Matthew · chapter 22 · verse 32
Matthew 22:32 in Kannada
ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.
Naanu abrahaamana devaru, isaakana devaru mattu yaakobana devaru endu devaru nimage heliddannu neevu odalillavo? Devaru jeevisuvavarige devaraagiddaane, sattavarigalla endu helidanu.
Matthew 22:32 in English
- King James Version (KJV)
- I am the God of Abraham, and the God of Isaac, and the God of Jacob? God is not the God of the dead, but of the living.
- World English Bible (WEB)
- ‘I am the God of Abraham, and the God of Isaac, and the God of Jacob’? God is not the God of the dead, but of the living.”
- American Standard Version (ASV)
- I am the God of Abraham, and the God of Isaac, and the God of Jacob? God is not [the God] of the dead, but of the living.
- Bible in Basic English (BBE)
- I am the God of Abraham, and the God of Isaac, and the God of Jacob? God is not the God of the dead but of the living.
- Darby Translation (DBY)
- I am the God of Abraham, and the God of Isaac, and the God of Jacob? God is not God of [the] dead, but of [the] living.
- Webster's Bible (WBS)
- I am the God of Abraham, and the God of Isaac, and the God of Jacob? God is not the God of the dead, but of the living.
- Young's Literal Translation (YLT)
- I am the God of Abraham, and the God of Isaac, and the God of Jacob? God is not a God of dead men, but of living.'
Read in context
- 30ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.
- 31ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ--
- 32ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿಗಲ್ಲ ಎಂದು ಹೇಳಿದನು.
- 33ಜನ ಸಮೂಹದವರು ಇದನ್ನು ಕೇಳಿ ಆತನ ಬೋಧನೆಗೆ ವಿಸ್ಮಯಗೊಂಡರು.
- 34ಆದರೆ ಆತನು ಸದ್ದುಕಾಯರ ಬಾಯನ್ನು ಮುಚ್ಚಿದನೆಂದು ಫರಿಸಾಯರು ಕೇಳಿರಿ ಅಲ್ಲಿಗೆ ಕೂಡಿಬಂದರು.
Cross references
- Exodus 3:6 ವಿಮೋಚನಕಾಂಡ 3:6ಇದಲ್ಲದೆ ಆತನು ಅವನಿಗೆ--ನಾನು ನಿನ್ನ ತಂದೆಯ ದೇವರು ಅಬ್ರಹಾಮನ ದೇವರು ಇಸಾಕನ ದೇವರು ಯಾಕೋಬನ ದೇವರು ಆಗಿದ್ದೇನೆ ಎಂದು ಹೇಳಿದನು. ಆಗ ಮೋಶೆಯು ದೇವರನ್ನು ನೋಡುವದಕ್ಕೆ ಭಯ ಪಟ್ಟು ತನ್ನ ಮುಖವನ್ನು ಮುಚ್ಚಿಕೊಂಡನು.
- Mark 12:26–27 ಮಾರ್ಕನು 12:26–27ಸತ್ತವರು ಎದ್ದು ಬರುವದರ ವಿಷಯವಾಗಿ--ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಆಗಿದ್ದೇನೆ ಎಂದು ಪೊದೆಯಲ್ಲಿ ದೇವರು ಮೋಶೆಯ ಸಂಗಡ ಹೇಗೆ ಮಾತನಾಡಿದನೆಂದು ಮೋಶೆಯ ಗ್ರಂಥದಲ್ಲಿ ನೀವು ಓದಲಿಲ್ಲವೋ? ಯಾಕಂದರೆ ಆತನು ಸತ್ತವರಿಗಲ್ಲ, ಆದರೆ ಜೀವಿತರಿಗೆ ದೇವರಾಗಿದ್ದಾನೆ; ಆದದರಿಂದ ಈ ವಿಷಯದಲ್ಲಿ ನೀವು ಬಹಳವಾಗಿ ತಪ್ಪು ಮಾಡುತ್ತೀರಿ ಎಂದು ಹೇಳಿದನು.
- Luke 20:37–38 ಲೂಕನು 20:37–38ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು. ಯಾಕಂದರೆ ಆತನು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿ ಗಲ್ಲ; ಯಾಕಂದರೆ ಎಲ್ಲರೂ ಆತನಿಗಾಗಿ ಜೀವಿಸುತ್ತಾರೆ ಅಂದನು.
- Acts 7:32 ಅಪೊಸ್ತಲರ ಕೃತ್ಯಗಳು 7:32ಆಗ--ನಾನು ನಿನ್ನ ಪಿತೃಗಳ ದೇವರು, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ಹೇಳುವ ಕರ್ತನ ಧ್ವನಿಯು ಅವನಿಗಾಯಿತು. ಆಗ ಮೋಶೆಯು ನಡುಗುತ್ತಾ ಅದನ್ನು ನೋಡುವದಕ್ಕೆ ಧೈರ್ಯವಿಲ್ಲ ದವನಾದನು.
- Exodus 3:15–16 ವಿಮೋಚನಕಾಂಡ 3:15–16ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು. ಆತನು--ನೀನು ಹೋಗಿ ಇಸ್ರಾಯೇಲ್ ಹಿರಿಯ ರನ್ನು ಕೂಡಿಸಿ ಅವರಿಗೆ--ನಿಮ್ಮ ಪಿತೃಗಳ ದೇವರೂ ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಆಗಿರುವ ಕರ್ತನು ನನಗೆ ಕಾಣಿಸಿಕೊಂಡು--ನಿಮ್ಮನ್ನೂ ಐಗುಪ್ತದಲ್ಲಿ ನಿಮಗೆ ಮಾಡಿದ್ದನ್ನೂ ನಿಶ್ಚಯವಾಗಿ ನಾನು ನೋಡಿದ್ದೇನೆ.
- Hebrews 11:16 ಇಬ್ರಿಯರಿಗೆ 11:16ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ.