Matthew · chapter 26 · verse 18
Matthew 26:18 in Kannada
ಅದಕ್ಕೆ ಆತನು--ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ-- ನನ್ನ ಸಮಯವು ಸವಿಾಪವಾಗಿದೆ; ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಅವನಿಗೆ ಹೇಳಿರಿ ಅಂದನು.
Adakke aatanu--neevu pattanadolakke inthavana balige hogi-- nanna samayavu saviాpavaagide; nanna shishyara jotege ninna maneyalli paskavannu aacharisuttenendu bodhakanu heluttaane embadaagi avanige heliri andanu.
Matthew 26:18 in English
- King James Version (KJV)
- And he said, Go into the city to such a man, and say unto him, The Master saith, My time is at hand; I will keep the passover at thy house with my disciples.
- World English Bible (WEB)
- He said, “Go into the city to a certain person, and tell him, ‘The Teacher says, “My time is at hand. I will keep the Passover at your house with my disciples.”’”
- American Standard Version (ASV)
- And he said, Go into the city to such a man, and say unto him, The Teacher saith, My time is at hand; I keep the passover at thy house with my disciples.
- Bible in Basic English (BBE)
- And he said to them, Go into the town to such a man, and say to him, The Master says, My time is near: I will keep the Passover at your house with my disciples.
- Darby Translation (DBY)
- And he said, Go into the city unto such a one, and say to him, The Teacher says, My time is near, I will keep the passover in thy house with my disciples.
- Webster's Bible (WBS)
- And he said, Go into the city to such a man, and say to him, The Master saith, My time is at hand; I will keep the passover at thy house with my disciples.
- Young's Literal Translation (YLT)
- and he said, 'Go away to the city, unto such a one, and say to him, The Teacher saith, My time is nigh; near thee I keep the passover, with my disciples;'
Read in context
- 16ಅಂದಿನಿಂದ ಅವನು ಆತನನ್ನು ಹಿಡಿದುಕೊಡು ವದಕ್ಕೆ ಸಂದರ್ಭವನ್ನು ಹುಡುಕುತ್ತಿದ್ದನು.
- 17ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು--ಪಸ್ಕದ ಊಟಮಾಡುವದಕ್ಕೆ ನಾವು ನಿನಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ನೀನು ಕೋರುತ್ತೀ ಎಂದು ಆತನನ್ನು ಕೇಳಿದರು.
- 18ಅದಕ್ಕೆ ಆತನು--ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ-- ನನ್ನ ಸಮಯವು ಸವಿಾಪವಾಗಿದೆ; ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಅವನಿಗೆ ಹೇಳಿರಿ ಅಂದನು.
- 19ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಪಡಿಸಿದರು.
- 20ಸಾಯಂಕಾಲ ವಾದಾಗ ಆತನು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕೂತುಕೊಂಡನು;
Cross references
- Mark 14:13–16 ಮಾರ್ಕನು 14:13–16ಆಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ--ನೀವು ಪಟ್ಟಣದೊಳಕ್ಕೆ ಹೋಗಿರಿ; ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನನ್ನು ಹಿಂಬಾಲಿಸಿರಿ. ಅವನು ಯಾವ ಮನೆ ಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನ ನಿಗೆ--ನಾನು ನನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ ಎಂದು ಬೋಧ ಕನು ಕೇಳುತ್ತಾನೆ ಎಂದು ಹೇಳಿರಿ. ಅವನು ಸಜ್ಜು ಗೊಳಿಸಿ ಸಿದ್ಧಮಾಡಿದ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು; ಅಲ್ಲಿ ನಮಗೆ ಸಿದ್ಧಮಾಡಿರಿ ಅಂದನು. ಆಗ ಆತನ ಶಿಷ್ಯರು ಹೊರಟುಹೋಗಿ ಪಟ್ಟಣದೊಳಕ್ಕೆ ಬಂದು ಆತನು ತಮಗೆ ಹೇಳಿದಂತೆ ಕಂಡುಕೊಂಡು ಪಸ್ಕವನ್ನು ಸಿದ್ಧಮಾಡಿದರು.
- John 7:6 ಯೋಹಾನನು 7:6ತರುವಾಯ ಯೇಸು ಅವರಿಗೆ-- ನನ್ನ ಸಮಯವು ಇನ್ನೂ ಬಂದಿಲ್ಲ; ಆದರೆ ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ.
- John 17:1 ಯೋಹಾನನು 17:1ಯೇಸು ಈ ಮಾತುಗಳನ್ನು ಹೇಳಿ ಪರಲೋಕದ ಕಡೆಗೆ ಕಣ್ಣುಗಳನ್ನೆತ್ತಿ-- ತಂದೆಯೇ, ಈಗ ಗಳಿಗೆ ಬಂದಿದೆ; ನಿನ್ನ ಮಗನನ್ನು ಮಹಿಮೆಪಡಿಸು; ಆಗ ನಿನ್ನ ಮಗನೂ ನಿನ್ನನ್ನು ಮಹಿಮೆಪಡಿಸುವದಕ್ಕಾಗುವದು.
- John 13:1 ಯೋಹಾನನು 13:1ಆಗ ಪಸ್ಕ ಹಬ್ಬದ ಮುಂಚೆ ಯೇಸು ತಾನು ಈ ಲೋಕದೊಳಗಿಂದ ತಂದೆಯ ಬಳಿಗೆ ಹೋಗಬೇಕಾದ ತನ್ನ ಗಳಿಗೆಯು ಬಂತೆಂದು ತಿಳಿದು ಈ ಲೋಕದಲ್ಲಿದ್ದ ತನ್ನ ಸ್ವಂತದವರನ್ನು ಪ್ರೀತಿಸಿ ಅವರನ್ನು ಅಂತ್ಯದವರೆಗೆ ಪ್ರೀತಿಸಿದನು.
- John 7:30 ಯೋಹಾನನು 7:30ಆಗ ಅವರು ಆತನನ್ನು ಹಿಡಿಯಲು ಹವಣಿಸಿದರು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಆತನ ಮೇಲೆ ಯಾರೂ ಕೈ ಹಾಕಲಿಲ್ಲ.
- John 7:8 ಯೋಹಾನನು 7:8ನೀವು ಈ ಹಬ್ಬಕ್ಕೆ ಹೋಗಿರಿ; ನಾನು ಈ ಹಬ್ಬಕ್ಕೆ ಈಗಲೇ ಹೋಗುವದಿಲ್ಲ, ಯಾಕಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ ಅಂದನು.
- Luke 22:10–13 ಲೂಕನು 22:10–13ಆಗ ಆತನು ಅವರಿಗೆ--ಇಗೋ, ನೀವು ಪಟ್ಟಣದೊಳಗೆ ಸೇರಿದಾಗ ಅಲ್ಲಿ ನೀರಿನ ಮಣ್ಣಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ. ನೀವು ಆ ಮನೆಯ ಯಜಮಾನನಿಗೆ--ನಾನು ನನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡುವ ದಕ್ಕಾಗಿ ಅತಿಥಿಯ ಕೊಠಡಿ ಎಲ್ಲಿ ಎಂದು ಬೋಧಕನು ನಿನ್ನನ್ನು ಕೇಳುತ್ತಾನೆ ಎಂದು ಹೇಳಿರಿ. ಅವನು ಸಜ್ಜುಗೊಳಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿ ಸಿದ್ಧಮಾಡಿರಿ ಅಂದನು. ಅವರು ಹೊರಟು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡು ಪಸ್ಕವನ್ನು ಸಿದ್ದಮಾಡಿದರು.
- Luke 22:53 ಲೂಕನು 22:53ನಾನು ನಿಮ್ಮ ಸಂಗಡ ಪ್ರತಿದಿನವೂ ದೇವಾಲಯದಲ್ಲಿದ್ದಾಗ ನೀವು ನನಗೆ ವಿರೋಧವಾಗಿ ಕೈ ಚಾಚಲಿಲ್ಲ; ಆದರೆ ಇದು ನಿಮ್ಮ ಗಳಿಗೆಯೂ ಅಂಧಕಾರದ ಶಕ್ತಿಯೂ ಆಗಿದೆ ಅಂದನು.
- John 12:23 ಯೋಹಾನನು 12:23ಯೇಸು ಪ್ರತ್ಯುತ್ತರವಾಗಿ ಅವರಿಗೆ--ಮನುಷ್ಯಕುಮಾರನು ಮಹಿಮೆ ಹೊಂದುವ ಗಳಿಗೆ ಬಂದದೆ.
- Matthew 26:2 ಮತ್ತಾಯನು 26:2ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಇರುವ ದೆಂದು ನೀವು ಬಲ್ಲಿರಿ. ಆಗ ಮನುಷ್ಯಕುಮಾರನು ಶಿಲುಬೆಗೆ ಹಾಕಲ್ಪಡುವದಕ್ಕಾಗಿ ಹಿಡಿದುಕೊಡಲ್ಪಡು ವನು ಅಂದನು.
- Matthew 21:3 ಮತ್ತಾಯನು 21:3ಮತ್ತು ಯಾವನಾದರೂ ನಿಮಗೆ ಏನಾದರೂ ಹೇಳಿದರೆ ನೀವು ಅವನಿಗೆ--ಅವು ಕರ್ತನಿಗೆ ಬೇಕಾಗಿವೆ ಎಂದು ಹೇಳಿರಿ; ಆಗ ಅವನು ಅವುಗಳನ್ನು ಕೂಡಲೆ ಕಳುಹಿಸುವನು ಎಂದು ಹೇಳಿದನು.
- Matthew 23:8 ಮತ್ತಾಯನು 23:8ಆದರೆ ನೀವು ಬೋಧಕರೆಂದು ಕರೆ ಯಲ್ಪಡಬೇಡಿರಿ. ಕ್ರಿಸ್ತನೊಬ್ಬನೇ ನಿಮ್ಮ ಬೋಧಕನು ಮತ್ತು ನೀವೆಲ್ಲರೂ ಸಹೋದರರು.