Matthew · chapter 18 · verse 13
Matthew 18:13 in Kannada
ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವನು ಅದನ್ನು ಕಂಡುಕೊಂಡರೆ ತಪ್ಪಿಸಿಕೊಳ್ಳದೆ ಇದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆದರ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆ.
Naanu nimage nijavaagi heluvadenandare--avanu adannu kandukondare tappisikollade idda tombhattombhattu kurigaliginta aadara vishayadalli hechchu santosha paduttaane.
Matthew 18:13 in English
- King James Version (KJV)
- And if so be that he find it, verily I say unto you, he rejoiceth more of that [sheep], than of the ninety and nine which went not astray.
- World English Bible (WEB)
- If he finds it, most certainly I tell you, he rejoices over it more than over the ninety-nine which have not gone astray.
- American Standard Version (ASV)
- And if so be that he find it, verily I say unto you, he rejoiceth over it more than over the ninety and nine which have not gone astray.
- Bible in Basic English (BBE)
- And if he comes across it, truly I say to you, he has more joy over it than over the ninety-nine which have not gone out of the way.
- Darby Translation (DBY)
- And if it should come to pass that he find it, verily I say unto you, he rejoices more because of it than because of the ninety and nine not gone astray.
- Webster's Bible (WBS)
- And if he findeth it, verily I say to you, he rejoiceth more over that [sheep] , than over the ninety and nine which went not astray.
- Young's Literal Translation (YLT)
- and if it may come to pass that he doth find it, verily I say to you, that he doth rejoice over it more than over the ninety-nine that have not gone astray;
Read in context
- 11ಯಾಕಂದರೆ ಮನುಷ್ಯಕುಮಾರನು ಕಳೆದುಹೋದ ದ್ದನ್ನು ರಕ್ಷಿಸುವದಕ್ಕಾಗಿ ಬಂದನು.
- 12ನೀವು ಹೇಗೆ ಯೋಚಿಸುತ್ತೀರಿ? ಒಬ್ಬ ಮನುಷ್ಯ ನಿಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ತಪ್ಪಿಸಿಕೊಂಡು ಹೋದರೆ ಅವನು ತೊಂಭತ್ತೊಂಭತ್ತನ್ನು ಬಿಟ್ಟು ಬೆಟ್ಟಗಳಿಗೆ ಹೊರಟುಹೋಗಿ ತಪ್ಪಿಸಿಕೊಂಡ ದ್ದನ್ನು ಹುಡುಕುವದಿಲ್ಲವೇ?
- 13ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಅವನು ಅದನ್ನು ಕಂಡುಕೊಂಡರೆ ತಪ್ಪಿಸಿಕೊಳ್ಳದೆ ಇದ್ದ ತೊಂಭತ್ತೊಂಭತ್ತು ಕುರಿಗಳಿಗಿಂತ ಆದರ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆ.
- 14ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗುವದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
- 15ಇದಲ್ಲದೆ ನಿನ್ನ ಸಹೋದರನು ನಿನಗೆ ವಿರೋಧ ವಾಗಿ ತಪ್ಪು ಮಾಡಿದರೆ ನೀನೂ ಅವನೂ ಮಾತ್ರ ಇರುವಾಗ ಅವನ ತಪ್ಪನ್ನು ಅವನಿಗೆ ತಿಳಿಸು; ಅವನು ನಿನ್ನ ಮಾತನ್ನು ಕೇಳಿದರೆ ನೀನು ನಿನ್ನ ಸಹೋದರನನ್ನು ಸಂಪಾದಿಸಿಕೊಂಡಿರುವಿ.
Cross references
- Luke 15:5–10 ಲೂಕನು 15:5–10ಅವನು ಆ ಕುರಿಯನ್ನು ಕಂಡುಕೊಂಡ ಮೇಲೆ ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲುಗಳ ಮೇಲೆ ಹೊತ್ತು ಕೊಳ್ಳುವನು. ಆಮೇಲೆ ಅವನು ಮನೆಗೆ ಬಂದು ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ--ನನ್ನ ಸಂಗಡ ಸಂತೋಷಪಡಿರಿ;ಯಾಕಂದರೆ ಕಳೆದುಹೋದ ನನ್ನ ಕುರಿಯನ್ನು ನಾನು ಕಂಡು ಕೊಂಡೆನು ಅನ್ನುವನು. ಆದರಂತೆಯೇ ಮಾನಸಾಂತ ರಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ನೀತಿವಂತರಿಗಿಂತ ಮಾನಸಾಂತರಪಡುವ ಒಬ್ಬಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು. ಯಾವ ಸ್ತ್ರೀಯು ತನ್ನಲ್ಲಿ ಹತ್ತು ಬೆಳ್ಳಿಯ ನಾಣ್ಯಗಳಿರಲಾಗಿ ಒಂದು ನಾಣ್ಯವನ್ನು ಕಳೆದುಕೊಂಡರೆ ದೀಪಹಚ್ಚಿ ಮನೆಯನ್ನು ಗುಡಿಸಿ ಅವಳು ಅದನ್ನು ಕಂಡುಕೊಳ್ಳುವ ವರೆಗೆ ಜಾಗ್ರತೆಯಿಂದ ಹುಡುಕುವ ದಿಲ್ಲವೇ? ಅವಳು ಅದನ್ನು ಕಂಡುಕೊಂಡ ಮೇಲೆ ತನ್ನ ಸ್ನೇಹಿತರನ್ನೂ ನೆರೆಯವರನ್ನೂ ಒಟ್ಟಾಗಿ ಕರೆದು ಅವರಿಗೆ--ನನ್ನ ಸಂಗಡ ಸಂತೋಷಪಡಿರಿ; ಯಾಕಂ ದರೆ ನಾನು ಕಳಕೊಂಡಿದ್ದ ನಾಣ್ಯವನ್ನು ಕಂಡುಕೊಂಡೆನು ಅನ್ನುವಳು. ಅದೇ ಪ್ರಕಾರ ಮಾನಸಾಂತರಪಡುವ ಒಬ್ಬ ಪಾಪಿಯ ವಿಷಯವಾಗಿ ದೇವದೂತರ ಮುಂದೆ ಸಂತೋಷವಾಗುವದೆಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Zephaniah 3:17 ಚೆಫನ್ಯ 3:17ನಿನ್ನ ದೇವರಾದ ಕರ್ತನು ನಿನ್ನ ಮಧ್ಯದಲ್ಲಿ ಪರಾಕ್ರಮಿಯಾಗಿದ್ದಾನೆ. ಆತನು ರಕ್ಷಿಸು ವಂಥ ವನು; ಆನಂದದಿಂದ ನಿನ್ನಲ್ಲಿ ಸಂತೋಷಿಸು ವನು; ತನ್ನ ಪ್ರೀತಿಯಲ್ಲಿ ಮೌನವಾಗಿರುವನು; ಆನಂದ ಸ್ವರದಿಂದ ನಿನ್ನ ಮೇಲೆ ಉಲ್ಲಾಸಿಸುವನು.
- Psalm 147:11 ಕೀರ್ತನೆಗಳು 147:11ಕರ್ತನು ತನಗೆ ಭಯಪಡುವವರಲ್ಲಿಯೂ ತನ್ನ ಕರುಣೆಗೆ ಎದುರು ನೋಡುವವರಲ್ಲಿಯೂ ಇಷ್ಟಪಡುತ್ತಾನೆ.
- Micah 7:18 ಮೀಕ 7:18ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ.
- John 4:34–36 ಯೋಹಾನನು 4:34–36ಆದರೆ ಯೇಸು ಅವರಿಗೆ--ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು. ನೀವು--ಸುಗ್ಗಿಯು ಬರುವದಕ್ಕೆ ಇನ್ನೂ ನಾಲ್ಕು ತಿಂಗಳುಗಳು ಇವೆಯೆಂದು ಹೇಳುತ್ತೀರಲ್ಲವೋ? ಮತ್ತು--ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ, ಯಾಕಂದರೆ ಅವು ಈಗಾ ಗಲೇ ಬೆಳ್ಳಗಾಗಿ ಕೊಯ್ಲಿಗೆ ಬಂದವೆ ಎಂದು ನಾನು ನಿಮಗೆ ಹೇಳುತ್ತೇನೆ. ಕೊಯ್ಯುವವನು ಕೂಲಿಯನ್ನು ಹೊಂದಿ ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳು ತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಾಗಿ ಸಂತೋಷಿಸುವರು.
- James 2:13 ಯಾಕೋಬನು 2:13ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.
- Luke 15:23–24 ಲೂಕನು 15:23–24ಇದಲ್ಲದೆ ಕೊಬ್ಬಿದ ಆ ಕರುವನ್ನು ಇಲ್ಲಿ ತಂದು ವಧಿಸಿರಿ; ನಾವು ಉಂಡು ಸಂತೋಷಪಡೋಣ; ಯಾಕಂದರೆ ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿದ್ದಾನೆ; ಕಳೆದು ಹೋಗಿದ್ದನು, ಈಗ ಸಿಕ್ಕಿದ್ದಾನೆ ಎಂದು ಹೇಳಿದನು; ಹೀಗೆ ಅವರು ಸಂತೋಷ ಪಡಲಾರಂಭಿಸಿದರು.
- Jeremiah 32:37–41 ಯೆರೆಮೀಯ 32:37–41ಇಗೋ, ನಾನು ನನ್ನ ಕೋಪ ದಲ್ಲಿಯೂ ಉಗ್ರದಲ್ಲಿಯೂ ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶಗಳೊಳಗಿಂದ ಅವರನ್ನು ಕೂಡಿಸಿ ಈ ಸ್ಥಳಕ್ಕೆ ತಿರಿಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು. ಅವರು ನನಗೆ ಜನರಾಗಿರುವರು; ನಾನು ಅವರಿಗೆ ದೇವರಾಗಿರುವೆನು. ಅವರಿಗೂ ಅವರ ತರುವಾಯ ಅವರ ಮಕ್ಕಳಿಗೂ ಒಳ್ಳೇದಕ್ಕಾಗಿ ಅವರು ಯಾವಾಗಲೂ ನನಗೆ ಭಯ ಪಡುವ ಹಾಗೆ ಅವರಿಗೆ ಒಂದೇ ಹೃದಯವನ್ನೂ ಒಂದೇ ಮಾರ್ಗವನ್ನೂ ಕೊಡುವೆನು. ಅವರಿಗೆ ಒಳ್ಳೇದನ್ನು ಮಾಡುವ ಹಾಗೆ ನಾನು ತಿರುಗಿಸಿ ಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ; ಅವರು ನನ್ನನ್ನು ಬಿಡದ ಹಾಗೆ ನನ್ನ ಭಯವನ್ನು ಅವರ ಹೃದಯಗಳಲ್ಲಿ ಇಡುತ್ತೇನೆ. ಹೌದು, ಅವರಿಗೆ ಒಳ್ಳೇದನ್ನು ಮಾಡುವದಕ್ಕೆ ಅವ ರೊಂದಿಗೆ ಆನಂದಪಡುವೆನು; ನಿಜವಾಗಿ ನನ್ನ ಪೂರ್ಣ ಹೃದಯದಿಂದಲೂ ನನ್ನ ಪೂರ್ಣ ಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
- Isaiah 62:5 ಯೆಶಾಯ 62:5ಯೌವನಸ್ಥನು ಕನ್ಯಾಸ್ತ್ರೀಯನ್ನು ಮದುವೆಮಾಡಿ ಕೊಳ್ಳುವ ಪ್ರಕಾರ ನಿನ್ನ ಕುಮಾರರು ನಿನ್ನನ್ನು ಮದುವೆ ಮಾಡಿಕೊಳ್ಳುವರು; ಮದಲಿಂಗನು ಮದಲಗಿತ್ತಿಯಲ್ಲಿ ಆನಂದಪಡುವ ಪ್ರಕಾರ ನಿನ್ನ ದೇವರು ನಿನ್ನಲ್ಲಿ ಆನಂದಪಡುವನು.
- Isaiah 53:11 ಯೆಶಾಯ 53:11ಆತನು ತನ್ನ ಆತ್ಮದ ವೇದನೆಯನ್ನು ಕಂಡು ತೃಪ್ತನಾಗುವನು; ತನ್ನ ತಿಳುವ ಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕ ರಿಗೆ ನೀತಿಯನು ಉಂಟುಮಾಡುವನು; ಯಾಕಂದರೆ ಆತನು ಅವರ ದುಷ್ಕೃತ್ಯಗಳನ್ನು ಹೊತ್ತುಕೊಳ್ಳುವನು.ಆದದರಿಂದ ನಾನು ಆತನಿಗೋಸ್ಕರ ದೊಡ್ಡ ವರೊಂದಿಗೆ ಭಾಗಮಾಡುವೆನು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲುಮಾಡುವನು; ಆತನು ತನ್ನ ಪ್ರಾಣವನ್ನು ಮರಣದ ವರೆಗೆ ಹೊಯ್ದು ಬಿಟ್ಟು ದ್ರೋಹಿಗಳೊಂದಿಗೆ ಎಣಿಸಲ್ಪಟ್ಟನು; ಅನೇಕರ ಪಾಪ ವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾ ಪನೆ ಮಾಡಿದನು.