Matthew · chapter 1 · verse 11
Matthew 1:11 in Kannada
ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು.
Avaru baabelige sereyaagi oyyalpatta samayadalli yosheeyaninda yekonyanoo avana sahodararoo huttidaru.
Matthew 1:11 in English
- King James Version (KJV)
- And Josias begat Jechonias and his brethren, about the time they were carried away to Babylon:
- World English Bible (WEB)
- Josiah became the father of Jechoniah and his brothers at the time of the exile to Babylon.
- American Standard Version (ASV)
- and Josiah begat Jechoniah and his brethren, at the time of the carrying away to Babylon.
- Bible in Basic English (BBE)
- And the sons of Josiah were Jechoniah and his brothers, at the time of the taking away to Babylon.
- Darby Translation (DBY)
- and Josias begat Jechonias and his brethren, at the time of the carrying away of Babylon.
- Webster's Bible (WBS)
- And Josias begat Jechonias and his brethren, about the time they were carried away to Babylon:
- Young's Literal Translation (YLT)
- and Josiah begat Jeconiah and his brethren, at the Babylonian removal.
Read in context
- 9ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು;
- 10ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು;
- 11ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು.
- 12ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು;
- 13ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು;
Cross references
- Jeremiah 27:20 ಯೆರೆಮೀಯ 27:20ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ--
- Jeremiah 52:28–30 ಯೆರೆಮೀಯ 52:28–30ನೆಬೂಕ ದ್ನೆಚ್ಚರನು ಸೆರೆಯಾಗಿ ಒಯ್ದ ಜನರು ಇವರೇ--ಏಳನೇ ವರುಷದಲ್ಲಿ ಮೂರು ಸಾವಿರದ ಇಪ್ಪತ್ತು ಮೂರು ಯೆಹೂದ್ಯರು. ನೆಬೂಕದ್ನೆಚ್ಚರನ ಹದಿನೆಂಟನೇ ವರುಷದಲ್ಲಿ ಅವನು ಯೆರೂಸಲೇಮಿನಿಂದ ಎಂಟು ನೂರ ಮೂವತ್ತೆರಡು ಜನರನ್ನು ಒಯ್ದನು. ನೆಬೂ ಕದ್ನೆಚ್ಚರನ ಇಪ್ಪತ್ತು ಮೂರನೇ ವರುಷದಲ್ಲಿ ಕಾವಲಿನ ಅಧಿಪತಿಯಾದ ನೆಬೂಜರದಾನನು ಏಳುನೂರು ನಾಲ್ವತ್ತೈದು ಮಂದಿ ಯೆಹೂದ್ಯರನ್ನು ಒಯ್ದನು. ಜನರೆಲ್ಲರು ನಾಲ್ಕು ಸಾವಿರದ ಆರುನೂರು.
- Jeremiah 52:11–15 ಯೆರೆಮೀಯ 52:11–15ಇದಲ್ಲದೆ ಬಾಬೆಲಿನ ಅಸನು ಚಿದ್ಕೀಯನ ಕಣ್ಣುಗಳನ್ನು ಕಿತ್ತುಹಾಕಿಸಿ, ಅವನನ್ನು ಹಿತ್ತಾಳೆಯ ಸಂಕೋಲೆಗಳಿಂದ ಕಟ್ಟಿಸಿ, ಬಾಬೆಲಿಗೆ ಒಯ್ದು ಅವನು ಸಾಯುವ ದಿನದ ವರೆಗೆ ಸೆರೆಮನೆಯಲ್ಲಿ ಇಟ್ಟನು. ಬಾಬೆಲಿನ ಅರಸನಾದ ನೆಬೂಕದೇಚ್ಚರನ ಹತ್ತೊಂಭತ್ತನೇ ವರುಷದ, ಐದನೇ ತಿಂಗಳಿನ, ಹತ್ತನೇ ದಿವಸದಲ್ಲಿ, ಬಾಬೆಲಿನ ಅರಸನ ಸೇವಕನೂ ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂ ಸಲೇಮಿಗೆ ಬಂದು, ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು; ಸುತ್ತಲಿರುವ ಯೆರೂಸಲೇಮಿನ ಗೋಡೆ ಗಳನ್ನೆಲ್ಲಾ ಕಾವಲಿನವರ ಅಧಿಪತಿಯ ಸಂಗಡ ಇದ್ದ ಕಸ್ದೀಯರ ದಂಡೆಲ್ಲಾ ಕೆಡವಿ ಹಾಕಿತು. ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವ ರಾದ ಕೆಲವರನ್ನೂ ಪಟ್ಟಣದಲ್ಲಿ ಉಳಿದ ಜನರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಸಮೂಹದಲ್ಲಿ ಮಿಕ್ಕಾದವರನ್ನೂ ಸೆರೆಯಾಗಿ ಒಯ್ದನು.
- Jeremiah 2:10–28 ಯೆರೆಮೀಯ 2:10–28ಕಿತ್ತೀಮ್ ದ್ವೀಪಗಳಿಗೆ ದಾಟಿ ಹೋಗಿ ನೋಡಿರಿ; ಕೇದಾರಿಗೆ ಕಳುಹಿಸಿ ಚೆನ್ನಾಗಿ ತಿಳುಕೊಳ್ಳಿರಿ; ಅಂಥದ್ದು (ಎಲ್ಲಿಯಾದರೂ) ಉಂಟೋ? ನೋಡಿರಿ. ಜನಾಂ ಗವು ತಮ್ಮ ದೇವರುಗಳನ್ನು ಅವು ದೇವರುಗಳಲ್ಲದೆ ಇದ್ದಾಗ್ಯೂ ಬದಲು ಮಾಡಿದ್ದುಂಟೋ? ಆದರೆ ನನ್ನ ಜನರು ತಮ್ಮ ವೈಭವವನ್ನು ಪ್ರಯೋಜನವಿಲ್ಲದ್ದಕ್ಕೆ ಬದಲು ಮಾಡಿದ್ದಾರೆ. ಓ ಆಕಾಶಗಳೇ, ಇದಕ್ಕೆ ನೀವು ಆಶ್ಚರ್ಯಪಡಿರಿ, ಭಯಭ್ರಾಂತಿಗೊಳ್ಳಿರಿ, ತೀರ ಹಾಳಾಗಿರಿ ಎಂದು ಕರ್ತನು ಅನ್ನುತ್ತಾನೆ. ನನ್ನ ಜನರು ಎರಡು ದುಷ್ಕೃತ್ಯಗಳನ್ನು ಮಾಡಿದ್ದಾರೆ; ಜೀವವುಳ್ಳ ನೀರಿನ ಬುಗ್ಗೆಯಾಗಿರುವ ನನ್ನನ್ನು ಬಿಟ್ಟು ತಮಗೆ ತೊಟ್ಟಿಗಳನ್ನು ನೀರು ಹಿಡಿಯಲಾರದ ಒಡಕು ತೊಟ್ಟಿಗಳನ್ನು ಕೆತ್ತಿಕೊಂಡಿದ್ದಾರೆ. ಇಸ್ರಾಯೇಲನು ಸೇವಕನೋ? ಮನೆಯಲ್ಲಿ ಹುಟ್ಟಿದ ಗುಲಾಮನೋ? ಅವನು ಯಾಕೆ ಸುಲಿಗೆಯಾದನು? ಪ್ರಾಯದ ಸಿಂಹಗಳು ಅವನಿಗೆ ವಿರೋಧವಾಗಿ ಘರ್ಜಿಸಿ, ಅಬ್ಬ ರಿಸುತ್ತವೆ. ಅವನ ದೇಶವನ್ನು ಹಾಳುಮಾಡುತ್ತವೆ; ಅವನ ಪಟ್ಟಣಗಳು ನಿವಾಸವಿಲ್ಲದೆ ಸುಟ್ಟುಹೋಗಿವೆ. ನೋಫ್ ಮತ್ತು ತಪನೆಯ ಮಕ್ಕಳೂ ಸಹ ನಿನ್ನ ತಲೆಯ ಕಿರೀಟವನ್ನು ಮುರಿದುಬಿಟ್ಟಿದ್ದಾರೆ. ಆತನು ನಿನ್ನನ್ನು ದಾರಿಯಲ್ಲಿ ನಡೆಸುತ್ತಿರುವಾಗ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟಿದ್ದರಿಂದಲೇ ಇದನ್ನು ನಿನಗೆ ನೀನೇ ಮಾಡಿಕೊಂಡಿ ಅಲ್ಲವೋ? ಈಗ ಸಿಹೋರಿನ ನೀರು ಕುಡಿಯುವದಕ್ಕಾಗಿ ಐಗುಪ್ತದ ದಾರಿಯಲ್ಲಿ ನಿನಗೇನು ಕೆಲಸ? ಇಲ್ಲವೆ ನದಿಯ ನೀರು ಕುಡಿ ಯುವದಕ್ಕಾಗಿ ಅಶ್ಶೂರಿನ ದಾರಿಯಲ್ಲಿ ನಿನಗೇನು ಕೆಲಸ? ನಿನ್ನ ಕೆಟ್ಟತನವೇ ನಿನ್ನನ್ನು ತಿದ್ದುವದು; ನಿನ್ನ ಹಿಂಜಾರಿಕೆಗಳೇ ನಿನ್ನನ್ನು ಗದರಿಸುವವು; ಹೀಗಿ ರುವದರಿಂದ ನೀನು ನಿನ್ನ ದೇವರಾದ ಕರ್ತನನ್ನು ಬಿಟ್ಟದ್ದೂ ನನ್ನ ಭಯವೂ ನಿನ್ನಲ್ಲಿ ಇಲ್ಲದಿರುವದೂ ಕೆಟ್ಟದ್ದೂ ಕಹಿಯಾದದ್ದೂ ಎಂದು ತಿಳುಕೊಂಡು ನೋಡು ಎಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ. ಪೂರ್ವದಲ್ಲಿ ನಾನು ನಿನ್ನ ನೊಗವನ್ನು ಮುರಿದು ನಿನ್ನ ಬಂಧನಗಳನ್ನು ಹರಿದುಬಿಟ್ಟೆನು; ನೀನು--ನಾನು ವಿಾರುವದಿಲ್ಲ ಎಂದು ನೀನು ಹೇಳಿದಿ; ಆದರೆ ಒಂದೊಂದು ಎತ್ತರವಾದ ಗುಡ್ಡದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ನೀನು ಸೂಳೆಯಾಗಿ ಅಲೆದಾಡುತ್ತಿ. ಆದಾಗ್ಯೂ ನಾನು ನಿನ್ನನ್ನು ಉತ್ತಮ ದ್ರಾಕ್ಷೇಬಳ್ಳಿಯಾಗಿಯೂ ಪೂರ್ಣ ವಾಗಿ ನಿಜ ಬೀಜವಾಗಿಯೂ ನೆಟ್ಟಿದ್ದೆನು; ಆದರೆ ನೀನು ಹೀಗೆ ನನಗೆ ಅನ್ಯ ದ್ರಾಕ್ಷೇ ಬಳ್ಳಿಯ ಹಾಗೆ ಕೆಟ್ಟುಹೋಗಿ ಬದಲಾದಿ? ನೀನು ಸೌಳಿನಿಂದ ತೊಳಕೊಂಡರೂ ಬಹಳ ಸಾಬೂನು ಹಾಕಿಕೊಂಡರೂ ನಿನ್ನ ಅಕ್ರಮವು ನನ್ನ ಮುಂದೆ ಕಳಂಕವಾಗಿದೆ ಎಂದು ಕರ್ತನಾದ ದೇವರು ಅನ್ನುತ್ತಾನೆ. ನಾನು ಅಶುದ್ಧನಲ್ಲ, ಬಾಳನನ್ನು ಹಿಂಬಾಲಿಸಲಿಲ್ಲ ಎಂದು ನೀನು ಹೇಳುವದು ಹೇಗೆ? ತಗ್ಗಿನಲ್ಲಿ ನಿನ್ನ ಮಾರ್ಗವನ್ನು ನೋಡು; ನೀನು ಮಾಡಿದ್ದನ್ನು ತಿಳುಕೋ; ನೀನು ತೀವ್ರವಾಗಿ ಸಂಚಾರ ಮಾಡುವ ಹೆಣ್ಣು ಒಂಟೆಯೇ; ಅರಣ್ಯದ ಅಭ್ಯಾಸ ವುಳ್ಳ ಕಾಡುಕತ್ತೆಯೇ; ಅವಳ ಅತ್ಯಾಶೆಯಲ್ಲಿ ಗಾಳಿ ಯನ್ನು ಹೀರಿಕೊಳ್ಳುತ್ತಾಳೆ; ಅವಳ ಮದವನ್ನು ಯಾರು ತಡೆಯುವರು? ಅವಳನ್ನು ಹುಡುಕುವವ ರೆಲ್ಲರೂ ಆಯಾಸಪಡುವದಿಲ್ಲ; ಅವಳ ತಿಂಗಳಲ್ಲಿ ಅವಳನ್ನು ಕಾಣುವರು. ನಿನ್ನ ಕಾಲು ಬರೀ ಕಾಲಾ ಗದ ಹಾಗೆಯೂ ನಿನ್ನ ಗಂಟಲು ನೀರಡಿಕೆ ಪಡದ ಹಾಗೆಯೂ ಹಿಂತೆಗೆ; ಆದರೆ ನೀನು--ಇಲ್ಲ, ನಿರೀಕ್ಷೆ ಯಿಲ್ಲ, ಯಾಕಂದರೆ ನಾನು ಅನ್ಯರನ್ನು ಪ್ರೀತಿ ಮಾಡಿದ್ದೇನೆ. ಅವರ ಹಿಂದೆ ನಾನು ಹೋಗುತ್ತೇನೆ ಎಂದು ನೀನು ಹೇಳಿದಿ. ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲಿನ ಮನೆತನ ದವರಿಗೆ ನಾಚಿಕೆಯಾಯಿತು; ಅವರಿಗೂ ಅವರ ಅರಸರಿಗೂ ಸಾಮಂತರಿಗೂ ಯಾಜಕರಿಗೂ ಅವರ ಪ್ರವಾದಿಗಳಿಗೂ ನಾಚಿಕೆಯಾಯಿತು. ಅವರು ಮರಕ್ಕೆ ನೀನು ನನ್ನ ತಂದೆ ಎಂದೂ ಕಲ್ಲಿಗೆ--ನೀನು ನನ್ನನ್ನು ಹೆತ್ತಿದ್ದೀ ಎಂದೂ ಹೇಳುತ್ತಾರಲ್ಲಾ? ಯಾಕಂದರೆ ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ; ಆದರೂ ಅವರ ಕಷ್ಟ ಕಾಲದಲ್ಲಿ--ಎದ್ದು, ನಮ್ಮನ್ನು ರಕ್ಷಿಸು ಎಂದು ಹೇಳುವರು. ಆದರೆ ನೀನು ನಿನಗೋಸ್ಕರ ಮಾಡಿಕೊಂಡ ನಿನ್ನ ದೇವರುಗಳು ಎಲ್ಲಿ? ನಿನ್ನ ಕಷ್ಟ ಕಾಲದಲ್ಲಿ ನಿನ್ನನ್ನು ರಕ್ಷಿಸಲು ಸಾಧ್ಯವಾದರೆ ಅವರೇ ಏಳಲಿ, ಯಾಕಂದರೆ ಓ ಯೆಹೂದವೇ, ನಿನ್ನ ಪಟ್ಟಣಗಳ ಲೆಕ್ಕದ ಹಾಗೆ ನಿನ್ನ ದೇವರುಗಳು ಇದ್ದಾರೆ.
- Jeremiah 39:9 ಯೆರೆಮೀಯ 39:9ಆಗ ಪಟ್ಟಣದೊಳಗೆ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಅವನ ಕಡೆಗೆ ಒಳಬಿದ್ದು ಮೊರೆ ಹೊಕ್ಕವರನ್ನೂ ಉಳಿದ ಜನರಲ್ಲಿ ಮಿಕ್ಕಿದವರನ್ನೂ ಕಾವಲಿನವರ ಅಧಿಪತಿ ಯಾದ ನೆಬೂಜರದಾನನು ಬಾಬೆಲಿಗೆ ಸೆರೆಯಾಗಿ ತಕ್ಕೊಂಡು ಹೋದನು.
- Daniel 1:2 ದಾನಿಯೇಲನು 1:2ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು, ದೇವಾಲಯದ ಕೆಲವು ಪಾತ್ರೆಗಳನ್ನು ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ ತನ್ನ ದೇವರ ಆಲಯಕ್ಕೂ ತಂದು ಪಾತ್ರೆಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು.
- 2 Chronicles 36:10 2 ಪೂರ್ವಕಾಲವೃತ್ತಾಂತ 36:10ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು.
- 1 Chronicles 3:15–17 1 ಪೂರ್ವಕಾಲವೃತ್ತಾಂತ 3:15–17ಯೋಷಿಯನ ಮಕ್ಕಳು--ಚೊಚ್ಚಲ ಮಗ ನಾದ ಯೋಹನಾನನು, ಎರಡನೆಯವನಾದ ಯೆಹೋ ಯಾಕೀಮನು, ಮೂರನೆಯವನಾದ ಚಿದ್ಕೀಯನು, ನಾಲ್ಕನೆಯವನಾದ ಶಲ್ಲೂಮನು. ಯೆಹೋಯಾ ಕೀಮನ ಮಕ್ಕಳು--ಇವನ ಮಗನಾದ ಯೆಕೊನ್ಯನು; ಇವನ ಮಗನು ಚಿದ್ಕೀಯನು. ಯೆಕೊನ್ಯನ ಮಕ್ಕಳು -- ಅಸ್ಸೀರನು; ಅವನ ಮಗನು ಶೆಯಲ್ತೀಯೇಲನು,
- 2 Chronicles 36:1–8 2 ಪೂರ್ವಕಾಲವೃತ್ತಾಂತ 36:1–8ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು, ತಕ್ಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದ ಲಾಗಿ ಅವನನ್ನು ಅರಸನಾಗಿ ಮಾಡಿದರು. ಯೆಹೋ ವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತಮೂರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಐಗುಪ್ತದ ಅರಸನು ಯೆರೂಸಲೇ ಮಿನಲ್ಲಿ ಅವನನ್ನು ತೆಗೆದುಹಾಕಿ ದೇಶದಿಂದ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರ ವನ್ನೂ ದಂಡ ತಕ್ಕೊಂಡನು. ಇದಲ್ಲದೆ ಐಗುಪ್ತದ ಅರಸನು ಅವನ ಸಹೋದರನಾದ ಎಲ್ಯಾಕೀಮ ನನ್ನು ಯೆಹೂದದ ಯೆರೂಸಲೇಮಿನ ಮೇಲೆ ಅರಸ ನಾಗಿ ಮಾಡಿ ಯೆಹೋಯಾಕೀಮನೆಂಬ ಬದಲು ಹೆಸರನ್ನು ಅವನಿಗೆ ಇಟ್ಟನು. ನೆಕೋ ಅವನ ಸಹೋ ದರನಾದ ಯೆಹೋವಾಹಾಜನನ್ನು ತಕ್ಕೊಂಡು ಐಗುಪ್ತಕ್ಕೆ ಒಯ್ದನು. ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು. ಆದರೆ ಯೆಹೋಯಾಕೀಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಅಸಹ್ಯಗಳೂ ಅವನಲ್ಲಿ ಕಂಡು ಕೊಂಡದ್ದೂ ಇಗೋ, ಅವು ಇಸ್ರಾಯೇಲ್ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಆಳಿದನು.
- 2 Chronicles 36:20 2 ಪೂರ್ವಕಾಲವೃತ್ತಾಂತ 36:20ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು.
- 2 Kings 25:11 2 ಅರಸುಗಳು 25:11ಪಟ್ಟಣದಲ್ಲಿ ಉಳಿದ ಜನ ರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಗುಂಪಿ ನಲ್ಲಿ ಮಿಕ್ಕ ಜನರನ್ನೂ ಕಾವಲಿನ ಅಧಿಪತಿಯಾದ ನೆಬೂಜರದಾನನು ಸೆರೆಯಾಗಿ ಒಯ್ದನು.