Matthew · chapter 24 · verse 1
Matthew 24:1 in Kannada
ತರುವಾಯ ಯೇಸು ದೇವಾಲಯದಿಂದ ಹೊರಟುಹೋದ ಮೇಲೆ ಆತನ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವದಕ್ಕಾಗಿ ಆತನ ಬಳಿಗೆ ಬಂದರು.
Taruvaaya yesu devaalayadinda horatuhoda mele aatana shishyaru aa devaalayada kattadagalannu torisuvadakkaagi aatana balige bandaru.
Matthew 24:1 in English
- King James Version (KJV)
- And Jesus went out, and departed from the temple: and his disciples came to [him] for to shew him the buildings of the temple.
- World English Bible (WEB)
- Jesus went out from the temple, and was going on his way. His disciples came to him to show him the buildings of the temple.
- American Standard Version (ASV)
- And Jesus went out from the temple, and was going on his way; and his disciples came to him to show him the buildings of the temple.
- Bible in Basic English (BBE)
- And Jesus went out of the Temple, and on the way his disciples came to him, pointing out the buildings of the Temple.
- Darby Translation (DBY)
- And Jesus went forth and went away from the temple, and his disciples came to [him] to point out to him the buildings of the temple.
- Webster's Bible (WBS)
- And Jesus went out, and departed from the temple: and his disciples came to [him] to show him the buildings of the temple.
- Young's Literal Translation (YLT)
- And having gone forth, Jesus departed from the temple, and his disciples came near to show him the buildings of the temple,
Read in context
- 1ತರುವಾಯ ಯೇಸು ದೇವಾಲಯದಿಂದ ಹೊರಟುಹೋದ ಮೇಲೆ ಆತನ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವದಕ್ಕಾಗಿ ಆತನ ಬಳಿಗೆ ಬಂದರು.
- 2ಆಗ ಯೇಸು ಅವರಿಗೆ--ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ. ಎಲ್ಲಾ ಕೆಡವ ಲ್ಪಡದು ಕಲ್ಲಿನ ಮೇಲೆ ಕಲ್ಲು ಒಂದು ಇಲ್ಲಿ ಬಿಡಲ್ಪ ಡುವದಿಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳು ತ್ತೇನೆ ಅಂದನು.
- 3ಆತನು ಎಣ್ಣೇಮರಗಳ ಗುಡ್ಡದ ಮೇಲೆ ಕೂತುಕೊಂಡಾಗ ಶಿಷ್ಯರು ಪ್ರತ್ಯೇಕವಾಗಿ ಆತನ ಬಳಿಗೆ ಬಂದು--ಇವು ಯಾವಾಗ ಆಗುವವು? ಮತ್ತು ನಿನ್ನ ಬರೋಣಕ್ಕೂ ಲೋಕವು ಅಂತ್ಯವಾಗುವದಕ್ಕೂ ಸೂಚನೆ ಏನು? ನಮಗೆ ಹೇಳು ಎಂದು ಕೇಳಿದರು.
Cross references
- Mark 13:1–37 ಮಾರ್ಕನು 13:1–37ಆತನು ದೇವಾಲಯದೊಳಗಿಂದ ಹೋಗುತ್ತಿದ್ದಾಗ ಆತನ ಶಿಷ್ಯರಲ್ಲಿ ಒಬ್ಬನು ಆತನಿಗೆ--ಬೋಧಕನೇ, ಇಲ್ಲಿ ಎಂಥಾ ತರವಾದ ಕಲ್ಲುಗಳು ಮತ್ತು ಎಂಥಾ ಕಟ್ಟಡಗಳು ಇವೆ ನೋಡು ಅಂದನು. ಯೇಸು ಅವನಿಗೆ ಪ್ರತ್ಯುತ್ತರವಾಗಿ-- ನೀನು ಈ ದೊಡ್ಡ ಕಟ್ಟಡಗಳನ್ನು ನೋಡುತ್ತೀಯೋ? ಕೆಳಗೆ ಕೆಡವಲ್ಪಡದೆ ಒಂದರ ಮೇಲೊಂದು ಕಲ್ಲು ಇಲ್ಲಿ ಬಿಡಲ್ಪಡುವದಿಲ್ಲ ಅಂದನು. ಆತನು ಎಣ್ಣೇ ಮರಗಳ ಗುಡ್ಡದ ಮೇಲೆ ದೇವಾಲಯಕ್ಕೆ ಎದುರಾಗಿ ಕೂತುಕೊಂಡಿದ್ದಾಗ ಪೇತ್ರ ಯಾಕೋಬ ಯೋಹಾನ ಅಂದ್ರೆಯ ಇವರು ಪ್ರತ್ಯೇಕ ವಾಗಿ ಆತನಿಗೆ-- ಇವೆಲ್ಲಾ ಯಾವಾಗ ಆಗುವವು? ಮತ್ತು ಇವೆಲ್ಲವುಗಳು ನೆರವೇರುವದಕ್ಕೆ ಯಾವ ಸೂಚನೆ ಇರುವದು? ನಮಗೆ ಹೇಳು ಎಂದು ಕೇಳಿ ದರು. ಯೇಸು ಪ್ರತ್ಯುತ್ತರವಾಗಿ ಅವರಿಗೆ ಹೇಳಲಾ ರಂಭಿಸಿ-- ಯಾವನಾದರೂ ನಿಮ್ಮನ್ನು ಮೋಸಗೊಳಿಸ ದಂತೆ ಎಚ್ಚರಿಕೆ ತೆಗೆದು ಕೊಳ್ಳಿರಿ; ಯಾಕಂದರೆ ಅನೇ ಕರು ನನ್ನ ಹೆಸರಿನಲ್ಲಿ ಬಂದು--ನಾನು ಕ್ರಿಸ್ತನು ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು. ಇದಲ್ಲದೆ ಯುದ್ಧಗಳ ವಿಷಯವಾಗಿಯೂ ಯುದ್ಧಗಳ ಸುದ್ಧಿಯ ವಿಷಯವಾಗಿಯೂ ನೀವು ಕೇಳುವಾಗ ಕಳವಳಪಡ ಬೇಡಿರಿ; ಯಾಕಂದರೆ ಅವುಗಳು ಆಗುವದು ಅಗತ್ಯ; ಆದರೆ ಇನ್ನೂ ಅದು ಅಂತ್ಯವಲ್ಲ. ಯಾಕಂದರೆ ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ನಾನಾ ಕಡೆಗಳಲ್ಲಿ ಭೂಕಂಪಗಳಾಗುವವು. ಇದಲ್ಲದೆ ಬರ ಗಾಲಗಳು ಕಳವಳಗಳು ಉಂಟಾಗುವವು; ಇವು ಸಂಕಟಗಳ ಪ್ರಾರಂಭವಾಗಿವೆ. ಆದರೆ ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆ ತೆಗೆದುಕೊಳ್ಳಿರಿ; ಯಾಕಂದರೆ ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಒಪ್ಪಿಸುವರು; ಸಭಾಮಂದಿರಗಳಲ್ಲಿ ನಿಮ್ಮನ್ನು ಹೊಡೆಯುವರು; ಅವರಿಗೆ ವಿರೋಧವಾಗಿ ನನ್ನ ನಿಮಿತ್ತ ಅಧಿಕಾರಿಗಳ ಮತ್ತು ಅರಸುಗಳ ಮುಂದೆ ನೀವು ತರಲ್ಪಡುವಿರಿ. ಸುವಾರ್ತೆಯು ಮೊದಲು ಎಲ್ಲಾ ಜನಾಂಗಗಳಲ್ಲಿ ಸಾರಲ್ಪಡುವದು ಅಗತ್ಯವಾಗಿದೆ. ಆದರೆ ಅವರು ನಿಮ್ಮನ್ನು ಒಪ್ಪಿಸುವದಕ್ಕಾಗಿ ತಕ್ಕೊಂಡು ಹೋಗುವಾಗ ನೀವು ಏನು ಮಾತನಾಡಬೇಕೆಂಬದನ್ನು ಮುಂಚಿತವಾಗಿ ಚಿಂತಿಸಬೇಡಿರಿ, ಆಲೋಚಿಸಲೂ ಬೇಡಿರಿ; ಆದರೆ ಆ ಗಳಿಗೆಯಲ್ಲಿ ನಿಮಗೆ ಯಾವದು ಕೊಡಲ್ಪಡುವದೋ ಅದನ್ನೇ ಮಾತನಾಡಿರಿ; ಯಾಕಂ ದರೆ ಮಾತನಾಡುವವರು ನೀವಲ್ಲ, ಆದರೆ ಪರಿಶು ಆಗ ಸಹೋದರನು ಸಹೋದರನನ್ನೂ ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವ ರನ್ನು ಕೊಲ್ಲಿಸುವದಕ್ಕೆ ಕಾರಣರಾಗುವರು. ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ಹಗೆ ಮಾಡು ವರು. ಆದರೆ ಕಡೇವರೆಗೂ ತಾಳುವವನೇ ರಕ್ಷಣೆ ಹೊಂದುವನು. ಇದಲ್ಲದೆ ಪ್ರವಾದಿಯಾದ ದಾನಿಯೇಲನು ಹೇಳಿದಂತೆ ಹಾಳುಮಾಡುವ ಅಸಹ್ಯವು ನಿಲ್ಲಬಾರದ ಸ್ಥಳದಲ್ಲಿ ನಿಂತಿರುವದನ್ನು ನೀವು ನೋಡುವಾಗ (ಓದು ವವನು ತಿಳುಕೊಳ್ಳಲಿ) ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ. ಮನೇಮಾಳಿಗೆಯ ಮೇಲಿದ್ದವನು ಕೆಳಗೆ ಇಳಿದು ಮನೆಯೊಳಕ್ಕೆ ಹೋಗದೆ ಯೂ ಇಲ್ಲವೆ ತನ್ನ ಮನೆಯೊಳಗೆ ಪ್ರವೇಶಿಸಿ ಅದರೊ ಳಗಿಂದ ಏನನ್ನೂ ತಕ್ಕೊಳ್ಳದೆಯೂ ಇರಲಿ. ಹೊಲ ದಲ್ಲಿರುವವನು ಮತ್ತೆ ತನ್ನ ಉಡುಪನ್ನು ತಕ್ಕೊಳ್ಳುವದಕ್ಕೆ ಹಿಂದಿರುಗದಿರಲಿ. ಆದರೆ ಆ ದಿವಸಗಳಲ್ಲಿ ಗರ್ಭಿಣಿ ಯರಿಗೂ ಮೊಲೆಕುಡಿಸುವವರಿಗೂ ಅಯ್ಯೋ! ನಿಮ್ಮ ಪಲಾಯನವು ಚಳಿಗಾಲದಲ್ಲಿ ಆಗದಂತೆ ನೀವು ಪ್ರಾರ್ಥಿಸಿರಿ. ಯಾಕಂದರೆ ಆ ದಿವಸಗಳಲ್ಲಿ ಸಂಕಟವಿರುವದು; ಅಂಥದ್ದು ದೇವರು ಸೃಷ್ಟಿಸಿದ ಸೃಷ್ಟಿ ಮೊದಲುಗೊಂಡು ಈ ಸಮಯದವರೆಗೂ ಆಗಲಿಲ್ಲ ಇಲ್ಲವೆ ಆಗುವದೂ ಇಲ್ಲ. ಕರ್ತನು ಆ ದಿನಗಳನ್ನು ಕಡಿಮೆ ಮಾಡದಿದ್ದರೆ ಯಾವನೂ ರಕ್ಷಣೆ ಹೊಂದುವ ದಿಲ್ಲ. ಆದರೆ ಆಯಲ್ಪಟ್ಟವರಿಗಾಗಿ ಅಂದರೆ ತಾನು ಆರಿಸಿಕೊಂಡವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಿ ದ್ದಾನೆ. ಆಗ ಯಾವನಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ; ಇಲ್ಲವೆ ಅಗೋ, ಆತನು ಅಲ್ಲಿ ದ್ದಾನೆ ಎಂದು ಹೇಳಿದರೆ ಅವನನ್ನು ನಂಬಬೇಡಿರಿ; ಯಾಕಂದರೆ ಸುಳ್ಳು ಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ಆರಿಸಿಕೊಂಡವರನ್ನೂ ಮೋಸ ಗೊಳಿಸುವದಕ್ಕೊಸ್ಕರ ಸೂಚಕಕಾರ್ಯಗಳನ್ನು ಅದ್ಭುತ ಕಾರ್ಯಗಳನ್ನು ಮಾಡಿ ತೋರಿಸುವರು. ಆದರೆ ನೀವು ಎಚ್ಚರಿಕೆ ತೆಗೆದುಕೊಳ್ಳಿರಿ; ಇಗೋ, ನಾನು ನಿಮಗೆ ಎಲ್ಲವುಗಳನ್ನು ಮುಂದಾಗಿ ಹೇಳಿದ್ದೇನೆ. ಇದಲ್ಲದೆ ಆ ದಿವಸಗಳಲ್ಲಿ ಸಂಕಟವು ತೀರಿದ ನಂತರ ಸೂರ್ಯನು ಕತ್ತಲಾಗುವನು; ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು. ಆಕಾಶದ ನಕ್ಷತ್ರಗಳು ಬೀಳುವವು ಮತ್ತು ಆಕಾಶದಲ್ಲಿರುವ ಶಕ್ತಿಗಳು ಕದಲುವವು. ಆಗ ಮನುಷ್ಯಕುಮಾರನು ಬಹು ಬಲದಿಂದಲೂ ಮಹಿಮೆಯಿಂದಲೂ ಮೇಘ ಗಳಲ್ಲಿ ಬರುವದನ್ನು ಅವರು ನೋಡುವರು. ಆತನು ತನ್ನ ದೂತರನ್ನು ಕಳುಹಿಸಿ ಭೂಮಿಯ ಕಟ್ಟಕಡೆಯಿಂದ ಆಕಾಶದ ಕಟ್ಟಕಡೆಯ ವರೆಗೆ ತಾನು ಆರಿಸಿಕೊಂಡ ವರನ್ನು ನಾಲ್ಕು ದಿಕ್ಕುಗಳಿಂದಲೂ ಒಟ್ಟುಗೂಡಿಸುವನು. ಇದಲ್ಲದೆ ಅಂಜೂರ ಮರದ ಸಾಮ್ಯವನ್ನು ಕಲಿ ತುಕೊಳ್ಳಿರಿ; ಅದರ ಕೊಂಬೆ ಇನ್ನೂ ಎಳೇದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿ ತೆಂದು ನೀವು ತಿಳುಕೊಳ್ಳುತ್ತೀರಿ; ಅದೇ ಪ್ರಕಾರ ಇವುಗಳು ಆಗುವದನ್ನು ನೀವು ನೋಡುವಾಗ ಅದು ಹತ್ತಿರದಲ್ಲಿ ಅಂದರೆ ಬಾಗಲುಗಳಲ್ಲಿಯೇ ಅದೆ ಎಂದು ತಿಳುಕೊಳ್ಳಿರಿ. ಇವೆಲ್ಲವುಗಳು ನೆರವೇರುವವರೆಗೆ ಈ ಸಂತತಿಯು ಅಳಿದು ಹೋಗುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ. ಆದರೆ ಆ ದಿನದ ಮತ್ತು ಆ ಗಳಿಗೆಯ ವಿಷಯ ವಾಗಿ ತಂದೆಗೇ ಹೊರತು ಯಾವ ಮನುಷ್ಯನಿಗೂ ಪರಲೋಕದಲ್ಲಿರುವ ದೂತರಿಗೂ ಮಗನಿಗೂ ತಿಳಿ ಯದು. ನೀವು ಎಚ್ಚರವಾಗಿರ್ರಿ, ಜಾಗರೂಕರಾಗಿರ್ರಿ, ಪ್ರಾರ್ಥಿಸಿರಿ. ಯಾಕಂದರೆ ಸಮಯವು ಯಾವಾಗ ಎಂದು ನಿಮಗೆ ತಿಳಿಯದು. ಮನುಷ್ಯಕುಮಾರನು ದೂರದ ಪ್ರಯಾಣವನ್ನು ಕೈಕೊಂಡು ತನ್ನ ಮನೆಯನ್ನು ಬಿಟ್ಟು ತನ್ನ ಸೇವಕರಿಗೆ ಅಧಿಕಾರವನ್ನು ಮತ್ತು ಪ್ರತಿಯೊ ಬ್ಬನಿಗೆ ಅವನವನ ಕೆಲಸವನ್ನು ಕೊಟ್ಟು ಬಾಗಲು ಕಾಯು ವವನಿಗೆ ಜಾಗರೂಕನಾಗಿರಬೇಕೆಂದು ಆಜ್ಞಾಪಿಸಿದವನ ಹಾಗೆ ಇದ್ದಾನೆ. ಆದದರಿಂದ ಜಾಗರೂಕರಾಗಿರ್ರಿ. ಯಾಕಂದರೆ ಮನೇ ಯಜಮಾನನು ಸಂಜೆಯಲ್ಲಿಯೋ ಸರಿಹೊತ್ತಿನಲ್ಲಿಯೋ ಇಲ್ಲವೆ ಹುಂಜ ಕೂಗುವಾ ಗಲೋ ಇಲ್ಲವೆ ಮುಂಜಾನೆಯಲ್ಲಿಯೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲ. ಆತನು ಫಕ್ಕನೆ ಬಂದು ನೀವು ನಿದ್ರೆ ಮಾಡುವದನ್ನು ಕಂಡಾನು.ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು. ನಿಮಗೆ ಹೇಳುವದನ್ನು ನಾನು ಎಲ್ಲರಿಗೂ ಹೇಳು ತ್ತೇನೆ--ಎಚ್ಚರವಾಗಿರ್ರಿ ಅಂದನು.
- Luke 21:5–36 ಲೂಕನು 21:5–36ತರುವಾಯ ಕೆಲವರು ದೇವಾಲಯದ ವಿಷಯ ವಾಗಿ ಅದು ಎಂಥಾ ಒಳ್ಳೇ ಕಲ್ಲುಗಳಿಂದಲೂ ದಾನಗ ಳಿಂದಲೂ ಅಲಂಕೃತವಾಗಿದೆ ಎಂದು ಮಾತನಾಡು ತ್ತಿರುವಾಗ ಆತನು-- ನೀವು ನೋಡುತ್ತಿರುವ ಇವುಗ ಳಾದರೋ ಕೆಡವಲ್ಪಟ್ಟು ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಬಿಡಲ್ಪಡದ ದಿವಸಗಳು ಬರುವವು ಅಂದನು. ಆಗ ಅವರು ಆತನಿಗೆ--ಬೋಧಕನೇ, ಇವುಗಳು ಯಾವಾಗ ಆಗುವವು? ಇವುಗಳು ಸಂಭವಿ ಸುವದಕ್ಕಿರುವಾಗ ಯಾವ ಸೂಚನೆ ಇರುವದು ಎಂದು ಕೇಳಿದರು. ಅದಕ್ಕೆ ಆತನು--ನೀವು ಮೋಸ ಹೋಗ ದಂತೆ ಎಚ್ಚರಿಕೆ ತಂದುಕೊಳ್ಳಿರಿ; ಯಾಕಂದರೆ ಅನೇಕರು ನನ್ನ ಹೆಸರಿನಲ್ಲಿ ಬಂದು--ನಾನೇ ಕ್ರಿಸ್ತನು ಎಂದು ಹೇಳುವರು; ಸಮಯವು ಸವಿಾಪಿಸಿದೆ, ಆದಕಾರಣ ನೀವು ಅವರ ಹಿಂದೆ ಹೋಗಬೇಡಿರಿ. ನೀವು ಯುದ್ಧಗಳ ಮತ್ತು ಕಲಹಗಳ ವಿಷಯವಾಗಿ ಕೇಳುವಾಗ ದಿಗಿಲುಪಡಬೇಡಿರಿ; ಯಾಕಂದರೆ ಇವುಗಳು ಮೊದಲು ಆಗುವದು ಅಗತ್ಯ; ಆದರೂ ಕೂಡಲೆ ಅಂತ್ಯ ಬರುವದಿಲ್ಲ ಅಂದನು. ಆತನು ಅವರಿಗೆ--ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳು ವವು. ಬೇರೆ ಬೇರೆ ಸ್ಥಳಗಳಲ್ಲಿ ಮಹಾಭೂಕಂಪಗಳೂ ಬರಗಳೂ ವ್ಯಾಧಿಗಳೂ ಇರುವವು; ಭಯಹುಟ್ಟಿ ಸುವ ದೃಶ್ಯಗಳೂ ಮಹಾಸೂಚನೆಗಳೂ ಆಕಾಶದಿಂದ ಆಗುವವು. ಆದರೆ ಇವೆಲ್ಲವುಗಳಿಗಿಂತ ಮೊದಲು ಅವರು ನಿಮ್ಮನ್ನು ಹಿಡಿದು ಹಿಂಸಿಸಿ ಸಭಾಮಂದಿರ ಗಳಿಗೂ ಸೆರೆಮನೆಗಳಿಗೂ ಒಪ್ಪಿಸಿ ನನ್ನ ಹೆಸರಿನ ನಿಮಿತ್ತ ಅರಸುಗಳ ಮತ್ತು ಅಧಿಕಾರಿಗಳ ಮುಂದೆ ನಿಮ್ಮನ್ನು ತರುವರು. ಇದು ಸಾಕ್ಷಿಗೋಸ್ಕರ ನಿಮಗೆ ಪರಿಣಮಿ ಸುವದು. ಹೀಗಿರುವದರಿಂದ ನೀವು ಏನು ಉತ್ತರ ಕೊಡಬೇಕೆಂದು ಮುಂದಾಗಿ ಯೋಚಿಸಬಾರದೆಂದು ನಿಮ್ಮ ಹೃದಯಗಳಲ್ಲಿ ನಿಶ್ಚಯಮಾಡಿಕೊಳ್ಳಿರಿ. ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು. ಆದರೆ ತಂದೆ ತಾಯಿಗಳೂ ಸಹೋದರರೂ ಬಂಧುಗಳೂ ಸ್ನೇಹಿ ತರೂ ನಿಮ್ಮನ್ನು ಹಿಡಿದುಕೊಡುವರು; ನಿಮ್ಮಲ್ಲಿ ಕೆಲವ ರನ್ನು ಕೊಲ್ಲಿಸುವರು. ನನ್ನ ಹೆಸರಿನ ನಿಮಿತ್ತವಾಗಿ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ನಿಮ್ಮ ತಲೆಯ ಒಂದು ಕೂದಲಾದರೂ ನಾಶವಾಗುವದಿಲ್ಲ. ನೀವು ನಿಮ್ಮ ಸಹನೆಯಿಂದ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುತ್ತೀರಿ. 20ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ. ಆದರೆ ಸೈನ್ಯಗಳು ಯೆರೂಸಲೇ ಮನ್ನು ಮುತ್ತಿಗೆ ಹಾಕುವದನ್ನು ನೀವು ನೋಡುವಾಗ ಅದು ಹಾಳಾಗುವ ಕಾಲವು ಸವಿಾಪಿಸಿದೆ ಎಂದು ತಿಳಿದುಕೊಳ್ಳಿರಿ. ಆಗ ಯೂದಾಯದಲ್ಲಿರುವವರು ಬೆಟ್ಟಗಳಿಗೆ ಓಡಿಹೋಗಲಿ; ಅದರ ಮಧ್ಯದಲ್ಲಿ ರುವವರು ಹೊರಟುಹೋಗಲಿ; ಇದಲ್ಲದೆ ಹಳ್ಳಿಗಳಲ್ಲಿ ಇರುವವರು ಅವುಗಳಲ್ಲಿ ಪ್ರವೇಶಿಸದೆ ಇರಲಿ. ಬರೆದಿರುವವುಗಳೆಲ್ಲವೂ ನೆರವೇರುವಂತೆ ಇವು ಮುಯ್ಯಿತೀರಿಸುವ ದಿವಸಗಳಾಗಿವೆ. ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆ ಕುಡಿಸುವ ವರಿಗೂ ಅಯ್ಯೊ! ಯಾಕಂದರೆ ದೇಶದಲ್ಲಿ ಮಹಾ ವಿಪತ್ತೂ ಈ ಜನರ ಮೇಲೆ ಕೋಪವೂ ಆಗ ಇರು ವದು. ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು. ಸೂರ್ಯ ಚಂದ್ರ ಮತ್ತು ನಕ್ಷತ್ರಗಳಲ್ಲಿ ಸೂಚನೆಗಳು ತೋರುವವು; ಇದಲ್ಲದೆ ಭೂಮಿಯ ಮೇಲಿರುವ ಜನಾಂಗಗಳಿಗೆ ಕಳವಳದಿಂದ ಸಂಕಟ ಉಂಟಾಗುವದು; ಸಮುದ್ರದ ಮತ್ತು ತೆರೆಗಳ ಘೋಷಣೆಯ ನಿಮಿತ್ತವಾಗಿ ಕಳವಳವಾಗುವದು. ಆಕಾಶದ ಶಕ್ತಿಗಳು ಕದಲಿಸಲ್ಪಡುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಸಂಭವಿಸುವದೋ ಎಂದು ಎದುರುನೋಡುತ್ತಾ ಪ್ರಾಣಹೋದಂತಾಗುವರು. ಆಗ ಮನುಷ್ಯಕು ಮಾರನು ಬಲದಿಂದಲೂ ಮಹಾ ಮಹಿಮೆ ಯಿಂದಲೂ ಕೂಡಿದವನಾಗಿ ಮೇಘದಲ್ಲಿ ಬರುವದನ್ನು ಅವರು ಕಾಣುವರು; ಆದರೆ ಈ ಸಂಗತಿಗಳು ಸಂಭವಿಸುವದಕ್ಕೆ ಪ್ರಾರಂಭಿಸಿದಾಗ ಮೇಲಕ್ಕೆ ನೋಡಿರಿ; ನಿಮ್ಮ ತಲೆಗಳನ್ನು ಎತ್ತಿರಿ; ಯಾಕಂದರೆ ನಿಮ್ಮ ವಿಮೋಚನೆಯು ಸವಿಾಪವಾಗಿದೆ ಅಂದನು. ಆತನು ಅವರಿಗೆ ಒಂದು ಸಾಮ್ಯಕೊಟ್ಟು ಹೇಳಿದ್ದೇ ನಂದರೆ--ಅಂಜೂರದ ಮರವನ್ನು ಮತ್ತು ಎಲ್ಲಾ ಮರಗಳನ್ನು ನೋಡಿರಿ; ಅವು ಚಿಗುರಿದಾಗ ನೀವು ನೋಡಿ ಬೇಸಿಗೆಯು ಹತ್ತಿರವಾಯಿತೆಂದು ನೀವೇ ನೀವಾಗಿ ತಿಳಿದುಕೊಳ್ಳುವಿರಿ. ಅದೇ ಪ್ರಕಾರ ಇವೆಲ್ಲವುಗಳು ಸಂಭವಿಸುವದನ್ನು ನೀವು ನೋಡುವಾಗ ದೇವರ ರಾಜ್ಯವು ಹತ್ತಿರವಾಯಿತೆಂದು ತಿಳಿದುಕೊಳ್ಳಿರಿ. ಎಲ್ಲವುಗಳು ನೆರವೇರುವ ವರೆಗೆ ಈ ಸಂತತಿಯು ಅಳಿದು ಹೋಗುವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ. ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ. ಆದರೆ ನಿಮ್ಮ ಮೇಲೆ ಆ ದಿವಸವು ಫಕ್ಕನೆ ಬಾರದಂತೆ ನೀವು ಅತಿ ಭೋಜನದಿಂದಲೂ ಅಮಲಿನಿಂದಲೂ ಈ ಜೀವನದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗದಂತೆ ನಿಮ್ಮ ವಿಷಯದಲಿ ಜಾಗರೂಕರಾಗಿರ್ರಿ. ಯಾಕಂದರೆ ಅದು ಭೂಮಿಯ ಮೇಲೆ ವಾಸವಾಗಿರುವವರೆಲ್ಲರ ಮೇಲೆ ಉರ್ಲಿನಂತೆ ಬರುವದು. ಆದಕಾರಣ ಸಂಭವಿಸುವದಕ್ಕಿರುವ ಇವೆಲ್ಲವುಗಳಿಂದ ನೀವು ತಪ್ಪಿಸಿಕೊಳ್ಳುವದಕ್ಕೆ ಯೋಗ್ಯರೆಂದು ಎಣಿಸಲ್ಪಡು ವಂತೆಯೂ ಮನುಷ್ಯಕುಮಾರನ ಮುಂದೆ ನಿಂತು ಕೊಳ್ಳುವಂತೆಯೂ ಎಚ್ಚರವಾಗಿದ್ದು ಯಾವಾಗಲೂ ಪ್ರಾರ್ಥಿಸುತ್ತಾ ಇರ್ರಿ ಅಂದನು.
- Ezekiel 8:6 ಯೆಹೆಜ್ಕೇಲನು 8:6ಇದಲ್ಲದೆ ಆತನು ನನಗೆ ಹೇಳಿದ್ದೇನಂದರೆ --ಮನುಷ್ಯಪುತ್ರನೇ, ಅವರು ಮಾಡುತ್ತಿರುವದನ್ನು ನೋಡುತ್ತಿರುವಿಯಾ? ನಾನು ನನ್ನ ಪರಿಶುದ್ಧ ಸ್ಥಳವನ್ನು ಬಿಟ್ಟು ದೂರ ಹೋಗುವ ಹಾಗೆ ಇಸ್ರಾಯೇಲಿನ ಮನೆತನದವರು ಇಲ್ಲಿ ನಡೆಸುತ್ತಿರುವ ದೊಡ್ಡ ಅಸಹ್ಯ ಗಳನ್ನು ನೋಡುತ್ತಿರುವಿಯಾ? ಆದರೆ ಮತ್ತೆ ತಿರು ಗಿಕೋ, ನೀನು ಇನ್ನೂ ದೊಡ್ಡ ಅಸಹ್ಯಗಳನ್ನು ನೋಡುವಿ ಅಂದನು.
- Jeremiah 6:8 ಯೆರೆಮೀಯ 6:8ಯೆರೂಸಲೇಮೇ, ನನ್ನ ಪ್ರಾಣವು ನಿನ್ನ ಕಡೆಯಿಂದ ಹೊರಟು ಹೋಗದ ಹಾಗೆ ನಾನು ನಿಮ್ಮನ್ನು ಹಾಳಾಗಿಯೂ ನಿವಾಸಿಗಳಿಲ್ಲದ ದೇಶವಾಗಿಯೂ ಮಾಡದ ಹಾಗೆ ಶಿಕ್ಷಣವನ್ನು ತಕ್ಕೋ.
- Matthew 23:39 ಮತ್ತಾಯನು 23:39ಇಂದಿನಿಂದ ಕರ್ತನ ಹೆಸರಿನಲ್ಲಿ ಬರುವಾತನು ಧನ್ಯನು ಎಂದು ನೀವು ಹೇಳುವ ವರೆಗೆ ನೀವು ನನ್ನನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Matthew 21:23 ಮತ್ತಾಯನು 21:23ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು.
- John 2:20 ಯೋಹಾನನು 2:20ಅದಕ್ಕೆ ಯೆಹೂದ್ಯರು-- ಈ ದೇವಾಲಯವನ್ನು ಕಟ್ಟುವದಕ್ಕೆ ನಾಲ್ವತ್ತಾರು ವರುಷಗಳು ಹಿಡಿದವು; ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವಿಯೋ ಅಂದರು.
- Hosea 9:12 ಹೋಶೇಯ 9:12ಅವರು ತಮ್ಮ ಮಕ್ಕಳನ್ನು ಬೆಳೆಸಿದಾಗ್ಯೂ ಒಬ್ಬ ಮನುಷ್ಯನು ಉಳಿಯದ ಹಾಗೆ ನಾನು ಅವರನ್ನು ಅನಾಥರನ್ನಾಗಿ ಮಾಡುವೆನು. ಹೌದು, ನಾನು ಅವ ರನ್ನು ಬಿಟ್ಟು ಹೋಗುವಾಗ ಅವರಿಗೆ ಅಯ್ಯೋ!
- Ezekiel 10:17–19 ಯೆಹೆಜ್ಕೇಲನು 10:17–19ಅವು ನಿಂತಾಗ ಇವೂ ನಿಂತವು. ಅವು ಎತ್ತಲ್ಪಟ್ಟಾಗ ಇವೂ ಅವುಗಳ ಸಂಗಡ ಎತ್ತಲ್ಪಟ್ಟವು; ಯಾಕಂದರೆ ಇವುಗಳಲ್ಲಿ ಆ ಜೀವಿಗಳ ಆತ್ಮವು ಇತ್ತು. ಆಗ ಕರ್ತನ ಮಹಿಮೆಯು ಆಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಯರ ಮೇಲೆ ನಿಂತಿತು. ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿ ಕೊಂಡು ನಾನು ನೋಡುವಾಗಲೇ ಭೂಮಿಯನ್ನು ಬಿಟ್ಟು ಮೇಲೆಕ್ಕೇರಿ ಹೋದರು. ಅವು ಹೊರಟಾಗ ಚಕ್ರಗಳೂ ಅವರ ಸಂಗಡ ಇದ್ದವು, ಅವರು ಕರ್ತನ ಆಲಯದ ಮೂಡಣ ಬಾಗಲಿನ ದ್ವಾರದ ಬಳಿಯಲ್ಲಿ ನಿಂತಿದ್ದರು. ಮತ್ತು ಇಸ್ರಾಯೇಲಿನ ದೇವರ ಮಹಿ ಮೆಯು ಅವರ ಮೇಲೆ ಇತ್ತು.
- Ezekiel 11:22–23 ಯೆಹೆಜ್ಕೇಲನು 11:22–23ಆಮೇಲೆ ಕೆರೂಬಿಯರು ತಮ್ಮ ರೆಕ್ಕೆಗಳನ್ನು ಎತ್ತಿದರು, ಅವರ ಪಕ್ಕದಲ್ಲಿ ಚಕ್ರಗಳಿದ್ದವು; ಇಸ್ರಾ ಯೇಲಿನ ದೇವರ ಮಹಿಮೆ ಅವರ ಮೇಲೆ ಇತ್ತು. ಕರ್ತನ ಮಹಿಮೆಯು ಪಟ್ಟಣದ ಮಧ್ಯದೊಳಗಿಂದ ಮೇಲಕ್ಕೇರಿ ಪಟ್ಟಣದ ಮೂಡಣದಲ್ಲಿರುವ ಪರ್ವತದ ಮೇಲೆ ನಿಂತಿತು.
Original words (Greek)
- And · G2532καί kaí
- Jesus · G2424Ἰησοῦς Iēsoûs
- out · G1831ἐξέρχομαι exérchomai
- departed · G4198πορεύομαι poreúomai
- from · G575ἀπό apó
- temple · G2411ἱερόν hierón
- and · G2532καί kaí
- his · G846αὐτός autós
- disciples · G3101μαθητής mathētḗs
- to · G4334προσέρχομαι prosérchomai
- shew · G1925ἐπιδείκνυμι epideíknymi
- him · G846αὐτός autós
- buildings · G3619οἰκοδομή oikodomḗ
- temple · G2411ἱερόν hierón