Mark · chapter 3 · verse 8
Mark 3:8 in Kannada
ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್ ಸೀದೋನ್ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
Yeroosaleminindaloo idoomaayadindaloo yordanina aacheyim daloo janaru dodda samoohavaagi aatanannu himbaalisidaru. Aatanu maadida mahatkaarya galannu keli toor seedon suttalina janaru dodda samoohavaagi aatana balige bandaru.
Mark 3:8 in English
- King James Version (KJV)
- And from Jerusalem, and from Idumaea, and [from] beyond Jordan; and they about Tyre and Sidon, a great multitude, when they had heard what great things he did, came unto him.
- World English Bible (WEB)
- from Jerusalem, from Idumaea, beyond the Jordan, and those from around Tyre and Sidon. A great multitude, hearing what great things he did, came to him.
- American Standard Version (ASV)
- and from Jerusalem, and from Idumæa, and beyond the Jordan, and about Tyre and Sidon, a great multitude, hearing what great things he did, came unto him.
- Bible in Basic English (BBE)
- And from Jerusalem, and from Idumaea, and the other side of Jordan, and the country about Tyre and Sidon, a great number, hearing what great things he did, came to him.
- Darby Translation (DBY)
- and from Jerusalem, and from Idumaea and beyond the Jordan; and they of around Tyre and Sidon, a great multitude, having heard what things he did, came to him.
- Webster's Bible (WBS)
- And from Jerusalem, and from Idumea, and [from] beyond Jordan; and they about Tyre and Sidon, a great multitude, when they had heard what great things he did, came to him.
- Young's Literal Translation (YLT)
- and from Jerusalem, and from Idumea and beyond the Jordan; and they about Tyre and Sidon — a great multitude — having heard how great things he was doing, came unto him.
Read in context
- 6ಫರಿಸಾ ಯರು ಹೊರಟುಹೋಗಿ ಕೂಡಲೆ ತಾವು ಆತನನ್ನು ಹೇಗೆ ಕೊಲ್ಲಬೇಕೆಂದು ಆತನಿಗೆ ವಿರೋಧ ವಾಗಿ ಹೆರೋದ್ಯರೊಂದಿಗೆ ಆಲೋಚನೆ ಮಾಡಿಕೊಂಡರು.
- 7ಆದರೆ ಯೇಸು ತನ್ನ ಶಿಷ್ಯರೊಂದಿಗೆ ಸಮುದ್ರದ ಕಡೆಗೆ ಹಿಂದಿರುಗಿದನು; ಆಗ ಗಲಿಲಾಯದಿಂದಲೂ ಯೂದಾಯದಿಂದಲೂ
- 8ಯೆರೂಸಲೇಮಿನಿಂದಲೂ ಇದೂಮಾಯದಿಂದಲೂ ಯೊರ್ದನಿನ ಆಚೆಯಿಂ ದಲೂ ಜನರು ದೊಡ್ಡ ಸಮೂಹವಾಗಿ ಆತನನ್ನು ಹಿಂಬಾಲಿಸಿದರು. ಆತನು ಮಾಡಿದ ಮಹತ್ಕಾರ್ಯ ಗಳನ್ನು ಕೇಳಿ ತೂರ್ ಸೀದೋನ್ ಸುತ್ತಲಿನ ಜನರು ದೊಡ್ಡ ಸಮೂಹವಾಗಿ ಆತನ ಬಳಿಗೆ ಬಂದರು.
- 9ಸಮೂಹವು ತನ್ನನ್ನು ನೂಕದಂತೆ ತನಗೋಸ್ಕರ ಒಂದು ಚಿಕ್ಕ ದೋಣಿಯು ಸಿದ್ಧವಿರ ಬೇಕೆಂದು ಆತನು ತನ್ನ ಶಿಷ್ಯರಿಗೆ ಹೇಳಿದನು.
- 10ಯಾಕಂದರೆ ಆತನು ಅನೇಕರನ್ನು ಸ್ವಸ್ಥಮಾಡಿದ್ದರಿಂದ ರೋಗಪೀಡಿತರಾಗಿದ್ದವರೆಲ್ಲರು ಆತನನ್ನು ಮುಟ್ಟಬೇ ಕೆಂದು ಆತನ ಮೇಲೆ ಬೀಳುತ್ತಿದ್ದರು.
Cross references
- Ezekiel 35:15 ಯೆಹೆಜ್ಕೇಲನು 35:15ಹೇಗೆ ನೀನು ಇಸ್ರಾಯೇಲ್ಯರ ಸ್ವಾತಂತ್ರ್ಯದ ನಾಶನಕ್ಕೆ ಸಂತೋಷಪಟ್ಟೆಯೋ ಹಾಗೆಯೇ ನಿನ್ನ ನಾಶನಕ್ಕೆ ಸಂತೋಷಪಡುವ ಹಾಗೆ ಮಾಡುವೆನು. ಓ ಸೇಯಾರ್ ಪರ್ವತವೇ ಮತ್ತು ಸಮಸ್ತ ಎದೋಮೇಸಂಪೂರ್ಣವಾಗಿ ಹಾಳಾಗುವಿ; ಆಗ ನಾನೇ ಕರ್ತ ನೆಂದು ನಿಮಗೆ ತಿಳಿಯುವದು.
- Matthew 11:21 ಮತ್ತಾಯನು 11:21ಖೊರಾಜಿನೇ, ನಿನಗೆ ಅಯ್ಯೋ! ಬೆತ್ಸಾಯಿದವೇ, ನಿನಗೆ ಅಯ್ಯೋ! ಯಾಕಂದರೆ ನಿನ್ನೊಳಗೆ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ಗಳಲ್ಲಿ ನಡೆಯುತ್ತಿದ್ದರೆ ಅವುಗಳು ಆಗಲೇ ಗೋಣೀತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕೂತು ಮಾನಸಾಂತರಪಡುತ್ತಿದ್ದವು.
- Ezekiel 36:5 ಯೆಹೆಜ್ಕೇಲನು 36:5ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಶ್ಚಯವಾಗಿ ನನ್ನ ರೋಷದ ಬೆಂಕಿ ಯಿಂದ ಅನ್ಯಜನಾಂಗಗಳಲ್ಲಿ ಉಳಿದವರಿಗೂ ಎಲ್ಲಾ ಎದೋಮಿಗೆ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶ ವನ್ನು ಕೊಳ್ಳೆಯಾಗಿ ಹೊರಗೆ ಹಾಕುವ ಹಾಗೆ ತಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದಾರೆ.
- Isaiah 34:5 ಯೆಶಾಯ 34:5ನನ್ನ ಖಡ್ಗವು ಪರಲೋಕದಲ್ಲಿ ರೋಷ ಪಾನಮಾಡುವದು; ಇಗೋ, ಅದು ಎದೋ ಮಿನ ಮತ್ತು ನಾನು ಶಪಿಸಿದ ಜನರ ಮೇಲೆ ನ್ಯಾಯ ತೀರಿಸುವದಕ್ಕಾಗಿ ಕೆಳಗೆ ಇಳಿದು ಬರುವದು.
- Ezekiel 26:1–21 ಯೆಹೆಜ್ಕೇಲನು 26:1–21ಹನ್ನೊಂದನೇ ವರುಷದ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ನನಗೆ ಬಂದು ಹೇಳಿದ್ದೇನಂದರೆ-- ಮನುಷ್ಯಪುತ್ರನೇ, ತೂರ್, ಯೆರೂಸಲೇಮಿನ ವಿಷಯವಾಗಿ ಆಹಾ, ಜನರ ದ್ವಾರವಾಗಿದ್ದದ್ದು ಮುರಿದು ಹೋಯಿತು, ಅದು ನನ್ನ ಕಡೆಗೆ ತಿರುಗಿಕೊಂಡಿದೆ, ಯೆರೂಸಲೇಮು ಹಾಳಾದ ಕಾರಣ ನಾನು ತುಂಬಿಕೊಳ್ಳುವೆನು ಎಂದು ಹೇಳಿದ್ದರಿಂದ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ತೂರ್ ದೇಶವೇ, ನಾನು ನಿನಗೆ ವಿರೋಧವಾಗಿದ್ದೇನೆ, ಸಮುದ್ರವು ತನ್ನ ಅಲೆಗಳನ್ನು ಹೇಗೆ ಬರಮಾಡುವದೋ ಹಾಗೆಯೇ ನಾನು ನಿನಗೆ ವಿರೋಧವಾಗಿ ಅನೇಕ ಜನಾಂಗಗಳನ್ನು ನಿನ್ನ ಮೇಲೆ ಬರಮಾಡುವೆನು. ಅವರು ತೂರಿನ ಗೋಡೆಗಳನ್ನು ಕೆಡಿಸಿ ಅದರ ಗೋಪುರಗಳನ್ನು ಒಡೆದು ಬಿಡುವರು, ನಾನು ಅದರ ದೂಳನ್ನು ಅದರಿಂದ ಒರಿಸಿ ಅದನ್ನು ಬಂಡೆಯ ತುದಿಯಂತೆ ಮಾಡುವೆನು. ಅದು ಸಮು ದ್ರದ ಮಧ್ಯದಲ್ಲಿ ಬಲೆಗಳನ್ನು ಹಾಕುವ ಸ್ಥಳವಾಗಿ ರುವದು; ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ಅದು ಜನಾಂಗಗಳಿಗೆ ಕೊಳ್ಳೆ ಯಾಗಿರುವದು, ಇದಲ್ಲದೆ ಬಯಲು ಭೂಮಿಯಲ್ಲಿ ರುವ ಅದರ ಕುಮಾರ್ತೆಯರು ಖಡ್ಗದಿಂದ ಕೊಲ್ಲಲ್ಪಡು ವರು, ಆಗ ನಾನೇ ಕರ್ತನೆಂದು ಎಲ್ಲರಿಗೂ ತಿಳಿಯುವದು. ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ಇಗೋ, ಉತ್ತರದ ರಾಜಾಧಿರಾಜನೂ ಬಾಬೆಲಿನ ಅರಸನೂ ಆದ ನೆಬೂಕದ್ನೆಚ್ಚರನನ್ನು ಕುದುರೆಗಳ ಸಂಗಡಲೂ ಸವಾರರ ಸಂಗಡಲೂ ರಥಗಳ ಸಂಗಡಲೂ ಬಹು ಜನರ ಸಂಗಡಲೂ ತೂರಿನ ಮೇಲೆ ತರುತ್ತೇನೆ. ಅವನು ಬಯಲು ಭೂಮಿಯಲ್ಲಿನ ನಿನ್ನ ಕುಮಾರ್ತೆಯರನ್ನು ಖಡ್ಗದಿಂದ ಕೊಂದು ನಿನಗೆ ವಿರೋಧವಾಗಿ ಕೋಟೆಯನ್ನು ಕಟ್ಟಿ ದಿಬ್ಬ ಹಾಕಿ ನಿನಗೆ ವಿರೋಧವಾಗಿ ಖೇಡ್ಯವನ್ನು ಎತ್ತುವನು; ತನ್ನ ಯುದ್ಧಯಂತ್ರಗಳನ್ನು ನಿನ್ನ ಗೋಡೆಗಳಿಗೆ ವಿರೋಧ ವಾಗಿ ತಾಕಿಸುವೆನು ನಿನ್ನ ಗೋಪುರಗಳನ್ನು ತನ್ನ ಕೊಡಲಿಗಳಿಂದ ಒಡೆದು ಬಿಡುವನು. ಅವನ ಲೆಕ್ಕವಿಲ್ಲದ ಕುದುರೆಗಳಿಂದ ಎದ್ದ ಧೂಳು ನಿನ್ನನ್ನು ಮುಚ್ಚುವದು; ಗೋಡೆಯಿಲ್ಲದ ಕೋಟೆಯೊಳಗೆ ಶತ್ರು ಗಳು ಪ್ರವೇಶಿಸುವ ಪ್ರಕಾರ ಅವರು ನಿನ್ನ ಬಾಗಿಲು ಗಳಲ್ಲಿ ಪ್ರವೇಶಿಸುವಾಗ ಸವಾರರ, ರಥಗಳ, ಚಕ್ರಗಳ ಶಬ್ದದಿಂದ ನಿನ್ನ ಗೋಡೆಗಳು ಕದಲುವವು. ಅವನು ತನ್ನ ಕುದುರೆಗಳ ಗೊರಸುಗಳಿಂದ ನಿನ್ನ ಬೀದಿಗಳನ್ನೆಲ್ಲಾ ತುಳಿಸುವನು; ಜನರನ್ನು ಕತ್ತಿಯಿಂದ ಕೊಲ್ಲುವನು; ಬಲವಾದ ಕೋಟೆಗಳು ನೆಲಕ್ಕೆ ಬೀಳುವವು. ಅವರು ನಿನ್ನ ಸಂಪತ್ತನ್ನು ಕಸಿದುಕೊಂಡು, ಸರಕುಗಳನ್ನು ಕೊಳ್ಳೇ ಹೊಡೆದು, ಗೋಡೆಗಳನ್ನು ಒಡೆದು, ರಮ್ಯವಾದ ಮನೆಗಳನ್ನು ಕೆಡವಿ, ಕಲ್ಲುಗಳನ್ನೂ ಮರಗಳನ್ನೂ ದೂಳನ್ನೂ ನೀರಿನಲ್ಲಿ ಹಾಕುವರು. ಆಗ ನಿನ್ನ ಹಾಡು ಗಳ ಶಬ್ದವನ್ನು ನಿಲ್ಲಿಸುವೆನು, ಇನ್ನು ನಿನ್ನ ಕಿನ್ನರಿಗಳ ಧ್ವನಿ ಕೇಳಲ್ಪಡುವದಿಲ್ಲ. ನಿನ್ನನ್ನು ಬಂಡೆಯ ತುದಿ ಯಂತೆ ಮಾಡುವೆನು. ನೀನು ಅಲ್ಲಿ ಬಲೆ ಹಾಸುವ ಸ್ಥಳವಾಗುವಿ. ಇನ್ನು ನೀನು ಕಟ್ಟಲ್ಪಡುವದಿಲ್ಲ; ಯಾಕಂ ದರೆ ಕರ್ತನಾದ ನಾನೇ ಅದನ್ನು ಹೇಳಿದ್ದೇನೆಂದು ದೇವರಾದ ಕರ್ತನು ಹೇಳುತ್ತಾನೆ. ದೇವರಾದ ಕರ್ತನು ತೂರಿಗೆ ಹೀಗೆ ಹೇಳು ತ್ತಾನೆ--ನಿಮ್ಮನ್ನು ಬೀಳುವಿಕೆಯ ಶಬ್ದದಿಂದಲೂ ಗಾಯ ಪಟ್ಟವರು ಕೂಗುವಾಗಲೂ ನಿನ್ನ ಮಧ್ಯದಲ್ಲಿ ಕೊಲೆ ಯಾಗುವಾಗಲೂ ದ್ವೀಪಗಳು ನಡುಗುವದಿಲ್ಲವೇ? ಆಮೇಲೆ ಸಮುದ್ರದ ಎಲ್ಲಾ ಪ್ರಭುಗಳು ತಮ್ಮ ಸಿಂಹಾಸನಗಳನ್ನು ಬಿಟ್ಟು ಇಳಿಯುವರು; ತಮ್ಮ ನಿಲು ವಂಗಿಗಳನ್ನು ತೆಗೆದುಹಾಕುವರು, ಚಿತ್ರವಾಗಿ ಹೊಲಿದ ತಮ್ಮ ವಸ್ತ್ರಗಳನ್ನು ಇಟ್ಟುಬಿಡುವರು; ನಡುಗುವಿಕೆಯನ್ನು ಹೊದ್ದುಕೊಳ್ಳುವರು; ನೆಲದ ಮೇಲೆ ಕುಳಿತುಕೊಳ್ಳು ವರು, ಕ್ಷಣಕ್ಷಣಕ್ಕೂ ನಡುಗುವರು, ನಿನ್ನ ವಿಷಯ ವಾಗಿ ಆಶ್ಚರ್ಯಪಡುವರು. ನಿನ್ನ ವಿಷಯದಲ್ಲಿ ಗೋಳಾಟವನ್ನೆತ್ತಿ ನಿನಗೆ ಹೇಳುವದೇನಂದರೆ, ಸಮು ದ್ರಗಳ ಬಳಿಯಲ್ಲಿ ವಾಸಿಸಿದವಳೇ, ಹೆಸರು ಗೊಂಡ ಪಟ್ಟಣವೇ, ನೀನೂ ತನ್ನ ನಿವಾಸಿಗಳೂ ಸಮುದ್ರದಲ್ಲಿ ಬಲವಾಗಿದ್ದವಳೇ, ಅದರ ಸಮುದ್ರ ಸಂಚಾರವನ್ನೂ ಭಯಪಡಿಸಿದವಳೇ, ಅಯ್ಯೋ, ಹೇಗೆ ನಾಶವಾದಿ? ಈಗ ನೀನು ಬೀಳುವ ದಿವಸದಲ್ಲಿ ದ್ವೀಪಗಳು ನಡುಗುವವು ಹೌದು, ನೀನು ಹೋಗಿಬಿಡುವದರಿಂದ ಸಮುದ್ರದಲ್ಲಿರುವ ದ್ವೀಪಗಳು ಗಾಬರಿಯಾಗುವವು. ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ನಿನ್ನನ್ನು ನಿವಾಸಿಗಳಿಲ್ಲದ ಪಟ್ಟಣದ ಹಾಗೆ ಹಾಳಾದ ಪಟ್ಟಣವಾಗಿ ಮಾಡುವಾಗ ಹೆಚ್ಚು ನೀರು ಮುಚ್ಚುವ ಹಾಗೆ ಅಗಾಧವನ್ನು ನಿನ್ನ ಮೇಲೆ ಬರ ಮಾಡುವೆನು. ನಿನ್ನನ್ನು ಅಧೋಲೋಕಕ್ಕೆ ತಳ್ಳಿ ಪಾತಾಳಕ್ಕೆ ಇಳಿದ ನಿಮ್ಮ ಪೂರ್ವ ಕಾಲದವರೊಂದಿಗೆ ವಾಸಿಸುವಂತೆ ಮಾಡುವೆನು. ನಾನು ನಿನ್ನ ಮಹಿಮೆಯನ್ನು ಜೀವ ಲೋಕದಲ್ಲಿ ನೆಲೆಗೊಳಿಸದ ನಿರ್ನಿವಾಸಿಯಾಗುವಂತೆ ನಿನ್ನನ್ನು ಪಾತಾಳಕ್ಕಿಳಿದವರ ಸಹವಾಸಕ್ಕೆ ಸೇರಿಸುವೆನು.ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ. ನಾನೂ ನಿನ್ನನ್ನು ದಿಗಿಲುಪಡಿಸುವೆನು, ಇನ್ನು ಮೇಲೆ ನೀನು ಇರುವದಿಲ್ಲ; ಆಮೇಲೆ ನಿನ್ನನ್ನು ಎಷ್ಟು ಹುಡು ಕಿದರೂ ನೀನು ಸಿಗುವದಿಲ್ಲ ಎಂದು ದೇವರಾದ ಕರ್ತನು ಹೇಳುತ್ತಾನೆ.
- Malachi 1:2–4 ಮಲಾಕಿಯ 1:2–4ನಿಮ್ಮನ್ನು ಪ್ರೀತಿಮಾಡಿದ್ದೇನೆಂದು ಕರ್ತನು ಹೇಳುತ್ತಾನೆ; ಆದಾಗ್ಯೂ ನೀವು--ಯಾವದರಲ್ಲಿ ನೀನು ನಮ್ಮನ್ನು ಪ್ರೀತಿಮಾಡಿದ್ದೀ ಎಂದು ಹೇಳುತ್ತೀರಿ. ಕರ್ತನು ಅನು ್ನತ್ತಾನೆ--ಏಸಾವನು ಯಾಕೋಬನಿಗೆ ಅಣ್ಣನಲ್ಲವೋ? ಆದಾಗ್ಯೂ ನಾನು ಯಾಕೋಬನನ್ನು ಪ್ರೀತಿ ಮಾಡಿ ದೆನು. ಆದರೆ ಏಸಾವನನ್ನು ಹಗೆ ಮಾಡಿದೆನು; ಅವನ ಬೆಟ್ಟಗಳನ್ನು ಹಾಳುಮಾಡಿ ಅವನ ಸ್ವಾಸ್ತ್ಯವನ್ನು ಅಡವಿಯ ಸರ್ಪಗಳಿಗೆ ಕೊಟ್ಟೆನು. ಎದೋಮು--ನಾವು ಬಡಕಲಾದೆವು, ಆದರೆ ನಾವು ತಿರಿಗಿಕೊಂಡು ಹಾಳಾದ ಸ್ಥಳಗಳನ್ನು ಕಟ್ಟುವೆವೆಂದು ಹೇಳಿದರೂ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಅವರು ಕಟ್ಟಬಹುದು, ಆದರೆ ನಾನು ಕೆಡವಿಬಿಡುವೆನು; ಅದಕ್ಕ ವರು--ದುಷ್ಟತನದ ಮೇರೆಯೂ ಕರ್ತನ ನಿತ್ಯ ಕೋಪದ ಜನಾಂಗವೆಂದೂ ಕರೆಯುವರು.
- Psalm 87:4 ಕೀರ್ತನೆಗಳು 87:4ರಾಹಬನ್ನೂ ಬಾಬೆಲನ್ನೂ ನನ್ನನ್ನು ತಿಳಿದವರಿಗೆ ಜ್ಞಾಪಕಮಾಡುವೆನು; ಫಿಲಿಷ್ಟಿಯವೂ ತೂರಿನ ಸಂಗಡ ಕೂಷನ್ನೂ ನೋಡು: ಈ ಮನುಷ್ಯನು ಅಲ್ಲಿ ಹುಟ್ಟಿ ದನು.
- Joshua 19:28–29 ಯೆಹೋಶುವ 19:28–29ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು ರಾಮಕ್ಕೆ ಹೋಗಿ ತೂರ್ ಎಂಬ ಬಲವಾದ ಪಟ್ಟಣದ ವರೆಗೂ ತಿರುಗಿ ಅಲ್ಲಿಂದ ಹೋಸಾಕ್ಕೆ ಹೊರಟು ಸಮುದ್ರದ ಬಳಿಯ ಅಕ್ಜೀಬಿನ ಮೇರೆಯ ಅಂಚಿಗೆ ಮುಗಿಯುವದು.
- Psalm 45:12 ಕೀರ್ತನೆಗಳು 45:12ತೂರಿನ ಮಗಳು ಕಾಣಿಕೆಯೊಂದಿಗೆ ಅಲ್ಲಿ ಇರುವಳು; ಅಂದರೆ ಪ್ರಜೆ ಗಳಲ್ಲಿ ಸ್ಥಿತಿವಂತರು ನಿನ್ನ ದಯೆಯನ್ನು ಕೋರುವರು.
- Isaiah 23:1–18 ಯೆಶಾಯ 23:1–18ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾ ಡಿರಿ; ಅದು ಹಾಳಾಗಿರುವದರಿಂದ ನಿಮಗೆ ಮನೆಯಿಲ್ಲ ಮತ್ತು ಒಳಗೆ ಪ್ರವೇಶವೂ ಇಲ್ಲ. ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು. ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನ ವಾಗಿರ್ರಿ. ವಿಶಾಲವಾದ ನೀರುಗಳಿಂದ ಸೀಹೋರಿನ ಧಾನ್ಯವೂ ನದಿಯ ಸುಗ್ಗಿಯೂ ನೈಲಿನ ಬೆಳೆಯಿಂ ದಲೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗ ಗಳಿಗೆ ವ್ಯಾಪಾರ ಸ್ಥಳವಾಗಿತ್ತು. ಚೀದೋನೇ, ನಾಚಿಕೆ ಪಡು, ಸಮುದ್ರವು, ಸಮುದ್ರದುರ್ಗವೂ--ನಾವು ಪ್ರಸವವೇದನೆ ಪಡುವದಿಲ್ಲ, ಹೆರುವದಿಲ್ಲ; ಇಲ್ಲವೆ ಮಕ್ಕಳನ್ನು ಬೆಳೆಸುವದಿಲ್ಲ ಕನ್ಯಾಸ್ತ್ರೀಯರನ್ನು ಸಾಕಿ ಸಲ ಹಲಿಲ್ಲ ಎಂದು ಹೇಳಿದೆಯಷ್ಟೆ. ಐಗುಪ್ತದ ಸುದ್ದಿಗೆ ಆದ ಹಾಗೆ ತೂರಿನ ಸುದ್ದಿಗೆ ಬಹಳ ವೇದನೆಪಡು ವರು. ತಾರ್ಷೀಷಿಗೆ ದಾಟಿಹೋಗಿರಿ, ದ್ವೀಪ ನಿವಾ ಸಿಗಳೇ ಗೋಳಾಡಿರಿ. ನಿಮ್ಮ ಉಲ್ಲಾಸದ ಪಟ್ಟಣವೂ ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವದಕ್ಕೆ ತಕ್ಕೊಂಡು ಹೋ ಗುವವು. ಅದು ಕಿರೀಟದಾಯಕವಾದ ಪಟ್ಟಣವು ಅದರ ವರ್ತಕರಾದ ಪ್ರಭುಗಳು, ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು? ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ. ತಾರ್ಷೀಷಿನ ಮಗಳೇ, ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು, ಅಲ್ಲಿ ಇನ್ನು ಬಲವು ಇರುವುದೇ ಇಲ್ಲ. ಆತನು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕರ್ತನು ವ್ಯಾಪಾರದ ಪಟ್ಟಣವನ್ನು (ಕಾನಾನ್) ಅದರ ದುರ್ಗ ಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾನೆ. ಆತನು ಹೇಳಿದ್ದೇನಂದರೆ--ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು ಅಲ್ಲಿಯೂ ನಿನಗೆ ವಿಶ್ರಾಂತಿ ಇರದು. ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ. ತಾರ್ಷೀಷಿನ ಹಡಗುಗಳೇ, ಗೋ ಳಾಡಿರಿ! ನಮ್ಮ ಆಶ್ರಯಸ್ಥಾನವು ಹಾಳಾಯಿತು. ಆ ದಿವಸದಲ್ಲಿ ಆಗುವದೇನಂದರೆ, ತೂರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ (ಮೂಲ ದಿನಗಳು) ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷಗಳ ಕೊನೆಯಲ್ಲಿ ತೂರ್ ಪಟ್ಟಣವು ಸೂಳೆಯರ ವಿಷಯವಾದ ಗೀತೆಯ ಹಾಗಾಗುವದು. ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ). ಎಪ್ಪತ್ತು ವರುಷ ಗಳಾದ ಮೇಲೆ ಆಗುವದೇನಂದರೆ -- ಕರ್ತನು ತೂರನ್ನು ಪರಾಮರಿಸುವನು (ಹಿತ ತರುವನು). ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕ ದಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ಸೂಳೆತನ ಮಾಡುವದು.(ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು. (ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು.
- Joshua 13:8–14 ಯೆಹೋಶುವ 13:8–14ಅವರ ಸಂಗಡ ರೂಬೇನ್ಯರೂ ಗಾದ್ಯರೂ ತಮ್ಮ ಬಾಧ್ಯತೆಯನ್ನು ಹೊಂದಿದರು. ಏನಂದರೆ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ಸೂರ್ಯೋದಯದ ದಿಕ್ಕಿನಲ್ಲಿ ಅವರಿಗೆ ಕೊಡಲ್ಪಟ್ಟಿತು. ಅವುಗಳು ಯಾವವೆಂದರೆ: ಅರ್ನೋನ್ ನದೀ ತೀರದಲ್ಲಿರುವ ಅರೋಯೇರ್ ನದಿಯ ಮಧ್ಯಭಾಗ ದಲ್ಲಿರುವ ಪಟ್ಟಣವು ಮೊದಲುಗೊಂಡು ದಿಬೋನಿನ ವರೆಗೆ ಮೇದೆಬದ ಸಮನಾದ ಭೂಮಿಯೂ ಹೆಷ್ಬೋನಿನಲ್ಲಿ ಆಳಿದ ಅಮೋರಿಯರ ಅರಸನಾದ ಸೀಹೋನನಿಗೆ ಅಮ್ಮೋನಿನ ಮಕ್ಕಳ ಮೇರೆಯ ವರೆಗೂ ಇದ್ದ ಸಕಲ ಪಟ್ಟಣಗಳೂ ಗಿಲ್ಯಾದೂ ಗೆಷೂರ್ಯರ ಮಾಕತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ ಅಷ್ಟರೋತಿನಲ್ಲಿಯೂ ಎದ್ರೈಯ ಲ್ಲಿಯೂ ಆಳಿದ ರಾಕ್ಷಸರಲ್ಲಿ ಮಿಕ್ಕಿದ್ದ ಬಾಷಾನಿನ ಅರಸನಾದ ಓಗನ ರಾಜ್ಯವೆಲ್ಲಾ ಸಮಸ್ತ ರಾಜ್ಯವಾದ ಬಾಷಾನೂ ಇವುಗಳೇ. ಮೋಶೆಯು ಇವೆಲ್ಲವುಗಳನ್ನು ಜಯಿಸಿ ಅವರನ್ನು ಹೊಡೆದು ಹೊರಡಿಸಿದ್ದನು. ಆದಾಗ್ಯೂ ಇಸ್ರಾಯೇಲ್ ಮಕ್ಕಳು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿ ಬಿಡಲಿಲ್ಲ; ಯಾಕಂದರೆ ಗೆಷೂರ್ಯರೂ ಮಾಕತೀಯರೂ ಈ ದಿನದ ವರೆಗೆ ಇಸ್ರಾಯೇಲಿನ ಮಧ್ಯದಲ್ಲಿ ವಾಸವಾಗಿದ್ದಾರೆ. ಆದರೆ ಮೋಶೆಯು ಲೇವಿಯರ ಗೋತ್ರಕ್ಕೆ ಮಾತ್ರ ಯಾವ ಬಾಧ್ಯತೆಯನ್ನೂ ಕೊಡಲಿಲ್ಲ; ಯಾಕಂದರೆ ಅವನು ಅವರಿಗೆ ಹೇಳಿದ ಪ್ರಕಾರ ಇಸ್ರಾಯೇಲಿನ ದೇವರಾದ ಕರ್ತನ ದಹನ ಬಲಿಗಳೇ ಅವರ ಬಾಧ್ಯತೆಯಾಗಿವೆ.
- Numbers 32:33–38 ಅರಣ್ಯಕಾಂಡ 32:33–38ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು. ಆಗ ಗಾದನ ಮಕ್ಕಳು ದೀಬೋನ್, ಅಟಾರೋತ್, ಆರೋಯೇರ್, ಅಟ್ರೋತ್ಪೊ ಫಾನ್, ಯಗ್ಜೇರ್, ಯೊಗ್ಬೆಹಾ, ಬೇತ್ನಿಮ್ರಾ, ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದ್ದರು. ರೂಬೇನನ ಮಕ್ಕಳು ಹೆಷ್ಬೋನ್, ಎಲೀಯಾಲೆ, ಕಿರ್ಯಾತಯಿಮ್, ನೆಬೋ, ಬಾಳ್ಮೆಯೋನ್ ಎಂದು ಬೇರೆ ಹೆಸರು ಹೊಂದಿದ್ದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ ತಾವು ಕಟ್ಟಿದ ಪಟ್ಟಣಗಳಿಗೆ ಹೆಸರುಗಳನ್ನು ಇಟ್ಟರು.
Original words (Greek)
- And · G2532καί kaí
- from · G575ἀπό apó
- Jerusalem · G2414Ἱεροσόλυμα Hierosólyma
- and · G2532καί kaí
- from · G575ἀπό apó
- Idumaea · G2401Ἰδουμαία Idoumaía
- and · G2532καί kaí
- beyond · G4008πέραν péran
- Jordan · G2446Ἰορδάνης Iordánēs
- and · G2532καί kaí
- they · G3588ὁ ho
- about · G4012περί perí
- Tyre · G5184Τύρος Týros
- and · G2532καί kaí
- Sidon · G4605Σιδών Sidṓn
- great · G4183πολύς polýs
- multitude · G4128πλῆθος plēthos
- heard · G191ἀκούω akoúō
- things · G3745ὅσος hósos
- did · G4160ποιέω poiéō
- came · G2064ἔρχομαι érchomai
- unto · G4314πρός prós
- him · G846αὐτός autós