Mark · chapter 8 · verse 15
Mark 8:15 in Kannada
ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.
Aatanu avarige--pharisaayara huliya vishaya dalliyoo herodana huliya vishayadalliyoo neevu echcharikeyinda irri endu khanditavaagi helidanu.
Mark 8:15 in English
- King James Version (KJV)
- And he charged them, saying, Take heed, beware of the leaven of the Pharisees, and [of] the leaven of Herod.
- World English Bible (WEB)
- He warned them, saying, “Take heed: beware of the yeast of the Pharisees and the yeast of Herod.”
- American Standard Version (ASV)
- And he charged them, saying, Take heed, beware of the leaven of the Pharisees and the leaven of Herod.
- Bible in Basic English (BBE)
- And he said to them, Take care to be on the watch against the leaven of the Pharisees and the leaven of Herod.
- Darby Translation (DBY)
- And he charged them, saying, Take heed, beware of the leaven of the Pharisees and [of] the leaven of Herod.
- Webster's Bible (WBS)
- And he charged them saying, Take heed, beware of the leaven of the Pharisees, and [of] the leaven of Herod.
- Young's Literal Translation (YLT)
- and he was charging them, saying, 'Take heed, beware of the leaven of the Pharisees, and of the leaven of Herod,'
Read in context
- 13ಆತನು ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೊರಟು ಹೋದನು.
- 14ಆಗ ಶಿಷ್ಯರು ರೊಟ್ಟಿಯನ್ನು ತಕ್ಕೊಳ್ಳುವದಕ್ಕೆ ಮರೆತಿದ್ದರು; ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿಗಿಂತ ಹೆಚ್ಚೇನೂ ಇರಲಿಲ್ಲ.
- 15ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.
- 16ಆಗ ಅವರು ತಮ್ಮೊಳಗೆ--ನಮಗೆ ರೊಟ್ಟಿ ಇಲ್ಲದಿರುವದರಿಂದಲೇ ಹೀಗೆ ಹೇಳುತ್ತಾನೆಂದು ಅವರು ತರ್ಕಿಸಿಕೊಂಡರು.
- 17ಯೇಸು ಅದನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನಂದರೆನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಯಾಕೆ ತರ್ಕಿಸಿಕೊಳ್ಳುತ್ತೀರಿ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣಮಾಡಿಕೊಂಡಿದ್ದಿರೋ?
Cross references
- 1 Corinthians 5:6–8 1 ಕೊರಿಂಥದವರಿಗೆ 5:6–8ನೀವು ಹಿಗ್ಗುವದು ಒಳ್ಳೇದಲ್ಲ. ಸ್ವಲ್ಪ ಹುಳಿಯು ಕಣಿಕವನ್ನೆಲ್ಲಾ ಹುಳಿ ಮಾಡುತ್ತದೆಂಬದು ನಿಮಗೆ ತಿಳಿಯದೋ? ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
- Matthew 16:6 ಮತ್ತಾಯನು 16:6ಆಗ ಯೇಸು ಅವರಿಗೆ--ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರಿಕೆಯಿಂದ ಜಾಗರೂಕ ರಾಗಿರ್ರಿ ಎಂದು ಹೇಳಿದನು.
- Matthew 16:11–12 ಮತ್ತಾಯನು 16:11–12ನಾನು ರೊಟ್ಟಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದ್ದನ್ನು ನೀವು ಗ್ರಹಿಸದೆ ಇರುವದು ಹೇಗೆ ಎಂದು ಹೇಳಿದನು. ಆಗ ಅವರು ರೊಟ್ಟೀ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಆತನು ಹೇಳಿದನು ಎಂದು ಅವರು ಗ್ರಹಿಸಿಕೊಂಡರು.
- Mark 12:13 ಮಾರ್ಕನು 12:13ಅವರು ಆತನನ್ನು ಆತನ ಮಾತುಗಳಲ್ಲಿ ಹಿಡಿಯಬೇಕೆಂದು ಫರಿಸಾಯರಲ್ಲಿಯೂ ಹೆರೋದ್ಯ ರಲ್ಲಿಯೂ ಕೆಲವರನ್ನು ಆತನ ಬಳಿಗೆ ಕಳುಹಿಸಿದರು.
- Luke 12:1–2 ಲೂಕನು 12:1–2ಅಷ್ಟರಲ್ಲಿ ಅಸಂಖ್ಯವಾದ ಜನಸಮೂಹವು ಒಬ್ಬರ ಮೇಲೊಬ್ಬರು ತುಳಿದಾಡುವಷ್ಟು ಒಟ್ಟುಗೂಡಿ ಬಂದಿರಲಾಗಿ ಆತನು ಎಲ್ಲಾದಕ್ಕಿಂತ ಮೊದಲು ತನ್ನ ಶಿಷ್ಯರಿಗೆ--ಫರಿಸಾಯರ ಕಪಟವೆಂಬ ಹುಳಿಯ ವಿಷಯದಲ್ಲಿ ನೀವು ಎಚ್ಚರವಾಗಿರ್ರಿ. ಪ್ರಕಟವಾಗದಂತೆ ಯಾವದೂ ಮರೆಯಾಗಿರು ವದಿಲ್ಲ; ಇಲ್ಲವೆ ತಿಳಿಯುವದಕ್ಕಾಗದಂತೆ ಯಾವದೂ ಗುಪ್ತವಾಗಿರುವದಿಲ್ಲ.
- Leviticus 2:11 ಯಾಜಕಕಾಂಡ 2:11ಕರ್ತನಿಗೆ ನೀನು ತರುವ ಆಹಾರ ಸಮರ್ಪಣೆಯು ಯಾವದೂ ಹುಳಿಯಿಂದ ಮಾಡಿದ್ದಾಗಿರಬಾರದು; ಕರ್ತನಿಗೆ ನೀವು ಬೆಂಕಿಯಿಂದ ಮಾಡುವ ಎಲ್ಲಾ ಸಮರ್ಪಣೆಗಳಲ್ಲಿ ಹುಳಿಯನ್ನಾಗಲಿ ಜೇನನ್ನಾಗಲಿ ಸುಡಬಾರದು.
- Exodus 12:18–20 ವಿಮೋಚನಕಾಂಡ 12:18–20ಮೊದಲನೆಯ ತಿಂಗಳಿನಲ್ಲಿ ಅದೇ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲದಿಂದ ಆ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು. ಹುಳಿಕಲಸಿದ್ದು ಯಾವದೇ ಆಗಿರಲಿ ನೀವು ತಿನ್ನಬಾರದು; ನಿಮ್ಮ ಎಲ್ಲಾ ನಿವಾಸ ಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು ಎಂದು ಹೇಳಿದನು.
- Proverbs 19:27 ಜ್ಞಾನೋಕ್ತಿಗಳು 19:27ನನ್ನ ಮಗನೇ, ತಿಳುವಳಿಕೆಯ ಮಾತುಗಳಿಂದ ದಾರಿ ತಪ್ಪಿಸುವ ಬೋಧನೆಯನ್ನು ಕೇಳದಿರು.
- 1 Timothy 6:13 1 ತಿಮೊಥೆಯನಿಗೆ 6:13ಎಲ್ಲರನ್ನು ಬದುಕಿಸುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಶ್ರೇಷ್ಠ ಅರಿಕೆಯನ್ನು ಸಾಕ್ಷೀಕರಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--
- Matthew 14:1 ಮತ್ತಾಯನು 14:1ಆ ಕಾಲದಲ್ಲಿ ಚತುರಾಧಿಪತಿಯಾದ ಹೆರೋದನು ಯೇಸುವಿನ ಕೀರ್ತಿಯನ್ನು ಕೇಳಿ ತನ್ನ ಸೇವಕರಿಗೆ --
- 1 Chronicles 28:9–10 1 ಪೂರ್ವಕಾಲವೃತ್ತಾಂತ 28:9–10ಇದಲ್ಲದೆ ನನ್ನ ಮಗನಾದ ಸೊಲೊಮೋನನೇ, ನೀನು ನಿನ್ನ ತಂದೆಯ ದೇವ ರನ್ನು ತಿಳಿದು ಆತನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸು. ಕರ್ತನು ಸಕಲ ಹೃದಯಗಳನ್ನು ಶೋಧಿಸಿ ಯೋಚನೆಗಳ ಕಲ್ಪನೆಯ ನ್ನೆಲ್ಲಾ ತಿಳಿದಿದ್ದಾನೆ. ನೀನು ಆತನನ್ನು ಹುಡುಕಿದರೆ ಆತನು ನಿನಗೆ ಸಿಕ್ಕುವನು; ನೀನು ಆತನನ್ನು ಬಿಟ್ಟು ಬಿಟ್ಟರೆ ಆತನು ನಿನ್ನನ್ನು ಎಂದೆಂದಿಗೂ ತೊರೆದುಬಿಡು ವನು. ಆದದರಿಂದ ಜಾಗ್ರತೆಯಾಗಿರು; ಯಾಕಂದರೆ ಕರ್ತನು ಪರಿಶುದ್ಧ ಸ್ಥಾನಕ್ಕೋಸ್ಕರ ಮನೆಯನ್ನು ಕಟ್ಟಿಸು ವದಕ್ಕೆ ನಿನ್ನನ್ನು ಆದುಕೊಂಡಿದ್ದಾನೆ; ನೀನು ದೃಢವಾ ಗಿದ್ದು ಅದನ್ನು ಮಾಡು ಅಂದನು.
- 1 Timothy 5:21 1 ತಿಮೊಥೆಯನಿಗೆ 5:21ನೀನು ವಿಚಾರಿಸುವದಕ್ಕೆ ಮೊದಲೇ ತಪ್ಪು ಹೊರಿಸದೆಯೂ ಪಕ್ಷಪಾತದಿಂದ ಏನೂ ಮಾಡದೆಯೂ ಇವುಗಳನ್ನು ಕೈಕೊಳ್ಳಬೇಕೆಂದು ದೇವರ ಮುಂದೆಯೂ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ಆಯಲ್ಪಟ್ಟಿರುವ ದೂತರ ಮುಂದೆಯೂ ಖಂಡಿತವಾಗಿ ನಾನು ಹೇಳುತ್ತೇನೆ.