದ ಮೇಲೆ ಆತನು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ--ನೀವು ಯಾವದನ್ನು ನೋಡುವದಕ್ಕಾಗಿ ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ?
- 25ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಇಗೋ, ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯ ಮಾನವಾದ ಉಡುಪುಗಳನ್ನು ಧರಿಸಿಕೊಂಡು ಸುಖ ವಾಗಿ ಜೀವಿಸುವವರು ರಾಜರ ಓಲಗಗಳಲ್ಲಿ ಇರುತ್ತಾರೆ.
Cross references
- 1 Peter 2:7–8 1 ಪೇತ್ರನು 2:7–8ಆದದರಿಂದ ನಂಬುವವರಾದ ನಿಮಗೆ ಆತನು ಅಮೂಲ್ಯನಾಗಿದ್ದಾನೆ. ಅವಿಧೇಯರಿಗಾ ದರೋ ಮನೆಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಅದು ಎಡವುವ ಕಲ್ಲೂ ಮುಗ್ಗರಿಸುವ ಬಂಡೆಯೂ ಆಗಿದೆ; ಅವರು ವಾಕ್ಯಕ್ಕೆ ಅವಿಧೇಯರಾದದರಿಂದ ಆ ಕಲ್ಲನ್ನು ಎಡವಿ ಬೀಳುತ್ತಾರೆ. ಅದಕ್ಕಾಗಿಯೇ ಅವರು ನೇಮಕವಾದರು.
- Isaiah 8:14–15 ಯೆಶಾಯ 8:14–15ಆತನೇ ಪರಿಶುದ್ಧ ಸ್ಥಾನವಾಗಿರುವನು; ಆದರೆ ಇಸ್ರಾಯೇಲಿನ ಎರಡು ಮನೆಗಳಿಗೆ ಎಡವುವ ಕಲ್ಲು, ಮುಗ್ಗರಿಸುವ ಬಂಡೆಯು ಮತ್ತು ಯೆರೂ ಸಲೇಮಿನ ನಿವಾಸಿಗಳಿಗೆ ಬಲೆಯೂ ಬೋನೂ ಆಗಿರುವನು. ಅವರಲ್ಲಿ ಅನೇಕರು ಎಡವಿಬಿದ್ದು, ಹೊಡೆಯಲ್ಪಟ್ಟು ಬಲೆಗೆ ಸಿಕ್ಕಿ ಬೀಳುವರು.
- Matthew 11:6 ಮತ್ತಾಯನು 11:6ನನ್ನ ವಿಷಯವಾಗಿ ಸಂಶಯಪಡದವನೇ ಧನ್ಯನು ಅಂದನು.
- Romans 9:32–33 ರೋಮಾಪುರದವರಿಗೆ 9:32–33ಅದಕ್ಕೆ ಕಾರಣವೇನು? ಅವರು ನಂಬಿಕೆಯನ್ನು ಆಧಾರಮಾಡಿಕೊಳ್ಳದೆ ನ್ಯಾಯ ಪ್ರಮಾಣದ ಕ್ರಿಯೆಗಳನ್ನು ಆಧಾರಮಾಡಿಕೊಂಡದ್ದೇ ಕಾರಣ.ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ. ಇಗೋ, ನಾನು ಚೀಯೋನಿನಲ್ಲಿ ಎಡವುವ ಕಲ್ಲನ್ನೂ ಮುಗ್ಗರಿಸುವ ಬಂಡೆಯನ್ನೂ ಇಡುತ್ತೇ ನೆಂತಲೂ ಅದರ ಮೇಲೆ ನಂಬಿಕೆಯಿಡುವವನು ಆಶಾ ಭಂಗಪಡುವದಿಲ್ಲವೆಂತಲೂ ಬರೆದಿರುವ ಪ್ರಕಾರ ಆ ಎಡವುವ ಕಲ್ಲಿಗೆ ಅವರು ಎಡವಿಬಿದ್ದರು ಎಂಬದೇ.
- Matthew 13:57–58 ಮತ್ತಾಯನು 13:57–58ಅವರು ಆತನ ವಿಷಯದಲ್ಲಿ ಅಭ್ಯಂತರ ಪಟ್ಟರು. ಆದರೆ ಯೇಸು ಅವರಿಗೆ--ಪ್ರವಾದಿಗೆ ಮತ್ತೆಲ್ಲಿಯಾದರೂ ಸನ್ಮಾನವಿದೆ, ಆದರೆ ತನ್ನ ಸ್ವಂತ ದೇಶದಲ್ಲಿ ತನ್ನ ಸ್ವಂತ ಮನೆಯಲ್ಲಿ ಮಾತ್ರ ಇಲ್ಲ ಅಂದನು.ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ. ಆತನು ಅವರ ಅಪನಂಬಿಕೆಯ ದೆಸೆ ಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ನಡಿಸಲಿಲ್ಲ.
- 1 Corinthians 1:21–28 1 ಕೊರಿಂಥದವರಿಗೆ 1:21–28ಯಾಕಂದರೆ ದೇವರ ಜ್ಞಾನದಲ್ಲಿ ಲೋಕವು(ತನ್ನ) ಜ್ಞಾನದ ಮೂಲಕ ದೇವರನ್ನು ತಿಳಿದುಕೊಳ್ಳಲಿಲ್ಲವಾದ ದರಿಂದ ಪ್ರಸಂಗದ ಹುಚ್ಚುತನದಿಂದಲೇ ನಂಬುವ ವರನ್ನು ರಕ್ಷಿಸುವದು ದೇವರಿಗೆ ಇಷ್ಟವಾಗಿತ್ತು. ಯೆಹೂದ್ಯರು ಸೂಚಕಕಾರ್ಯವನ್ನು ಕೇಳುತ್ತಾರೆ; ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಶಿಲುಬೆಗೆ ಹಾಕಲ್ಪಟ್ಟವನಾದ ಕ್ರಿಸ್ತನನ್ನು ಪ್ರಚುರ ಪಡಿಸುತ್ತೇವೆ. ಆತನು ಯೆಹೂದ್ಯರಿಗೆ ಅಭ್ಯಂತರವೂ ಗ್ರೀಕರಿಗೆ ಹುಚ್ಚುತನವೂ ಆಗಿದ್ದಾನೆ. ಆದರೆ ಕರೆಯಲ್ಪಟ್ಟ ಯೆಹೂದ್ಯರಿಗೂ ಗ್ರೀಕರಿಗೂ ಕ್ರಿಸ್ತನೇ ದೇವರ ಶಕ್ತಿಯೂ ದೇವರ ಜ್ಞಾನವೂ ಆಗಿದ್ದಾನೆ. ದೇವರ ಹುಚ್ಚುತನವು ಮನುಷ್ಯರಿಗಿಂತಲೂ ಜ್ಞಾನವುಳ್ಳದ್ದಾಗಿದೆ. ದೇವರ ಬಲಹೀನತೆಯು ಮನುಷ್ಯರಿಗಿಂತಲೂ ಬಲವುಳ್ಳದ್ದಾಗಿದೆ. ಸಹೋದರರೇ, ದೇವರು ನಿಮ್ಮನ್ನು ಕರೆದಾಗ ಎಂಥವರನ್ನು ಕರೆದನೆಂದು ಆಲೋಚಿಸಿರಿ; ನಿಮ್ಮೊಳಗೆ ಲೌಕಿಕದೃಷ್ಟಿಯಲ್ಲಿ ಜ್ಞಾನಿಗಳೂ ಅನೇಕರಿಲ್ಲ, ಬಲಿಷ್ಠರೂ ಅನೇಕರಿಲ್ಲ, ಕುಲೀನರೂ ಅನೇಕರಿಲ್ಲ. ಆದರೆ ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಇದಲ್ಲದೆ ದೇವರು ಇರುವವುಗಳನ್ನು ಇಲ್ಲದಂತಾಗಿ ಮಾಡುವ ಹಾಗೆ ಈ ಲೋಕದ ಹೀನವಾದವರನ್ನೂ ಅಸಡ್ಡೆಯಾದವರನ್ನೂ ಆರಿಸಿಕೊಂಡದ್ದಲ್ಲದೆ ಗಣನೆಗೆ ಬಾರದವರನ್ನೂ ಆರಿಸಿಕೊಂಡಿದ್ದಾನೆ.
- Luke 2:34 ಲೂಕನು 2:34ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು.
- John 6:60–66 ಯೋಹಾನನು 6:60–66ಆದದರಿಂದ ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ--ಇದು ಕಠಿಣವಾದ ಮಾತು; ಇದನ್ನು ಯಾರು ಕೇಳಾರು ಅಂದರು. ತನ್ನ ಶಿಷ್ಯರೂ ಇದಕ್ಕೆ ಗುಣು ಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ--ಇದು ನಿಮಗೆ ಅಭ್ಯಂತರವಾಯಿತೋ? ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ. ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು. ಆತನು--ನನ್ನ ತಂದೆಯಿಂದ ಒಬ್ಬನಿಗೆ ಕೊಡಲ್ಪಟ್ಟ ಹೊರತು ಯಾವನೂ ನನ್ನ ಬಳಿಗೆ ಬರ ಲಾರನು; ಇದಕ್ಕೋಸ್ಕರವೇ ನಾನು ನಿಮಗೆ ಹೇಳಿದೆನು ಅಂದನು. ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ.
- 1 Corinthians 2:14 1 ಕೊರಿಂಥದವರಿಗೆ 2:14ಪ್ರಾಕೃತ ಮನುಷ್ಯನು ದೇವರಾತ್ಮನ ವಿಷಯಗಳನ್ನು ಅಂಗೀಕರಿಸುವದಿಲ್ಲ; ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ; ಇಲ್ಲವೆ ಅವು ಆತ್ಮವಿಚಾರದಿಂದ ತಿಳಿಯತಕ್ಕವುಗಳಾಗಿರಲಾಗಿ ಅವನು ಅವುಗಳನ್ನು ಗ್ರಹಿಸ ಲಾರನು.