Matthew · chapter 22 · verse 23
Matthew 22:23 in Kannada
ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಆತನ ಬಳಿಗೆ ಬಂದು--
Punarutthaanavillavendu heluva saddukaayaru ade dinadalli aatana balige bandu--
Matthew 22:23 in English
- King James Version (KJV)
- The same day came to him the Sadducees, which say that there is no resurrection, and asked him,
- World English Bible (WEB)
- On that day Sadducees (those who say that there is no resurrection) came to him. They asked him,
- American Standard Version (ASV)
- On that day there came to him Sadducees, they that say that there is no resurrection: and they asked him,
- Bible in Basic English (BBE)
- On the same day there came to him the Sadducees, who say that there is no coming back from the dead: and they put a question to him, saying,
- Darby Translation (DBY)
- On that day came to him Sadducees, who say there is no resurrection; and they demanded of him,
- Webster's Bible (WBS)
- The same day came to him the Sadducees, who say that there is no resurrection, and asked him,
- Young's Literal Translation (YLT)
- In that day there came near to him Sadducees, who are saying there is not a rising again, and they questioned him, saying,
Read in context
- 21ಅದಕ್ಕೆ ಅವರು ಆತನಿಗೆ--ಕೈಸರನದು ಅಂದರು. ಆಗ ಆತನು ಅವರಿಗೆ-ಕೈಸರನದವುಗಳನ್ನು ಕೈಸರನಿಗೆ ಕೊಡಿರಿ; ದೇವರವುಗಳನ್ನು ದೇವರಿಗೆ ಕೊಡಿರಿ ಅಂದನು.
- 22ಇವುಗಳನ್ನು ಅವರು ಕೇಳಿದಾಗ ಆಶ್ಚರ್ಯಪಟ್ಟರು; ಮತ್ತು ಆತನನ್ನು ಬಿಟ್ಟು ಹೊರಟುಹೋದರು.
- 23ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಆತನ ಬಳಿಗೆ ಬಂದು--
- 24ಬೋಧ ಕನೇ, ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋದರನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.
- 25ಹೀಗಿರಲಾಗಿ ನಮ್ಮ ಕೂಡ ಏಳು ಮಂದಿ ಸಹೋದರರಿದ್ದರು; ಮೊದಲನೆ ಯವನು ಮದುವೆ ಮಾಡಿಕೊಂಡು ಸತ್ತನು; ಮತ್ತು ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ಸಹೋದರನಿಗೆ ಬಿಟ್ಟನು.
Cross references
- Acts 4:1 ಅಪೊಸ್ತಲರ ಕೃತ್ಯಗಳು 4:1ಅವರು ಜನರೊಂದಿಗೆ ಮಾತನಾಡು ತ್ತಿದ್ದಾಗ ಯಾಜಕರೂ ದೇವಾಲಯದ ಅಧಿಪತಿಯೂ ಸದ್ದುಕಾಯರೂ ಅವರಿಗೆ ವಿರೋಧ ವಾಗಿ ಬಂದರು;
- Acts 23:6–8 ಅಪೊಸ್ತಲರ ಕೃತ್ಯಗಳು 23:6–8ಆದರೆ ಒಂದು ಭಾಗ ಸದ್ದುಕಾಯರೂ ಮತ್ತೊಂದು ಭಾಗ ಫರಿಸಾಯರೂ ಇರುವದನ್ನು ಪೌಲನು ಗ್ರಹಿಸಿದಾಗ--ಜನರೇ, ಸಹೋದರರೇ, ನಾನು ಫರಿಸಾಯನು, ಒಬ್ಬ ಫರಿಸಾಯನ ಮಗನು; ನಿರೀಕ್ಷೆಯ ವಿಷಯವಾಗಿಯೂ ಸತ್ತವರ ಪುನರುತ್ಥಾನದ ವಿಷಯವಾಗಿಯೂ ನಾನು ವಿಚಾರಣೆ ಮಾಡಲ್ಪಡುತ್ತಿದ್ದೇನೆ ಎಂದು ಆಲೆ ಅವನು ಹಾಗೆ ಹೇಳಿದಾಗ ಫರಿಸಾಯರ ಮತ್ತು ಸದ್ದುಕಾಯರ ನಡುವೆ ಭೇದಉಂಟಾಯಿತು; ಇದರಿಂದ ಸಮೂಹವೂ ವಿಭಾಗವಾಯಿತು. ಪುನರುತ್ಥಾನವಾಗಲೀ ದೂತನಾ ಗಲೀ ಆತ್ಮನಾಗಲೀ ಇಲ್ಲವೆಂದು ಸದ್ದುಕಾಯರು ಹೇಳುತ್ತಾರೆ; ಇವೆಲ್ಲವುಗಳು ಇವೆಯೆಂದು ಫರಿಸಾ ಯರು ಒಪ್ಪಿಕೊಳ್ಳುತ್ತಾರೆ.
- Matthew 3:7 ಮತ್ತಾಯನು 3:7ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು?
- Luke 20:27–40 ಲೂಕನು 20:27–40ಇದಲ್ಲದೆ ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು ಆತನ ಬಳಿಗೆ ಬಂದು ಆತನಿಗೆ-- ಬೋಧಕನೇ, ಹೆಂಡತಿ ಇದ್ದ ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋ ದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದುಕೊಟ್ಟನು. ಹೀಗೆ ಏಳು ಮಂದಿ ಸಹೋದರರು ಇರಲಾಗಿ ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು. ಎರಡನೆಯ ವನು ಆಕೆಯನ್ನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು. ಮೂರನೆಯವನು ಆಕೆಯನ್ನು ಮದುವೆಯಾದನು; ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು. ಕಡೇ ದಾಗಿ ಆ ಹೆಂಗಸು ಸಹ ಸತ್ತಳು. ಹಾಗಾದರೆ ಪುನರುತ್ಥಾನದಲ್ಲಿ ಆಕೆಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಯಾಕಂದರೆ ಏಳು ಮಂದಿಯೂ ಅವಳನ್ನು ಹೆಂಡತಿ ಯನ್ನಾಗಿ ಮಾಡಿಕೊಂಡಿದ್ದರು ಅಂದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ಲೋಕದ ಮಕ್ಕಳು ಮದುವೆಮಾಡಿಕೊಳ್ಳುತ್ತಾರೆ ಮತ್ತು ಮದುವೆ ಮಾಡಿಕೊಡುತ್ತಾರೆ. ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಹೊಂದುವದಕ್ಕೆ ಯೋಗ್ಯರೆಂದು ಎಣಿಸಲ್ಪಡುವವರು ಮದುವೆ ಮಾಡಿ ಕೊಳ್ಳುವದೂ ಇಲ್ಲ ಇಲ್ಲವೆ ಮದುವೆ ಮಾಡಿಕೊಡು ವದೂ ಇಲ್ಲ. ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ. ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು. ಯಾಕಂದರೆ ಆತನು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿ ಗಲ್ಲ; ಯಾಕಂದರೆ ಎಲ್ಲರೂ ಆತನಿಗಾಗಿ ಜೀವಿಸುತ್ತಾರೆ ಅಂದನು. ಆಗ ಶಾಸ್ತ್ರಿಗಳಲ್ಲಿ ಕೆಲವರು ಪ್ರತ್ಯುತ್ತರ ವಾಗಿ--ಬೋಧಕನೇ, ನೀನು ಸರಿಯಾಗಿ ಹೇಳಿದ್ದೀ ಅಂದರು. ಅವರು ಆತನಿಗೆ ಯಾವ ಪ್ರಶ್ನೆಯನ್ನೂ ಕೇಳುವದಕ್ಕೆ ಧೈರ್ಯಗೊಳ್ಳಲಿಲ್ಲ.
- Mark 12:18–27 ಮಾರ್ಕನು 12:18–27ತರುವಾಯ ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಆತನ ಬಳಿಗೆ ಬಂದು ಆತನನ್ನು ಕೇಳಿದ್ದೇನಂದರೆ-- ಬೋಧಕನೇ, ಒಬ್ಬ ಮನುಷ್ಯನ ಸಹೋದರನು ಮಕ್ಕಳಿಲ್ಲದೆ ಹೆಂಡತಿಯನ್ನು ಬಿಟ್ಟು ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ತಕ್ಕೊಂಡು ತನ್ನ ಸಹೋದರನಿಗಾಗಿ ಸಂತಾನವನ್ನು ಪಡೆಯಬೇಕು ಎಂದು ಮೋಶೆಯು ನಮಗೆ ಬರೆದಿರು ತ್ತಾನಷ್ಟೆ. ಈಗ ಏಳು ಮಂದಿ ಸಹೋದರರಿದ್ದರು; ಮೊದಲನೆಯವನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು. ಮತ್ತು ಎರಡನೆಯವನೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದೆ ಸತ್ತನು; ಅದರಂತೆಯೇ ಮೂರನೆಯವನೂ ಆದನು. ಹೀಗೆ ಏಳು ಮಂದಿಯೂ ಆಕೆಯನ್ನು ಮದುವೆಯಾಗಿ ಸಂತಾನವಿಲ್ಲದವ ರಾದರು; ಕೊನೆಯಲ್ಲಿ ಆ ಸ್ತ್ರೀಯೂ ಸತ್ತಳು. ಆದದ ರಿಂದ ಪುನರುತ್ಥಾನದಲ್ಲಿ ಅವರು ಎದ್ದಾಗ ಅವರಲ್ಲಿ ಆಕೆಯು ಯಾರ ಹೆಂಡತಿಯಾಗಿರುವಳು? ಆ ಏಳು ಮಂದಿಗೂ ಆಕೆಯು ಹೆಂಡತಿಯಾಗಿದ್ದಳಲ್ಲಾ ಅಂದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನೀವು ಬರಹಗಳನ್ನಾದರೂ ದೇವರಶಕ್ತಿಯನ್ನಾದರೂ ತಿಳಿಯದೆ ಇರುವದರಿಂದ ತಪ್ಪು ಮಾಡುತ್ತೀರಲ್ಲವೋ? ಯಾಕಂ ದರೆ ಅವರು ಸತ್ತವರೊಳಗಿಂದ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮದುವೆ ಮಾಡಿಕೊಡು ವದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೂತರಂತೆ ಇರುತ್ತಾರೆ. ಸತ್ತವರು ಎದ್ದು ಬರುವದರ ವಿಷಯವಾಗಿ--ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದನೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ? ಯಾಕಂದರೆ ಆತನು ಸತ್ತವರಿಗಲ್ಲ, ಆದರೆ ಜೀವಿತರಿಗೆ ದೇವರಾಗಿದ್ದಾನೆ; ಆದದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪು ಮಾಡುತ್ತೀರಿ ಎಂದು ಹೇಳಿದನು.
- Acts 5:17 ಅಪೊಸ್ತಲರ ಕೃತ್ಯಗಳು 5:17ಆಗ ಮಹಾಯಾಜಕನೂ ಅವನೊಂದಿಗೆ ಇದ್ದ ವರೂ (ಇವರು ಸದ್ದುಕಾಯರ ಪಂಗಡಕ್ಕೆ ಸೇರಿದವರು) ಕೋಪದಿಂದ ತುಂಬಿದವರಾಗಿ ಎದ್ದು
- 1 Corinthians 15:12–14 1 ಕೊರಿಂಥದವರಿಗೆ 15:12–14ಕ್ರಿಸ್ತನು ಸತ್ತವರೊಳಗಿಂದ ಎದ್ದನೆಂದು ಸಾರೋಣ ವಾಗುತ್ತಿರುವಲ್ಲಿ ಸತ್ತವರಿಗೆ ಪುನರುತ್ಥಾನವೇ ಇಲ್ಲ ವೆಂದು ನಿಮ್ಮೊಳಗೆ ಕೆಲವರು ಹೇಳುವದು ಹೇಗೆ? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಕ್ರಿಸ್ತನಾದರೂ ಎದ್ದು ಬರಲಿಲ್ಲ. ಕ್ರಿಸ್ತನು ಎದ್ದು ಬರಲಿಲ್ಲವಾದರೆ ನಮ್ಮ ಪ್ರಸಂಗವೂ ವ್ಯರ್ಥವಾದದ್ದು, ನಿಮ್ಮ ನಂಬಿಕೆಯೂ ವ್ಯರ್ಥವಾದದ್ದು.
- 2 Timothy 2:18 2 ತಿಮೊಥೆಯನಿಗೆ 2:18ಅವರು ಪುನರುತ್ಥಾನವು ಆಗಲೇ ಆಗಿಹೋಯಿ ತೆಂದು ಹೇಳುತ್ತಾ ಸತ್ಯಭ್ರಷ್ಠರಾಗಿ ಕೆಲವರ ನಂಬಿಕೆ ಯನ್ನು ಕೆಡಿಸುವವರಾಗಿದ್ದಾರೆ.
- Matthew 16:6 ಮತ್ತಾಯನು 16:6ಆಗ ಯೇಸು ಅವರಿಗೆ--ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರಿಕೆಯಿಂದ ಜಾಗರೂಕ ರಾಗಿರ್ರಿ ಎಂದು ಹೇಳಿದನು.
Original words (Greek)
- The · G2250ἡμέρα hēméra
- same · G1565ἐκεῖνος ekeînos
- day · G2250ἡμέρα hēméra
- came · G4334προσέρχομαι prosérchomai
- him · G846αὐτός autós
- Sadducees · G4523Σαδδουκαῖος Saddoukaîos
- that · G3004λέγω légō
- is · G1511εἶναι eînai
- no · G3361μή mḗ
- resurrection · G386ἀνάστασις anástasis
- and · G2532καί kaí
- asked · G1905ἐπερωτάω eperōtáō
- him · G846αὐτός autós