Matthew · chapter 10 · verse 11
Matthew 10:11 in Kannada
ನೀವು ಯಾವದಾದರೂ ಪಟ್ಟಣದೊಳ ಗಾಗಲೀ ಊರೊಳಗಾಗಲೀ ಪ್ರವೇಶಿಸುವಾಗ ಅದರಲ್ಲಿ ಯಾರು ಯೋಗ್ಯರಾಗಿದ್ದಾರೆಂದು ವಿಚಾರಿ ಸಿರಿ; ಮತ್ತು ಅಲ್ಲಿಂದ ಹೊರಡುವ ವರೆಗೆ ಅಲ್ಲಿಯೇ ಇಳುಕೊಂಡಿರ್ರಿ;
Neevu yaavadaadaroo pattanadola gaagalee oorolagaagalee praveshisuvaaga adaralli yaaru yogyaraagiddaarendu vichaari siri; mattu allinda horaduva varege alliye ilukondirri;
Matthew 10:11 in English
- King James Version (KJV)
- And into whatsoever city or town ye shall enter, enquire who in it is worthy; and there abide till ye go thence.
- World English Bible (WEB)
- Into whatever city or village you enter, find out who in it is worthy, and stay there until you go on.
- American Standard Version (ASV)
- And into whatsoever city or village ye shall enter, search out who in it is worthy; and there abide till ye go forth.
- Bible in Basic English (BBE)
- And into whatever town or small place you go, make search there for someone who is respected, and make his house your resting-place till you go away.
- Darby Translation (DBY)
- But into whatsoever city or village ye enter, inquire who in it is worthy, and there remain till ye go forth.
- Webster's Bible (WBS)
- And into whatever city or town ye shall enter, inquire who in it is worthy, and there abide till ye go thence.
- Young's Literal Translation (YLT)
- 'And into whatever city or village ye may enter, inquire ye who in it is worthy, and there abide, till ye may go forth.
Read in context
- 9ನಿಮ್ಮ ಹಮ್ಮಾಣಿಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಹಿತ್ತಾಳೆ ಇಟ್ಟುಕೊಳ್ಳಬೇಡಿರಿ.
- 10ಪ್ರಯಾಣಕ್ಕೆ ಹಸಿಬೆಯನ್ನಾಗಲೀ ಎರಡು ಮೇಲಂಗಿಗಳ ನ್ನಾಗಲೀ ಕೆರಗಳನ್ನಾಗಲೀ ಕೋಲುಗಳನ್ನಾಗಲೀ ತಕ್ಕೊ ಳ್ಳಬೇಡಿರಿ; ಯಾಕಂದರೆ ಕೆಲಸ ಮಾಡುವವನು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.
- 11ನೀವು ಯಾವದಾದರೂ ಪಟ್ಟಣದೊಳ ಗಾಗಲೀ ಊರೊಳಗಾಗಲೀ ಪ್ರವೇಶಿಸುವಾಗ ಅದರಲ್ಲಿ ಯಾರು ಯೋಗ್ಯರಾಗಿದ್ದಾರೆಂದು ವಿಚಾರಿ ಸಿರಿ; ಮತ್ತು ಅಲ್ಲಿಂದ ಹೊರಡುವ ವರೆಗೆ ಅಲ್ಲಿಯೇ ಇಳುಕೊಂಡಿರ್ರಿ;
- 12ನೀವು ಒಂದು ಮನೆಯೊಳಕ್ಕೆ ಬಂದಾಗ ಅವರನ್ನು ವಂದಿಸಿರಿ.
- 13ಆ ಮನೆಯು ಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ಅದರ ಮೇಲೆ ಬರಲಿ; ಆದರೆ ಅದು ಅಯೋಗ್ಯವಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ.
Cross references
- Luke 10:7–8 ಲೂಕನು 10:7–8ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ; ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ.
- Acts 18:1–3 ಅಪೊಸ್ತಲರ ಕೃತ್ಯಗಳು 18:1–3ಇವುಗಳಾದ ಮೇಲೆ ಪೌಲನು ಅಥೇನೆ ಯದಿಂದ ಹೊರಟು ಕೊರಿಂಥಕ್ಕೆ ಬಂದು ಪೊಂತದಲ್ಲಿ ಹುಟ್ಟಿದ ಅಕ್ವಿಲನೆಂಬ ಒಬ್ಬ ಯೆಹೂದ್ಯ ನನ್ನು ಅಲ್ಲಿ ಕಂಡನು. (ಯೆಹೂದ್ಯರೆಲ್ಲರೂ ರೋಮಾ ಪುರವನ್ನು ಬಿಟ್ಟು ಹೋಗಬೇಕೆಂದು ಕ್ಲೌದ್ಯನು ಆಜ್ಞೆ ವಿಧಿಸಿದ್ದನು). ಆದಕಾರಣ ಅಕ್ವಿಲನೂ ಅವನ ಹೆಂಡತಿಯಾದ ಪ್ರಿಸ್ಕಿಲ್ಲಳೂ ಕೆಲವು ದಿವಸಗಳ ಮುಂಚೆ ಇತಾಲ್ಯದಿಂದ ಅಲ್ಲಿಗೆ ಬಂದಿದ್ದರು; ಪೌಲನು ಅವರ ಅವರು ತಮ್ಮ ವೃತ್ತಿಯಿಂದ ಗುಡಾರ ಮಾಡುವವರಾಗಿದ್ದದರಿಂದ ಅವನು ಅವ ರೊಂದಿಗೆ ಇದ್ದು ಕೆಲಸ ಮಾಡುತ್ತಿದ್ದನು ಯಾಕಂದರೆ ಅವನೂ ಅದೇ ಕಸಬಿನವನಾಗಿದ್ದನು.
- Job 31:32 ಯೋಬನು 31:32ಪರದೇಶಸ್ಥನು ಬೀದಿ ಯಲ್ಲಿ ಇಳುಕೊಳ್ಳಲಿಲ್ಲ; ಆದರೆ ನನ್ನ ಬಾಗಲನ್ನು ಮಾರ್ಗಸ್ಥರಿಗೆ ತೆರೆಯುತ್ತಾ ಇದ್ದೆನು.
- 1 Kings 17:9–24 1 ಅರಸುಗಳು 17:9–24ನೀನೆದ್ದು ಚೀದೋನಿಗೆ ಸೇರಿದ ಚಾರೆಪ್ತಾಕ್ಕೆ ಹೋಗಿ ಅಲ್ಲಿ ವಾಸವಾಗಿರು; ಇಗೋ, ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ ಅಂದನು. ಹಾಗೆಯೆ ಅವನೆದ್ದು ಚಾರೆಪ್ತಾಕ್ಕೆ ಹೋಗಿ ಪಟ್ಟಣದ ಬಾಗಿಲ ಬಳಿಗೆ ಬಂದಾಗ ಇಗೋ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು--ನೀನು ದಯಮಾಡಿ ಕುಡಿ ಯುವದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತಕ್ಕೊಂಡುಬಾ ಅಂದನು. ಅವಳು ತಕ್ಕೊಂಡು ಬರಲು ಹೋಗು ತ್ತಿರುವಾಗ ಅವನು ಅವಳನ್ನು ಕರೆದು--ನೀನು ದಯ ಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತಕ್ಕೊಂಡು ಬಾ ಅಂದನು. ಅದಕ್ಕೆ ಅವಳು--ನಿನ್ನ ದೇವರಾದ ಕರ್ತನ ಜೀವದಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ ತಂಬಿಗೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ಇಗೋ, ನಾನೂ ನನ್ನ ಕುಮಾರನೂ ಅದನ್ನು ತಿಂದು ಸತ್ತುಹೋಗುವ ಹಾಗೆ ಅದನ್ನು ನನಗೂ ಅವನಿಗೂ ಸಿದ್ಧ ಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ ಅಂದಳು. ಆಗ ಎಲೀಯನು ಅವಳಿಗೆ--ಭಯಪಡಬೇಡ; ನೀನು ಹೋಗಿ ನಿನ್ನ ಮಾತಿನ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿ ಮಾಡಿ, ನನ್ನ ಬಳಿಗೆ ತಕ್ಕೊಂಡು ಬಾ; ತರು ವಾಯ ನಿನಗೂ ನಿನ್ನ ಮಗನಿಗೂ ಸಿದ್ದಮಾಡಿಕೋ. ಕರ್ತನು ಭೂಮಿಯ ಮೇಲೆ ಮಳೆಯನ್ನು ಕೊಡುವ ವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವದಿಲ್ಲ; ತಂಬಿಗೆಯಲ್ಲಿರುವ ಎಣ್ಣೆಯು ಮುಗಿಯುವದಿಲ್ಲ ಎಂದು ಇಸ್ರಾಯೇಲಿನ ದೇವರಾದ ಕರ್ತನು ಹೇಳು ತ್ತಾನೆ ಅಂದನು. ಆಗ ಅವಳು ಹೋಗಿ ಎಲೀಯನ ಮಾತಿನ ಹಾಗೆಯೇ ಮಾಡಿ, ಅವಳೂ ಇವನೂ ಅವಳ ಮನೆಯವರೂ ಅನೇಕ ದಿವಸ ತಿಂದರು. ಕರ್ತನು ಎಲೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಮಡಕೆಯಲ್ಲಿರುವ ಹಿಟ್ಟು ತೀರದೆ ತಂಬಿಗೆ ಯಲ್ಲಿರುವ ಎಣ್ಣೆಯು ಮುಗಿಯದೆ ಇತ್ತು. ಇವುಗಳ ತರುವಾಯ ಏನಾಯಿತಂದರೆ, ಮನೆಯ ಯಜಮಾನಳಾದ ಆ ಸ್ತ್ರೀಯ ಮಗನು ರೋಗದಲ್ಲಿ ಬಿದ್ದು ಅವನಲ್ಲಿ ಶ್ವಾಸವು ನಿಂತುಹೋಗುವಂತೆ ಅವನ ರೋಗವು ಅಧಿಕವಾಗಿತ್ತು. ಆಗ ಅವಳು ಎಲೀಯ ನಿಗೆ--ಓ ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವ ದಕ್ಕೂ ನನ್ನ ಮಗನು ಸಾಯುವದಕ್ಕೂ ನನ್ನ ಬಳಿಗೆ ಬಂದಿಯೋ ಅಂದಳು. ಅವನು ಅವಳಿಗೆ--ನಿನ್ನ ಮಗನನ್ನು ನನಗೆ ಕೊಡು ಎಂದು ಹೇಳಿ ಅವನನ್ನು ಅವಳ ಮಡಲಿನಿಂದ ಎತ್ತಿಕೊಂಡು ತಾನು ವಾಸ ವಾಗಿರುವ ಉಪ್ಪರಿಗೆಗೆ ಹೋಗಿ, ತನ್ನ ಮಂಚದ ಮೇಲೆ ಮಲಗಿಸಿ--ನನ್ನ ದೇವರಾದ ಕರ್ತನೇ, ನಾನು ವಾಸವಾಗಿರುವ ವಿಧವೆಯ ಮಗನನ್ನು ಕೊಂದು ಹಾಕುವ ಈ ಕೇಡನ್ನು ಅವಳ ಮೇಲೆ ಬರಮಾಡಿದಿಯಲ್ಲಾ ಎಂದು ಕರ್ತನನ್ನು ಕೂಗಿ ಬೇಡಿದನು. ಆಗ ಅವನು ಹುಡುಗನ ಮೇಲೆ ಮೂರು ಸಾರಿ ಬೋರ್ಲ ಬಿದ್ದುನನ್ನ ದೇವರಾದ ಓ ಕರ್ತನೇ, ಈ ಹುಡುಗನ ಪ್ರಾಣ ಅವನಲ್ಲಿ ತಿರಿಗಿ ಬರಲಿ ಎಂದು ಕರ್ತನನ್ನು ಕೂಗಿದನು. ಕರ್ತನು ಎಲೀಯನ ಸ್ವರವನ್ನು ಕೇಳಿದ್ದರಿಂದ ಹುಡುಗನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರಿಗಿ ಬಂತು. ಆಗ ಎಲೀಯನು ಹುಡುಗನನ್ನು ಎತ್ತಿಕೊಂಡು ಉಪ್ಪರಿಗೆ ಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು ಅವನನ್ನು ಅವನ ತಾಯಿಗೆ ಕೊಟ್ಟನು. ಅವನುನೋಡು, ನಿನ್ನ ಮಗನು ಜೀವದಿಂದಿದ್ದಾನೆಂದು ಎಲೀ ಯನು ಹೇಳಿದನು.ಆಗ ಸ್ತ್ರೀಯು ಎಲೀಯನಿಗೆನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಯ ಲ್ಲಿರುವ ಕರ್ತನ ವಾಕ್ಯವು ನಿಜವೆಂದೂ ಇದರಿಂದ ಈಗ ತಿಳಿದಿದ್ದೇನೆ ಅಂದಳು. ಆಗ ಸ್ತ್ರೀಯು ಎಲೀಯನಿಗೆನೀನು ದೇವರ ಮನುಷ್ಯನೆಂದೂ ನಿನ್ನ ಬಾಯಿಯ ಲ್ಲಿರುವ ಕರ್ತನ ವಾಕ್ಯವು ನಿಜವೆಂದೂ ಇದರಿಂದ ಈಗ ತಿಳಿದಿದ್ದೇನೆ ಅಂದಳು.
- Genesis 19:1–3 ಆದಿಕಾಂಡ 19:1–3ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮ್ಗೆ ಬಂದಾಗ ಲೋಟನು ಸೊದೋ ಮ್ನ ಬಾಗಲಲ್ಲಿ ಕೂತಿದ್ದನು. ಲೋಟನು ಅವರನ್ನು ಎದುರುಗೊಳ್ಳುವದಕ್ಕೆ ಎದ್ದು ನೆಲದ ಮಟ್ಟಿಗೆ ಬೊಗ್ಗಿ ಇಗೋ, ಪ್ರಭುಗಳೇ, ನೀವು ನಿಮ್ಮ ದಾಸನ ಮನೆಯಲ್ಲಿ ಇಳುಕೊಂಡು ರಾತ್ರಿ ಕಳೆಯಿರಿ; ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ಎದ್ದು ನಿಮ್ಮ ಮಾರ್ಗವನ್ನು ಹಿಡಿದು ಹೋಗಬಹುದು ಎಂದು ಬೇಡಿಕೊಂಡನು. ಅದಕ್ಕೆ ಅವರು--ಹಾಗಲ್ಲ; ನಾವು ರಾತ್ರಿಯೆಲ್ಲಾ ಬೀದಿಯಲ್ಲಿ ಇರುತ್ತೇವೆ ಅಂದರು. ಅದಕ್ಕವನು ಅವರನ್ನು ಬಹಳವಾಗಿ ಬಲವಂತ ಮಾಡಿದ್ದರಿಂದ ಅವರು ತಿರುಗಿಕೊಂಡು ಅವನ ಮನೆಯೊಳಕ್ಕೆ ಪ್ರವೇಶಿಸಿದರು. ಅವನು ಅವರಿಗಾಗಿ ಔತಣಮಾಡಿಸಿ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟನು. ಅವರು ಊಟಮಾಡಿದರು.
- Judges 19:16–21 ನ್ಯಾಯಸ್ಥಾಪಕರು 19:16–21ಆಗ ಇಗೋ, ಒಬ್ಬ ಮುದುಕನು ತನ್ನ ಹೊಲದ ಕೆಲಸದಿಂದ ಸಂಜೆಯಲ್ಲಿ ಬಂದನು. ಆ ಮನುಷ್ಯನು ಎಫ್ರಾಯಾಮ್ ಬೆಟ್ಟದವನಾಗಿಯೂ ಗಿಬೆಯದಲ್ಲಿ ಪ್ರವಾಸಿಯಾಗಿಯೂ ಇದ್ದನು. ಆದರೆ ಅಲ್ಲಿರುವ ಜನರು ಬೆನ್ಯಾವಿಾನ್ಯರಾಗಿದ್ದರು. ಆ ಮುದುಕನು ತನ್ನ ಕಣ್ಣುಗಳನ್ನೆತ್ತಿ ಆ ಪಟ್ಟಣದ ಬೀದಿಯಲ್ಲಿ ಕುಳಿ ತಿದ್ದ ಮಾರ್ಗದವನನ್ನು ನೋಡಿ--ನೀನು ಎಲ್ಲಿಗೆ ಹೋಗುತ್ತೀ? ಎಲ್ಲಿಂದ ಬಂದೆ ಅಂದನು. ಅವನು ಇವನಿಗೆ--ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯಾಮ್ ಬೆಟ್ಟದ ಪಾರ್ಶ್ವಕ್ಕೆ ಹಾದು ಹೋಗು ತ್ತೇವೆ. ನಾನು ಅಲ್ಲಿಯವನು; ಈಗ ಕರ್ತನ ಮನೆಗೆ ಹೋಗುತ್ತೇನೆ; ಆದರೆ ನನ್ನನ್ನು ಯಾರೂ ಮನೆಗೆ ಸೇರಿಸಿಕೊಳ್ಳಲಿಲ್ಲ. ಆದರೂ ನಮ್ಮ ಕತ್ತೆಗಳಿಗೆ ಮೇವೂ ನನಗೂ ನಿನ್ನ ದಾಸಿಗೂ ನಿನ್ನ ಸೇವಕರ ಸಂಗಡ ಇರುವ ಯೌವನಸ್ಥನಿಗೂ ರೊಟ್ಟಿ ಮತ್ತು ದ್ರಾಕ್ಷಾರಸವು ಉಂಟು; ಏನೂ ಕೊರತೆ ಇಲ್ಲ ಅಂದನು. ಆಗ ಆ ಮುದುಕನು ನಿನಗೆ ಸಮಾಧಾನವಾಗಲಿ, ನಿನ್ನ ಕೊರತೆಯೆಲ್ಲಾ ನನ್ನ ಮೇಲೆ ಇರಲಿ; ಹೇಗಾ ದರೂ ಬೀದಿಯೊಳಗೆ ಇಳುಕೊಳ್ಳಬೇಡವೆಂದು ಹೇಳಿ ಅವನನ್ನು ತನ್ನ ಮನೆಗೆ ಕರಕೊಂಡು ಹೋಗಿ ಕತ್ತೆಗಳಿಗೆ ಮೇವು ಹಾಕಿದನು. ಅವರು ತಮ್ಮ ಕಾಲು ಗಳನ್ನು ತೊಳೆದು ತಿಂದು ಕುಡಿದರು.
- Luke 10:38–42 ಲೂಕನು 10:38–42ಇದಾದ ಮೇಲೆ ಅವರು ಹೋಗುತ್ತಿದ್ದಾಗ ಆತನು ಒಂದಾನೊಂದು ಹಳ್ಳಿಯನ್ನು ಪ್ರವೇಶಿಸಿದನು; ಆಗ ಮಾರ್ಥಳೆಂಬ ಒಬ್ಬ ಸ್ತ್ರೀಯು ಆತನನ್ನು ತನ್ನ ಮನೆಯೊಳಗೆ ಅಂಗೀಕರಿಸಿಕೊಂಡಳು. ಆಕೆಗೆ ಮರಿಯಳೆಂಬ ಒಬ್ಬ ಸಹೋದರಿ ಇದ್ದಳು. ಆಕೆಯು ಯೇಸುವಿನ ಪಾದಗಳ ಬಳಿಯಲ್ಲಿ ಕೂತು ಆತನ ವಾಕ್ಯವನ್ನು ಕೇಳುತ್ತಿದ್ದಳು. ಆದರೆ ಮಾರ್ಥಳು ಬಹಳ ಕೆಲಸದ ನಿಮಿತ್ತವಾಗಿ ಬೇಸರಗೊಂಡು ಆತನ ಬಳಿಗೆ ಬಂದು--ಕರ್ತನೇ, ಕೆಲಸ ಮಾಡುವದಕ್ಕೆ ನನ್ನ ಸಹೋದರಿಯು ನನ್ನೊಬ್ಬಳನ್ನೇ ಬಿಟ್ಟಿರುವದು ನಿನಗೆ ಚಿಂತೆಯಿಲ್ಲವೋ? ಆದದರಿಂದ ನನಗೆ ಸಹಾಯಮಾಡುವದಕ್ಕಾಗಿ ಅವಳಿಗೆ ಹೇಳು ಅಂದಳು. ಆದರೆ ಯೇಸು ಪ್ರತ್ಯುತ್ತರವಾಗಿ ಆಕೆಗೆ--ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯಗಳಿಗಾಗಿ ಚಿಂತಿಸಿ ತೊಂದರೆಗೆ ಒಳಗಾಗಿದ್ದೀ;ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು. ಆದರೆ ಅವಶ್ಯವಾದದ್ದು ಒಂದೇ; ಮರಿಯಳು ಆ ಒಳ್ಳೇಭಾಗವನ್ನೇ ಆರಿಸಿ ಕೊಂಡಿದ್ದಾಳೆ. ಅದು ಆಕೆಯಿಂದ ತೆಗೆಯಲ್ಪಡುವದಿಲ್ಲ ಅಂದನು.
- Acts 16:15 ಅಪೊಸ್ತಲರ ಕೃತ್ಯಗಳು 16:15ಆಕೆಯೂ ಆಕೆಯ ಮನೆಯವರೂ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ--ನಾನು ಕರ್ತನಿಗೆ ನಂಬಿಗಸ್ತಳಾದವಳೆಂದು ನೀವು ತೀರ್ಮಾನಿಸಿದರೆ ನನ್ನ ಮನೆಗೆ ಬಂದು ಇರಬೇಕು ಎಂದು ಆಕೆಯು ನಮ್ಮನ್ನು ಬೇಡಿಕೊಂಡು ಬಲವಂತಮಾಡಿದಳು.
- Mark 6:10 ಮಾರ್ಕನು 6:10ಇದಲ್ಲದೆ ಆತನು ಅವರಿಗೆ--ಯಾವ ಸ್ಥಳದಲ್ಲಿಯಾದರೂ ಒಂದು ಮನೆಯೊಳಕ್ಕೆ ನೀವು ಪ್ರವೇಶಿಸಿದರೆ ಆ ಸ್ಥಳದಿಂದ ನೀವು ಹೊರಡುವ ತನಕ ಅಲ್ಲೇ ಇಳುಕೊಳ್ಳಿರಿ.
- Luke 9:4 ಲೂಕನು 9:4ನೀವು ಯಾವದಾದರೂ ಮನೆಯನ್ನು ಪ್ರವೇಶಿಸಿದಾಗ ಅಲ್ಲೇ ಇದ್ದು ಅಲ್ಲಿಂದಲೇ ಹೊರಡಿರಿ.
- Luke 19:7 ಲೂಕನು 19:7ಇದನ್ನು ಅವರು ನೋಡಿ ದಾಗ--ಇವನು ಪಾಪಿಯಾದವನೊಂದಿಗೆ ಅತಿಥಿ ಯಾಗಿರಲು ಹೋಗಿದ್ದಾನೆ ಎಂದು ಹೇಳಿ ಅವರೆಲ್ಲರೂ ಗುಣುಗುಟ್ಟಿದರು.
- 3 John 1:7–8 3 ಯೋಹಾನನು 1:7–8ಯಾಕಂದರೆ ಅವರು ಆತನ ಹೆಸರಿನ ನಿಮಿತ್ತವಾಗಿ ಹೊರಟು ಹೋಗಿದ್ದಾರೆ; ಅನ್ಯಜನಗಳಿಂದ ಏನೂ ತೆಗೆದುಕೊಳ್ಳುವವರಲ್ಲ. ಆದದರಿಂದ ನಾವು ಸತ್ಯಕ್ಕೆ ಸಹಕಾರಿಗಳಾಗುವಂತೆ ಅಂಥವರನ್ನು ಸೇರಿಸಿಕೊಳ್ಳುವ ಹಂಗಿನಲ್ಲಿದ್ದೇವೆ.