Matthew · chapter 13 · verse 54
Matthew 13:54 in Kannada
ಆತನು ತನ್ನ ಸ್ವಂತ ದೇಶಕ್ಕೆ ಬಂದು ಅವರ ಸಭಾಮಂದಿರ ದಲ್ಲಿ ಅವರಿಗೆ ಬೋಧಿಸಿದ್ದರಿಂದ ಅವರು ವಿಸ್ಮಯ ಗೊಂಡು--ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದಿದ್ದಾವು?
Aatanu tanna svanta deshakke bandu avara sabhaamandira dalli avarige bodhisiddarinda avaru vismaya gondu--ee jnyaanavoo ee mahatkaaryagaloo eetanige ellinda bandiddaavu?
Matthew 13:54 in English
- King James Version (KJV)
- And when he was come into his own country, he taught them in their synagogue, insomuch that they were astonished, and said, Whence hath this [man] this wisdom, and [these] mighty works?
- World English Bible (WEB)
- Coming into his own country, he taught them in their synagogue, so that they were astonished and said, “Where did this man get this wisdom and these mighty works?
- American Standard Version (ASV)
- And coming into his own country he taught them in their synagogue, insomuch that they were astonished, and said, Whence hath this man this wisdom, and these mighty works?
- Bible in Basic English (BBE)
- And coming into his country, he gave them teaching in their Synagogue, so that they were greatly surprised and said, Where did this man get this wisdom and these works of power?
- Darby Translation (DBY)
- And having come into his own country, he taught them in their synagogue, so that they were astonished, and said, Whence has this [man] this wisdom and these works of power?
- Webster's Bible (WBS)
- And when he had come into his own country, he taught them in their synagogue, so that they were astonished, and said, Whence hath this [man] this wisdom, and [these] mighty works?
- Young's Literal Translation (YLT)
- and having come to his own country, he was teaching them in their synagogue, so that they were astonished, and were saying, 'Whence to this one this wisdom and the mighty works?
Read in context
- 52ಆತನು ಅವರಿಗೆ--ಆದಕಾರಣ ಪರಲೋಕ ರಾಜ್ಯದ ವಿಷಯವಾಗಿ ಶಿಕ್ಷಣಹೊಂದಿದ ಪ್ರತಿಯೊಬ್ಬ ಶಾಸ್ತ್ರಿಯು ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೇ ಯಜಮಾನನಿಗೆ ಹೋಲಿಕೆಯಾಗಿದ್ದಾನೆ ಅಂದನು.
- 53ಈ ಸಾಮ್ಯಗಳನ್ನು ಮುಗಿಸಿದ ತರುವಾಯ ಯೇಸು ಅಲ್ಲಿಂದ ಹೊರಟುಹೋದನು.
- 54ಆತನು ತನ್ನ ಸ್ವಂತ ದೇಶಕ್ಕೆ ಬಂದು ಅವರ ಸಭಾಮಂದಿರ ದಲ್ಲಿ ಅವರಿಗೆ ಬೋಧಿಸಿದ್ದರಿಂದ ಅವರು ವಿಸ್ಮಯ ಗೊಂಡು--ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದಿದ್ದಾವು?
- 55ಈತನು ಬಡಗಿ ಯ ಮಗನಲ್ಲವೇ? ಮರಿಯಳೆಂದು ಕರೆಯಲ್ಪಡು ವವಳು ಈತನ ತಾಯಿಯಲ್ಲವೇ? ಮತ್ತು ಯಾಕೋಬ, ಯೋಸೇಫ, ಸೀಮೋನ, ಯೂದ ಈತನ ಸಹೋದರ ರಲ್ಲವೇ?
- 56ಈತನ ಸಹೋದರಿಯರೆಲ್ಲರೂ ನಮ್ಮೊಂ ದಿಗೆ ಇದ್ದಾರಲ್ಲವೇ? ಹಾಗಾದರೆ ಇವೆಲ್ಲವುಗಳು ಈ ಮನುಷ್ಯನಿಗೆ ಎಲ್ಲಿಂದ ಬಂದಿದ್ದಾವೆಂದು ಅಂದು ಕೊಂಡರು.
Cross references
- John 7:15–16 ಯೋಹಾನನು 7:15–16ಯೆಹೂ ದ್ಯರು ಆಶ್ಚರ್ಯಪಟ್ಟು--ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಂಥ ಜ್ಞಾನವು ಬಂದಿರುವದು ಹೇಗೆ ಅಂದರು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ನನ್ನ ಬೋಧನೆಯು ನನ್ನದಲ್ಲ; ಆದರೆ ನನ್ನನ್ನು ಕಳುಹಿಸಿದಾತನದೇ.
- Matthew 7:28 ಮತ್ತಾಯನು 7:28ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ತರುವಾಯ ಜನರು ಆತನ ಬೋಧನೆಗೆ ಆಶ್ಚರ್ಯ ಪಟ್ಟರು.ಯಾಕಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಆಧಿಕಾರವಿದ್ದವನಂತೆ ಅವರಿಗೆ ಬೋಧಿಸಿದನು.
- Mark 6:1–6 ಮಾರ್ಕನು 6:1–6ಆತನು ಅಲ್ಲಿಂದ ಹೊರಟು ತನ್ನ ಸ್ವಂತ ಸ್ಥಳಕ್ಕೆ ಬಂದನು; ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು. ಸಬ್ಬತ್ ದಿನ ಬಂದಾಗ ಆತನು ಸಭಾಮಂದಿರದಲ್ಲಿ ಬೋಧಿಸುವದಕ್ಕೆ ಪ್ರಾರಂಭಿ ಸಿದನು; ಇದನ್ನು ಅನೇಕರು ಕೇಳುತ್ತಾ ಆಶ್ಚರ್ಯ ಪಟ್ಟು--ಇವುಗಳು ಈತನಿಗೆ ಎಲ್ಲಿಂದ ಬಂದಿದ್ದಾವು? ಮತ್ತು ಈತನ ಕೈಗಳಿಂದ ಇಂಥ ಮಹತ್ಕಾರ್ಯಗಳು ಸಹ ಆಗುವಂತೆ ಈತನಿಗೆ ಕೊಡಲ್ಪಟ್ಟ ಜ್ಞಾನವು ಎಂಥದ್ದು? ಮರಿಯಳ ಮಗನೂ ಯಾಕೋಬ, ಯೋಸೆ ಯೂದ ಸೀಮೋನ ಇವರ ಸಹೋದರನೂ ಆದ ಈತನು ಬಡಗಿಯಲ್ಲವೇ? ಈತನ ಸಹೋದರಿ ಯರು ಇಲ್ಲಿಯೇ ನಮ್ಮ ಜೊತೆಯಲ್ಲಿ ಇದ್ದಾರಲ್ಲವೇ ಎಂದು ಹೇಳಿ ಆತನ ವಿಷಯದಲ್ಲಿ ಅಭ್ಯಂತರಪಟ್ಟರು. ಅದಕ್ಕೆ ಯೇಸು ಅವರಿಗೆ--ಪ್ರವಾದಿಗೆ ಬೇರೆ ಎಲ್ಲಿ ಯಾದರೂ ಮರ್ಯಾದೆ ಉಂಟು; ಆದರೆ ಸ್ವದೇಶದಲ್ಲಿಯೂ ಸ್ವಂತ ಜನರಲ್ಲಿಯೂ ಸ್ವಂತ ಮನೆಯಲ್ಲಿಯೂ ಇಲ್ಲ ಎಂದು ಹೇಳಿದನು. ಆತನು ಅಲ್ಲಿ ಕೆಲವು ರೋಗಿಗಳ ಮೇಲೆ ತನ್ನ ಕೈಗಳನ್ನಿಟ್ಟು ಸ್ವಸ್ಥಪಡಿಸಿದನೇ ಹೊರತು ಬೇರೆ ಯಾವ ಮಹತ್ಕಾರ್ಯವನ್ನೂ ಮಾಡುವದಕ್ಕಾಗಲಿಲ್ಲ. ಆತನು ಅವರ ಅಪನಂಬಿಕೆ ಯ ದೆಸೆಯಿಂದ ಆಶ್ಚರ್ಯಪಟ್ಟನು; ಮತ್ತು ಸುತ್ತಲಿನ ಹಳ್ಳಿಗಳಿಗೆ ಹೋಗಿ ಬೋಧಿಸುತ್ತಾ ಇದ್ದನು.
- Matthew 2:23 ಮತ್ತಾಯನು 2:23ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು.
- Matthew 4:23 ಮತ್ತಾಯನು 4:23ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು.
- Luke 4:16–30 ಲೂಕನು 4:16–30ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರ ದೊಳಕ್ಕೆ ಹೋಗಿ ಓದುವದಕ್ಕಾಗಿ ಎದ್ದುನಿಂತನು. ಆಗ ಪ್ರವಾದಿಯಾದ ಯೆಶಾಯನ ಪುಸ್ತಕವು ಆತನಿಗೆ ಕೊಡಲ್ಪಟ್ಟಿತು. ಆತನು ಆ ಪುಸ್ತಕವನ್ನು ತೆರೆದು-- ಕರ್ತನ ಆತ್ಮವು ನನ್ನ ಮೇಲೆ ಇದೆ; ಯಾಕಂದರೆ ಬಡವರಿಗೆ ಸುವಾರ್ತೆ ಸಾರುವದಕ್ಕೆ ಆತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯ ವುಳ್ಳವರನ್ನು ಸ್ವಸ್ಥಮಾಡುವದಕ್ಕೂ ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವದಕ್ಕೂ ಕುರುಡರಿಗೆ ದೃಷ್ಟಿ ಕೊಡುವದಕ್ಕೂ ಜಜ್ಜಲ್ಪಟ್ಟವರನ್ನು ಬಿ ಕರ್ತನ ಅಂಗೀಕೃತವಾದ ವರುಷವನ್ನು ಸಾರುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ ಎಂದು ಬರೆದಿರುವದನ್ನು ಕಂಡು ಓದಿದನು. ಆತನು ಆ ಪುಸ್ತಕವನ್ನು ಮುಚ್ಚಿ ತಿರಿಗಿ ಪರಿಚಾರಕನ ಕೈಗೆ ಕೊಟ್ಟು ಕೂತುಕೊಂಡನು. ಆಗ ಆ ಸಭಾ ಮಂದಿರದಲ್ಲಿದ್ದವ ರೆಲ್ಲರ ಕಣ್ಣುಗಳು ಆತನನ್ನೇ ದೃಷ್ಟಿಸಿದವು. ಆತನು ಅವರಿಗೆ--ನೀವು ಕಿವಿಯಿಂದ ಕೇಳಿದ ಈ ಬರಹವು ಈ ದಿವಸ ನೆರವೇರಿತು ಎಂದು ಹೇಳಲಾರಂಭಿಸಿದನು. ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು. ಆತನು ಅವರಿಗೆ--ವೈದ್ಯನೇ, ನಿನ್ನನ್ನು ನೀನೇ ವಾಸಿ ಮಾಡಿಕೋ ಎಂಬ ಈ ನಾನ್ನುಡಿಯನ್ನು ನೀವು ನನಗೆ ನಿಶ್ಚಯವಾಗಿ ಹೇಳಿ ಕಪೆರ್ನೌಮಿನಲ್ಲಿ ಯಾವದು ನಡೆಯಿತೆಂದು ನಾವು ಕೇಳಿದೆವೋ ಅದನ್ನು ಇಲ್ಲಿ ನಿನ್ನ ದೇಶದಲ್ಲಿಯೂ ಮಾಡು ಎಂದು ಹೇಳುವಿರಿ ಅಂದನು. ಆತನು--ನಿಮಗೆ ನಿಜವಾಗಿ ಹೇಳುವದೇನಂದರೆ--ಯಾವ ಪ್ರವಾದಿಯೂ ತನ್ನ ಸ್ವದೇಶದಲ್ಲಿ ಅಂಗೀಕರಿಸಲ್ಪಡುವದಿಲ್ಲ. ಆದರೆ ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಎಲೀಯನ ದಿವಸಗಳಲ್ಲಿ ಮೂರು ವರುಷ ಆರು ತಿಂಗಳು ಆಕಾಶವು ಮುಚ್ಚಲ್ಪಟ್ಟು ದೇಶದಲ್ಲೆಲ್ಲಾ ದೊಡ್ಡ ಬರ ಉಂಟಾದಾಗ ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರೂ ಅವರಲ್ಲಿ ಯಾರ ಬಳಿಗೂ (ದೇವರು) ಎಲೀಯನನ್ನು ಕಳುಹಿಸದೆ ಸೀದೋನ್ ಪಟ್ಟಣದ ಸರೆಪ್ತದಲ್ಲಿದ್ದ ಒಬ್ಬ ವಿಧವೆಯ ಬಳಿಗೇ ಕಳುಹಿಸಿದನು. ಪ್ರವಾದಿಯಾದ ಎಲೀಷನ ಕಾಲ ದಲ್ಲಿ ಅನೇಕ ಕುಷ್ಠರೋಗಿಗಳು ಇಸ್ರಾಯೇಲಿನಲ್ಲಿ ದ್ದಾಗ್ಯೂ ಸಿರಿಯದವನಾದ ನಾಮಾನನ ಹೊರತು ಅವರಲ್ಲಿ ಒಬ್ಬನಾದರೂ ಶುದ್ಧನಾಗಲಿಲ್ಲ ಅಂದನು. ಆಗ ಸಭಾಮಂದಿರದಲ್ಲಿದ್ದವರೆಲ್ಲರೂ ಇವುಗಳನ್ನು ಕೇಳಿ ಕೋಪದಿಂದ ತುಂಬಿದವರಾದರು. ಅವರು ಮೇಲಕ್ಕೆದ್ದು ಆತನನ್ನು ಪಟ್ಟಣದ ಹೊರಗೆ ದೂಡಿ ಕೊಂಡು ಹೋಗಿ ತಲೆ ಕೆಳಗೆ ಮಾಡಿ ದೊಬ್ಬಬೇಕೆಂದು ತಮ್ಮ ಪಟ್ಟಣವು ಕಟ್ಟಲ್ಪಟ್ಟಿದ್ದ ಬೆಟ್ಟದ ಕಡಿದಾದ ಸ್ಥಳಕ್ಕೆ ಆತನನ್ನು ನಡಿಸಿಕೊಂಡು ಹೋದರು. ಆದರೆ ಆತನು ಅವರ ಮಧ್ಯದಿಂದ ಹಾದು ಹೊರಟು ಹೋದನು.
- Psalm 22:22 ಕೀರ್ತನೆಗಳು 22:22ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
- John 1:11 ಯೋಹಾನನು 1:11ಆತನು ತನ್ನ ಸ್ವಂತದವರ ಬಳಿಗೆ ಬಂದನು. ಆತನ ಸ್ವಂತದವರು ಆತನನ್ನು ಅಂಗೀಕರಿಸಲಿಲ್ಲ.
- Acts 28:17–28 ಅಪೊಸ್ತಲರ ಕೃತ್ಯಗಳು 28:17–28ಮೂರು ದಿವಸಗಳಾದ ಮೇಲೆ ಪೌಲನು ಯೆಹೂದ್ಯರ ಮುಖ್ಯಸ್ಥರನ್ನು ಒಟ್ಟಾಗಿ ಕರೆದನು. ಅವರು ಕೂಡಿ ಬಂದಾಗ ಅವನು ಅವರಿಗೆ--ಜನರೇ, ಸಹೊ ದರರೇ, ಜನರಿಗಾಗಲೀ ನಮ್ಮ ಪಿತೃಗಳ ಆಚಾರಗಳಿ ಗಾಗಲೀ ವಿರೋಧವಾಗಿ ಯಾವದನ್ನೂ ಮಾಡ ದಿದ್ದರೂ ಯೆರೂಸಲೇಮಿನಿಂದ ರೋಮ್ನವರ ಕೆ ಅವರು ನನ್ನನ್ನು ಪರೀಕ್ಷಿಸಿ ನನ್ನಲ್ಲಿ ಮರಣದಂಡನೆಗೆ ಕಾರಣವೇನೂ ಇಲ್ಲದ್ದರಿಂದ ನನ್ನನ್ನು ಬಿಡಿಸಬೇಕೆಂದಿ ದ್ದರು. ಆದರೆ ಯೆಹೂದ್ಯರು ಅದಕ್ಕೆ ವಿರೋಧವಾಗಿ ಮಾತನಾಡಿದಾಗ ಕೈಸರನಿಗೆ ಹೇಳಿಕೊಳ್ಳುವಂತೆ ನಾನು ಒತ್ತಾಯ ಮಾಡಲ್ಪಟ್ಟೆನು; ಆದರೆ ನನ್ನ ಸ್ವದೇಶದವರ ಮೇಲೆ ತಪ್ಪು ಹೊರಿಸುವದಕ್ಕಾಗಿ ಅಲ್ಲ. ಈ ಕಾರಣ ದಿಂದಲೇ ನಿಮ್ಮನ್ನು ನೋಡುವದಕ್ಕೂ ನಿಮ್ಮೊಂದಿಗೆ ಮಾತನಾಡುವದಕ್ಕೂ ನಾನು ನಿಮ್ಮನ್ನು ಕರೆಯಿಸಿದೆನು; ಇಸ್ರಾಯೇಲ್ಯರ ನಿರೀಕ್ಷೆಯ ನಿಮಿತ್ತವಾಗಿ ನಾನು ಈ ಸರಪಣಿಯಿಂದ ಕಟ್ಟಲ್ಪಟ್ಟಿದ್ದೇನೆ ಎಂದು ಹೇಳಿದನು. ಆಗ ಅವರು ಅವನಿಗೆ--ನಿನ್ನ ವಿಷಯವಾಗಿ ಯೂದಾಯದಿಂದ ನಮಗೆ ಯಾವ ಪತ್ರಗಳು ಬಂದಿಲ್ಲ, ಇಲ್ಲವೆ ಇಲ್ಲಿ ಬಂದ ಸಹೋದರರಲ್ಲಿ ಯಾವನೂ ನಿನ್ನ ವಿಷಯವಾಗಿ ಕೆಟ್ಟದ್ದೇನೂ ತೋರಿಸ ಲಿಲ್ಲ ಮತ್ತು ಹೇಳಲಿಲ್ಲ. ಆದರೆ ನಿನ್ನ ಅಭಿಪ್ರಾಯ ವೇನೆಂದು ನಿನ್ನಿಂದಲೇ ಕೇಳುವದಕ್ಕೆ ನಾವು ಅಪೇಕ್ಷಿಸು ತ್ತೇವೆ; ಎಲ್ಲಾ ಕಡೆಯಲ್ಲಿಯೂ ಈ ಪಂಗಡದ ವಿಷಯ ದಲ್ಲಿ ಜನರು ವಿರುದ್ಧವಾಗಿ ಮಾತನಾಡುತ್ತಾರೆಂಬದು ನಮಗೆ ಗೊತ್ತದೆ ಎಂದು ಹೇಳಿದರು. ಅವರು ಅವನಿಗೆ ಒಂದು ದಿನವನ್ನು ನೇಮಿಸಿ ದಾಗ ಅನೇಕರು ಅವನ ನಿವಾಸಕ್ಕೆ ಬಂದರು; ಆಗ ಬೆಳಗಿನಿಂದ ಸಾಯಂಕಾಲದವರೆಗೆ ಮೋಶೆಯ ನ್ಯಾಯ ಪ್ರಮಾಣದಿಂದಲೂ ಪ್ರವಾದನೆಗಳಿಂದಲೂ ಯೇಸು ವಿನ ವಿಷಯದಲ್ಲಿ ಅವರನ್ನು ಒಡಂಬಡಿಸುತ್ತಾ ಅವರಿಗೆ ದೇವರ ರಾಜ್ಯವನ್ನು ವಿವರಿಸಿ ಸಾಕ್ಷೀಕರಿಸಿದನು. ಅವನು ಹೇಳಿದ ಮಾತುಗಳನ್ನು ಕೆಲವರು ನಂಬಿ ದರು; ಆದರೆ ಕೆಲವರು ನಂಬದೆ ಹೋದರು. ಹೀಗೆ ಅವರಲ್ಲಿ ವಿಭಾಗವಾದಾಗ ಪೌಲನು ಅವರಿಗೆ--ಯೆಶಾಯನು ಪವಿತ್ರಾತ್ಮನಿಂದ ನಮ್ಮ ಪಿತೃಗಳಿಗೆ ವಿಹಿತ ವಾಗಿ ಹೇಳಿದ್ದೇನಂದರೆ-- ನೀವು ಕೇಳಿದರೂ ಕೇಳಿ ಗ್ರಹಿಸುವದಿಲ್ಲ; ನೋಡಿದರೂ ನೋಡಿ ಕಾಣುವದಿಲ್ಲ; ಯಾಕಂದರೆ ಅವರು ತಮ್ಮ ಕಣ್ಣುಗಳಿಂದ ನೋಡಿ ಕಿವಿಗಳಿಂದ ಕೇಳಿ ಹೃದಯದಿಂದ ಗ್ರಹಿಸಿ ಮಾರ್ಪಾಟು ಹೊಂದದಂತೆಯೂ ನಾನು ಅವರನ್ನು ಸ್ವಸ್ಥ ಮಾಡ ದಂತೆಯೂ ಈ ಜನರ ಹೃದಯವು ಕೊಬ್ಬೇರಿತು; ಕೇಳುವದಕ್ಕೆ ಅವರ ಕಿವಿಗಳು ಮಂದವಾದವು; ಅವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ ಆದಕಾರಣ ದೇವರ ರಕ್ಷಣೆಯು ಅನ್ಯಜನಾಂಗದವರಿಗೆ ಕಳುಹಿಸಲ್ಪಟ್ಟಿದೆ; ಅದನ್ನು ಅವರು ಕೇಳುವರು ಎಂಬದಾಗಿ ನಿಮಗೆ ತಿಳಿದಿರಲಿ ಅಂದನು.
- Acts 13:46 ಅಪೊಸ್ತಲರ ಕೃತ್ಯಗಳು 13:46ಆಗ ಪೌಲನೂ ಬಾರ್ನಬನೂ ಧೈರ್ಯದಿಂದ ಮಾತನಾಡಿ--ದೇವರ ವಾಕ್ಯವನ್ನು ಮೊದಲು ನಿಮಗೇ ಹೇಳುವದು ಅವಶ್ಯವಾಗಿತ್ತು; ಆದರೆ ನೀವು ಅದನ್ನು ತಳ್ಳಿಬಿಟ್ಟು ನಿಮ್ಮನ್ನು ನಿತ್ಯಜೀವಕ್ಕೆ ಅಪಾತ್ರರೆಂದು ತೀರ್ಪು ಮಾಡಿಕೊಂಡದ್ದರಿಂದ ಇಗೋ, ನಾವು ಅನ್ಯಜನರ ಕಡೆಗೆ ಹೋಗುತ್ತೇವೆ.
- Psalm 40:9–10 ಕೀರ್ತನೆಗಳು 40:9–10ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ. ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
- Acts 4:13 ಅಪೊಸ್ತಲರ ಕೃತ್ಯಗಳು 4:13ಅವರು ಪೇತ್ರ ಯೋಹಾನರ ಧೈರ್ಯವನ್ನು ನೋಡಿ ಇವರು ವಿದ್ಯೆಯಿಲ್ಲದವರೂ ತಿಳುವಳಿಕೆ ಯಿಲ್ಲದವರೂ ಎಂದು ಗ್ರಹಿಸಿ ಆಶ್ಚರ್ಯಪಟ್ಟು ಅವರು ಯೇಸುವಿನೊಂದಿಗೆ ಇದ್ದವರೆಂದು ತಿಳಿದುಕೊಂಡರು.
Original words (Greek)
- And · G2532καί kaí
- come · G2064ἔρχομαι érchomai
- into · G1519εἰς eis
- own · G846αὐτός autós
- country · G3968πατρίς patrís
- taught · G1321διδάσκω didáskō
- them · G846αὐτός autós
- in · G1722ἐν en
- their · G846αὐτός autós
- synagogue · G4864συναγωγή synagōgḗ
- that · G5620ὥστε hṓste
- they · G846αὐτός autós
- astonished · G1605ἐκπλήσσω ekplḗssō
- and · G2532καί kaí
- said · G3004λέγω légō
- Whence · G4159πόθεν póthen
- this · G5129τούτῳ toútōi
- this · G3778οὗτος hoûtos
- wisdom · G4678σοφία sophía
- and · G2532καί kaí
- works · G1411δύναμις dýnamis