Mark · chapter 1 · verse 40
Mark 1:40 in Kannada
ಆಗ ಒಬ್ಬ ಕುಷ್ಠರೋಗಿಯು ಆತನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿ ಆತನಿಗೆ -- ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಬೇಡಿಕೊಂಡನು.
Aaga obba kushtharogiyu aatana balige bandu aatana munde monakaaloori aatanige -- ninage manassiddare neenu nannannu shuddha maadaballe endu bedikondanu.
Mark 1:40 in English
- King James Version (KJV)
- And there came a leper to him, beseeching him, and kneeling down to him, and saying unto him, If thou wilt, thou canst make me clean.
- World English Bible (WEB)
- A leper came to him, begging him, kneeling down to him, and saying to him, “If you want to, you can make me clean.”
- American Standard Version (ASV)
- And there cometh to him a leper, beseeching him, and kneeling down to him, and saying unto him, If thou wilt, thou canst make me clean.
- Bible in Basic English (BBE)
- And a leper came to him and, going down on his knees before him, made a request, saying, If it is your pleasure, you have the power to make me clean.
- Darby Translation (DBY)
- And there comes to him a leper, beseeching him, and falling on his knees to him, and saying to him, If thou wilt thou canst cleanse me.
- Webster's Bible (WBS)
- And there came a leper to him, beseeching him, and kneeling down to him, and saying to him, If thou wilt, thou canst make me clean.
- Young's Literal Translation (YLT)
- and there doth come to him a leper, calling on him, and kneeling to him, and saying to him — 'If thou mayest will, thou art able to cleanse me.'
Read in context
- 38ಆತನು ಅವರಿಗೆ--ನಾವು ಮುಂದಿನ ಊರುಗಳಿಗೆ ಹೋಗೋಣ; ಯಾಕಂದರೆ ನಾನು ಅಲ್ಲಿಯೂ ಸಾರಬೇಕಾಗಿದೆ; ಇದಕ್ಕಾಗಿಯೇ ನಾನು ಹೊರಟು ಬಂದಿದ್ದೇನೆ ಎಂದು ಹೇಳಿದನು.
- 39ಮತ್ತು ಆತನು ಗಲಿಲಾಯದಲ್ಲೆಲ್ಲಾ ಅವರ ಸಭಾಮಂದಿರಗಳಲ್ಲಿ ಸಾರಿ ದೆವ್ವಗಳನ್ನು ಬಿಡಿಸಿದನು.
- 40ಆಗ ಒಬ್ಬ ಕುಷ್ಠರೋಗಿಯು ಆತನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿ ಆತನಿಗೆ -- ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಬೇಡಿಕೊಂಡನು.
- 41ಆಗ ಯೇಸು ಕನಿಕರಪಟ್ಟು ತನ್ನ ಕೈನೀಡಿ ಅವನನ್ನು ಮುಟ್ಟಿ ಅವನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು.
- 42ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು.
Cross references
- Luke 5:12–14 ಲೂಕನು 5:12–14ತರುವಾಯ ಆತನು ಒಂದಾನೊಂದು ಪಟ್ಟಣ ದಲ್ಲಿದ್ದಾಗ ಇಗೋ, ತುಂಬಾ ಕುಷ್ಠವಿದ್ದ ಒಬ್ಬ ಮನುಷ್ಯನು ಯೇಸುವನ್ನು ನೋಡಿ ಬೋರಲ ಬಿದ್ದು ಆತನಿಗೆ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಎಂದು ಆತನನ್ನು ಬೇಡಿಕೊಂಡನು. ಆತನು ತನ್ನ ಕೈಚಾಚಿ ಅವನನ್ನು ಮುಟ್ಟಿ ಅವ ನಿಗೆ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಎಂದು ಹೇಳಿದನು. ಕೂಡಲೆ ಆ ಕುಷ್ಠವು ಅವನಿಂದ ಹೊರಟುಹೋಯಿತು. ಆತನು ಅವನಿಗೆ--ನೀನು ಯಾರಿಗೂ ಹೇಳಬಾರದು; ಆದರೆ ಹೋಗಿ ಜನರಿಗೆ ಸಾಕ್ಷಿಯಾಗಿರುವಂತೆ ಯಾಜಕನಿಗೆ ನಿನ್ನನ್ನು ತೋರಿಸಿ ಕೊಂಡು ನಿನ್ನ ಶುದ್ಧಾಚಾರಕ್ಕಾಗಿ ಮೋಶೆಯು ಅಪ್ಪಣೆ ಕೊಟ್ಟಂತೆ ಅರ್ಪಿಸು ಎಂದು ಆಜ್ಞಾಪಿಸಿದನು.
- Matthew 8:2–4 ಮತ್ತಾಯನು 8:2–4ಆಗ ಇಗೋ, ಒಬ್ಬ ಕುಷ್ಠರೋಗಿಯು ಬಂದು ಆತನನ್ನು ಆರಾಧಿಸಿ--ಕರ್ತನೇ, ನಿನಗೆ ಮನಸ್ಸಿದ್ದರೆ ನೀನು ನನ್ನನ್ನು ಶುದ್ಧ ಮಾಡಬಲ್ಲೆ ಅಂದನು. ಆಗ ಯೇಸು ತನ್ನ ಕೈಯನ್ನು ಚಾಚಿ ಅವನನ್ನು ಮುಟ್ಟಿ--ನನಗೆ ಮನಸ್ಸುಂಟು; ನೀನು ಶುದ್ಧನಾಗು ಅಂದನು. ತಕ್ಷಣವೇ ಅವನ ಕುಷ್ಠವು ಹೋಗಿ ಅವನು ಶುದ್ಧನಾದನು. ಯೇಸು ಅವನಿಗೆ--ನೀನು ಯಾರಿಗೂ ಹೇಳಬೇಡ ನೋಡು; ಹೊರಟುಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಅವರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು ಎಂದು ಹೇಳಿದನು.
- Leviticus 13:1–14 ಯಾಜಕಕಾಂಡ 13:1–14ತರುವಾಯ ಕರ್ತನು ಮೋಶೆ ಆರೋನರೊಡನೆ ಮಾತನಾಡಿ ಹೇಳಿದ್ದೇನಂದರೆ ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು. ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು. ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು. ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು. ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು. ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು. ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು. ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು. ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ ಆಗ ಯಾಜಕನು ಅದನ್ನು ಗಮನಿಸಬೇಕು; ಇಗೋ, ಕುಷ್ಠವು ಅವನ ಮೈಯೆಲ್ಲವನ್ನು ಹರಡಿಕೊಂಡು ಶುದ್ಧನಾಗಿ ರುವನೆಂದು ಯಾಜಕನು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವದರಿಂದ ಅವನು ಶುದ್ಧನಾಗಿರು ವನೆಂದು ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು.
- Matthew 17:14 ಮತ್ತಾಯನು 17:14ಅವರು ಜನಸಮೂಹದ ಬಳಿಗೆ ಬಂದಾಗ ಒಬ್ಬ ಮನುಷ್ಯನು ಆತನ ಬಳಿಗೆ ಬಂದು ಮೊಣ ಕಾಲೂರಿ--
- 2 Samuel 3:29 2 ಸಮುವೇಲನು 3:29ಅದು ಯೋವಾಬನ ತಲೆಯ ಮೇಲೆಯೂ ಅವನ ತಂದೆಯ ಮನೆತನದವರ ಮೇಲೆಯೂ ಇರಲಿ. ಯೋವಾಬನ ಮನೆಯಲ್ಲಿ ರಕ್ತ ಸ್ರಾವ ರೋಗದವನೂ ಕುಷ್ಠರೋಗಿಯೂ ಕೋಲು ಹಿಡಿದು ನಡೆಯುವವನೂ ಕತ್ತಿಯಿಂದ ಬೀಳುವವನೂ ರೊಟ್ಟಿಯ ಕೊರತೆಯುಳ್ಳ ಯಾವನೂ ತಪ್ಪಿಸಿಕೊಳ್ಳ ಲಾರದೆ ಇರಲಿ ಅಂದನು.
- Mark 9:22–23 ಮಾರ್ಕನು 9:22–23ಅದು ಅವನನ್ನು ನಾಶಪಡಿಸಲು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು; ಆದರೆ ನೀನು ಏನಾದರೂ ಮಾಡಲು ಸಾಧ್ಯ ವಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯ ಮಾಡು ಅಂದನು. ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.
- Deuteronomy 24:8–9 ಧರ್ಮೋಪದೇಶಕಾಂಡ 24:8–9ಕುಷ್ಠದ ಬಾಧೆಯಲ್ಲಿ ಲೇವಿಯರಾದ ಯಾಜಕರು ನಿಮಗೆ ಬೋಧಿಸುವದನ್ನೆಲ್ಲಾ ನೀನು ಜಾಗ್ರತೆಯಿಂದ ಕಾಪಾಡಿ ಕೈಕೊಳ್ಳುವ ಹಾಗೆ ನೋಡಿಕೋ; ನಾನು ಅವರಿಗೆ ಆಜ್ಞೆ ಕೊಟ್ಟಹಾಗೆ ನೀವು ಕಾಪಾಡಿ ಕೈಕೊಳ್ಳ ಬೇಕು; ನೀವು ಐಗುಪ್ತದಿಂದ ಹೊರಗೆ ಬರುವಾಗ ನಿನ್ನ ದೇವರಾದ ಕರ್ತನು ಮಿರ್ಯಾಮಳಿಗೆ ಮಾರ್ಗದಲ್ಲಿ ಮಾಡಿದ್ದನ್ನು ಜ್ಞಾಪಕಮಾಡಿಕೋ.
- Mark 10:17 ಮಾರ್ಕನು 10:17ಆತನು ದಾರಿಯಲ್ಲಿ ಮುಂದಕ್ಕೆ ಹೋದಾಗ ಒಬ್ಬನು ಓಡುತ್ತಾ ಬಂದು ಆತನ ಮುಂದೆ ಮೊಣಕಾಲೂರಿ--ಒಳ್ಳೇ ಬೋಧಕನೇ, ನಾನು ನಿತ್ಯಜೀವ ವನ್ನು ಬಾಧ್ಯವಾಗಿ ಹೊಂದುವಂತೆ ಏನು ಮಾಡಬೇಕು ಎಂದು ಆತನನ್ನು ಕೇಳಿದನು.
- Luke 17:12–19 ಲೂಕನು 17:12–19ಆತನು ಒಂದಾ ನೊಂದು ಹಳ್ಳಿಯನ್ನು ಪ್ರವೇಶಿಸಿದಾಗ ಹತ್ತು ಮಂದಿ ಕುಷ್ಠರೋಗಿಗಳು ದೂರದಲ್ಲಿ ನಿಂತು ಆತನನ್ನು ಸಂಧಿಸಿ ದರು. ಅವರು ತಮ್ಮ ಸ್ವರವೆತ್ತಿ--ಯೇಸುವೇ,ಒಡೆಯನೇ, ನಮ್ಮ ಮೇಲೆ ಕರುಣೆಯಿಡು ಎಂದು ಕೂಗಿ ಹೇಳಿದರು. ಆತನು ಅವರನ್ನು ನೋಡಿ ಅವರಿಗೆ--ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿ ಕೊಳ್ಳಿರಿ ಅಂದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. ಅವರಲ್ಲಿ ಒಬ್ಬನು ತಾನು ಸ್ವಸ್ಥ ವಾದದ್ದನ್ನು ನೋಡಿ ಹಿಂದಿರುಗಿ ಬಂದು ಮಹಾ ಶಬ್ದದಿಂದ ದೇವರನ್ನು ಮಹಿಮೆಪಡಿಸುತ್ತಾ ಆತನ ಪಾದಕ್ಕೆ ಅಡ್ಡಬಿದ್ದು ಆತನಿಗೆ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಿದನು; ಅವನು ಸಮಾರ್ಯದವನಾಗಿದ್ದನು. ಆದರೆ ಯೇಸು ಅವನಿಗೆ--ಹತ್ತು ಮಂದಿ ಶುದ್ಧರಾಗ ಲಿಲ್ಲವೇ. ಆದರೆ ಆ ಒಂಭತ್ತು ಮಂದಿ ಎಲ್ಲಿ? ದೇವ ರನ್ನು ಮಹಿಮೆಪಡಿಸುವದಕ್ಕೆ ಹಿಂದಿರುಗಿದವರಲ್ಲಿ ಈ ಅನ್ಯನ ಹೊರತು ಯಾರೂ ಕಾಣಿಸಲಿಲ್ಲ ಎಂದು ಹೇಳಿ ಅವನಿಗೆ--ಎದ್ದು ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿಯದೆ ಅಂದನು.
- Luke 22:41 ಲೂಕನು 22:41ಆತನು ಅವ ರಿಂದ ಒಂದು ಕಲ್ಲೆಸೆಯುವಷ್ಟು ದೂರಹೋಗಿ ಮೊಣ ಕಾಲೂರಿ--
- Numbers 12:10–15 ಅರಣ್ಯಕಾಂಡ 12:10–15ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು. ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ. ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. ಆಗ ಮೋಶೆಯು ಕರ್ತನಿಗೆ ಕೂಗಿ--ಓ ದೇವರೇ, ಅವಳನ್ನು ಈಗ ಸ್ವಸ್ಥಮಾಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು. ಆಗ ಕರ್ತನು ಮೋಶೆಗೆ--ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ ಆಕೆಯು ಏಳು ದಿವಸ ನಾಚಿಕೊಳ್ಳುವದಿಲ್ಲವೋ? ಆಕೆಯು ಏಳು ದಿವಸ ಪಾಳೆಯದ ಹೊರಗೆ ಮರೆಯಾಗಿದ್ದು ತರುವಾಯ ಸೇರಿಸಲ್ಪಡಲಿ ಎಂದು ಹೇಳಿದನು. ಹಾಗೆಯೇ ಮಿರ್ಯಾಮಳನ್ನು ಪಾಳೆಯದ ಹೊರಗೆ ಏಳು ದಿವಸ ಮರೆಯಾಗಿಯಿಟ್ಟರು. ಮಿರ್ಯಾಮಳು ತಿರಿಗಿ ಒಳಗೆ ಬರುವ ವರೆಗೆ ಜನರು ಪ್ರಯಾಣ ಮಾಡಲಿಲ್ಲ.ತರುವಾಯ ಜನರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳುಕೊಂಡರು.
- 2 Kings 15:5 2 ಅರಸುಗಳು 15:5ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
Original words (Greek)
- And · G2532καί kaí
- came · G2064ἔρχομαι érchomai
- leper · G3015λεπρός leprós
- to · G4314πρός prós
- him · G846αὐτός autós
- beseeching · G3870παρακαλέω parakaléō
- him · G846αὐτός autós
- and · G2532καί kaí
- down · G1120γονυπετέω gonypetéō
- him · G846αὐτός autós
- and · G2532καί kaí
- saying · G3004λέγω légō
- him · G846αὐτός autós
- If · G1437ἐάν eán
- wilt · G2309θέλω thélō
- make · G1410δύναμαι dýnamai
- me · G3165μέ mé
- clean · G2511καθαρίζω katharízō