Mark · chapter 12 · verse 18
Mark 12:18 in Kannada
ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು ಆತನನ್ನು ಕೇಳಿದ್ದೇನಂದರೆ--
Taruvaaya punarutthaanavillavendu heluva saddukaayaru aatana balige bandu aatanannu keliddenandare--
Mark 12:18 in English
- King James Version (KJV)
- Then come unto him the Sadducees, which say there is no resurrection; and they asked him, saying,
- World English Bible (WEB)
- Some Sadducees, who say that there is no resurrection, came to him. They asked him, saying,
- American Standard Version (ASV)
- And there come unto him Sadducees, who say that there is no resurrection; and they asked him, saying,
- Bible in Basic English (BBE)
- And there came to him Sadducees, who say there is no coming back from the dead; and they put a question to him, saying,
- Darby Translation (DBY)
- And Sadducees come to him, that say there is no resurrection; and they demanded of him saying,
- Webster's Bible (WBS)
- Then come to him the Sadducees, who say there is no resurrection; and they asked him, saying,
- Young's Literal Translation (YLT)
- And the Sadducees come unto him, who say there is not a rising again, and they questioned him, saying,
Read in context
- 16ಅವರು ಅದನ್ನು ತಂದಾಗ ಆತನು ಅವರಿಗೆ--ಇದರ ರೂಪವು ಮತ್ತು ಮೇಲ್ಬರಹವು ಯಾರದು ಎಂದು ಕೇಳಿದ್ದಕ್ಕೆ ಅವರು ಆತನಿಗೆ--ಕೈಸರನದು ಎಂದು ಉತ್ತರ ಕೊಟ್ಟರು.
- 17ಆಗ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಎಂದು ಹೇಳಿದನು. ಇದಕ್ಕೆ ಅವರು ಆತನ ವಿಷಯದಲ್ಲಿ ಆಶ್ಚರ್ಯಪಟ್ಟರು.
- 18ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು ಆತನನ್ನು ಕೇಳಿದ್ದೇನಂದರೆ--
- 19ಬೋಧಕನೇ, ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ತಕ್ಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು ಎಂದು ಮೋಶೆಯು ನಮಗೆ ಬರೆದಿರು ತ್ತಾನಷ್ಟೆ.
- 20ಈಗ ಏಳು ಮಂದಿ ಸಹೋದರರಿದ್ದರು; ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು.
Cross references
- Matthew 22:23–33 ಮತ್ತಾಯನು 22:23–33ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಆತನ ಬಳಿಗೆ ಬಂದು-- ಬೋಧ ಕನೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ. ಹೀಗಿರಲಾಗಿ ನಮ್ಮ ಕೂಡ ಏಳು ಮಂದಿ ಸಹೋದರರಿದ್ದರು; ಮೊದಲನೆ ಯವನು ಮದುವೆ ಮಾಡಿಕೊಂಡು ಸತ್ತನು; ಮತ್ತು ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ಸಹೋದರನಿಗೆ ಬಿಟ್ಟನು. ಅದರಂತೆಯೇ ಎರಡ ನೆಯವನು ಮತ್ತು ಮೂರನೆಯವನು ಹೀಗೆ ಏಳನೆಯ ವನವರೆಗೂ ಮಾಡಿದರು. ಕಡೆಯದಾಗಿ ಆ ಸ್ತ್ರೀಯೂ ಸತ್ತಳು. ಆದದರಿಂದ ಪುನರುತ್ಥಾನದಲ್ಲಿ ಆ ಏಳು ಮಂದಿಯಲ್ಲಿ ಆಕೆಯು ಯಾರಿಗೆ ಹೆಂಡತಿ ಯಾಗಿರುವಳು? ಯಾಕಂದರೆ ಅವರೆಲ್ಲರೂ ಆಕೆಯನ್ನು ಮದುವೆಮಾಡಿಕೊಂಡಿದ್ದರಲ್ಲಾ ಎಂದು ಕೇಳಿದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾಗಲೀ ದೇವರ ಶಕ್ತಿಯನ್ನಾಗಲೀ ತಿಳಿಯದೆ ತಪ್ಪುವವರಾಗಿದ್ದೀರಿ. ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ. ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ-- ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು. ಜನ ಸಮೂಹದವರು ಇದನ್ನು ಕೇಳಿ ಆತನ ಬೋಧನೆಗೆ ವಿಸ್ಮಯಗೊಂಡರು.
- Acts 4:1–2 ಅಪೊಸ್ತಲರ ಕೃತ್ಯಗಳು 4:1–2ಅವರು ಜನರೊಂದಿಗೆ ಮಾತನಾಡು ತ್ತಿದ್ದಾಗ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅವರಿಗೆ ವಿರೋಧ ವಾಗಿ ಬಂದರು; ಯಾಕಂದರೆ ಯೇಸುವಿನ ಮೂಲಕ ಸತ್ತವರಿಗೆ ಪುನರುತ್ಥಾನವಾಗುವದೆಂದು ಅಪೊಸ್ತಲರು ಜನರಿಗೆ ಬೋಧಿಸಿ ಕಲಿಸುತ್ತಿದ್ದದರಿಂದ ಅವರು ಸಂತಾಪಪಟ್ಟಿದ್ದರು.
- Luke 20:27–40 ಲೂಕನು 20:27–40ಇದಲ್ಲದೆ ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು ಆತನ ಬಳಿಗೆ ಬಂದು ಆತನಿಗೆ-- ಬೋಧಕನೇ, ಹೆಂಡತಿ ಇದ್ದ ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋ ದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದುಕೊಟ್ಟನು. ಹೀಗೆ ಏಳು ಮಂದಿ ಸಹೋದರರು ಇರಲಾಗಿ ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು. ಎರಡನೆಯ ವನು ಆಕೆಯನ್ನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು. ಮೂರನೆಯವನು ಆಕೆಯನ್ನು ಮದುವೆಯಾದನು; ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು. ಕಡೇ ದಾಗಿ ಆ ಹೆಂಗಸು ಸಹ ಸತ್ತಳು. ಹಾಗಾದರೆ ಪುನರುತ್ಥಾನದಲ್ಲಿ ಆಕೆಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಯಾಕಂದರೆ ಏಳು ಮಂದಿಯೂ ಅವಳನ್ನು ಹೆಂಡತಿ ಯನ್ನಾಗಿ ಮಾಡಿಕೊಂಡಿದ್ದರು ಅಂದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ಲೋಕದ ಮಕ್ಕಳು ಮದುವೆಮಾಡಿಕೊಳ್ಳುತ್ತಾರೆ ಮತ್ತು ಮದುವೆ ಮಾಡಿಕೊಡುತ್ತಾರೆ. ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಹೊಂದುವದಕ್ಕೆ ಯೋಗ್ಯರೆಂದು ಎಣಿಸಲ್ಪಡುವವರು ಮದುವೆ ಮಾಡಿ ಕೊಳ್ಳುವದೂ ಇಲ್ಲ ಇಲ್ಲವೆ ಮದುವೆ ಮಾಡಿಕೊಡು ವದೂ ಇಲ್ಲ. ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ. ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು. ಯಾಕಂದರೆ ಆತನು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿ ಗಲ್ಲ; ಯಾಕಂದರೆ ಎಲ್ಲರೂ ಆತನಿಗಾಗಿ ಜೀವಿಸುತ್ತಾರೆ ಅಂದನು. ಆಗ ಶಾಸ್ತ್ರಿಗಳಲ್ಲಿ ಕೆಲವರು ಪ್ರತ್ಯುತ್ತರ ವಾಗಿ--ಬೋಧಕನೇ, ನೀನು ಸರಿಯಾಗಿ ಹೇಳಿದ್ದೀ ಅಂದರು. ಅವರು ಆತನಿಗೆ ಯಾವ ಪ್ರಶ್ನೆಯನ್ನೂ ಕೇಳುವದಕ್ಕೆ ಧೈರ್ಯಗೊಳ್ಳಲಿಲ್ಲ.
- 1 Corinthians 15:13–18 1 ಕೊರಿಂಥದವರಿಗೆ 15:13–18ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಕ್ರಿಸ್ತನಾದರೂ ಎದ್ದು ಬರಲಿಲ್ಲ. ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವೂ ವ್ಯರ್ಥವಾದದ್ದು, ನಿಮ್ಮ ನಂಬಿಕೆಯೂ ವ್ಯರ್ಥವಾದದ್ದು. ಹೌದು, ಸತ್ತವರು ಏಳಲಿಲ್ಲವಾದರೆ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ, ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯ ವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೇವು. ಸತ್ತವರು ಏಳಲಿಲ್ಲವಾದರೆ ಕ್ರಿಸ್ತನು ಎಬ್ಬಿಸಲ್ಪಡಲಿಲ್ಲ. ಕ್ರಿಸ್ತನು ಎಬ್ಬಿಸಲ್ಪಡಲಿಲ್ಲವಾದರೆ ನಿಮ್ಮ ನಂಬಿಕೆಯು ವ್ಯರ್ಥವಾಗಿದೆ; ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ. ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆ ಹೋದವರೂ ನಾಶವಾದರು.
- 2 Timothy 2:18 2 ತಿಮೊಥೆಯನಿಗೆ 2:18ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ.
- Acts 23:6–9 ಅಪೊಸ್ತಲರ ಕೃತ್ಯಗಳು 23:6–9ಆದರೆ ಒಂದು ಭಾಗ ಸದ್ದುಕಾಯರೂ ಮತ್ತೊಂದು ಭಾಗ ಫರಿಸಾಯರೂ ಇರುವದನ್ನು ಪೌಲನು ಗ್ರಹಿಸಿದಾಗ--ಜನರೇ, ಸಹೋದರರೇ, ನಾನು ಫರಿಸಾಯನು, ಒಬ್ಬ ಫರಿಸಾಯನ ಮಗನು; ನಿರೀಕ್ಷೆಯ ವಿಷಯವಾಗಿಯೂ ಸತ್ತವರ ಪುನರುತ್ಥಾನದ ವಿಷಯವಾಗಿಯೂ ನಾನು ವಿಚಾರಣೆ ಮಾಡಲ್ಪಡುತ್ತಿದ್ದೇನೆ ಎಂದು ಆಲೆ ಅವನು ಹಾಗೆ ಹೇಳಿದಾಗ ಫರಿಸಾಯರ ಮತ್ತು ಸದ್ದುಕಾಯರ ನಡುವೆ ಭೇದಉಂಟಾಯಿತು; ಇದರಿಂದ ಸಮೂಹವೂ ವಿಭಾಗವಾಯಿತು. ಪುನರುತ್ಥಾನವಾಗಲೀ ದೂತನಾ ಗಲೀ ಆತ್ಮನಾಗಲೀ ಇಲ್ಲವೆಂದು ಸದ್ದುಕಾಯರು ಹೇಳುತ್ತಾರೆ; ಇವೆಲ್ಲವುಗಳು ಇವೆಯೆಂದು ಫರಿಸಾ ಯರು ಒಪ್ಪಿಕೊಳ್ಳುತ್ತಾರೆ. ಅಲ್ಲಿ ದೊಡ್ಡ ಕೂಗಾಟ ಉಂಟಾದದ್ದರಿಂದ ಫರಿಸಾಯರ ಪಕ್ಷದವರಾದ ಶಾಸ್ತ್ರಿಗಳು ಎದ್ದು--ಈ ಮನುಷ್ಯನಲ್ಲಿ ಯಾವ ಕೆಟ್ಟ ದ್ದನ್ನೂ ನಾವು ಕಾಣಲಿಲ್ಲ; ಆತ್ಮವಾಗಲೀ ದೇವದೂತ ನಾಗಲೀ ಅವನ ಕೂಡ ಮಾತನಾಡಿದರೆ ನಾವು ದೇವರಿಗೆ ವಿರೋಧವಾಗಿ ವ್ಯಾಜ್ಯವಾಡದೆ ಇರೋಣ ಎಂದು ಹೇಳಿ ವಾಗ್ವಾದ ಮಾಡಿದರು.
Original words (Greek)
- Then · G2532καί kaí
- come · G2064ἔρχομαι érchomai
- unto · G4314πρός prós
- him · G846αὐτός autós
- Sadducees · G4523Σαδδουκαῖος Saddoukaîos
- which · G3748ὅστις hóstis
- say · G3004λέγω légō
- is · G1511εἶναι eînai
- no · G3361μή mḗ
- resurrection · G386ἀνάστασις anástasis
- and · G2532καί kaí
- asked · G1905ἐπερωτάω eperōtáō
- him · G846αὐτός autós
- saying · G3004λέγω légō