Luke · chapter 9 · verse 29
Luke 9:29 in Kannada
ಆತನು ಪ್ರಾರ್ಥನೆ ಮಾಡುತ್ತಿದ್ದಾಗ ಆತನ ಮುಖ ಭಾವವು ಬದಲಾಯಿತು; ಉಡುಪು ಬೆಳ್ಳಗಾಗಿ ಪ್ರಕಾಶಮಾನವಾಯಿತು.
Aatanu praarthane maaduttiddaaga aatana mukha bhaavavu badalaayitu; udupu bellagaagi prakaashamaanavaayitu.
Luke 9:29 in English
- King James Version (KJV)
- And as he prayed, the fashion of his countenance was altered, and his raiment [was] white [and] glistering.
- World English Bible (WEB)
- As he was praying, the appearance of his face was altered, and his clothing became white and dazzling.
- American Standard Version (ASV)
- And as he was praying, the fashion of his countenance was altered, and his raiment [became] white [and] dazzling.
- Bible in Basic English (BBE)
- And while he was in prayer, his face was changed and his clothing became white and shining.
- Darby Translation (DBY)
- And as he prayed the fashion of his countenance became different and his raiment white [and] effulgent.
- Webster's Bible (WBS)
- And as he prayed, the fashion of his countenance was altered, and his raiment [was] white [and] glistening.
- Young's Literal Translation (YLT)
- and it came to pass, in his praying, the appearance of his face became altered, and his garment white — sparkling.
Read in context
- 27ಆದರೆ ನಾನು ನಿಮಗೆ ಸತ್ಯವಾಗಿ ಹೇಳು ತ್ತೇನೆ, ಇಲ್ಲಿ ನಿಂತುಕೊಂಡಿರುವ ಕೆಲವರು ದೇವರ ರಾಜ್ಯವನ್ನು ನೋಡುವ ತನಕ ಮರಣವನ್ನು ರುಚಿಸುವದೇ ಇಲ್ಲ ಅಂದನು.
- 28ಈ ಮಾತುಗಳನ್ನು ಹೇಳಿ ಸುಮಾರು ಎಂಟು ದಿನಗಳಾದ ಮೇಲೆ ಆದದ್ದೇನಂದರೆ, ಆತನು ಪೇತ್ರ ಯೋಹಾನ ಮತ್ತು ಯಾಕೋಬರನ್ನು ಕರಕೊಂಡು ಪ್ರಾರ್ಥನೆ ಮಾಡುವದಕ್ಕಾಗಿ ಬೆಟ್ಟವನ್ನೇರಿದನು.
- 29ಆತನು ಪ್ರಾರ್ಥನೆ ಮಾಡುತ್ತಿದ್ದಾಗ ಆತನ ಮುಖ ಭಾವವು ಬದಲಾಯಿತು; ಉಡುಪು ಬೆಳ್ಳಗಾಗಿ ಪ್ರಕಾಶಮಾನವಾಯಿತು.
- 30ಇಗೋ, ಮೋಶೆ ಮತ್ತು ಎಲೀಯ ಎಂಬ ಇಬ್ಬರು ಪುರುಷರು ಆತನೊಂದಿಗೆ ಮಾತನಾಡುತ್ತಿದ್ದರು.
- 31ಇವರು ಮಹಿಮೆಯಲ್ಲಿ ಕಾಣಿಸಿಕೊಂಡು ಆತನು ಯೆರೂಸ ಲೇಮಿನಲ್ಲಿ ಪೂರೈಸುವದಕ್ಕಿದ್ದ ಆತನ ಮರಣದ ವಿಷಯವಾಗಿ ಮಾತನಾಡುತ್ತಿದ್ದರು.
Cross references
- Matthew 17:2 ಮತ್ತಾಯನು 17:2ಅಲ್ಲಿ ಆತನು ಅವರ ಮುಂದೆ ರೂಪಾಂತರ ಗೊಂಡನು. ಆತನ ಮುಖವು ಸೂರ್ಯನಂತೆ ಪ್ರಕಾಶಿಸಿತು; ಮತ್ತು ಆತನ ಉಡುಪು ಬೆಳಕಿನಂತೆ ಬೆಳ್ಳಗಿತ್ತು.
- Mark 9:2–3 ಮಾರ್ಕನು 9:2–3ಯೇಸು ಆರು ದಿವಸಗಳಾದ ಮೇಲೆ ಪೇತ್ರ ಯಾಕೋಬ ಮತ್ತು ಯೋಹಾನರನ್ನು ತನ್ನೊಂದಿಗೆ ಕರೆದುಕೊಂಡು ಏಕಾಂತವಾಗಿ ಒಂದು ಎತ್ತರವಾದ ಬೆಟ್ಟಕ್ಕೆ ಹೋದನು; ಆಗ ಆತನು ಅವರ ಮುಂದೆ ರೂಪಾಂತರಗೊಂಡನು. ಮತ್ತು ಆತನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷು ಹಿಮದಂತೆ ಹೆಚ್ಚು ಬೆಳ್ಳಗಾಗಿ ಹೊಳೆಯುತ್ತಿತ್ತು.
- 2 Peter 1:16–18 2 ಪೇತ್ರನು 1:16–18ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಆತನ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿ ಸುವವರಾಗಿರಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವ ರಾಗಿಯೇ ತಿಳಿಯಪಡಿಸಿದೆವು. ಈತನು ಪ್ರಿಯನಾಗಿ ರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ ಎಂಬ ಧ್ವನಿಯು ಘನವಾದ ಪ್ರಭಾವದಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ ಮಹಿಮೆಯನ್ನು ಹೊಂದಿದನಲ್ಲವೇ. ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಆಕಾಶದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.
- Exodus 34:29–35 ವಿಮೋಚನಕಾಂಡ 34:29–35ಮೋಶೆಯು ಸಾಕ್ಷಿಯ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ಹಿಡುಕೊಂಡು ಸೀನಾಯಿ ಬೆಟ್ಟದಿಂದ ಇಳಿದಾಗ ಅವನು ದೇವರ ಸಂಗಡ (ಬೆಟ್ಟದಲ್ಲಿ) ಮಾತನಾಡಿದ್ದರಿಂದ ಅವನ ಮುಖವು ಪ್ರಕಾಶಿ ಸುತ್ತಿದೆ ಎಂದು ಮೋಶೆಗೆ ತಿಳಿಯಲಿಲ್ಲ. ಆದರೆ ಆರೋನನೂ ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆ ಯನ್ನು ನೋಡಿದಾಗ ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದದರಿಂದ ಅವರು ಅವನ ಹತ್ತಿರ ಬರುವದಕ್ಕೆ ಭಯಪಟ್ಟರು. ಮೋಶೆಯು ಅವರನ್ನು ಕರೆದಾಗ ಆರೋನನೂ ಸಭೆಯ ಮುಖ್ಯಸ್ಥರೆಲ್ಲರೂ ಅವನ ಬಳಿಗೆ ತಿರಿಗಿ ಬಂದರು. ಮೋಶೆಯು ಅವರ ಸಂಗಡ ಮಾತನಾಡಿದನು. ತರುವಾಯ ಇಸ್ರಾ ಯೇಲ್ ಮಕ್ಕಳೆಲ್ಲರೂ ಹತ್ತಿರ ಬಂದರು. ಅವನು ತನಗೆ ಕರ್ತನು ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳ ನ್ನೆಲ್ಲಾ ಅವರಿಗೆ ಆಜ್ಞಾಪಿಸಿ ಹೇಳಿದನು. ಮೋಶೆಯು ಅವರ ಸಂಗಡ ಮಾತನಾಡಿ ಮುಗಿಸುವ ವರೆಗೂ ಅವನು ತನ್ನ ಮುಖದ ಮೇಲೆ ಮುಸುಕು ಹಾಕಿ ಕೊಂಡನು. ಆದರೆ ಮೋಶೆಯು ಕರ್ತನ ಸನ್ನಿಧಿಯಲ್ಲಿ ಆತನ ಸಂಗಡ ಮಾತನಾಡಲು ಒಳಗೆ ಪ್ರವೇಶಿಸಿ ಹೊರಗೆ ಬರುವ ವರೆಗೆ ಆ ಮುಸುಕನ್ನು ತೆಗೆದಿಡುತ್ತಿ ದ್ದನು. ಅವನು ಹೊರಗೆ ಬಂದು ತನಗೆ ಆಜ್ಞಾಪಿಸಿದ್ದನ್ನು ಇಸ್ರಾಯೇಲ್ ಮಕ್ಕಳಿಗೆ ತಿಳಿಸುವನು.ಮೋಶೆಯ ಮುಖವು ಪ್ರಕಾಶಿಸುವದನ್ನು ಇಸ್ರಾಯೇಲ್ ಮಕ್ಕಳು ನೋಡುತ್ತಿದ್ದರು. ಮೋಶೆಯು ದೇವರ ಸಂಗಡ ಮಾತ ನಾಡುವದಕ್ಕೆ ತಿರಿಗಿ ಹೋಗುವ ವರೆಗೆ ಅವನು ತನ್ನ ಮುಖದ ಮೇಲೆ ತಿರಿಗಿ ಮುಸುಕನ್ನು ಹಾಕಿ ಕೊಳ್ಳುತ್ತಿದ್ದನು. ಮೋಶೆಯ ಮುಖವು ಪ್ರಕಾಶಿಸುವದನ್ನು ಇಸ್ರಾಯೇಲ್ ಮಕ್ಕಳು ನೋಡುತ್ತಿದ್ದರು. ಮೋಶೆಯು ದೇವರ ಸಂಗಡ ಮಾತ ನಾಡುವದಕ್ಕೆ ತಿರಿಗಿ ಹೋಗುವ ವರೆಗೆ ಅವನು ತನ್ನ ಮುಖದ ಮೇಲೆ ತಿರಿಗಿ ಮುಸುಕನ್ನು ಹಾಕಿ ಕೊಳ್ಳುತ್ತಿದ್ದನು.
- Isaiah 53:2 ಯೆಶಾಯ 53:2ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.
- Philippians 3:7–8 ಫಿಲಿಪ್ಪಿಯವರಿಗೆ 3:7–8ಆದರೆ ನನಗೆ ಲಾಭವಾಗಿದ್ದಂಥವುಗಳನ್ನು ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ. ಹೌದು, ನಿಸ್ಸಂದೇಹವಾಗಿ ನನ್ನ ಕರ್ತನಾದ ಕ್ರಿಸ್ತ ಯೇಸುವಿನ ವಿಷಯವಾಗಿರುವ ಅತಿ ಶ್ರೇಷ್ಟವಾದ ಜ್ಞಾನದ ನಿಮಿತ್ತವಾಗಿ ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ನಾನು ಕ್ರಿಸ್ತನನ್ನು ಸಂಪಾದಿಸಿ ಕೊಳ್ಳಬೇಕೆಂದು ಆತನ ನಿಮಿತ್ತ ಎಲ್ಲವನ್ನು ಕಳಕೊಂಡು ಅದನ್ನು ಕಸವೆಂದೆಣಿಸುತ್ತೇನೆ.
- Isaiah 33:17 ಯೆಶಾಯ 33:17ರಾಜನ ಸೌಂದರ್ಯವನ್ನು ನಿನ್ನ ಕಣ್ಣುಗಳು ನೋಡುವವು. ಅತಿವಿಸ್ತಾರವಾದ (ದೂರವಾಗಿರುವ) ದೇಶವನ್ನು ಕಣ್ಣು ತುಂಬಾ ನೋಡುವಿರಿ;
- Revelation 20:11 ಪ್ರಕಟನೆ 20:11ಆಮೇಲೆ ಬೆಳ್ಳಗಿರುವ ಮಹಾಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಅವುಗಳಿಗೆ ಸ್ಥಳವಿಲ್ಲದಂತಾಯಿತು.
- Revelation 1:13–16 ಪ್ರಕಟನೆ 1:13–16ಆ ಏಳು ದೀಪಸ್ತಂಭಗಳ ಮಧ್ಯದಲ್ಲಿ ಮನುಷ್ಯಕುಮಾರನಂತಿದ್ದಾತನನ್ನು ಕಂಡೆನು. ಆತನು ಪಾದದವರೆಗೆ ಇರುವ ನಿಲುವಂಗಿಯನ್ನು ತೊಟ್ಟು ಚಿನ್ನದ ಪಟ್ಟಿಯನ್ನು ಎದೆಗೆ ಕಟ್ಟಿಕೊಂಡಿದ್ದನು. ಆತನ ತಲೆ ಮತ್ತು ಕೂದಲು ಬಿಳೀ ಉಣ್ಣೆಯಂತೆಯೂ ಹಿಮದಂತೆಯೂ ಬೆಳ್ಳಗಿತ್ತು. ಆತನ ಕಣ್ಣುಗಳು ಬೆಂಕಿಯ ಉರಿಯಂತೆ ಇದ್ದವು. ಆತನ ಪಾದಗಳು ಕುಲುಮೆ ಯಲ್ಲಿ ಕಾಯಿಸಿದ ಶುದ್ಧವಾದ ತಾಮ್ರದಂತೆಯೂ ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಟಿತು. ಆತನ ಮುಖವು ಸೂರ್ಯನು ತನ್ನ ಬಲದಲ್ಲಿ ಪ್ರಕಾಶಿಸುವಂತಿತ್ತು.
- John 1:14 ಯೋಹಾನನು 1:14ಇದಲ್ಲದೆ ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು. (ತಂದೆಯಿಂದ ಹುಟ್ಟಿದ ಒಬ್ಬನೇ ಮಗನ ಮಹಿಮೆಯಂತೆ ನಾವು ಆತನ ಮಹಿಮೆಯನ್ನು ನೋಡಿದೆವು).
- Mark 16:12 ಮಾರ್ಕನು 16:12ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಆತನು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
- Acts 6:15 ಅಪೊಸ್ತಲರ ಕೃತ್ಯಗಳು 6:15ಆಗ ಆಲೋಚನಾ ಸಭೆಯಲ್ಲಿ ಕೂತಿದ್ದವರೆಲ್ಲರೂ ಅವನನ್ನು ದೃಷ್ಟಿಸಿ ನೋಡಲಾಗಿ ಅವನ ಮುಖವು ದೂತನ ಮುಖದಂತೆ ಇರುವದನ್ನು ಕಂಡರು.
Original words (Greek)
- And · G2532καί kaí
- as · G1096γίνομαι gínomai
- he · G846αὐτός autós
- prayed · G4336προσεύχομαι proseúchomai
- fashion · G1491εἶδος eîdos
- of · G4383πρόσωπον prósōpon
- his · G846αὐτός autós
- countenance · G4383πρόσωπον prósōpon
- altered · G2087ἕτερος héteros
- and · G2532καί kaí
- his · G846αὐτός autós
- raiment · G2441ἱματισμός himatismós
- white · G3022λευκός leukós
- glistering · G1823ἐξαστράπτω exastráptō