Numbers · chapter 12 · verse 10
Numbers 12:10 in Kannada
ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು.
Aa meghavu gudaarada melininda tolagi hoyitu; aaga igo, miryaamalu himada haage kushthavullavalaadalu. Aaronanu miryaamala kadege nodidaaga igo, avalu kushtharogi yaagiddalu.
Numbers 12:10 in English
- King James Version (KJV)
- And the cloud departed from off the tabernacle; and, behold, Miriam [became] leprous, [white] as snow: and Aaron looked upon Miriam, and, behold, [she was] leprous.
- World English Bible (WEB)
- The cloud departed from over the Tent; and behold, Miriam was leprous, as white as snow. Aaron looked at Miriam, and behold, she was leprous.
- American Standard Version (ASV)
- And the cloud removed from over the Tent; and, behold, Miriam was leprous, as [white as] snow: and Aaron looked upon Miriam, and, behold, she was leprous.
- Bible in Basic English (BBE)
- And the cloud was moved from over the Tent; and straight away Miriam became a leper, as white as snow: and Aaron, looking at Miriam, saw that she was a leper.
- Darby Translation (DBY)
- and the cloud departed from off the tent. And behold, Miriam was leprous as snow; and Aaron turned toward Miriam, and behold, she was leprous.
- Webster's Bible (WBS)
- And the cloud departed from off the tabernacle; and behold, Miriam [became] leprous, [white] as snow: and Aaron looked upon Miriam, and behold, [she was] leprous.
- Young's Literal Translation (YLT)
- and the cloud hath turned aside from off the tent, and lo, Miriam [is] leprous as snow; and Aaron turneth unto Miriam, and lo, leprous!
Read in context
- 8ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
- 9ಕರ್ತನ ಕೋಪವು ಅವರ ಮೇಲೆ ಉರಿಯಿತು, ಆತನು ಹೋದನು.
- 10ಆ ಮೇಘವು ಗುಡಾರದ ಮೇಲಿನಿಂದ ತೊಲಗಿ ಹೋಯಿತು; ಆಗ ಇಗೋ, ಮಿರ್ಯಾಮಳು ಹಿಮದ ಹಾಗೆ ಕುಷ್ಠವುಳ್ಳವಳಾದಳು. ಆರೋನನು ಮಿರ್ಯಾಮಳ ಕಡೆಗೆ ನೋಡಿದಾಗ ಇಗೋ, ಅವಳು ಕುಷ್ಠರೋಗಿ ಯಾಗಿದ್ದಳು.
- 11ಆರೋನನು ಮೋಶೆಗೆ--ಅಯ್ಯೋ, ನನ್ನ ಒಡೆಯನೇ, ನಾವು ಪಾಪಮಾಡಿದೆವು, ಬುದ್ಧಿಯಿಲ್ಲದೆ ಮಾಡಿದ ಈ ಪಾಪವನ್ನು ನಮ್ಮ ಮೇಲೆ ಹಾಕಬೇಡ.
- 12ತನ್ನ ತಾಯಿಯ ಗರ್ಭದಿಂದ ಹೊರಗೆ ಬಂದಾಗಲೇ ಅರ್ಧ ಮಾಂಸ ಕೊಳೆತುಹೋದಂಥ ಶವದಂತೆ ಆಕೆಯನ್ನು ಇರಗೊಡಿಸಬೇಡ ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ ಅಂದನು.
Cross references
- Deuteronomy 24:9 ಧರ್ಮೋಪದೇಶಕಾಂಡ 24:9ನೀವು ಐಗುಪ್ತದಿಂದ ಹೊರಗೆ ಬರುವಾಗ ನಿನ್ನ ದೇವರಾದ ಕರ್ತನು ಮಿರ್ಯಾಮಳಿಗೆ ಮಾರ್ಗದಲ್ಲಿ ಮಾಡಿದ್ದನ್ನು ಜ್ಞಾಪಕಮಾಡಿಕೋ.
- 2 Kings 5:27 2 ಅರಸುಗಳು 5:27ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- 2 Chronicles 26:19–21 2 ಪೂರ್ವಕಾಲವೃತ್ತಾಂತ 26:19–21ಆಗ ಉಜ್ಜೀಯನು ಕೋಪಿಸಿ ಕೊಂಡನು; ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಅವನು ಯಾಜಕರ ಮೇಲೆ ಕೋಪ ಮಾಡುವಾಗ ಕರ್ತನ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಎದ್ದಿತು. ಆಗ ಪ್ರಧಾನ ಯಾಜಕನಾದ ಅಜರ್ಯನೂ ಯಾಜಕರೆಲ್ಲರೂ ಅವ ನನ್ನು ದೃಷ್ಟಿಸಿದಾಗ ಇಗೋ, ಅವನು ತನ್ನ ಹಣೆ ಯಲ್ಲಿ ಕುಷ್ಠವುಳ್ಳವನಾಗಿದ್ದನು. ಆದದರಿಂದ ಅವರು ಅವನನ್ನು ಅಲ್ಲಿಂದ ದೊಬ್ಬಿಹಾಕಿದರು. ಕರ್ತನು ಅವ ನನ್ನು ಹೊಡೆದದ್ದರಿಂದ ಅವನು ಹೊರಗೆ ಹೋಗಲು ತ್ವರೆಪಟ್ಟನು. ಅರಸನಾದ ಉಜ್ಜೀಯನು ಸಾಯುವ ದಿವಸದ ವರೆಗೂ ಕುಷ್ಠರೋಗಿಯಾಗಿದ್ದನು. ಅವನು ಕುಷ್ಠರೋಗವುಳ್ಳವನಾದದರಿಂದ ಪ್ರತ್ಯೇಕವಾದ ಮನೆ ಯಲ್ಲಿ ವಾಸವಾಗಿದ್ದನು. ಯಾಕಂದರೆ ಅವನು ಕರ್ತನ ಆಲಯದಿಂದ ತೆಗೆದುಹಾಕಲ್ಪಟ್ಟವನಾಗಿದ್ದನು. ಅವನ ಮಗನಾದ ಯೋತಾಮನು ಅರಸನ ಮನೆಯ ಮೇಲೆ ಇದ್ದು ದೇಶದ ಜನರಿಗೆ ನ್ಯಾಯತೀರಿಸುತ್ತಾ ಇದ್ದನು.
- 2 Kings 15:5 2 ಅರಸುಗಳು 15:5ಕರ್ತನು ಅರಸನನ್ನು ಹೊಡೆದದ್ದರಿಂದ ಅವನು ತನ್ನ ಜೀವದಿಂದಿರು ವರೆಗೂ ಕುಷ್ಠರೋಗಿಯಾಗಿದ್ದು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗನಾದ ಯೋತಾಮನು ಮನೆ ಯಜಮಾನನಾಗಿದ್ದು ದೇಶದ ಜನರಿಗೆ ನ್ಯಾಯ ತೀರಿಸುತ್ತಿದ್ದನು.
- Exodus 4:6 ವಿಮೋಚನಕಾಂಡ 4:6ಇದಲ್ಲದೆ ಕರ್ತನು ಅವನ ಸಂಗಡ ಇನ್ನೂ ಮಾತನಾಡಿ--ನಿನ್ನ ಕೈಯನ್ನು ಉಡಿಯಲ್ಲಿ ಹಾಕು ಅಂದಾಗ ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆಯಲು ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು.
- Hosea 9:12 ಹೋಶೇಯ 9:12ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
- Exodus 33:7–10 ವಿಮೋಚನಕಾಂಡ 33:7–10ಇದಲ್ಲದೆ ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ ಅದಕ್ಕೆ ದೇವದರ್ಶನ ಗುಡಾರ ಎಂದು ಹೆಸರಿಟ್ಟನು. ತರುವಾಯ ಕರ್ತನನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನ ಗುಡಾರಕ್ಕೆ ಹೋದರು. ಇದಾದ ಮೇಲೆ ಮೋಶೆಯು ಹೊರಗೆ ಗುಡಾರದ ಬಳಿಗೆ ಹೋಗುವಾಗೆಲ್ಲಾ ಜನರೆಲ್ಲರು ಎದ್ದು ತಮ್ಮ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡು ಮೋಶೆಯು ಗುಡಾರದಲ್ಲಿ ಪ್ರವೇಶಿಸುವ ವರೆಗೆ ಅವನ ಹಿಂದೆ ನೋಡುತ್ತಿದ್ದರು. ತರುವಾಯ ಮೋಶೆಯು ಗುಡಾರದಲ್ಲಿ ಪ್ರವೇಶಿಸಿದಾಗ ಮೇಘಸ್ತಂಭವು ಇಳಿದು ಬಂದು ಗುಡಾರದ ಬಾಗಿಲಲ್ಲಿ ನಿಲ್ಲುತಿತ್ತು. ಕರ್ತನು ಮೋಶೆಯ ಸಂಗಡ ಮಾತನಾಡುವನು. ಜನ ರೆಲ್ಲರೂ ಗುಡಾರದ ಬಾಗಿಲಲ್ಲಿ ನಿಂತ ಮೇಘಸ್ತಂಭವನ್ನು ನೋಡಿ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ಎದ್ದು ನಿಂತು ಆರಾಧಿಸುತ್ತಿದ್ದರು.
- Ezekiel 10:4–5 ಯೆಹೆಜ್ಕೇಲನು 10:4–5ಆಗ ಕರ್ತನ ಮಹಿಮೆಯು ಕೆರೂಬಿಗಳನ್ನು ಬಿಟ್ಟು ಮೇಲಕ್ಕೆ ಹೋಗಿ ಆಲಯದ ಹೊಸ್ತಿಲಲ್ಲಿ ನಿಂತಿತು, ಆಲಯವು ಮೇಘದಿಂದ ತುಂಬಿತ್ತು. ಆಗ ಕರ್ತನ ಮಹಿಮೆಯ ಪ್ರಕಾಶವು ಅಂಗಳದಲ್ಲಿ ತುಂಬಿತ್ತು. ಕೆರೂಬಿಗಳ ರೆಕ್ಕೆಗಳ ಶಬ್ದವು ಮಾತನಾಡುವ ಸರ್ವಶಕ್ತನ ದೇವರ ಹಾಗೆ ಹೊರಗಣ ಅಂಗಳದ ವರೆಗೂ ಕೇಳಿಬಂತು.
- Matthew 25:41 ಮತ್ತಾಯನು 25:41ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.
- Ezekiel 10:18–19 ಯೆಹೆಜ್ಕೇಲನು 10:18–19ಆಗ ಕರ್ತನ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು. ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿ ಕೊಂಡು ನಾನು ನೋಡುವಾಗಲೇ ಭೂಮಿಯನ್ನು ಬಿಟ್ಟು ಮೇಲೆಕ್ಕೇರಿ ಹೋದರು. ಅವು ಹೊರಟಾಗ ಚಕ್ರಗಳೂ ಅವರ ಸಂಗಡ ಇದ್ದವು, ಅವರು ಕರ್ತನ ಆಲಯದ ಮೂಡಣ ಬಾಗಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಮತ್ತು ಇಸ್ರಾಯೇಲಿನ ದೇವರ ಮಹಿ ಮೆಯು ಅವರ ಮೇಲೆ ಇತ್ತು.
- Leviticus 13:2–46 ಯಾಜಕಕಾಂಡ 13:2–46ಒಬ್ಬ ಮನುಷ್ಯನಿಗೆ ತನ್ನ ಶರೀರದ ಚರ್ಮದ ಮೇಲೆ ಬಾವಾಗಲಿ ಕಜ್ಜಿಯಾಗಲಿ ಹೊಳಪಿನ ಮಚ್ಚೆಯಾಗಲಿ ಮತ್ತು ಅವನ ಶರೀರದ ಚರ್ಮದಲ್ಲಿ ಕುಷ್ಠದ ವ್ಯಾಧಿ ಯಂತಿದ್ದರೆ ಅವನು ಯಾಜಕನಾದ ಆರೋನನ ಬಳಿ ಗಾದರೂ ಇಲ್ಲವೆ ಯಾಜಕರಾದ ಅವನ ಕುಮಾರರಲ್ಲಿ ಒಬ್ಬನ ಬಳಿಗಾದರೂ ತರಲ್ಪಡಬೇಕು. ಯಾಜಕನು ಶರೀರದ ಚರ್ಮದ ಮೇಲಿರುವ ವ್ಯಾಧಿಯನ್ನು ನೋಡ ಬೇಕು; ವ್ಯಾಧಿಯಲ್ಲಿನ ಕೂದಲು ಬೆಳ್ಳಗಾದರೆ ಆ ವ್ಯಾಧಿಯು ಅವನ ಶರೀರದ ಚರ್ಮಕ್ಕಿಂತಲೂ ಆಳ ವಾಗಿ ಕಂಡರೆ ಆ ವ್ಯಾಧಿಯು ಕುಷ್ಠವಾಗಿರುವದು; ಆಗ ಯಾಜಕನು ಅವನನ್ನು ನೋಡಿ ಅಶುದ್ಧನೆಂದು ನಿರ್ಣಯಿಸಬೇಕು. ಅವನ ಶರೀರದ ಚರ್ಮದಲ್ಲಿ ಬಿಳುಪಾದ ಮಚ್ಚೆಯಿದ್ದು ಅದು ನೋಡುವದಕ್ಕೆ ಚರ್ಮ ಕ್ಕಿಂತಲೂ ಆಳವಾಗಿದ್ದು ಅಲ್ಲಿನ ಕೂದಲು ಬೆಳ್ಳಗಾಗ ದಿದ್ದರೆ ಯಾಜಕನು ಆ ವ್ಯಾಧಿಯವನನ್ನು ಏಳು ದಿನ ಮುಚ್ಚಿಡಬೇಕು. ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಇಗೋ, ವ್ಯಾಧಿಯು ಸ್ವಲ್ಪ ಕಪ್ಪಾ ಗಿದ್ದು ಚರ್ಮದಲ್ಲೆಲ್ಲಾ ಹರಡದಿದ್ದರೆ ಯಾಜಕನು ಅವ ನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬರೀ ಕಜ್ಜಿಯಾದ ಕಾರಣ ಅವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶುದ್ಧನಾಗಿರುವನು. ಅವನು ತನ್ನ ಶುದ್ಧಿಗಾಗಿ ಯಾಜಕನಿಗೆ ತೋರಿಸಿಕೊಂಡ ಮೇಲೆ ಕಜ್ಜಿಯು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹಬ್ಬಿದರೆ ಅವನು ತಿರಿಗಿ ಯಾಜಕನಿಗೆ ತೋರಿಸಿಕೊಳ್ಳಬೇಕು. ಯಾಜ ಕನು ಅದನ್ನು ನೋಡಿದಾಗ ಇಗೋ, ಕಜ್ಜಿಯ ಚರ್ಮವೇ ಹರಡಿರುವದಾದರೆ ಆಗ ಅವನು ಅಶುದ್ಧ ನೆಂದು ಯಾಜಕನು ನಿರ್ಣಯಿಸಬೇಕು. ಅದು ಕುಷ್ಠವಾಗಿರುವದು. ಕುಷ್ಠರೋಗವು ಮನುಷ್ಯನಲ್ಲಿ ಇರುವದಾದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರ ಬೇಕು. ಆಗ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಬಾವು ಚರ್ಮದಲ್ಲಿ ಬೆಳ್ಳಗಿದ್ದು ಅದರ ಕೂದಲು ಬೆಳ್ಳಗಾಗಿ ಹೋಗಿದ್ದರೆ ಮತ್ತು ಆ ಬಾವಿನಲ್ಲಿ ಹಸಿಮಾಂಸವು ಇದ್ದರೆ ಅದು ಅವನ ಶರೀರದ ಚರ್ಮದಲ್ಲಿ ಒಂದು ಹಳೇ ಕುಷ್ಠವಾಗಿರುವದು. ಆಗ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು ಮತ್ತು ಅವನನ್ನು ಮುಚ್ಚಿಡಬಾರದು, ಅವನು ಅಶುದ್ಧನಾಗಿರುವನು. ಕುಷ್ಠವು ಒಡೆದು ಚರ್ಮದ ಹೊರಗೆ ಹರಡಿ ಕೊಂಡಿದ್ದರೆ ಮತ್ತು ಚರ್ಮವನ್ನೆಲ್ಲಾ ಹರಡಿಕೊಂಡು ತಲೆಯಿಂದ ಅವನ ಪಾದದ ವರೆಗೂ ಹರಡಿರುವದನ್ನು ಯಾಜಕನು ಎಲ್ಲಿಯಾದರೂ ನೋಡಿದರೆ ಆಗ ಯಾಜಕನು ಅದನ್ನು ಗಮನಿಸಬೇಕು; ಇಗೋ, ಕುಷ್ಠವು ಅವನ ಮೈಯೆಲ್ಲವನ್ನು ಹರಡಿಕೊಂಡು ಶುದ್ಧನಾಗಿ ರುವನೆಂದು ಯಾಜಕನು ನುಡಿಯಬೇಕು. ಅದು ಪೂರ್ತಿ ಬೆಳ್ಳಗಾಗಿರುವದರಿಂದ ಅವನು ಶುದ್ಧನಾಗಿರು ವನೆಂದು ಆದರೆ ಹಸಿಮಾಂಸವು ಅವನಲ್ಲಿ ಕಾಣಿಸಿ ಕೊಂಡರೆ ಅವನು ಅಶುದ್ಧನಾಗುವನು. ಯಾಜ ಕನು ಹಸಿಮಾಂಸವನ್ನು ನೋಡಿ ಅವನು ಅಶುದ್ಧನೆಂದು ನುಡಿಯಬೇಕು; ಹಸಿಮಾಂಸವು ಅಶುದ್ಧವಾದದ್ದು, ಅದು ಕುಷ್ಠವೇ. ಇಲ್ಲವೆ ಹಸಿಮಾಂಸವು ಮತ್ತೆ ತಿರಿಗಿ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು. ಆಗ ಯಾಜಕನು ಅವನನ್ನು ನೋಡ ಬೇಕು. ಇಗೋ, ಆ ವ್ಯಾಧಿಯು ಬೆಳ್ಳಗಾಗಿದ್ದರೆ ಅವನು ವ್ಯಾಧಿಯಿಂದ ಶುದ್ಧನಾಗಿರುವನೆಂದು ಯಾಜಕನು ನುಡಿಯಬೇಕು; ಅವನು ಶುದ್ಧನೇ. ಆ ದೇಹದ ಚರ್ಮದಲ್ಲಿ ಹುಣ್ಣು ಉಂಟಾಗಿ ವಾಸಿಯಾದರೂ ಆ ಹುಣ್ಣಿನ ಸ್ಥಳದಲ್ಲಿ ಬಿಳಿಯ ಊತವಾಗಲಿ ಬಿಳುಪಾದ ಮಚ್ಚೆಯಾಗಲಿ ಬಿಳಿಯದಾಗಿ ಸ್ವಲ್ಪ ಕೆಂಪಾದದ್ದಾಗಲಿ ಉಂಟಾದರೆ ಅದನ್ನು ಯಾಜಕ ನಿಗೆ ತೋರಿಸಬೇಕು. ಯಾಜಕನು ಅದನ್ನು ನೋಡಿ ದಾಗ ಇಗೋ, ಅದು ಚರ್ಮಕ್ಕಿಂತ ತಗ್ಗಾಗಿ ಕಂಡರೆ ಮತ್ತು ಅಲ್ಲಿಯ ಕೂದಲು ಬೆಳ್ಳಗಾಗಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನುಡಿಯಬೇಕು; ಅದು ಹುಣ್ಣಿನಿಂದ ಒಡೆದುಹೋದ ಕುಷ್ಠ ವ್ಯಾಧಿಯಾಗಿ ರುವದು. ಆದರೆ ಯಾಜಕನು ಅದನ್ನು ನೋಡಲು ಇಗೋ, ಅದರಲ್ಲಿ ಬಿಳಿಯ ಕೂದಲು ಇರದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ತಗ್ಗಾಗದೆ ಸ್ವಲ್ಪ ಮೊಬ್ಬಾಗಿದ್ದರೆ ಆಗ ಯಾಜಕನು ಅವನನ್ನು ಏಳು ದಿನಗಳು ಮುಚ್ಚಿಡಬೇಕು. ಅದು ಚರ್ಮದ ಹೊರ ಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು, ಅದು ರೋಗವೇ. ಆದರೆ ಆ ಹೊಳಪಾದ ಮಚ್ಚೆಯು ಹರಡದೆ ಅದೇ ಸ್ಥಳದಲ್ಲಿ ಇದ್ದು ಅದು ಉರಿಯುವ ಹುಣ್ಣಾಗಿದ್ದರೂ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು. ಇಲ್ಲವೆ ಅವನ ದೇಹದ ಚರ್ಮದಲ್ಲಿ ಬೆಂಕಿಯ ಬೊಬ್ಬೆಯು ಉಂಟಾಗಿ ಆ ಬೊಬ್ಬೆಯ ಹಸಿಮಾಂಸವು ಬಿಳುಪಾದ ಇಲ್ಲವೆ ಸ್ವಲ್ಪ ಕೆಂಪಗೆ, ಬಿಳಿಯ ಹೊಳಪಾದ ಮಚ್ಚೆಯಾಗಿದ್ದರೆ ಯಾಜಕನು ಆಗ ಅದನ್ನು ನೋಡ ಬೇಕು. ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬಿಳುಪಾಗಿ ತಿರುಗಿದ್ದರೆ ಮತ್ತು ಅದು ನೋಡು ವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ, ಅದು ಬೊಬ್ಬೆ ಯಿಂದ ಒಡೆದ ಕುಷ್ಠವಾಗಿರುವದು; ಆದಕಾರಣ ಅವನು ಅಶುದ್ಧನೆಂದು ಯಾಜಕನು ನುಡಿಯಬೇಕು. ಅದು ಕುಷ್ಠವ್ಯಾಧಿಯೇ. ಆದರೆ ಯಾಜಕನು ಅದನ್ನು ನೋಡಿದಾಗ ಇಗೋ, ಆ ಹೊಳಪಾದ ಮಚ್ಚೆಯ ಮೇಲೆ ಕೂದಲು ಬೆಳ್ಳಗಾಗದಿದ್ದರೆ ಮತ್ತು ಅದು ಚರ್ಮಕ್ಕಿಂತಲೂ ಆಳವಾಗಿರದೆ ಸ್ವಲ್ಪ ಮೊಬ್ಬಾಗಿದ್ದರೆ ಯಾಜಕನು ಆಗ ಅವನನ್ನು ಏಳು ದಿನಗಳು ಮುಚ್ಚಿಡಬೇಕು. ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ಹೇಳಬೇಕು, ಅದು ಕುಷ್ಠ ವ್ಯಾಧಿಯೇ. ಆ ಹೊಳಪಾದ ಮಚ್ಚೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮೊಬ್ಬಾಗಿದ್ದರೆ ಅದು ಬೊಬ್ಬೆಯ ಊತವೆಂದು ಅವನು ಶುದ್ಧನೆಂದು ಯಾಜಕನು ನುಡಿಯಬೇಕು; ಅದು ಬೆಂಕಿಯ ಬೊಬ್ಬೆಯಾಗಿರುವದು. ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ ಆಗ ಯಾಜಕನು ಆ ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ. ಯಾಜಕನು ಈ ಇಸಬಿನ ವ್ಯಾಧಿಯನ್ನು ನೋಡಿದಾಗ ಇಗೋ, ಅದು ನೋಡಲು ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪು ಕೂದಲು ಇರದಿದ್ದರೆ ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳು ಮುಚ್ಚಿಡಬೇಕು. ಏಳನೇ ದಿನದಲ್ಲಿ ಯಾಜಕನು ಆ ವ್ಯಾಧಿಯನ್ನು ನೋಡಿದಾಗ ಇಗೋ, ಆ ಇಸಬು ಹರಡದೆ ಅದರಲ್ಲಿ ಹಳದಿ ಕೂದಲು ಇರದೆ ಆ ಇಸಬು ಚರ್ಮಕ್ಕಿಂತಲೂ ಆಳವಾಗಿ ಕಾಣದಿದ್ದರೆ ಅವನು ಕ್ಷೌರಮಾಡಿಸಿ ಕೊಳ್ಳಲಿ, ಆದರೆ ಅವನು ಇಸಬನ್ನು ಕ್ಷೌರಮಾಡ ಬಾರದು. ಯಾಜಕನು ಆ ಇಸಬಿನವನನ್ನು ಏಳು ದಿನ ಹೆಚ್ಚಾಗಿ ಮುಚ್ಚಿಡಬೇಕು. ಏಳನೆಯ ದಿನದಲ್ಲಿ ಯಾಜಕನು ಆ ಇಸಬನ್ನು ನೋಡಬೇಕು. ಇಗೋ, ಆ ಇಸಬು ಚರ್ಮದಲ್ಲಿ ಹರಡದಿದ್ದರೆ ನೋಡಲು ಅದು ಚರ್ಮಕ್ಕಿಂತಲೂ ತಗ್ಗಾಗಿರದಿದ್ದರೆ ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು; ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು. ಆದರೆ ಅವನು ಶುದ್ಧನಾದ ಮೇಲೆ ಆ ಇಸಬು ಚರ್ಮದಲ್ಲಿ ಹೆಚ್ಚಾಗಿ ಹರಡಿದರೆ ಯಾಜಕನು ಅವನನ್ನು ನೋಡಬೇಕು; ಇಗೋ, ಆ ಇಸಬು ಚರ್ಮ ದಲ್ಲಿ ಹರಡಿದ್ದರೆ ಯಾಜಕನು ಹಳದಿ ಕೂದಲಿಗಾಗಿ ವಿಚಾರಿಸದಿರಲಿ; ಅವನು ಅಶುದ್ಧನೇ. ಆದರೆ ಆ ಇಸಬು ಅವನಿಗೆ ನಿಂತ ಹಾಗೆ ಕಂಡರೆ ಅದರಲ್ಲಿ ಕಪ್ಪುಕೂದಲು ಬೆಳೆದರೆ ಇಸಬು ವಾಸಿಯಾಯಿತು ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನುಡಿಯಬೇಕು. ಒಬ್ಬ ಪುರುಷನಿಗಾಗಲಿ ಒಬ್ಬ ಸ್ತ್ರೀಗಾಗಲಿ ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಅಂದರೆ ಬಿಳಿಯ ಹೊಳಪಾದ ಮಚ್ಚೆಗಳು ಇದ್ದರೆ ಅವುಗಳನ್ನು ಯಾಜಕನು ನೋಡಬೇಕು. ಇಗೋ, ಅವರ ದೇಹದ ಚರ್ಮದಲ್ಲಿ ಹೊಳಪಾದ ಮಚ್ಚೆಗಳು ಮೊಬ್ಬಾಗಿ ಬಿಳು ಪಾಗಿದ್ದರೆ ಅದು ಚರ್ಮದ ಮೇಲೆ ಬಿಸಿಲಿನಿಂದಾದ ಮಚ್ಚೆಯಾಗಿರುವದು. ಅವನು ಶುದ್ಧನಾಗಿರುವನು. ಪುರುಷನ ತಲೆಯ ಕೂದಲು ಉದುರಿಹೋದರೆ ಅವನು ಬೋಳು ತಲೆಯವನು, ಆದಾಗ್ಯೂ ಅವನು ಶುದ್ಧನಾಗಿರುವನು. ತನ್ನ ಮುಂದಲೆಯ ಕೂದಲು ಉದುರಿಹೋಗಿದ್ದರೂ ಅವನು ಪಟ್ಟೆತಲೆಯವನಾ ದರೂ ಶುದ್ಧನೇ. ಬೋಳು ತಲೆಯಲ್ಲಾಗಲಿ ಇಲ್ಲವೆ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪಾದ ಮಚ್ಚೆಯಿದ್ದರೆ ಅದು ಹುಟ್ಟುತ್ತಿರುವ ಕುಷ್ಠವೇ. ಆಗ ಯಾಜಕನು ಅವನನ್ನು ನೋಡಬೇಕು ಇಗೋ, ಅವನ ಬೋಳು ತಲೆಯಲ್ಲಾಗಲಿ ಪಟ್ಟೆತಲೆಯಲ್ಲಾಗಲಿ ಏಳುತ್ತಿರುವ ಆ ಮಚ್ಚೆಯು ಬಿಳುಪಾಗಿ ಕೆಂಪಾಗಿದ್ದರೆ ಶರೀರದ ಚರ್ಮ ದಲ್ಲಿ ಇರುವ ಕುಷ್ಠದ ಹಾಗಿದ್ದರೆ ಕುಷ್ಠರೋಗಿ ಎಂದೂ ಅಶುದ್ಧನೆಂದೂ ವ್ಯಾಧಿಯು ಅವನ ತಲೆಯಲ್ಲಿದೆ ಯೆಂದೂ ಖಂಡಿತವಾಗಿ ಅಶುದ್ಧನೆಂದೂ ಯಾಜಕನು ಹೇಳಬೇಕು. ಆ ವ್ಯಾಧಿ ಇರುವ ಕುಷ್ಠರೋಗಿಯು ತನ್ನ ಬಟ್ಟೆ ಗಳನ್ನು ಹರಿದುಕೊಂಡು ಬರೀ ತಲೆಯಲ್ಲಿ ಮೇಲ್ತುಟಿ ಯನ್ನು ಮುಚ್ಚಿಕೊಂಡು--ನಾನು ಅಶುದ್ಧನು, ಅಶು ದ್ಧನು ಎಂದು ಕೂಗಬೇಕು. ಆ ವ್ಯಾಧಿಯು ಅವನಲ್ಲಿ ಇರುವಷ್ಟು ದಿನಗಳು ಹೊಲೆಯಾಗಿರುವನು; ಅವನು ಅಶುದ್ಧನು; ಪಾಳೆಯದ ಹೊರಗೆ ಒಂಟಿಯಾಗಿ ವಾಸಿಸಬೇಕು.