Matthew · chapter 24 · verse 48
Matthew 24:48 in Kannada
ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು
Aadare aa ketta sevakanu tanna hrudayadalli--nanna yajamaananu baruvadakke tadamaaduttaane endu andukondu
Matthew 24:48 in English
- King James Version (KJV)
- But and if that evil servant shall say in his heart, My lord delayeth his coming;
- World English Bible (WEB)
- But if that evil servant should say in his heart, ‘My lord is delaying his coming,’
- American Standard Version (ASV)
- But if that evil servant shall say in his heart, My lord tarrieth;
- Bible in Basic English (BBE)
- But if that evil servant says in his heart, My lord is a long time in coming;
- Darby Translation (DBY)
- But if that evil bondman should say in his heart, My lord delays to come,
- Webster's Bible (WBS)
- But if that evil servant shall say in his heart, My Lord delayeth his coming;
- Young's Literal Translation (YLT)
- 'And, if that evil servant may say in his heart, My Lord doth delay to come,
Read in context
- 46ಯಜಮಾನನು ಬಂದು ಯಾವ ಸೇವಕನು ಹಾಗೆ ಮಾಡುವದನ್ನು ನೋಡುವನೋ ಆ ಸೇವಕನೇ ಧನ್ಯನು.
- 47ಅವನನ್ನು ಆತನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
- 48ಆದರೆ ಆ ಕೆಟ್ಟ ಸೇವಕನು ತನ್ನ ಹೃದಯದಲ್ಲಿ--ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಎಂದು ಅಂದುಕೊಂಡು
- 49ತನ್ನ ಜೊತೇ ಸೇವಕರನ್ನು ಹೊಡೆಯುತ್ತಾ ಕುಡುಕರ ಸಂಗಡ ತಿನ್ನುವದಕ್ಕೂ ಕುಡಿಯುವದಕ್ಕೂ ಪ್ರಾರಂಭಿಸು ವದಾದರೆ
- 50ಅವನು ನಿರೀಕ್ಷಿಸದೆ ಇರುವ ದಿನದಲ್ಲಿ ಇಲ್ಲವೆ ನೆನಸದ ಗಳಿಗೆಯಲ್ಲಿ ಆ ಸೇವಕನ ಯಜಮಾ ನನು ಬಂದುಅವನನ್ನು ಛೇದಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು; ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.
Cross references
- 2 Peter 3:3–5 2 ಪೇತ್ರನು 3:3–5ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು-- ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆ ಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರೆಂಬದಾಗಿ ನೀವು ಮೊದಲು ತಿಳುಕೊಳ್ಳ ಬೇಕು. ಅವರು ಇದನ್ನು ಬೇಕೆಂದು ತಿಳಿಯಲಾರರು; ಅದೇನಂದರೆ ಪೂರ್ವದಲ್ಲಿದ್ದ ಆಕಾಶಗಳೂ ನೀರಿನ ಹೊರಗೆ ಮತ್ತು ನೀರಿನ ಒಳಗೆ ನಿಂತಿರುವ ಭೂಮಿಯೂ ದೇವರ ವಾಕ್ಯದಿಂದ ಉಂಟಾಗಿ
- Matthew 18:32 ಮತ್ತಾಯನು 18:32ಆಗ ಅವನ ಧಣಿಯು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ--ಓ ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಾನು ನಿನ್ನ ಸಾಲವನ್ನೆಲಾ ಮನ್ನಿಸಿದೆನು.
- Luke 12:45 ಲೂಕನು 12:45ಆದರೆ ಆ ಸೇವಕನು--ನನ್ನ ಒಡೆಯನು ಬರುವದಕ್ಕೆ ತಡಮಾಡುತ್ತಾನೆ ಎಂದು ತನ್ನ ಹೃದಯದಲ್ಲಿ ಅಂದು ಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯು ವದಕ್ಕೂ ತಿಂದು ಕುಡಿದು ಮತ್ತನಾಗುವದಕ್ಕೂ ಆರಂಭಿಸಿದರೆ
- Isaiah 32:6 ಯೆಶಾಯ 32:6ನೀಚನು ನೀಚನಾಗಿ ಮಾತನಾಡುವನು. ಅವನ ಹೃದಯವು ಕಪಟತ್ವವನ್ನು ಅಭ್ಯಾ ಸಿಸುವಂತೆಯೂ ಕರ್ತನಿಗೆ ವಿರೋಧವಾಗಿ ಸಂಪೂ ರ್ಣವಾಗಿ ತಪ್ಪಿಹೋಗುವವರಂತೆಯೂ ಹಸಿವೆ ಗೊಂಡವನ ಆಶೆಯನ್ನು ಬರಿದು ಮಾಡುವಂತೆಯೂ ಕೇಡನ್ನು ಮಾಡುವನು. ಬಾಯಾರಿದವನ ಪಾನವನ್ನು ಇಲ್ಲದಂತೆ ಮಾಡುವ ಹಾಗೆ ಕಾರಣನಾಗುವನು.
- John 13:2 ಯೋಹಾನನು 13:2ಊಟವಾದ ಮೇಲೆ ಆತನನ್ನು ಹಿಡುಕೊಡಬೇಕೆಂಬದನ್ನು ಸೀಮೋ ನನ ಮಗನಾದ ಯೂದ ಇಸ್ಕರಿಯೋತನ ಹೃದಯದಲ್ಲಿ ಸೈತಾನನು ಆಲೋಚನೆ ಹುಟ್ಟಿಸಿದನು.
- Deuteronomy 9:4 ಧರ್ಮೋಪದೇಶಕಾಂಡ 9:4ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ತಳ್ಳಿಹಾಕಿದಾಗ--ನನ್ನ ನೀತಿಯ ನಿಮಿತ್ತ ಈ ದೇಶವನ್ನು ಸ್ವತಂತ್ರಿಸಿಕೊಳ್ಳುವ ಹಾಗೆ ಕರ್ತನು ನನ್ನನ್ನು ಕರಕೊಂಡು ಬಂದಿದ್ದಾನೆಂದು ನಿನ್ನ ಹೃದಯದಲ್ಲಿ ಹೇಳಿಕೊಳ್ಳ ಬಾರದು; ಆ ಜನಾಂಗಗಳ ಕೆಟ್ಟತನದ ನಿಮಿತ್ತ ಕರ್ತನು ಅವರನ್ನು ನಿನ್ನ ಮುಂದೆ ಹೊರಡಿಸುತ್ತಾನೆ.
- Acts 5:3 ಅಪೊಸ್ತಲರ ಕೃತ್ಯಗಳು 5:3ಆಗ ಪೇತ್ರನು--ಅನನೀಯನೇ, ಪವಿತ್ರಾತ್ಮನಿಗೆ ಸುಳ್ಳು ಹೇಳಿ ಹೊಲದ ಕ್ರಯದಲ್ಲಿ ಒಂದು ಭಾಗವನ್ನು ತೆಗೆದಿಡುವಂತೆ ಸೈತಾನನು ನಿನ್ನ ಹೃದಯವನ್ನು ತುಂಬಿ ಕೊಂಡದ್ದು ಯಾಕೆ?
- Mark 7:21 ಮಾರ್ಕನು 7:21ಯಾಕಂದರೆ ಮನುಷ್ಯರ ಹೃದಯದೊಳಗಿಂದ ಹೊರಡುವಂಥದ್ದು ಅಂದರೆ ಕೆಟ್ಟಆಲೋಚನೆಗಳು ವ್ಯಭಿಚಾರಗಳು ಹಾದರಗಳು ಕೊಲೆಗಳು
- Ecclesiastes 8:11 ಪ್ರಸಂಗಿ 8:11ದುಷ್ಟ ಕೆಲಸಕ್ಕೆ ದಂಡನೆಯು ಕೂಡಲೇ ಆಗದಿರುವದರಿಂದ ಮನುಷ್ಯಪುತ್ರರ ಹೃದ ಯವು ಅವರನ್ನು ಕೆಟ್ಟದ್ದನ್ನು ಮಾಡುವದರಲ್ಲಿಯೇ ತುಂಬಿಸುವದು.
- Matthew 25:26 ಮತ್ತಾಯನು 25:26ಅದಕ್ಕೆ ಅವನ ಯಜ ಮಾನನು ಪ್ರತ್ಯುತ್ತರವಾಗಿ--ಮೈಗಳ್ಳನಾದ ಕೆಟ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆ ಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.
- Deuteronomy 15:9 ಧರ್ಮೋಪದೇಶಕಾಂಡ 15:9ಬಿಡುಗಡೆಯ ವರುಷ ವಾದ ಏಳನೇ ವರುಷವು ಸವಿಾಪವಾಯಿತೆಂಬ ದುಷ್ಟಾಲೋಚನೆ ನಿನ್ನ ಹೃದಯದಲ್ಲಿ ಹುಟ್ಟಿ ನಿನ್ನ ಬಡ ಸಹೋದರನ ಮೇಲೆ ನಿನ್ನ ಕಣ್ಣು ಕೆಟ್ಟದ್ದಾಗಿ ನೀನು ಅವನಿಗೆ ಏನೂ ಕೊಡದೆ ಇರುವದರಿಂದ ಅವನು ನಿನಗೆ ವಿರೋಧವಾಗಿ ಕರ್ತನಿಗೆ ಕೂಗುವಾಗ ನಿನ್ನಲ್ಲಿ ಪಾಪ ಉಂಟಾಗದ ಹಾಗೆ ನೋಡಿಕೋ.
- Ezekiel 12:27 ಯೆಹೆಜ್ಕೇಲನು 12:27ಮನುಷ್ಯಪುತ್ರನೇ, ಇಗೋ, ಇಸ್ರಾಯೇಲಿನ ಮನೆತನದವರು--ಇವನಿಗಾದ ದರ್ಶನವು ಬಹು ದೂರ ಕಾಲಕ್ಕೆ ಸಂಬಂಧಿಸಿದ್ದು, ದೂರ ಕಾಲವನ್ನು ಕುರಿತು ಪ್ರವಾದಿಸುತ್ತಾನೆಂದು ಹೇಳುತ್ತಾರೆ.ಆದದರಿಂದ ಅವರು ಹೀಗೆ ಹೇಳುವರೆಂದು ದೇವರಾದ ಕರ್ತನು ಹೇಳುತ್ತಾನೆ; ನನ್ನ ಮಾತುಗಳಲ್ಲಿ ಒಂದಾದರೂ ಇನ್ನು ಮೇಲೆ ದೂರವಾಗುವದಿಲ್ಲ; ನಾನು ಆಡಿದ ಮಾತು ನಡಿಸಲ್ಪಡುವದೆಂದು ದೇವರಾದ ಕರ್ತನು ಹೇಳುತ್ತಾನೆ.