Mark · chapter 4 · verse 3
Mark 4:3 in Kannada
ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.
Keliri, igo, bittuvavanu bittuvadakke horatuhodanu.
Mark 4:3 in English
- King James Version (KJV)
- Hearken; Behold, there went out a sower to sow:
- World English Bible (WEB)
- “Listen! Behold, the farmer went out to sow.
- American Standard Version (ASV)
- Hearken: Behold, the sower went forth to sow:
- Bible in Basic English (BBE)
- A man went out to put seed in the earth:
- Darby Translation (DBY)
- Hearken: Behold, the sower went forth to sow.
- Webster's Bible (WBS)
- Hearken; Behold, a sower went out to sow:
- Young's Literal Translation (YLT)
- 'Hearken, lo, the sower went forth to sow;
Read in context
- 1ಆತನು ತಿರಿಗಿ ಸಮುದ್ರದ ಬಳಿಯಲ್ಲಿ ಬೋಧಿಸಲಾರಂಭಿಸಿದನು; ಮತ್ತು ಜನರ ದೊಡ್ಡ ಸಮೂಹವು ಆತನ ಬಳಿಗೆ ಕೂಡಿಬಂದದ್ದ ರಿಂದ ಆತನು ಸಮುದ್ರದಲ್ಲಿದ್ದ ಒಂದು ದೋಣಿ ಯನ್ನು ಹತ್ತಿ ಕೂತುಕೊಂಡನು; ಆಗ ಜನ ಸಮೂಹವೆಲ್ಲಾ ಸಮುದ್ರದ ಬಳಿಯಲ್ಲಿ ನೆಲದ ಮೇಲೆ ಇದ್ದರು.
- 2ಆತನು ಸಾಮ್ಯಗಳಲ್ಲಿ ಅವರಿಗೆ ಅನೇಕ ವಿಷಯಗಳನ್ನು ಕಲಿಸಿ ತನ್ನ ಬೋಧನೆ ಯಲ್ಲಿ ಅವರಿಗೆ ಹೇಳಿದ್ದೇನಂದರೆ--
- 3ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು.
- 4ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.
- 5ಇನ್ನು ಕೆಲವು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅದಕ್ಕೆ ಆಳವಾದ ಮಣ್ಣು ಇಲ್ಲದ್ದರಿಂದ ಅವು ಕೂಡಲೆ ಮೊಳೆತವು;
Cross references
- James 2:5 ಯಾಕೋಬನು 2:5ನನ್ನ ಪ್ರಿಯ ಸಹೋದರರೇ, ಕೇಳಿರಿ; ದೇವರು ಈ ಲೋಕದ ಬಡವರನ್ನು ನಂಬಿಕೆಯಲ್ಲಿ ಐಶ್ವರ್ಯವಂತರಾಗಿಯೂ ತನ್ನನ್ನು ಪ್ರೀತಿಸುವವ ರಿಗೆ ತಾನು ವಾಗ್ದಾನ ಮಾಡಿದ ರಾಜ್ಯಕ್ಕೆ ಬಾಧ್ಯ ರಾಗಿಯೂ ಇರಬೇಕೆಂದು ಆರಿಸಿಕೊಳ್ಳಲಿಲ್ಲವೇ?
- 1 Corinthians 3:6–9 1 ಕೊರಿಂಥದವರಿಗೆ 3:6–9ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು. ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
- John 4:35–38 ಯೋಹಾನನು 4:35–38ನೀವು--ಸುಗ್ಗಿಯು ಬರುವದಕ್ಕೆ ಇನ್ನೂ ನಾಲ್ಕು ತಿಂಗಳುಗಳು ಇವೆಯೆಂದು ಹೇಳುತ್ತೀರಲ್ಲವೋ? ಮತ್ತು--ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ, ಯಾಕಂದರೆ ಅವು ಈಗಾ ಗಲೇ ಬೆಳ್ಳಗಾಗಿ ಕೊಯ್ಲಿಗೆ ಬಂದವೆ ಎಂದು ನಾನು ನಿಮಗೆ ಹೇಳುತ್ತೇನೆ. ಕೊಯ್ಯುವವನು ಕೂಲಿಯನ್ನು ಹೊಂದಿ ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳು ತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಾಗಿ ಸಂತೋಷಿಸುವರು. ಬಿತ್ತುವವನೊಬ್ಬನು, ಕೊಯ್ಯು ವವನು ಮತ್ತೊಬ್ಬನು ಎಂದು ಹೇಳುವ ಮಾತು ಇದ ರಲ್ಲಿ ಸತ್ಯವಾಗಿದೆ. ನೀವು ಕಷ್ಟಪಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಬೇರೊಬ್ಬರು ಕಷ್ಟ ಪಟ್ಟರು ನೀವು ಅವರ ಕಷ್ಟದಲ್ಲಿ ಸೇರಿಕೊಂಡಿದ್ದೀರಿ ಅಂದನು.
- Matthew 13:26 ಮತ್ತಾಯನು 13:26ಅದು ಮೊಳೆತು ಫಲಕೊಟ್ಟಾಗ ಹಣಜಿ ಸಹ ಕಾಣಿಸಿ ಕೊಂಡಿತು.
- Deuteronomy 4:1 ಧರ್ಮೋಪದೇಶಕಾಂಡ 4:1ಹೀಗಿರುವದರಿಂದ ಈಗ ಇಸ್ರಾಯೇಲೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿ ಅವುಗಳನ್ನು ಮಾಡಿರಿ.
- Luke 8:5–8 ಲೂಕನು 8:5–8ಬಿತ್ತುವವನು ಬೀಜವನ್ನು ಬಿತ್ತುವದಕ್ಕಾಗಿ ಹೊರಟು ಹೋದನು. ಅವನು ಬಿತ್ತಿದಾಗ ಕೆಲವು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದ ಪಕ್ಷಿಗಳು ಅವುಗಳನ್ನು ನುಂಗಿಬಿಟ್ಟವು. ಇದಲ್ಲದೆ ಕೆಲವು ಬಂಡೆಯ ಮೇಲೆ ಬಿದ್ದವು; ಮೊಳೆತ ಕೂಡಲೆ ತ್ಯಾವ ಇಲ್ಲದಿರುವ ಕಾರಣ ಒಣಗಿಹೋದವು. ಕೆಲವು ಮುಳ್ಳುಗಳ ಮಧ್ಯದಲ್ಲಿ ಬಿದ್ದವು; ಆಗ ಮುಳ್ಳುಗಳು ಅವುಗಳೊಂದಿಗೆ ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು. ಕೆಲವು ಒಳ್ಳೇ ನೆಲದ ಮೇಲೆ ಬಿದ್ದವು; ಆಗ ಅವು ಬೆಳೆದು ನೂರರಷ್ಟು ಫಲಕೊಟ್ಟವು. ಇವುಗಳನ್ನು ಆತನು ಹೇಳಿ--ಕೇಳುವದಕ್ಕೆ ಕಿವಿಗಳುಳ್ಳವನು ಕೇಳಲಿ ಎಂದು ಕೂಗಿ ಹೇಳಿದನು.
- Mark 4:26–29 ಮಾರ್ಕನು 4:26–29ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ. ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು. ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ. ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
- Revelation 2:29 ಪ್ರಕಟನೆ 2:29ಆತ್ಮನು ಸಭೆಗಳಿಗೆ ಹೇಳುವ ದನ್ನು ಕಿವಿಯುಳ್ಳವನು ಕೇಳಲಿ.
- Mark 4:14 ಮಾರ್ಕನು 4:14ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ.
- Acts 2:14 ಅಪೊಸ್ತಲರ ಕೃತ್ಯಗಳು 2:14ಆದರೆ ಪೇತ್ರನು ಹನ್ನೊಂದು ಮಂದಿಯೊಂದಿಗೆ ಎದ್ದು ನಿಂತು ಗಟ್ಟಿಯಾದ ಸ್ವರದಿಂದ ಅವರಿಗೆ-- ಯೂದಾಯದವರೇ, ಯೆರೂಸಲೇಮಿನಲ್ಲಿ ವಾಸ ವಾಗಿರುವ ಎಲ್ಲಾ ಜನರೇ, ಈ ವಿಷಯ ನಿಮಗೆ ಗೊತ್ತಾಗುವ ಹಾಗೆ ನನ್ನ ಮಾತುಗಳಿಗೆ ಕಿವಿಗೊಡಿರಿ.
- Revelation 2:7 ಪ್ರಕಟನೆ 2:7ಆತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ. ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನ ಮಧ್ಯದಲ್ಲಿರುವ ಜೀವವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು.
- Matthew 13:3 ಮತ್ತಾಯನು 13:3ಆಗ ಆತನು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದೇನಂದರೆ--ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟನು.