Mark · chapter 4 · verse 26
Mark 4:26 in Kannada
ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
Aatanu heliddenandare--obba manushyanu beejavannu bhoomiyalli haakidanteye devara raajyavu ide.
Mark 4:26 in English
- King James Version (KJV)
- And he said, So is the kingdom of God, as if a man should cast seed into the ground;
- World English Bible (WEB)
- He said, “God’s Kingdom is as if a man should cast seed on the earth,
- American Standard Version (ASV)
- And he said, So is the kingdom of God, as if a man should cast seed upon the earth;
- Bible in Basic English (BBE)
- And he said, Such is the kingdom of God, as if a man put seed in the earth,
- Darby Translation (DBY)
- And he said, Thus is the kingdom of God, as if a man should cast the seed upon the earth,
- Webster's Bible (WBS)
- And he said, So is the kingdom of God, as if a man should cast seed into the ground;
- Young's Literal Translation (YLT)
- And he said, 'Thus is the reign of God: as if a man may cast the seed on the earth,
Read in context
- 24ಆತನು ಅವರಿಗೆ--ನೀವು ಕೇಳುವದರಲ್ಲಿ ಎಚ್ಚರವಾಗಿರ್ರಿ; ನೀವು ಯಾವ ಅಳತೆಯಿಂದ ಅಳೆಯುತ್ತೀರೋ ಅದು ನಿಮಗೂ ಅಳೆಯಲ್ಪಡುವದು; ಮತ್ತು ಕೇಳುವವ ರಾದ ನಿಮಗೆ ಹೆಚ್ಚಾಗಿ ಕೊಡಲ್ಪಡುವದು.
- 25ಯಾಕಂ ದರೆ ಯಾವನಿಗೆ ಇದೆಯೋ ಅವನಿಗೆ ಕೊಡಲ್ಪಡುವದು; ಯಾವನಿಗೆ ಇಲ್ಲವೋ ಅವನಿಗೆ ಇದ್ದದ್ದೂ ಅವನಿಂದ ತೆಗೆಯಲ್ಪಡುವದು ಎಂದು ಹೇಳಿದನು.
- 26ಆತನು ಹೇಳಿದ್ದೇನಂದರೆ--ಒಬ್ಬ ಮನುಷ್ಯನು ಬೀಜವನ್ನು ಭೂಮಿಯಲ್ಲಿ ಹಾಕಿದಂತೆಯೇ ದೇವರ ರಾಜ್ಯವು ಇದೆ.
- 27ಅವನು ರಾತ್ರಿ ಮಲಗುತ್ತಾ ಹಗಲು ಏಳುತ್ತಾ ಇರುವಾಗ ಹೇಗೆ ಆ ಬೀಜವು ಮೊಳೆತು ಬೆಳೆಯುವದೆಂದು ಅವನಿಗೆ ಗೊತ್ತಾಗುವದಿಲ್ಲವೋ ಹಾಗೆಯೇ ಇರುವದು.
- 28ಯಾಕಂದರೆ ಭೂಮಿಯು ಮೊದಲು ಮೊಳಕೆಯನ್ನು ಆಮೇಲೆ ತೆನೆಯನ್ನು ಇದಾದ ಮೇಲೆ ತೆನೆಯಲ್ಲಿ ಪೂರ್ಣಕಾಳನ್ನು ತನ್ನಷ್ಟಕ್ಕೆ ತಾನೇ ಫಲಿಸುತ್ತದೆ.
Cross references
- Matthew 13:24 ಮತ್ತಾಯನು 13:24ಆತನು ಮತ್ತೊಂದು ಸಾಮ್ಯವನ್ನು ಹೇಳಿದ್ದೇ ನಂದರೆ--ಪರಲೋಕ ರಾಜ್ಯವು ಒಳ್ಳೇ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ್ದ ಒಬ್ಬ ಮನುಷ್ಯನಿಗೆ ಹೋಲಿಕೆ ಯಾಗಿದೆ.
- 1 Corinthians 3:6–9 1 ಕೊರಿಂಥದವರಿಗೆ 3:6–9ನಾನು ಸಸಿಯನ್ನು ನೆಟ್ಟೆನು, ಅಪೊಲ್ಲೋ ಸನು ನೀರು ಹೊಯಿದನು. ಆದರೆ ಬೆಳೆಸುತ್ತಾ ಬಂದಾತನು ದೇವರು. ಹೀಗಿರಲಾಗಿ ನೆಡುವವ ನಾಗಲಿ ನೀರು ಹೊಯ್ಯುವವನಾಗಲಿ ವಿಶೇಷವಾ ದವನಲ್ಲ, ಬೆಳೆಸುವ ದೇವರೇ ವಿಶೇಷವಾದವನು. ನೆಡುವವನೂ ನೀರು ಹೊಯ್ಯುವವನೂ ಒಂದೇ ಆಗಿದ್ದಾರೆ; ಆದರೂ ಪ್ರತಿಯೊಬ್ಬನಿಗೆ ಅವನವನ ಕಷ್ಟಕ್ಕೆ ತಕ್ಕಹಾಗೆ ಕೂಲಿಯು ದೊರೆಯುವದು. ನಾವು ದೇವರ ಜೊತೆ ಕೆಲಸದವರು; ನೀವು ದೇವರ ಹೊಲವೂ ದೇವರ ಕಟ್ಟಡವೂ ಆಗಿದ್ದೀರಿ.
- 1 Peter 1:23–25 1 ಪೇತ್ರನು 1:23–25ೀವು ತಿರಿಗಿ ಹುಟ್ಟಿದವರಾಗಿದ್ದೀರಲ್ಲಾ; ಆ ಜನ್ಮವು ನಾಶವಾಗುವ ಬೀಜದಿಂದ ಉಂಟಾದದ್ದಲ್ಲ. ನಾಶವಾಗದ ಬೀಜ ದಿಂದಲೇ ಉಂಟಾದದ್ದು ಅದು ದೇವರ ಸದಾ ಜೀವವುಳ್ಳ ವಾಕ್ಯದ ಮೂಲಕವಾಗಿ ಉಂಟಾಯಿತು. ನರಜಾತಿಯೆಲ್ಲಾ ಹುಲ್ಲಿನ ಹಾಗಿದೆ. ಮನುಷ್ಯನ ಪ್ರಭಾವವೆಲ್ಲಾ ಹುಲ್ಲಿನ ಹೂವಿನಂತಿದೆ. ಹುಲ್ಲು ಒಣಗಿ ಹೋಗುವದು, ಅದರ ಹೂವು ಉದುರಿ ಹೋಗು ವದು;ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ. ಕರ್ತನ ಮಾತೋ ಸದಾಕಾಲವೂ ಇರು ವದು. ಅದು ಯಾವದಂದರೆ ನಿಮಗೆ ಸಾರಲ್ಪಟ್ಟ ಸುವಾರ್ತಾವಾಕ್ಯವೇ.
- Luke 8:11 ಲೂಕನು 8:11ಆ ಸಾಮ್ಯವು ಇದೇ; ಬೀಜವು ದೇವರ ವಾಕ್ಯವೇ.
- Isaiah 32:20 ಯೆಶಾಯ 32:20ಎಲ್ಲಾ ನೀರುಗಳ ಬಳಿಯಲ್ಲಿ ಬಿತ್ತುತ್ತಲೂ ಎತ್ತು ಕತ್ತೆಗಳನ್ನು (ಕಾವಲಿಗೆ) ಮೇಯ ಬಿಡುತ್ತಲೂ ಇರುವ ನೀವು ಧನ್ಯರೇ ಸರಿ.
- Luke 8:5 ಲೂಕನು 8:5ಬಿತ್ತುವವನು ಬೀಜವನ್ನು ಬಿತ್ತುವದಕ್ಕಾಗಿ ಹೊರಟು ಹೋದನು. ಅವನು ಬಿತ್ತಿದಾಗ ಕೆಲವು ದಾರಿಯ ಮಗ್ಗುಲಲ್ಲಿ ಬಿದ್ದು ತುಳಿಯಲ್ಪಟ್ಟವು; ಆಕಾಶದ ಪಕ್ಷಿಗಳು ಅವುಗಳನ್ನು ನುಂಗಿಬಿಟ್ಟವು.
- James 3:18 ಯಾಕೋಬನು 3:18ಸಮಾಧಾನ ಪಡಿಸುವವರಿಗೆ ಸಮಾಧಾನದಲ್ಲಿ ನೀತಿಯ ಫಲವು ಬಿತ್ತಲ್ಪಡುತ್ತದೆ.
- Ecclesiastes 11:4 ಪ್ರಸಂಗಿ 11:4ಯಾವನು ಗಾಳಿಯನ್ನು ಲಕ್ಷಿಸುವನೋ ಅವನು ಬಿತ್ತುವದಿಲ್ಲ; ಮೋಡಗಳನ್ನು ಗಮನಿಸುವವನು ಕೊಯ್ಯುವದಿಲ್ಲ.
- Mark 4:3–4 ಮಾರ್ಕನು 4:3–4ಕೇಳಿರಿ, ಇಗೋ, ಬಿತ್ತುವವನು ಬಿತ್ತುವದಕ್ಕೆ ಹೊರಟುಹೋದನು. ಅವನು ಬಿತ್ತಿದಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು. ಆಗ ಆಕಾಶದ ಪಕ್ಷಿಗಳು ಬಂದು ಅವುಗಳನ್ನು ನುಂಗಿಬಿಟ್ಟವು.
- Ecclesiastes 11:6 ಪ್ರಸಂಗಿ 11:6ಬೆಳಿಗ್ಗೆ ನಿನ್ನ ಬೀಜವನ್ನು ಬಿತ್ತು, ಸಂಜೆ ತನಕ ನಿನ್ನ ಕೈಯನ್ನು ಹಿಂತೆಗೆಯಬೇಡ; ಇದೋ, ಅದೋ ಯಾವದೋ ಕೈಗೂಡಿ ಬರು ವದೋ ಇಲ್ಲವೆ ಎರಡೂ ಒಂದೇ ರೀತಿ ಒಳ್ಳೆಯದಾ ಗುವವೋ ಎಂದು ನಿನಗೆ ತಿಳಿಯದು.
- Mark 4:14–20 ಮಾರ್ಕನು 4:14–20ಬಿತ್ತುವವನು ವಾಕ್ಯವನ್ನು ಬಿತ್ತುತ್ತಾನೆ. ದಾರಿಯ ಮಗ್ಗುಲಲ್ಲಿ ವಾಕ್ಯವು ಬಿತ್ತಲ್ಪಟ್ಟವರು ಇವರೇ; ಆದರೆ ಇವರು ಕೇಳಿದಾಗ ಸೈತಾನನು ಕೂಡಲೆ ಬಂದು ಅವರ ಹೃದಯಗಳಲ್ಲಿ ಬಿತ್ತಲ್ಪಟ್ಟಿದ್ದ ವಾಕ್ಯವನ್ನು ತೆಗೆದು ಬಿಡುತ್ತಾನೆ. ಅದೇ ಪ್ರಕಾರ ಬಂಡೆಯ ನೆಲದ ಮೇಲೆ ಬಿತ್ತಲ್ಪಟ್ಟವರು ವಾಕ್ಯವನ್ನು ಕೇಳಿದಾಗ ಕೂಡಲೆ ಅದನ್ನು ಸಂತೋಷದಿಂದ ಅಂಗೀಕರಿಸಿ ತಮ್ಮಲ್ಲಿ ಬೇರು ಇಲ್ಲದ ಕಾರಣ ಸ್ವಲ್ಪ ಕಾಲ ಮಾತ್ರ ಇರುವಂಥವರಾಗಿದ್ದಾರೆ; ತರುವಾಯ ವಾಕ್ಯದ ನಿಮಿತ್ತ ಉಪದ್ರವವಾಗಲೀ ಹಿಂಸೆಯಾಗಲೀ ಬಂದಾಗ ಕೂಡಲೆ ಅವರು ಅಭ್ಯಂತರಪಡುತ್ತಾರೆ. ಮುಳ್ಳು ಗಿಡಗಳಲ್ಲಿ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿದಾಗ ಈ ಲೋಕದ ಚಿಂತೆಗಳೂ ಐಶ್ವರ್ಯದ ಮೋಸವೂ ಇತರ ವಿಷಯಗಳ ಆಶೆಗಳೂ ಒಳಗೆ ಸೇರಿ ವಾಕ್ಯವನ್ನು ಅಡಗಿಸುವದರಿಂದ ಅದು ನಿಷ್ಫಲವಾಗುವದು. ಒಳ್ಳೆಯ ಭೂಮಿಯ ಮೇಲೆ ಬಿತ್ತಲ್ಪಟ್ಟವರು ಇವರೇ; ಇಂಥವರು ವಾಕ್ಯವನ್ನು ಕೇಳಿ ಅಂಗೀಕರಿಸಿದ ಮೇಲೆ ಕೆಲವರು ಮೂವತ್ತರಷ್ಟು, ಕೆಲವರು ಅರವತ್ತರಷ್ಟು, ಕೆಲವರು ನೂರರಷ್ಟು ಫಲಕೊಡುತ್ತಾರೆ ಅಂದನು.
- John 12:24 ಯೋಹಾನನು 12:24ನಾನು ನಿಮಗೆ ನಿಜನಿಜವಾಗಿ ಹೇಳು ತ್ತೇನೆ--ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯ ದಿದ್ದರೆ ಅದು ಒಂದೇ ಆಗಿ ಉಳಿಯುವದು; ಅದು ಸತ್ತಮೇಲೆ ಬಹಳ ಫಲಕೊಡುವದು.