Amos · chapter 9 · verse 11
Amos 9:11 in Kannada
ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.
Aa dinadalli bidda daaveedana gudaaravannu naanu nillisi adara harakugalannu muchchuvenu. Avana haalaadaddannu ebbisi hindina divasagalalli maadida haage kattuvenu.
Amos 9:11 in English
- King James Version (KJV)
- In that day will I raise up the tabernacle of David that is fallen, and close up the breaches thereof; and I will raise up his ruins, and I will build it as in the days of old:
- World English Bible (WEB)
- In that day I will raise up the tent of David who is fallen and close up its breaches, and I will raise up its ruins, and I will build it as in the days of old,
- American Standard Version (ASV)
- In that day will I raise up the tabernacle of David that is fallen, and close up the breaches thereof; and I will raise up its ruins, and I will build it as in the days of old;
- Bible in Basic English (BBE)
- In that day I will put up the tent of David which has come down, and make good its broken places; and I will put up again his damaged walls, building it up as in the past;
- Darby Translation (DBY)
- In that day will I raise up the tabernacle of David which is fallen, and close up the breaches thereof; and I will raise up its ruins, and I will build it as in the days of old:
- Webster's Bible (WBS)
- In that day will I raise up the tabernacle of David that is fallen, and close up their breaches; and I will raise up its ruins, and I will build it as in the days of old:
- Young's Literal Translation (YLT)
- In that day I raise the tabernacle of David, that is fallen, And I have repaired their breaches, And its ruins I do raise up, And I have built it up as in days of old.
Read in context
- 9ಇಗೋ, ಮೊರದಲ್ಲಿ ಧಾನ್ಯವನ್ನು ಕೇರುವಂತೆ ನಾನು ಆಜ್ಞಾಪಿಸಿ ಇಸ್ರಾಯೇಲಿನ ಮನೆತನದವ ರನ್ನು ಎಲ್ಲಾ ಜನಾಂಗಗಳಲ್ಲಿ ಕೇರುವೆನು; ಆದಾಗ್ಯೂ ಒಂದು ಕಾಳಾದರೂ ನೆಲಕ್ಕೆ ಬೀಳುವದಿಲ್ಲ.
- 10ಕೇಡು ನಮ್ಮನ್ನು ಹಿಂದಟ್ಟದು, ನಮ್ಮನ್ನು ತಡೆಯುವದಿಲ್ಲ ಎನ್ನುವ ನನ್ನ ಜನರಲ್ಲಿರುವ ಪಾಪಿಷ್ಠರು ಕತ್ತಿಯಿಂದ ಸಾಯುವರು.
- 11ಆ ದಿನದಲ್ಲಿ ಬಿದ್ದ ದಾವೀದನ ಗುಡಾರವನ್ನು ನಾನು ನಿಲ್ಲಿಸಿ ಅದರ ಹರಕುಗಳನ್ನು ಮುಚ್ಚುವೆನು. ಅವನ ಹಾಳಾದದ್ದನ್ನು ಎಬ್ಬಿಸಿ ಹಿಂದಿನ ದಿವಸಗಳಲ್ಲಿ ಮಾಡಿದ ಹಾಗೆ ಕಟ್ಟುವೆನು.
- 12ಆಗ ಅವರು ಎದೋ ಮಿನ ಮಿಕ್ಕಭಾಗವನ್ನೂ ನನ್ನ ಹೆಸರಿನಿಂದ ಕರೆಯಲ್ಪ ಡುವ ಎಲ್ಲಾ ಅನ್ಯಜನಾಂಗಗಳನ್ನೂ ಸ್ವಾಧೀನಮಾಡಿ ಕೊಳ್ಳುವರೆಂದು ಇದನ್ನು ಮಾಡುವವನಾದ ಕರ್ತನು ಹೇಳುತ್ತಾನೆ.
- 13ಕರ್ತನು ಹೇಳುವದೇನಂದರೆ--ಇಗೋ, ದಿನಗಳು ಬರುವವು, ಆಗ ಉಳುವವನು ಕೊಯ್ಯುವವನನ್ನೂ ದ್ರಾಕ್ಷೇ ಮಾರುವ ವನು ಬೀಜ ಬಿತ್ತುವವನನ್ನೂ ಹಿಂದಟ್ಟುವರು. ಬೆಟ್ಟಗಳು ಹೊಸ ಸಿಹಿ ದ್ರಾಕ್ಷಾರಸವನ್ನು ಸುರಿಯುವವು. ಗುಡ್ಡಗಳೆಲ್ಲಾ ಕರಗುವವು.
Cross references
- Acts 15:15–17 ಅಪೊಸ್ತಲರ ಕೃತ್ಯಗಳು 15:15–17ಇದಕ್ಕೆ ಪ್ರವಾದಿ ಗಳ ಮಾತುಗಳು ಒಪ್ಪುತ್ತವೆ, ಹೇಗಂದರೆ-- ಇದಾದ ಮೇಲೆ ನಾನು ಹಿಂತಿರುಗಿ ಬಂದು ಬಿದ್ದು ಹೋಗಿರುವ ದಾವೀದನ ಗುಡಾರವನ್ನು ತಿರಿಗಿ ಕಟ್ಟುವೆನು. ಅದರಲ್ಲಿ ಹಾಳಾದದ್ದನ್ನು ನಾನು ತಿರಿಗಿ ಸರಿಮಾಡಿಸಿ ಅದನ್ನು ನೆಟ್ಟಗೆ ನಿಲ್ಲಿಸುವೆನು. ಅವೆಲ್ಲವುಗಳನ್ನು ಮಾಡುವ ಕರ್ತನು--ನನ್ನ ಹೆಸರಿನಿಂದ ಕರೆಯಲ್ಪಟ್ಟ ಮನುಷ್ಯರಲ್ಲಿ ಉಳಿದವರೆಲ್ಲರೂ ಅನ್ಯಜನರೆಲ್ಲರೂ ಕರ್ತನನ್ನು ಹುಡುಕುವವರಾಗಿರಬೇಕು ಎಂದು ಹೇಳುತ್ತಾನೆ.
- Jeremiah 33:14–16 ಯೆರೆಮೀಯ 33:14–16ಇಗೋ, ದಿನಗಳು ಬರುವವೆಂದು ಕರ್ತನು ಅನ್ನುತ್ತಾನೆ; ಆಗ ನಾನು ಇಸ್ರಾಯೇಲಿನ ಮನೆಯವರ ಸಂಗಡಲೂ ಯೆಹೂದನ ಮನೆಯವರ ಸಂಗಡಲೂ ವಾಗ್ದಾನವನ್ನು ಮಾಡಿದಂತೆ ಒಳ್ಳೇ ಮಾತನ್ನು ನೆರೆವೇರಿ ಸುವೆನು. ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂ ನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು; ಆತನು ದೇಶದಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸುವನು. ಆ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡುವದು; ಯೆರೂಸಲೇಮು ಭದ್ರವಾಗಿ ವಾಸಿಸುವದು; ಆಕೆಯು (ಯೆರೂಸ ಲೇಮು) ಕರೆಯಲ್ಪಡುವ ಹೆಸರು ಇದೇ--ನಮ್ಮ ನೀತಿ ಯಾಗಿರುವ ಕರ್ತನು.
- Isaiah 16:5 ಯೆಶಾಯ 16:5ಕರುಣೆಯಲ್ಲಿ ಸಿಂಹಾಸನವು ಸ್ಥಾಪಿಸಲ್ಪಡುವದು; ನ್ಯಾಯತೀರಿಸು ವವನೂ ನ್ಯಾಯವನ್ನು ಹುಡುಕುವವನೂ ನೀತಿಗೋ ಸ್ಕರ ತ್ವರೆಪಡುವವನೂ ದಾವೀದನ ಗುಡಾರದಲ್ಲಿ ಅದರ ಮೇಲೆ ಸತ್ಯದಲ್ಲಿ ಕೂತುಕೊಳ್ಳುವನು.
- Jeremiah 23:5–6 ಯೆರೆಮೀಯ 23:5–6ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು. ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ.
- Psalm 80:12 ಕೀರ್ತನೆಗಳು 80:12ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ?
- Jeremiah 46:26 ಯೆರೆಮೀಯ 46:26ಅವರ ಪ್ರಾಣವನ್ನು ಹುಡುಕುವವರ ಕೈಯಲ್ಲಿಯೂ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಅವನ ಸೇವಕರ ಕೈಯಲ್ಲಿಯೂ ಅವರನ್ನು ನಾನು ಒಪ್ಪಿಸುತ್ತೇನೆ. ಅದರ ತರುವಾಯ ಅದು ಪೂರ್ವದ ಕಾಲಗಳಂತೆ ನಿವಾಸ ವಾಗುವದೆಂದು ಕರ್ತನು ಅನ್ನುತ್ತಾನೆ.
- Ezekiel 17:24 ಯೆಹೆಜ್ಕೇಲನು 17:24ಕರ್ತ ನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾ ದದ್ದನ್ನು ಎತ್ತರಪಡಿಸಿ (ಬೆಳಸಿ) ಹಸುರಾಗಿರುವದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರ ಣ್ಯದ ಸಕಲ ವೃಕ್ಷಗಳು ತಿಳಿಯುವವೆಂದು ಕರ್ತನಾದ ನಾನೇ ಮಾತನಾಡಿ ಅದನ್ನು ಮಾಡಿದ್ದೇನೆ.
- Hosea 3:5 ಹೋಶೇಯ 3:5ಆಮೇಲೆ ಇಸ್ರಾಯೇಲಿನ ಮಕ್ಕಳು ತಿರುಗಿಕೊಂಡು ಅವರ ದೇವ ರಾದ ಕರ್ತನನ್ನು ಮತ್ತು ಅವರ ಅರಸನಾದ ದಾವೀದ ನನ್ನು ಹುಡುಕಿಕೊಂಡು ಅಂತ್ಯ ದಿವಸಗಳಲ್ಲಿ ಕರ್ತನನ್ನೂ ಆತನ ದಯೆಯನ್ನೂ ಭಯದಿಂದ ಮರೆಹೋಗುವರು.
- Isaiah 63:11 ಯೆಶಾಯ 63:11ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ?
- Jeremiah 33:20–26 ಯೆರೆಮೀಯ 33:20–26ಹಗಲು ರಾತ್ರಿ ತಮ್ಮ ಕಾಲದಲ್ಲಿ ಆಗದ ಹಾಗೆ ಹಗಲಿನ ಸಂಗಡ ನನ್ನ ಒಡಂಬಡಿಕೆಯನ್ನೂ ರಾತ್ರಿಯ ಸಂಗಡ ನನ್ನ ಒಡಂಬಡಿಕೆಯನ್ನೂ ವಿಾರುವದಕ್ಕೆ ನಿಮ್ಮಿಂದಾದರೆ ಆಗ ನಾನು ನನ್ನ ಸೇವಕನಾದ ದಾವೀದನ ಸಂಗಡ ಮಾಡಿದ ಒಡಂಬಡಿಕೆಯನ್ನೂ ಅವನ ಸಿಂಹಾಸನದಲ್ಲಿ ಆಳುವ ಮಗನು ಅವನಿಗಿಲ್ಲದ ಹಾಗೆ ಮತ್ತು ನನ್ನ ಸೇವಕರಾಗಿರುವ ಯಾಜಕರಾದ ಲೇವಿಯರ ಸಂಗಡ ಮಾಡಿದ ಒಡಂಬಡಿಕೆಯನ್ನೂ ವಿಾರುವದಕ್ಕೆ ಆದೀತು. ಆಕಾಶದ ಸೈನ್ಯವನ್ನು ಹೇಗೆ ಎಣಿಸಲಿಕ್ಕಾಗದೋ ಸಮುದ್ರದ ಮರಳನ್ನು ಹೇಗೆ ಅಳಿಯಲಿಕ್ಕಾಗದೋ ಹಾಗೆಯೇ ನಾನು ನನ್ನ ಸೇವಕನಾದ ದಾವೀದನ ಸಂತಾನವನೂ ನನಗೆ ಸೇವೆ ಮಾಡುವ ಲೇವಿಯ ರನ್ನೂ ಹೆಚ್ಚಿಸುವೆನು. ಇದಲ್ಲದೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ-- ಈ ಜನರು ಮಾತನಾಡುವದನ್ನು ನೀನು ನೋಡಲಿಲ್ಲವೊ? ಕರ್ತನು ಆದುಕೊಂಡ ಎರಡು ಗೋತ್ರಗಳನ್ನು ಬೇಡವೆಂದಿದ್ದಾನೆಂದು ಹೇಳಿ ನನ್ನ ಜನರನ್ನು ಇನ್ನು ಅವರ ಮುಂದೆ ಜನಾಂಗವಲ್ಲದ ಹಾಗೆ ಅಸಡ್ಡೆ ಮಾಡಿದ್ದಾರೆ. ಕರ್ತನು ಹೀಗೆ ಹೇಳುತ್ತಾನೆ--ನನ್ನ ನಿಯಮವು ಹಗಲು ರಾತ್ರಿಯ ಸಂಗಡ ಇಲ್ಲದಿದ್ದರೆ ಭೂಮ್ಯಾಕಾಶಗಳ ಕಟ್ಟಳೆಗಳನ್ನು ನಾನು ಸ್ಥಾಪಿಸದಿ ದ್ದರೆ--ಆಗ ಯಾಕೋಬನ ಸಂತಾನವನ್ನೂ ನನ್ನ ಸೇವಕನಾದ ದಾವೀದನನ್ನೂ ಬೇಡವೆಂದು ಬಿಟ್ಟು ಅವನ ಸಂತಾನದಿಂದ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತಾನದ ಮೇಲೆ ಆಳುವವರನ್ನು ತಕ್ಕೊಳ್ಳದೆ ಇದ್ದೆನು; ಆದರೆ ನಾನು ಅವರ ಸೆರೆಯಿಂದ ಬಿಡಿಸಿ ಅವರನ್ನು ಕರುಣಿಸುವೆನು. ಆಗ ಯಾಕೋಬನ ಸಂತಾನವನ್ನೂ ನನ್ನ ಸೇವಕನಾದ ದಾವೀದನನ್ನೂ ಬೇಡವೆಂದು ಬಿಟ್ಟು ಅವನ ಸಂತಾನದಿಂದ ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತಾನದ ಮೇಲೆ ಆಳುವವರನ್ನು ತಕ್ಕೊಳ್ಳದೆ ಇದ್ದೆನು; ಆದರೆ ನಾನು ಅವರ ಸೆರೆಯಿಂದ ಬಿಡಿಸಿ ಅವರನ್ನು ಕರುಣಿಸುವೆನು.
- Ezekiel 34:23–24 ಯೆಹೆಜ್ಕೇಲನು 34:23–24ನಾನು ಅವುಗಳ ಮೇಲೆ ಒಬ್ಬ ಕುರುಬನನ್ನು ನೇಮಿಸುವೆನು; ಅವನು ಅವುಗಳನ್ನು ಮೇಯಿಸುತ್ತಾನೆ. ನನ್ನ ಸೇವಕನಾದ ದಾವೀದನೇ ಅವುಗಳನ್ನು ಮೇಯಿಸಿ ಅವುಗಳಿಗೆ ಕುರುಬನಾಗುತ್ತಾನೆ. ಕರ್ತನಾದ ನಾನೇ ಅವುಗಳಿಗೆ ದೇವರಾಗಿರುವೆನು; ಮತ್ತು ನನ್ನ ಸೇವಕನಾದ ದಾವೀದನು ಅವುಗಳ ಮಧ್ಯೆ ಪ್ರಧಾನನಾಗಿರುವನೆಂದು ಕರ್ತನಾದ ನಾನೇ ಅದನ್ನು ಮಾತಾಡಿದ್ದೇನೆ;
- Luke 1:31–33 ಲೂಕನು 1:31–33ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸು ಎಂದು ಹೆಸರಿಡಬೇಕು. ಆತನು ದೊಡ್ಡವನಾಗಿದ್ದು ಮಹೋನ್ನತನ ಕುಮಾರನೆಂದು ಕರೆಯಲ್ಪಡುವನು; ದೇವರಾದ ಕರ್ತನು ಆತನ ತಂದೆ ಯಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡು ವನು. ಆತನು ಯಾಕೋಬನ ಮನೆತನವನ್ನು ಸದಾ ಕಾಲವೂ ಆಳುವನು; ಆತನ ರಾಜ್ಯಕ್ಕೆ ಅಂತ್ಯವೇ ಇಲ್ಲ ಎಂದು ಹೇಳಿದನು.