Mark · chapter 4 · verse 31
Mark 4:31 in Kannada
ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
Bhoomiyalliruva ellaa beejagaliginta chikkadaagiruva saasive kaalu bhoomiyalli bittalpattaddakke adu holike yaagide.
Mark 4:31 in English
- King James Version (KJV)
- [It is] like a grain of mustard seed, which, when it is sown in the earth, is less than all the seeds that be in the earth:
- World English Bible (WEB)
- It’s like a grain of mustard seed, which, when it is sown in the earth, though it is less than all the seeds that are on the earth,
- American Standard Version (ASV)
- It is like a grain of mustard seed, which, when it is sown upon the earth, though it be less than all the seeds that are upon the earth,
- Bible in Basic English (BBE)
- It is like a grain of mustard seed, which, when it is put in the earth, is smaller than all the seeds on the earth,
- Darby Translation (DBY)
- As to a grain of mustard [seed], which, when it is sown upon the earth, is less than all seeds which are upon the earth,
- Webster's Bible (WBS)
- [It is] like a grain of mustard-seed, which, when it is sown in the earth, is less than all the seeds that are in the earth.
- Young's Literal Translation (YLT)
- As a grain of mustard, which, whenever it may be sown on the earth, is less than any of the seeds that are on the earth;
Read in context
- 29ಆದರೆ ಫಲವು ಫಲಿಸಿದಾಗ ಸುಗ್ಗಿಯು ಬಂದದರಿಂದ ಅವನು ಕೂಡಲೆ ಕುಡು ಗೋಲು ಹಾಕಿ ಕೊಯ್ಯುತ್ತಾನೆ.
- 30ಆತನು--ದೇವರ ರಾಜ್ಯವನ್ನು ನಾವು ಯಾವ ದಕ್ಕೆ ಹೋಲಿಸೋಣ? ಇಲ್ಲವೆ ಯಾವ ಹೋಲಿಕೆಗೆ ಅದನ್ನು ಹೋಲಿಸೋಣ?
- 31ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತ ಚಿಕ್ಕದಾಗಿರುವ ಸಾಸಿವೆ ಕಾಳು ಭೂಮಿಯಲ್ಲಿ ಬಿತ್ತಲ್ಪಟ್ಟದ್ದಕ್ಕೆ ಅದು ಹೋಲಿಕೆ ಯಾಗಿದೆ.
- 32ಆದರೆ ಅದು ಬಿತ್ತಲ್ಪಟ್ಟ ಮೇಲೆ ಬೆಳೆದು ಆಕಾಶದ ಪಕ್ಷಿಗಳು ಅದರ ನೆರಳಿನಲ್ಲಿ ವಾಸ ಮಾಡು ವಷ್ಟು ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ದೊಡ್ಡ ಕೊಂಬೆಗಳನ್ನು ಬಿಡುತ್ತದೆ ಎಂದು ಹೇಳಿದನು.
- 33ಅವರು ಕೇಳಿಸಿಕೊಳ್ಳಲು ಸಾಧ್ಯವಾಗುವಷ್ಟು ಇಂಥ ಅನೇಕ ಸಾಮ್ಯಗಳಿಂದ ಆತನು ಅವರಿಗೆ ವಾಕ್ಯವನ್ನು ಹೇಳಿದನು.
Cross references
- Acts 19:20 ಅಪೊಸ್ತಲರ ಕೃತ್ಯಗಳು 19:20ಈ ರೀತಿಯಾಗಿ ದೇವರ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲ ವಾಯಿತು.
- Luke 13:18–19 ಲೂಕನು 13:18–19ಇದಲ್ಲದೆ ಆತನು--ದೇವರ ರಾಜ್ಯವು ಯಾವ ದಕ್ಕೆ ಹೋಲಿಕೆಯಾಗಿದೆ? ನಾನು ಯಾವದಕ್ಕೆ ಅದನ್ನು ಹೋಲಿಸಲಿ? ಅದು ಒಬ್ಬ ಮನುಷ್ಯನು ಸಾಸಿವೆಕಾಳನ್ನು ತೆಗೆದುಕೊಂಡು ಹೋಗಿ ತನ್ನ ತೋಟ ದಲ್ಲಿ ಹಾಕಿದ್ದಕ್ಕೆ ಹೋಲಿಕೆಯಾಗಿದೆ; ಅದು ಬೆಳೆದು ಒಂದು ದೊಡ್ಡ ಮರವಾಯಿತು; ಆಕಾಶದ ಪಕ್ಷಿಗಳು ಅದರ ಕೊಂಬೆಗಳಲ್ಲಿ ವಾಸಮಾಡಿದವು ಅಂದನು.
- Genesis 22:17–18 ಆದಿಕಾಂಡ 22:17–18ನಿನ್ನನ್ನು ಆಶೀರ್ವದಿ ಸಿಯೇ ಆಶೀರ್ವದಿಸುವೆನು; ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳ ಹಾಗೆಯೂ ಸಮುದ್ರದ ತೀರ ದಲ್ಲಿರುವ ಮರಳಿನ ಹಾಗೆಯೂ ಹೆಚ್ಚಿಸೇ ಹೆಚ್ಚಿಸುವೆನು; ನಿನ್ನ ಸಂತಾನವು ತನ್ನ ಶತ್ರುಗಳ ದ್ವಾರವನ್ನು ವಶ ಮಾಡಿಕೊಳ್ಳುವದು. ನೀನು ನನ್ನ ಸ್ವರಕ್ಕೆ ವಿಧೇಯ ನಾದದ್ದರಿಂದ ಭೂಮಿಯ ಜನಾಂಗಗಳೆಲ್ಲಾ ನಿನ್ನ ಸಂತಾನದಲ್ಲಿ ಆಶೀರ್ವದಿಸಲ್ಪಡುವವು ಎಂಬದೇ.
- Malachi 1:11 ಮಲಾಕಿಯ 1:11ಸೂರ್ಯೋದಯವು ಮೊದಲುಗೊಂಡು ಅದರ ಅಸ್ತಮಾನದ ವರೆಗೂ ನನ್ನ ಹೆಸರು ಅನ್ಯಜನಾಂಗ ಗಳಲ್ಲಿ ಘನವಾಗಿರುವದು; ಸಕಲ ಸ್ಥಳಗಳಲ್ಲಿ ನನ್ನ ಹೆಸರಿಗೆ ಧೂಪವೂ ಶುದ್ಧಕಾಣಿಕೆಯೂ ಅರ್ಪಿಸ ಲ್ಪಡುವದು; ನನ್ನ ಹೆಸರು ಅನ್ಯಜನಾಂಗಗಳಲ್ಲಿ ಘನ ವಾಗಿ ರುವದೆಂದು ಸೈನ್ಯಗಳ ಕರ್ತನು ಹೇಳುತ್ತಾನೆ.
- Daniel 2:44–45 ದಾನಿಯೇಲನು 2:44–45ಅರ ಸರ ದಿವಸಗಳಲ್ಲಿ ಪರಲೋಕದ ದೇವರು ಎಂದಿಗೂ ನಾಶವಾಗದ ರಾಜ್ಯವನ್ನು ಸ್ಥಾಪಿಸುವನು. ಅದರ ರಾಜ್ಯ ವನ್ನು ಬೇರೆ ಜನರಿಗೆ ಕೊಡದೆ ಆ ರಾಜ್ಯಗಳನ್ನೆಲ್ಲಾ ಧ್ವಂಸ ಮಾಡಿ ಮುಗಿಸಿ ಎಂದೆಂದಿಗೂ ನಿಲ್ಲುವದು. ಆ, ಕಲ್ಲು ಕೈಗಳ ಸಹಾಯವಿಲ್ಲದೆ ಬೆಟ್ಟದೊಳಗಿಂದ ಒಡೆಯಲ್ಪಟ್ಟು ಕಬ್ಬಿಣವನ್ನೂ ಹಿತ್ತಾಳೆಯನ್ನೂ ಮಣ್ಣನ್ನೂ ಬೆಳ್ಳಿಯನ್ನೂ ಬಂಗಾರವನ್ನೂ ಧ್ವಂಸ ಮಾಡಿತೆಂದು ನೀನು ನೋಡಿದ್ದು ಇದೇ. ಮಹಾದೇವರು ಇನ್ನು ಮೇಲೆ ಸಂಭವಿಸುವಂಥದ್ದನ್ನು ಅರಸನಿಗೆ ತಿಳಿಯಪಡಿಸಿ ದ್ದಾನೆ; ಕನಸು ನಿಶ್ಚಯವಾಗಿದೆ; ಅದರ ಅರ್ಥಗಳೂ ಸತ್ಯವಾಗಿವೆ ಅಂದನು.
- Isaiah 49:6–7 ಯೆಶಾಯ 49:6–7ಆತನೇ ಈಗ ಹೀಗನ್ನುತ್ತಾನೆ--ನೀನು ನನ್ನ ಸೇವಕನಾಗಿ ಮಾಡಬೇಕಾದವುಗಳಲ್ಲಿ ಯಾಕೋಬನ ಕುಲಗಳನ್ನು ಉನ್ನತಪಡಿ ಸುವದೂ ಇಸ್ರಾಯೇಲಿನಲ್ಲಿ ರಕ್ಷಿತರಾದವರನ್ನು ತಿರಿಗಿ ಬರಮಾಡುವದೂ ಅಲ್ಪ ಕಾರ್ಯವೇ; ನನ್ನ ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು ಅನ್ಯಜನಾಂಗಗಳಿಗೆ ಬೆಳಕನ್ನಾಗಿ ದಯಪಾಲಿಸುವೆನು. ಮನುಷ್ಯನಿಂದ ತಿರಸ್ಕರಿಸಲ್ಪಟ್ಟವನು ಜನಾಂಗಕ್ಕೆ ಅಸ ಹ್ಯನೂ ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಕರ್ತನೂ ಹೀಗೆ ಹೇಳುತ್ತಾನೆ, ಕರ್ತನ ನಂಬಿಗಸ್ತಿ ಕೆಯನ್ನೂ ನಿನ್ನನ್ನು ಆದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ನೋಡಿ ಅರಸರು ಏಳುತ್ತಾರೆ; ಅಧಿ ಪತಿಗಳು ಸಹ ಆರಾಧಿಸುವರು.
- Amos 9:11–15 ಆಮೋಸ 9:11–15ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು. ಆಗ ಅವರು ಎದೋ ಮಿನ ಮಿಕ್ಕಭಾಗವನ್ನೂ ನನ್ನ ಹೆಸರಿನಿಂದ ಕರೆಯಲ್ಪ ಡುವ ಎಲ್ಲಾ ಅನ್ಯಜನಾಂಗಗಳನ್ನೂ ಸ್ವಾಧೀನಮಾಡಿ ಕೊಳ್ಳುವರೆಂದು ಇದನ್ನು ಮಾಡುವವನಾದ ಕರ್ತನು ಹೇಳುತ್ತಾನೆ. ಕರ್ತನು ಹೇಳುವದೇನಂದರೆ--ಇಗೋ, ದಿನಗಳು ಬರುವವು, ಆಗ ಉಳುವವನು ಕೊಯ್ಯುವವನನ್ನೂ ದ್ರಾಕ್ಷೇ ಮಾರುವ ವನು ಬೀಜ ಬಿತ್ತುವವನನ್ನೂ ಹಿಂದಟ್ಟುವರು. ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವವು. ಗುಡ್ಡಗಳೆಲ್ಲಾ ಕರಗುವವು. ನನ್ನ ಜನರಾದ ಇಸ್ರಾಯೇಲ್ಯರನ್ನು ಸೆರೆಯಿಂದ ತಿರಿಗಿ ಬರಮಾಡುವೆನು; ಅವರು ಹಾಳಾದ ಪಟ್ಟಣಗಳನ್ನು ಕಟ್ಟಿ ವಾಸಮಾಡುವರು; ದ್ರಾಕ್ಷೇತೋಟ ಗಳನ್ನು ನೆಟ್ಟು ಅವುಗಳ ದ್ರಾಕ್ಷಾರಸವನ್ನು ಕುಡಿಯು ವರು; ತೋಟಗಳನ್ನು ಮಾಡಿ ಅವುಗಳ ಫಲವನ್ನು ತಿನ್ನುವರು.ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ. ನಾನು ಅವರನ್ನು ಅವರ ದೇಶದಲ್ಲಿ ನೆಡುವೆನು; ನಾನು ಅವರಿಗೆ ಕೊಟ್ಟಿರುವ ದೇಶದಿಂದ ಅವರು ಇನ್ನು ಮೇಲೆ ಕಿತ್ತು ಹಾಕಲ್ಪಡರೆಂದು ನಿನ್ನ ದೇವರಾದ ಕರ್ತನು ಹೇಳುತ್ತಾನೆ.
- Acts 5:14 ಅಪೊಸ್ತಲರ ಕೃತ್ಯಗಳು 5:14ವಿಶ್ವಾಸಿಗಳಾದ ಬಹಳ ಸ್ತ್ರೀ ಪುರುಷರ ಸಮೂಹದ ವರು ಕರ್ತನಲ್ಲಿ ಸೇರಿಕೊಂಡರು.
- Zechariah 2:11 ಜೆಕರ್ಯ 2:11ಇದ ಲ್ಲದೆ ಆ ದಿನದಲ್ಲಿ ಅನೇಕ ಜನಾಂಗಗಳು ಕರ್ತನಿಗೆ ಅಂಟಿಕೊಂಡು ನನ್ನ ಜನರಾಗುವರು; ನಾನು ನಿನ್ನ ಮಧ್ಯದಲ್ಲಿ ವಾಸಮಾಡುವೆನು; ಸೈನ್ಯಗಳ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆಂದು ತಿಳುಕೊಳ್ಳುವಿ.
- Daniel 2:34–35 ದಾನಿಯೇಲನು 2:34–35ನೀನು ನೋಡುತ್ತಿರಲಾಗಿ, ಒಂದು ಕಲ್ಲು ಕೈಗಳ ಸಹಾಯವಿಲ್ಲದೆ ಒಡೆಯಲ್ಪಟ್ಟು ಅರ್ಧ ಕಬ್ಬಿ ಣವೂ ಅರ್ಧ ಮಣ್ಣೂ ಆಗಿದ್ದ ಆ ವಿಗ್ರಹದ ಪಾದ ಗಳನ್ನು ಬಡಿದು ಅವುಗಳನ್ನು ಚೂರುಚೂರು ಮಾಡಿತು. ಆಮೇಲೆ ಕಬ್ಬಿಣವೂ ಮಣ್ಣೂ ಹಿತ್ತಾಳೆಯೂ ಬೆಳ್ಳಿಯೂ ಮತ್ತು ಬಂಗಾರವೂ ಕೂಡ ಒಡೆದು ಚೂರು ಚೂರಾಗಿ ಬೇಸಿಗೆ ಕಾಲದ ಧಾನ್ಯದ ಹೊಟ್ಟಿನ ಹಾಗಾ ದವು; ಅವುಗಳಿಗೆ ಎಡೆ ಸಿಗದ ಹಾಗೆ ಗಾಳಿಯು ಅವುಗಳನ್ನು ಹೊಡೆದುಕೊಂಡು ಹೋಯಿತು; ಪ್ರತಿಮೆಯನ್ನು ಬಡಿದ ಕಲ್ಲು ದೊಡ್ಡ ಬೆಟ್ಟವಾಗಿ ಸಮಸ್ತ ಭೂಮಿಯನ್ನು ತುಂಬಿಸಿತು.
- Isaiah 9:7 ಯೆಶಾಯ 9:7ಅದನ್ನು ನೇಮಿಸುವದಕ್ಕೂ ಇಂದಿನಿಂದ ಎಂದೆಂದಿಗೂ ನೀತಿ ನ್ಯಾಯಗಳೊಂದಿಗೆ ಅದನ್ನು ಸ್ಥಾಪಿಸುವದಕ್ಕೂ ದಾವೀದನ ಸಿಂಹಾಸನ ಕ್ಕಾಗಲಿ ಅವನ ರಾಜ್ಯಕ್ಕಾಗಲಿ ಅವನ ಪರಿಪಾಲ ನೆಯ ಮತ್ತು ಶಾಂತಿಯ ಅಭಿವೃದ್ಧಿಗಾಗಲಿ ಅಂತ್ಯವೇ ಇಲ್ಲ; ಸೈನ್ಯಗಳ ಕರ್ತನ ಆಸಕ್ತಿಯು ಇದನ್ನು ನೆರವೇರಿ ಸುವದು.