Matthew · chapter 10 · verse 9
Matthew 10:9 in Kannada
ನಿಮ್ಮ ಹಮ್ಮಾಣಿಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಹಿತ್ತಾಳೆ ಇಟ್ಟುಕೊಳ್ಳಬೇಡಿರಿ.
Nimma hammaanigalalli bangaara, belli mattu hittaale ittukollabediri.
Matthew 10:9 in English
- King James Version (KJV)
- Provide neither gold, nor silver, nor brass in your purses,
- World English Bible (WEB)
- Don’t take any gold, silver, or brass in your money belts.
- American Standard Version (ASV)
- Get you no gold, nor silver, nor brass in your purses;
- Bible in Basic English (BBE)
- Take no gold or silver or copper in your pockets;
- Darby Translation (DBY)
- Do not provide yourselves with gold, or silver, or brass, for your belts,
- Webster's Bible (WBS)
- Provide neither gold, nor silver, nor brass in your purses;
- Young's Literal Translation (YLT)
- 'Provide not gold, nor silver, nor brass in your girdles,
Read in context
- 7ನೀವು ಹೋಗುವಾಗ-- ಪರಲೋಕ ರಾಜ್ಯವು ಸಮಾಪವಾಯಿತು ಎಂದು ಸಾರಿ ಹೇಳಿರಿ.
- 8ರೋಗಿಗಳನ್ನು ಸ್ವಸ್ಥಮಾಡಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ಸತ್ತವರನ್ನು ಎಬ್ಬಿಸಿರಿ, ದೆವ್ವಗಳನ್ನು ಬಿಡಿಸಿರಿ; ನೀವು ಉಚಿತವಾಗಿ ಹೊಂದಿದ್ದೀರಿ, ಉಚಿತ ವಾಗಿ ಕೊಡಿರಿ.
- 9ನಿಮ್ಮ ಹಮ್ಮಾಣಿಗಳಲ್ಲಿ ಬಂಗಾರ, ಬೆಳ್ಳಿ ಮತ್ತು ಹಿತ್ತಾಳೆ ಇಟ್ಟುಕೊಳ್ಳಬೇಡಿರಿ.
- 10ಪ್ರಯಾಣಕ್ಕೆ ಹಸಿಬೆಯನ್ನಾಗಲೀ ಎರಡು ಮೇಲಂಗಿಗಳ ನ್ನಾಗಲೀ ಕೆರಗಳನ್ನಾಗಲೀ ಕೋಲುಗಳನ್ನಾಗಲೀ ತಕ್ಕೊ ಳ್ಳಬೇಡಿರಿ; ಯಾಕಂದರೆ ಕೆಲಸ ಮಾಡುವವನು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.
- 11ನೀವು ಯಾವದಾದರೂ ಪಟ್ಟಣದೊಳ ಗಾಗಲೀ ಊರೊಳಗಾಗಲೀ ಪ್ರವೇಶಿಸುವಾಗ ಅದರಲ್ಲಿ ಯಾರು ಯೋಗ್ಯರಾಗಿದ್ದಾರೆಂದು ವಿಚಾರಿ ಸಿರಿ; ಮತ್ತು ಅಲ್ಲಿಂದ ಹೊರಡುವ ವರೆಗೆ ಅಲ್ಲಿಯೇ ಇಳುಕೊಂಡಿರ್ರಿ;
Cross references
- Luke 22:35 ಲೂಕನು 22:35ಆತನು ಅವರಿಗೆ--ನಾನು ನಿಮ್ಮನ್ನು ಹವ್ಮೆಾಣಿ ಚೀಲ ಮತ್ತು ಕೆರಗಳಿಲ್ಲದೆ ಕಳುಹಿಸಿದಾಗ ನಿಮಗೆ ಏನಾದರೂ ಕೊರತೆಯಾಯಿತೋ ಎಂದು ಕೇಳಲು ಅವರು--ಏನೂ ಇಲ್ಲ ಅಂದರು.
- Luke 9:3–5 ಲೂಕನು 9:3–5ಆತನು ಅವರಿಗೆ--ನೀವು ಪ್ರಯಾಣಕ್ಕಾಗಿ ಕೋಲುಗಳನ್ನಾಗಲೀ ಚೀಲವನ್ನಾ ಗಲೀ ರೊಟ್ಟಿಯನ್ನಾಗಲೀ ಹಣವನ್ನಾಗಲೀ ಏನೂ ತಕ್ಕೊಳ್ಳಬೇಡಿರಿ; ಇದಲ್ಲದೆ ನಿಮಗೆ ಎರಡು ಅಂಗಿಗಳೂ ಇರಬಾರದು. ನೀವು ಯಾವದಾದರೂ ಮನೆಯನ್ನು ಪ್ರವೇಶಿಸಿದಾಗ ಅಲ್ಲೇ ಇದ್ದು ಅಲ್ಲಿಂದಲೇ ಹೊರಡಿರಿ. ಯಾರಾದರೂ ನಿಮ್ಮನ್ನು ಅಂಗೀಕರಿಸದೆ ಹೋದರೆ ನೀವು ಆ ಪಟ್ಟಣದ ಹೊರಗೆ ಹೋದಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದ ಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ ಅಂದನು.
- Mark 6:8–11 ಮಾರ್ಕನು 6:8–11ಅವರು ತಮ್ಮ ಪ್ರಯಾಣಕ್ಕಾಗಿ ಒಂದು ಕೋಲಿನ ಹೊರತು ಚೀಲವನ್ನಾಗಲೀ ರೊಟ್ಟಿಯನ್ನಾಗಲೀ ಹವ್ಮೆಾಣಿಯಲ್ಲಿ ಹಣವನ್ನಾಗಲೀ ತಕ್ಕೊಳ್ಳಬಾರ ದೆಂತಲೂ ಕೆರಗಳನ್ನು ಮೆಟ್ಟಿಕೊಂಡಿರಬೇಕೆಂದೂ ಎರಡು ಅಂಗಿಗಳನ್ನು ಹಾಕಿಕೊಳ್ಳಬಾರದೆಂದೂ ಆಜ್ಞಾ ಪಿಸಿದನು. ಇದಲ್ಲದೆ ಆತನು ಅವರಿಗೆ--ಯಾವ ಸ್ಥಳದಲ್ಲಿಯಾದರೂ ಒಂದು ಮನೆಯೊಳಕ್ಕೆ ನೀವು ಪ್ರವೇಶಿಸಿದರೆ ಆ ಸ್ಥಳದಿಂದ ನೀವು ಹೊರಡುವ ತನಕ ಅಲ್ಲೇ ಇಳುಕೊಳ್ಳಿರಿ. ಯಾರಾದರೂ ನಿಮ್ಮನ್ನು ಅಂಗೀಕರಿಸದೆಯೂ ಇಲ್ಲವೆ ನಿಮ್ಮ ಮಾತನ್ನು ಕೇಳ ದೆಯೂ ಇದ್ದರೆ ನೀವು ಅಲ್ಲಿಂದ ಹೊರಡುವಾಗ ಅವರಿಗೆ ವಿರೋಧವಾಗಿ ಸಾಕ್ಷಿಯಾಗಿರುವಂತೆ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಢಿಸಿಬಿಡಿರಿ. ಮತ್ತು ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ನ್ಯಾಯತೀರ್ಪಿನ ದಿನದಲ್ಲಿ ಆ ಪಟ
- 1 Corinthians 9:7–27 1 ಕೊರಿಂಥದವರಿಗೆ 9:7–27ಸ್ವಂತ ಖರ್ಚಿನಿಂದ ಯಾರಾದರೂ ಯಾವಾಗಲಾದರೂ ಯುದ್ಧಕ್ಕೆ ಹೋಗುವದುಂಟೇ? ದ್ರಾಕ್ಷೇ ತೋಟವನ್ನು ನೆಟ್ಟ ಯಾರಾದರೂ ಅದರ ಫಲವನ್ನು ತಿನ್ನದಿರುವ ದುಂಟೇ? ಇಲ್ಲವೆ ಮಂದೆಯನ್ನು ಮೇಯಿಸಿದ ಯಾರಾದರೂ ಮಂದೆಯ ಹೈನವನ್ನು ತಿನ್ನದಿರುವ ದುಂಟೇ? ಮನುಷ್ಯ ರೀತಿಯಲ್ಲಿ ನಾನು ಇವುಗಳನ್ನು ಹೇಳುತ್ತೇನೋ? ಇಲ್ಲವೆ ನ್ಯಾಯ ಪ್ರಮಾಣವು ಸಹ ಇದನ್ನು ಹೇಳುವದಿಲ್ಲವೋ? ಕಣತುಳಿಯುವ ಎತ್ತಿನ ಬಾಯನ್ನು ನೀನು ಕಟ್ಟಬಾರದು ಎಂದು ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದದೆ. ದೇವರು ಚಿಂತಿಸು ವದು ಎತ್ತುಗಳಿಗಾಗಿಯೋ? ಇಲ್ಲವೆ ನಮಗೋಸ್ಕರ ವಾಗಿಯೇ ಆತನು ಹೇಳುತ್ತಾನೋ? ಉಳುವವನು ನಿರೀಕ್ಷೆಯಿಂದ ಉಳಬೇಕು, ನಿರೀಕ್ಷೆಯಲ್ಲಿ ಕಣತುಳಿಸು ವವನು ತನ್ನ ನಿರೀಕ್ಷೆಯಲ್ಲಿ ಪಾಲುಗಾರನಾಗಿರಬೇಕು ಎಂದು ನಮಗೋಸ್ಕರ ನಿಸ್ಸಂದೇಹವಾಗಿ ಇದು ಬರೆಯಲ್ಪಟ್ಟಿತು. ನಾವು ನಿಮಗೋಸ್ಕರ ಆತ್ಮಸಂಬಂಧ ವಾದವುಗಳನ್ನು ಬಿತ್ತಿದ ಮೇಲೆ ನಿಮ್ಮಿಂದ ಶಾರೀರಿಕ ವಾದವುಗಳನ್ನು ಕೊಯ್ಯುವದು ದೊಡ್ಡದೋ? ನಿಮ್ಮ ಮೇಲಿರುವ ಅಧಿಕಾರದಲ್ಲಿ ಇತರರಿಗೆ ಪಾಲು ಇದ್ದರೆ ಅವರಿಗಿಂತ ನಮಗೆ ಎಷ್ಟೋ ಹೆಚ್ಚಾಗಿ ಇರಬೇಕಲ್ಲಾ. ಆದರೂ ನಾವು ಈ ಅಧಿಕಾರವನ್ನು ನಡಿಸದೆ ಕ್ರಿಸ್ತನ ಸುವಾರ್ತೆಗೆ ಅಡ್ಡಿಮಾಡಬಾರದೆಂದು ಎಲ್ಲವನ್ನು ಸಹಿಸಿ ಕೊಂಡಿರುತ್ತೇವೆ. ಪವಿತ್ರವಾದವುಗಳ ಸೇವೆ ಮಾಡುವವರು ಆಲಯದವುಗಳಿಂದ ಜೀವಿಸುವರೆಂದೂ ಯಜ್ಞವೇದಿಯ ಬಳಿಯಲ್ಲಿ ಸೇವೆ ಮಾಡುವವರು ಯಜ್ಞವೇದಿಯೊಂದಿಗೆ ಪಾಲುಗಾರರೆಂದೂ ನಿಮಗೆ ಗೊತ್ತಿಲ್ಲವೋ? ಅದೇ ರೀತಿಯಾಗಿ ಸುವಾರ್ತೆಯನ್ನು ಸಾರುವವರು ಸುವಾರ್ತೆಯಿಂದಲೇ ಜೀವನ ಮಾಡ ಬೇಕೆಂದು ಕರ್ತನು ನೇಮಿಸಿದನು. ಆದರೆ ಇವುಗಳಲ್ಲಿ ಒಂದನ್ನೂ ನಾನು ಉಪ ಯೋಗಿಸಲಿಲ್ಲ; ಇಲ್ಲವೆ ನನಗೆ ಹಾಗೆ ಆಗಲೆಂದು ನಾನು ಈ ವಿಷಯಗಳನ್ನು ಬರೆಯಲೂ ಇಲ್ಲ; ಯಾಕಂದರೆ ನಾನು ಹೆಚ್ಚಳಪಡುವದನ್ನು ಯಾವ ನಾದರೂ ವ್ಯರ್ಥ ಮಾಡುವದಕ್ಕಿಂತ ಸಾಯುವದೇ ನನಗೆ ಮೇಲು. ನಾನು ಸುವಾರ್ತೆಯನ್ನು ಸಾರಿದರೂ ಹೆಚ್ಚಳ ಪಡುವದಕ್ಕೆ ನನಗೇನೂ ಇಲ್ಲ; ಸಾರಲೇ ಬೇಕೆಂಬ ನಿರ್ಬಂಧ ನನ್ನ ಮೇಲೆ ಇದೆ. ಹೌದು, ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ! ನಾನು ಇದನ್ನು ಇಷ್ಟಪೂರ್ವಕವಾಗಿ ಮಾಡಿದರೆ ನನಗೆ ಬಹುಮಾನವುಂಟು. ನನ್ನ ಇಷ್ಟಕ್ಕೆ ವಿರೋಧ ವಾಗಿ ಮಾಡಿದರೆ ಸುವಾರ್ತೆಯ ವಿಷಯವಾದ ದೈವನೇಮವು ನನ್ನ ವಶಕ್ಕೆ ಕೊಡಲ್ಪಟ್ಟಿದೆ. ಹಾಗಾ ದರೆ ನನ್ನ ಬಹುಮಾನ ಯಾವದು? ನಿಶ್ಚಯವಾಗಿ ನಾನು ಸುವಾರ್ತೆಯನ್ನು ಸಾರುವಾಗ ಸುವಾರ್ತೆ ಯಲ್ಲಿರುವ ನನ್ನ ಅಧಿಕಾರವನ್ನು ನಾನು ದುರುಪ ಯೋಗ ಮಾಡದಂತೆ ಕ್ರಿಸ್ತನ ಸುವಾರ್ತೆಯನ್ನು ಉಚಿತವಾಗಿ ಸಾರುವದೇ ನನ್ನ ಬಹುಮಾನ. ಎಲ್ಲರಿಂದಲೂ ನಾನು ಸ್ವತಂತ್ರನಾಗಿದ್ದರೂ ಇನ್ನೂ ಹೆಚ್ಚು ಜನರನ್ನು ಸಂಪಾದಿಸಿಕೊಳ್ಳುವದಕ್ಕೋಸ್ಕರ ನನ್ನನ್ನು ಎಲ್ಲರಿಗೂ ಸೇವಕನನ್ನಾಗಿ ಮಾಡಿಕೊಂಡಿದ್ದೇನೆ. ಇದಲ್ಲದೆ ಯೆಹೂದ್ಯರನ್ನು ಸಂಪಾದಿಸಿಕೊಳ್ಳುವಂತೆ ಯೆಹೂದ್ಯರಿಗೆ ನಾನು ಯೆಹೂದ್ಯನಾಗಿಯೂ ನ್ಯಾಯ ಪ್ರಮಾಣದ ಅಧೀನದಲ್ಲಿರುವವರನ್ನು ಸಂಪಾದಿಸಿ ಕೊಳ್ಳುವಂತೆ ನ್ಯಾಯಪ್ರಮಾಣಕ್ಕೆ ಅಧೀನರಾಗಿರು ವವರಿಗೆ ನ್ಯಾಯಪ್ರಮಾಣಕ್ಕೆ ಅಧೀನನಾಗಿಯೂ (ನಾನು ದೇವರ ನ್ಯಾಯಪ್ರಮಾಣವಿಲ್ಲದವ ನಂತಲ್ಲ, ಕ್ರಿಸ್ತನ ನ್ಯಾಯಪ್ರಮಾಣಕ್ಕೆ ಒಳಗಾದವನೇ;) ನ್ಯಾಯಪ್ರಮಾಣವಿಲ್ಲದವರನ್ನು ಸಂಪಾದಿಸಿಕೊಳ್ಳು ವದಕ್ಕಾಗಿ ಅವರಿಗೆ ನ್ಯಾಯಪ್ರಮಾಣವಿಲ್ಲದವ ನಂತೆಯೂ ಆದೆನು. ಬಲವಿಲ್ಲದವರನ್ನು ಸಂಪಾದಿಸು ವದಕ್ಕೆ ಅವರಿಗೆ ಬಲವಿಲ್ಲದವನಂತಾದೆನು; ಯಾವ ವಿಧದಲ್ಲಿಯಾದರೂ ಕೆಲವರನ್ನು ರಕ್ಷಿಸಬೇಕೆಂದು ಯಾರಾರಿಗೆ ಎಂಥೆಂಥವನಾಗಬೇಕೋ ಅಂಥವನಾಗಿದ್ದೇನೆ. ನಾನು ನಿಮ್ಮೊಂದಿಗೆ ಸುವಾರ್ತೆಯ ಫಲದಲ್ಲಿ ಪಾಲುಗಾರನಾಗಬೇಕೆಂದು ಸುವಾರ್ತೆ ಗೋಸ್ಕರವೇ ಇದನ್ನು ಮಾಡುತ್ತೇನೆ. ರಂಗಸ್ಥಾನದಲ್ಲಿ ಓಡುವವರೆಲ್ಲರೂ ಓಡುತ್ತಾರಾ ದರೂ ಒಬ್ಬನು ಮಾತ್ರ ಬಹುಮಾನವನ್ನು ಹೊಂದುತ್ತಾ ನೆಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಹುಮಾನವನ್ನು ಪಡಕೊಳ್ಳಬೇಕೆಂತಲೇ ಓಡಿರಿ. ಪ್ರವೀಣತೆಗಾಗಿ ಹೋರಾಡುವ ಪ್ರತಿಯೊಬ್ಬನು ಎಲ್ಲಾ ವಿಷಯಗಳಲ್ಲಿ ಮಿತವಾಗಿರುತ್ತಾನೆ; ಅವರಾ ದರೋ ನಾಶವಾಗುವ ಕಿರೀಟವನ್ನು ಹೊಂದಿಕೊಳ್ಳು ವದಕ್ಕಾಗಿ ಹೋರಾಡುತ್ತಾರೆ; ನಾವಾದರೋ ನಾಶ ವಾಗದ ಕಿರೀಟಕ್ಕಾಗಿಯೇ ಹೋರಾಡುತ್ತೇವೆ. ಹೀಗಿರಲಾಗಿ ನಾನು ಸಹ ಗುರಿಗೊತ್ತಿಲ್ಲದವನಾಗಿ ಓಡದೆ ಗೆಲ್ಲಬೇಕೆಂದು ಅವರಂತೆಯೇ ಓಡುತ್ತೇನೆ; ನಾನು ಗಾಳಿಯನ್ನು ಗುದ್ದುವವನಾಗಿರದೆ ಗೆಲ್ಲಬೇಕೆಂದು ಹೋರಾಡುತ್ತೇನೆ.ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ. ಆದರೆ ನಾನು ಬೇರೆಯವರಿಗೆ ಸಾರಿದ ಮೇಲೆ ಯಾವ ವಿಧದಲ್ಲಿಯೂ ನಾನು ಭ್ರಷ್ಠನಾಗದಂತೆ ನನ್ನ ದೇಹವನ್ನು ಅಧೀನತೆಯಲ್ಲಿಟ್ಟು ಅದನ್ನು ಸ್ವಾಧೀನಪಡಿಸಿಕೊಳ್ಳುತ್ತೇನೆ.
- Luke 10:4–12 ಲೂಕನು 10:4–12ಹವ್ಮೆಾಣಿಯನ್ನಾಗಲೀ ಚೀಲವನ್ನಾಗಲೀ ಕೆರಗಳನ್ನಾಗಲೀ ತಕ್ಕೊಳ್ಳಬೇಡಿರಿ; ಮತ್ತು ದಾರಿಯಲ್ಲಿ ಯಾರನ್ನೂ ವಂದಿಸಬೇಡಿರಿ. ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ. ಅಲ್ಲಿ ಸಮಾಧಾನದ ಮಗನು ಇದ್ದರೆ ನಿಮ್ಮ ಸಮಾಧಾನವು ಅವರ ಮೇಲೆ ಇರುವದು; ಇಲ್ಲದಿದ್ದರೆ ಅದು ನಿಮಗೆ ಹಿಂದಿರು ಗುವದು. ಅದೇ ಮನೆಯಲ್ಲಿದ್ದು ಅವರು ಕೊಟ್ಟದ್ದನ್ನು ತಿಂದು ಕುಡಿಯಿರಿ; ಯಾಕಂದರೆ ಕೆಲಸದವನು ತನ್ನ ಕೂಲಿಗೆ ಯೋಗ್ಯನು. ಮನೆಯಿಂದ ಮನೆಗೆ ಹೋಗ ಬೇಡಿರಿ; ಯಾವದಾದರೂ ಪಟ್ಟಣದೊಳಗೆ ನೀವು ಪ್ರವೇಶಿಸುವಾಗ ಅವರು ನಿಮ್ಮನ್ನು ಸೇರಿಸಿಕೊಂಡರೆ ನಿಮ್ಮ ಮುಂದೆ ಇಡುವಂಥವುಗಳನ್ನು ತಿನ್ನಿರಿ. ಅಲ್ಲಿರುವ ರೋಗಿಗಳನ್ನು ಸ್ವಸ್ಥಮಾಡಿರಿ; ಮತ್ತು ಅವರಿಗೆ--ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂದು ಹೇಳಿರಿ. ಆದರೆ ನೀವು ಪ್ರವೇಶಿ ಸುವ ಯಾವ ಪಟ್ಟಣದಲ್ಲಿಯಾದರೂ ಅವರು ನಿಮ್ಮನ್ನು ಸೇರಿಸಿಕೊಳ್ಳದಿದ್ದರೆ ನೀವು ಹೊರಟು ಅದೇ ಬೀದಿ ಗಳಲ್ಲಿ ಹೋಗಿ-- ನಮ್ಮ ಮೇಲೆ ಅಂಟಿಕೊಂಡಿರುವ ನಿಮ್ಮ ಪಟ್ಟಣದ ಧೂಳನ್ನೇ ನಿಮಗೆ ವಿರೋಧವಾಗಿ ನಾವು ಝಾಡಿಸಿಬಿಡುತ್ತೇವೆ; ಆದಾಗ್ಯೂ ದೇವರ ರಾಜ್ಯವು ನಿಮ್ಮ ಸವಿಾಪಕ್ಕೆ ಬಂದಿದೆ ಎಂಬದು ನಿಮಗೆ ಖಚಿತವಾಗಿ ತಿಳಿದಿರಲಿ ಎಂದು ಹೇಳಿರಿ. ಆದರೆ ಆ ದಿನದಲ್ಲಿ ಆ ಪಟ್ಟಣಕ್ಕಿಂತಲೂ ಸೊದೋಮಿನ ಗತಿಯು ಹೆಚ್ಚಾಗಿ ತಾಳಬಹುದಾಗಿರುವದು ಎಂದು ನಾನು ನಿಮಗೆ ಹೇಳುತ್ತೇನೆ.