Matthew · chapter 16 · verse 6
Matthew 16:6 in Kannada
ಆಗ ಯೇಸು ಅವರಿಗೆ--ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರಿಕೆಯಿಂದ ಜಾಗರೂಕ ರಾಗಿರ್ರಿ ಎಂದು ಹೇಳಿದನು.
Aaga yesu avarige--pharisaayara mattu saddukaayara huliya vishayadalli echcharikeyinda jaagarooka raagirri endu helidanu.
Matthew 16:6 in English
- King James Version (KJV)
- Then Jesus said unto them, Take heed and beware of the leaven of the Pharisees and of the Sadducees.
- World English Bible (WEB)
- Jesus said to them, “Take heed and beware of the yeast of the Pharisees and Sadducees.”
- American Standard Version (ASV)
- And Jesus said unto them, Take heed and beware of the leaven of the Pharisees and Sadducees.
- Bible in Basic English (BBE)
- And Jesus said to them, Take care to have nothing to do with the leaven of the Pharisees and Sadducees.
- Darby Translation (DBY)
- And Jesus said to them, See and beware of the leaven of the Pharisees and Sadducees.
- Webster's Bible (WBS)
- Then Jesus said to them, Take heed and beware of the leaven of the Pharisees and of the Sadducees.
- Young's Literal Translation (YLT)
- and Jesus said to them, 'Beware, and take heed of the leaven of the Pharisees and Sadducees;'
Read in context
- 4ವ್ಯಭಿಚಾರಿ ಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ; ಆದರೆ ಪ್ರವಾದಿಯಾದ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಕೊಡಲ್ಪಡುವದಿಲ್ಲ ಎಂದು ಹೇಳಿದನು. ತರುವಾಯ ಆತನು ಅವರನ್ನು ಬಿಟ್ಟು ಹೊರಟುಹೋದನು.
- 5ಆತನ ಶಿಷ್ಯರು ರೊಟ್ಟಿ ತಕ್ಕೊಳ್ಳುವದನ್ನು ಮರೆತು ಆಚೇದಡಕ್ಕೆ ಬಂದಿದ್ದರು.
- 6ಆಗ ಯೇಸು ಅವರಿಗೆ--ಫರಿಸಾಯರ ಮತ್ತು ಸದ್ದುಕಾಯರ ಹುಳಿಯ ವಿಷಯದಲ್ಲಿ ಎಚ್ಚರಿಕೆಯಿಂದ ಜಾಗರೂಕ ರಾಗಿರ್ರಿ ಎಂದು ಹೇಳಿದನು.
- 7ಅದಕ್ಕೆ ಅವರು ತಮ್ಮ ತಮ್ಮಲ್ಲಿಯೇ--ನಾವು ರೊಟ್ಟಿಯನ್ನು ತಕ್ಕೊಳ್ಳದೆ ಇರುವ ದರಿಂದ (ಹೀಗೆ ಹೇಳುತ್ತಾನೆ) ಎಂದು ಅಂದು ಕೊಂಡರು.
- 8ಯೇಸು ಅದನ್ನು ತಿಳುಕೊಂಡವನಾಗಿ ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ರೊಟ್ಟಿಯನ್ನು ತಕ್ಕೊಂಡು ಬರಲಿಲ್ಲವೆಂದು ನಿಮ್ಮಲ್ಲಿ ಯಾಕೆ ಅಂದುಕೊಳ್ಳುತ್ತೀರಿ?
Cross references
- Luke 12:1 ಲೂಕನು 12:1ಅಷ್ಟರಲ್ಲಿ ಅಸಂಖ್ಯವಾದ ಜನಸಮೂಹವು ಒಬ್ಬರ ಮೇಲೊಬ್ಬರು ತುಳಿದಾಡುವಷ್ಟು ಒಟ್ಟುಗೂಡಿ ಬಂದಿರಲಾಗಿ ಆತನು ಎಲ್ಲಾದಕ್ಕಿಂತ ಮೊದಲು ತನ್ನ ಶಿಷ್ಯರಿಗೆ--ಫರಿಸಾಯರ ಕಪಟವೆಂಬ ಹುಳಿಯ ವಿಷಯದಲ್ಲಿ ನೀವು ಎಚ್ಚರವಾಗಿರ್ರಿ.
- Galatians 5:9 ಗಲಾತ್ಯದವರಿಗೆ 5:9ಸ್ವಲ್ಪ ಹುಳಿಯಿಂದ ಕಣಿಕ ವೆಲ್ಲಾ ಹುಳಿಯಾಗುವದು.
- Matthew 16:12 ಮತ್ತಾಯನು 16:12ಆಗ ಅವರು ರೊಟ್ಟೀ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಆತನು ಹೇಳಿದನು ಎಂದು ಅವರು ಗ್ರಹಿಸಿಕೊಂಡರು.
- Leviticus 2:11 ಯಾಜಕಕಾಂಡ 2:11ಕರ್ತನಿಗೆ ನೀನು ತರುವ ಆಹಾರ ಸಮರ್ಪಣೆಯು ಯಾವದೂ ಹುಳಿಯಿಂದ ಮಾಡಿದ್ದಾಗಿರಬಾರದು; ಕರ್ತನಿಗೆ ನೀವು ಬೆಂಕಿಯಿಂದ ಮಾಡುವ ಎಲ್ಲಾ ಸಮರ್ಪಣೆಗಳಲ್ಲಿ ಹುಳಿಯನ್ನಾಗಲಿ ಜೇನನ್ನಾಗಲಿ ಸುಡಬಾರದು.
- 1 Corinthians 5:6–8 1 ಕೊರಿಂಥದವರಿಗೆ 5:6–8ನೀವು ಹಿಗ್ಗುವದು ಒಳ್ಳೇದಲ್ಲ. ಸ್ವಲ್ಪ ಹುಳಿಯು ಕಣಿಕವನ್ನೆಲ್ಲಾ ಹುಳಿ ಮಾಡುತ್ತದೆಂಬದು ನಿಮಗೆ ತಿಳಿಯದೋ? ಆದದರಿಂದ ನೀವು ಹುಳಿ ಇಲ್ಲದ ವರಾದ ಕಾರಣ ಹೊಸ ಕಣಿಕವಾಗಿರುವಂತೆ ಆ ಹಳೇ ಹುಳಿಯನ್ನು ತೆಗೆದುಹಾಕಿರಿ. ಯಾಕಂದರೆ ನಮ್ಮ ಪಸ್ಕವಾಗಿರುವ ಕ್ರಿಸ್ತನೇ ನಮಗೋಸ್ಕರ ಯಜ್ಞಾರ್ಪಿತ ನಾಗಿದ್ದಾನೆ. ಆದಕಾರಣ ನಾವು ಹಳೇ ಹುಳಿಯನ್ನು ಅಂದರೆ ದುರ್ಮಾರ್ಗತ್ವ ದುಷ್ಟತ್ವ ಎಂಬ ಹುಳಿಯನ್ನು ಇಟ್ಟುಕೊಳ್ಳದೆ ಸರಳತೆ ಸತ್ಯತೆ ಎಂಬ ಹುಳಿಯಿಲ್ಲದ ರೊಟ್ಟಿಯಿಂದ ಹಬ್ಬವನ್ನು ಆಚರಿಸೋಣ.
- Mark 8:15 ಮಾರ್ಕನು 8:15ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.
- Luke 12:15 ಲೂಕನು 12:15ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು.
- Exodus 12:15–19 ವಿಮೋಚನಕಾಂಡ 12:15–19ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು. ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ಸಭೆಯೂ ಏಳನೆಯ ದಿನದಲ್ಲಿ ಪರಿಶುದ್ಧ ಸಭೆಯೂ ನಿಮಗೆ ಇರಬೇಕು. ಊಟಮಾಡುವದನ್ನು ಬಿಟ್ಟು ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡ ಬಾರದು. ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬ ವನ್ನು ಆಚರಿಸಬೇಕು. ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ್ದೇನೆ; ಆದಕಾರಣ ನಿಮ್ಮ ಸಂತತಿಗಳಲ್ಲಿ ಸದಾ ಕಾಲಕ್ಕೂ ಒಂದು ಶಾಸನವಾಗಿ ಈ ದಿನವನ್ನು ನೀವು ಆಚರಿಸಬೇಕು. ಮೊದಲನೆಯ ತಿಂಗಳಿನಲ್ಲಿ ಅದೇ ತಿಂಗಳಿನ ಹದಿನಾಲ್ಕನೆಯ ದಿನದ ಸಾಯಂಕಾಲದಿಂದ ಆ ತಿಂಗಳಿನ ಇಪ್ಪತ್ತೊಂದನೆಯ ದಿನದ ಸಾಯಂಕಾಲದ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು.
- 2 Timothy 2:16–17 2 ತಿಮೊಥೆಯನಿಗೆ 2:16–17ಆದರೆ ಅಶುದ್ಧವಾದ ಹರಟೆಮಾತುಗಳನ್ನು ನಿರಾಕರಿಸು; ಅವುಗಳಿಂದ ಹೆಚ್ಚೆಚ್ಚಾಗಿ ಭಕ್ತಿಹೀನತೆಯು ಉಂಟಾಗುವದು. ಅವರ ಮಾತು ವ್ರಣವ್ಯಾಧಿಯಂತೆ ತಿನ್ನುವದು; ಅವರಲ್ಲಿ ಹುಮೆನಾಯನೂ ಪಿಲೇತನೂ ಇದ್ದಾರೆ;