Psalms · chapter 40 · verse 9
Psalm 40:9 in Kannada
ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
Naanu neetiyannu dodda sabheyalli saaribittiddene; igo, o kartane, naanu nanna tutigalige addi maadalillavemba sangati neenu tilidava naagiddee.
Psalm 40:9 in English
- King James Version (KJV)
- I have preached righteousness in the great congregation: lo, I have not refrained my lips, O LORD, thou knowest.
- World English Bible (WEB)
- I have proclaimed glad news of righteousness in the great assembly. Behold, I will not seal my lips, LORD, you know.
- American Standard Version (ASV)
- I have proclaimed glad tidings of righteousness in the great assembly; Lo, I will not refrain my lips, O Jehovah, thou knowest.
- Bible in Basic English (BBE)
- I have given news of righteousness in the great meeting; O Lord, you have knowledge that I have not kept back my words.
- Darby Translation (DBY)
- I have published righteousness in the great congregation: behold, I have not withheld my lips, Jehovah, thou knowest.
- Webster's Bible (WBS)
- I have preached righteousness in the great congregation: lo, I have not refrained my lips, O LORD, thou knowest.
- Young's Literal Translation (YLT)
- I have proclaimed tidings of righteousness In the great assembly, lo, my lips I restrain not, O Jehovah, Thou hast known.
Read in context
- 7ಆಗ ನಾನು--ಇಗೋ, ನಾನು ಇದ್ದೇನೆ; ಪುಸ್ತಕದ ಸುರುಳಿಯಲ್ಲಿ ನನ್ನನ್ನು ಕುರಿತು ಬರೆದದೆ.
- 8ಓ ನನ್ನ ದೇವರೇ ನಿನಗೆ ಮೆಚ್ಚಿಕೆಯಾದದ್ದನ್ನು ಮಾಡಲು ಸಂತೋಷಿಸುತ್ತೇನೆ; ನಿನ್ನ ನ್ಯಾಯ ಪ್ರಮಾಣವು ನನ್ನ ಅಂತರಂಗದಲ್ಲಿ ಅದೆ.
- 9ನಾನು ನೀತಿಯನ್ನು ದೊಡ್ಡ ಸಭೆಯಲ್ಲಿ ಸಾರಿಬಿಟ್ಟಿದ್ದೇನೆ; ಇಗೋ, ಓ ಕರ್ತನೇ, ನಾನು ನನ್ನ ತುಟಿಗಳಿಗೆ ಅಡ್ಡಿ ಮಾಡಲಿಲ್ಲವೆಂಬ ಸಂಗತಿ ನೀನು ತಿಳಿದವ ನಾಗಿದ್ದೀ.
- 10ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
- 11ಕರ್ತನೇ, ನಿನ್ನ ಅಂತಃಕರುಣೆಗಳನ್ನು ನನ್ನಿಂದ ಹಿಂತೆಗೆಯಬೇಡ; ನಿನ್ನ ಪ್ರೀತಿ ಕರುಣೆಗಳೂ ನಿನ್ನ ಸತ್ಯವೂ ಯಾವಾಗಲೂ ನನ್ನನ್ನು ಕಾಯಲಿ.
Cross references
- Psalm 22:25 ಕೀರ್ತನೆಗಳು 22:25ಮಹಾ ಸಭೆಯಲ್ಲಿ ನಿನ್ನನ್ನು ಕುರಿತು ನನ್ನ ಸ್ತೋತ್ರವು ನಿನಗಿ ರುವದು; ನನ್ನ ಪ್ರಮಾಣಗಳನ್ನು ಆತನಿಗೆ ಭಯಪಡು ವವರ ಮುಂದೆ ಸಲ್ಲಿಸುವೆನು.
- Mark 16:15–16 ಮಾರ್ಕನು 16:15–16ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ. ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
- Psalm 22:22 ಕೀರ್ತನೆಗಳು 22:22ನಾನು ನಿನ್ನ ಹೆಸರನ್ನು ನನ್ನ ಸಹೋದರರಿಗೆ ಸಾರುವೆನು; ಕೂಟದ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು.
- Psalm 71:15–18 ಕೀರ್ತನೆಗಳು 71:15–18ನನ್ನ ಬಾಯಿ ದಿನವೆಲ್ಲಾ ನಿನ್ನ ನೀತಿಯನ್ನೂ ರಕ್ಷಣೆ ಯನ್ನೂ ಪ್ರಕಟಿಸುವದು. ಅವುಗಳ ಸಂಖ್ಯೆಗಳು ನನಗೆ ತಿಳಿಯದು. ಕರ್ತನಾದ ದೇವರ ಶಕ್ತಿಯಲ್ಲಿ ನಾನು ಹೋಗುವೆನು, ನಿನ್ನ ನೀತಿಯನ್ನು ಹೌದು, ನಿನ್ನದನ್ನೇ ತಿಳಿಸುವೆನು. ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು. ಓ ದೇವರೇ, ನಾನು ಮುಪ್ಪಿನವನೂ ನರೆ ಕೂದಲಿನವನೂ ಆದಾಗ ಈ ಸಂತತಿಯವರಿಗೆ ನಿನ್ನ ಶಕ್ತಿಯನ್ನೂ ಮುಂದೆ ಬರುವ ಪ್ರತಿಯೊಬ್ಬನಿಗೆ ನಿನ್ನ ಅಧಿಕಾರವನ್ನೂ ತಿಳಿಸುವ ವರೆಗೂ ನನ್ನನ್ನು ಕೈಬಿಡಬೇಡ.
- Psalm 35:18 ಕೀರ್ತನೆಗಳು 35:18ಮಹಾಸಭೆ ಯಲ್ಲಿ ನಿನ್ನನ್ನು ಕೊಂಡಾಡುವೆನು; ಬಹುಜನರಲ್ಲಿ ನಿನ್ನನ್ನು ಸ್ತುತಿಸುವೆನು.
- Psalm 119:13 ಕೀರ್ತನೆಗಳು 119:13ನನ್ನ ತುಟಿಗಳಿಂದ ನಿನ್ನ ನ್ಯಾಯವಿಧಿಗಳನ್ನೆಲ್ಲಾ ಸಾರಿದ್ದೇನೆ.
- Hebrews 2:12 ಇಬ್ರಿಯರಿಗೆ 2:12ನಿನ್ನ ನಾಮವನ್ನು ನನ್ನ ಸಹೋದರರಿಗೆ ತಿಳಿಸುವೆನು; ಸಭಾಮಧ್ಯದಲ್ಲಿ ನಿನಗೆ ಸ್ತುತಿ ಪದಗಳನ್ನು ಹಾಡುವೆನು ಎಂತಲೂ
- Luke 4:16–22 ಲೂಕನು 4:16–22ಆತನು ತಾನು ಬೆಳೆದ ನಜರೇತಿಗೆ ಬಂದು ತನ್ನ ಪದ್ಧತಿಯಂತೆ ಸಬ್ಬತ್ ದಿನದಲ್ಲಿ ಸಭಾಮಂದಿರ ದೊಳಕ್ಕೆ ಹೋಗಿ ಓದುವದಕ್ಕಾಗಿ ಎದ್ದುನಿಂತನು. ಆಗ ಪ್ರವಾದಿಯಾದ ಯೆಶಾಯನ ಪುಸ್ತಕವು ಆತನಿಗೆ ಕೊಡಲ್ಪಟ್ಟಿತು. ಆತನು ಆ ಪುಸ್ತಕವನ್ನು ತೆರೆದು-- ಕರ್ತನ ಆತ್ಮವು ನನ್ನ ಮೇಲೆ ಇದೆ; ಯಾಕಂದರೆ ಬಡವರಿಗೆ ಸುವಾರ್ತೆ ಸಾರುವದಕ್ಕೆ ಆತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯ ವುಳ್ಳವರನ್ನು ಸ್ವಸ್ಥಮಾಡುವದಕ್ಕೂ ಸೆರೆಯಲ್ಲಿದ್ದವರಿಗೆ ಬಿಡುಗಡೆಯನ್ನು ಸಾರುವದಕ್ಕೂ ಕುರುಡರಿಗೆ ದೃಷ್ಟಿ ಕೊಡುವದಕ್ಕೂ ಜಜ್ಜಲ್ಪಟ್ಟವರನ್ನು ಬಿ ಕರ್ತನ ಅಂಗೀಕೃತವಾದ ವರುಷವನ್ನು ಸಾರುವದಕ್ಕೂ ಆತನು ನನ್ನನ್ನು ಕಳುಹಿಸಿದ್ದಾನೆ ಎಂದು ಬರೆದಿರುವದನ್ನು ಕಂಡು ಓದಿದನು. ಆತನು ಆ ಪುಸ್ತಕವನ್ನು ಮುಚ್ಚಿ ತಿರಿಗಿ ಪರಿಚಾರಕನ ಕೈಗೆ ಕೊಟ್ಟು ಕೂತುಕೊಂಡನು. ಆಗ ಆ ಸಭಾ ಮಂದಿರದಲ್ಲಿದ್ದವ ರೆಲ್ಲರ ಕಣ್ಣುಗಳು ಆತನನ್ನೇ ದೃಷ್ಟಿಸಿದವು. ಆತನು ಅವರಿಗೆ--ನೀವು ಕಿವಿಯಿಂದ ಕೇಳಿದ ಈ ಬರಹವು ಈ ದಿವಸ ನೆರವೇರಿತು ಎಂದು ಹೇಳಲಾರಂಭಿಸಿದನು. ಎಲ್ಲರೂ ಆತನಿಗೆ ಸಾಕ್ಷಿಕೊಟ್ಟು ಆತನ ಬಾಯಿಂದ ಹೊರಟ ಕೃಪಾವಾಕ್ಯಗಳಿಗಾಗಿ ಆಶ್ಚರ್ಯಪಟ್ಟು-- ಈತನು ಯೋಸೇಫನ ಮಗನಲ್ಲವೇ ಅಂದರು.
- Joshua 22:22 ಯೆಹೋಶುವ 22:22ದೇವಾದಿ ದೇವರಾದ ಕರ್ತನೇ, ದೇವಾದಿ ದೇವರಾದ ಕರ್ತನೇ ತಿಳಿದಿದ್ದಾನೆ. ಇಸ್ರಾಯೇಲ್ಯರಿಗೂ ತಿಳಿಯುವದು. ಇದು ತಿರುಗಿ ಬೀಳುವದರಿಂದಲಾದರೂ ಕರ್ತನಿಗೆ ವಿರೋಧವಾಗಿ ಅಪರಾಧಮಾಡುವದರಿಂದಲಾದರೂ ಆಗಿದ್ದರೆ ನಮ್ಮನ್ನು ಈಹೊತ್ತು ರಕ್ಷಿಸಬಾರದು.
- Psalm 119:171–172 ಕೀರ್ತನೆಗಳು 119:171–172ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ. ನನ್ನ ನಾಲಿಗೆಯು ನಿನ್ನ ವಾಕ್ಯದ ವಿಷಯವಾಗಿ ಮಾತನಾಡುತ್ತದೆ. ನಿನ್ನ ಆಜ್ಞೆಗಳೆಲ್ಲಾ ನೀತಿಯೇ.
- Psalm 139:2 ಕೀರ್ತನೆಗಳು 139:2ನಾನು ಕೂತು ಕೊಳ್ಳುವದನ್ನೂ ಏಳುವದನ್ನೂ ನೀನು ತಿಳುಕೊಂಡಿದ್ದೀ; ನನ್ನ ಆಲೋಚನೆಯನ್ನು ದೂರದಿಂದ ಗ್ರಹಿಸಿ ಕೊಂಡ್ಡಿದ್ದೀ;
- John 21:17 ಯೋಹಾನನು 21:17ಆತನು ಮೂರನೆಯ ಸಾರಿ ಅವನಿಗೆ--ಯೋನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ಕೇಳಿದನು. ಆತನು ಮೂರನೆಯ ಸಾರಿ--ನೀನು ನನ್ನನ್ನು ಪ್ರೀತಿಸುತ್ತೀಯೋ ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು--ಕರ್ತನೇ, ನಿನಗೆ ಎಲ್ಲವುಗಳು ತಿಳಿದವೆ; ನಾನು ನಿನ