Luke · chapter 22 · verse 10
Luke 22:10 in Kannada
ಆಗ ಆತನು ಅವರಿಗೆ--ಇಗೋ, ನೀವು ಪಟ್ಟಣದೊಳಗೆ ಸೇರಿದಾಗ ಅಲ್ಲಿ ನೀರಿನ ಮಣ್ಣಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ.
Aaga aatanu avarige--igo, neevu pattanadolage seridaaga alli neerina mannina kodavannu hottukondu hoguva obba manushyanu nimmannu sandhisuvanu; avanu praveshisuva maneyolage neevu avana hinde hogiri.
Luke 22:10 in English
- King James Version (KJV)
- And he said unto them, Behold, when ye are entered into the city, there shall a man meet you, bearing a pitcher of water; follow him into the house where he entereth in.
- World English Bible (WEB)
- He said to them, “Behold, when you have entered into the city, a man carrying a pitcher of water will meet you. Follow him into the house which he enters.
- American Standard Version (ASV)
- And he said unto them, Behold, when ye are entered into the city, there shall meet you a man bearing a pitcher of water; follow him into the house whereinto he goeth.
- Bible in Basic English (BBE)
- And he said to them, When you go into the town you will see a man coming to you with a vessel of water; go after him into the house into which he goes.
- Darby Translation (DBY)
- And he said to them, Behold, as ye enter into the city a man will meet you, carrying an earthen pitcher of water; follow him into the house where he goes in;
- Webster's Bible (WBS)
- And he said to them, Behold, when ye have entered into the city, there shall a man meet you, bearing a pitcher of water; follow him into the house where he entereth.
- Young's Literal Translation (YLT)
- And he said to them, 'Lo, in your entering into the city, there shall meet you a man, bearing a pitcher of water, follow him to the house where he doth go in,
Read in context
- 8ಆತನು ಪೇತ್ರ ಯೋಹಾನರನ್ನು ಕಳುಹಿಸಿ--ನಾವು ಊಟ ಮಾಡುವಂತೆ ಹೋಗಿ ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ ಅಂದನು.
- 9ಅವರು ಆತನಿಗೆ--ನಾವು ಎಲ್ಲಿ ಸಿದ್ಧ ಮಾಡಬೇಕೆಂದು ನೀನು ಕೋರುತ್ತೀ ಅಂದರು.
- 10ಆಗ ಆತನು ಅವರಿಗೆ--ಇಗೋ, ನೀವು ಪಟ್ಟಣದೊಳಗೆ ಸೇರಿದಾಗ ಅಲ್ಲಿ ನೀರಿನ ಮಣ್ಣಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು; ಅವನು ಪ್ರವೇಶಿಸುವ ಮನೆಯೊಳಗೆ ನೀವು ಅವನ ಹಿಂದೆ ಹೋಗಿರಿ.
- 11ನೀವು ಆ ಮನೆಯ ಯಜಮಾನನಿಗೆ--ನಾನು ನನ್ನ ಶಿಷ್ಯರೊಂದಿಗೆ ಪಸ್ಕದ ಊಟ ಮಾಡುವ ದಕ್ಕಾಗಿ ಅತಿಥಿಯ ಕೊಠಡಿ ಎಲ್ಲಿ ಎಂದು ಬೋಧಕನು ನಿನ್ನನ್ನು ಕೇಳುತ್ತಾನೆ ಎಂದು ಹೇಳಿರಿ.
- 12ಅವನು ಸಜ್ಜುಗೊಳಿಸಿದ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು, ಅಲ್ಲಿ ಸಿದ್ಧಮಾಡಿರಿ ಅಂದನು.
Cross references
- John 16:4 ಯೋಹಾನನು 16:4ಆದರೆ ಸಮಯ ಬಂದಾಗ ಇವುಗಳ ವಿಷಯವಾಗಿ ನಾನು ನಿಮಗೆ ಹೇಳಿದ್ದೇನೆಂದು ನೀವು ಜ್ಞಾಪಕಮಾಡಿಕೊಳ್ಳುವಂತೆ ಇವುಗಳನ್ನು ನಿಮಗೆ ಹೇಳಿದ್ದೇನೆ. ನಾನು ನಿಮ್ಮ ಸಂಗಡಲೇ ಇದ್ದದರಿಂದ ಪ್ರಾರಂಭದಲ್ಲಿ ಇವುಗಳನ್ನು ನಿಮಗೆ ಹೇಳಲಿಲ್ಲ.
- Acts 8:26–29 ಅಪೊಸ್ತಲರ ಕೃತ್ಯಗಳು 8:26–29ಅಷ್ಟರಲ್ಲಿ ಕರ್ತನ ದೂತನು ಫಿಲಿಪ್ಪನಿಗೆ--ನೀನು ಎದ್ದು ದಕ್ಷಿಣ ಕಡೆಗೆ ಯೆರೂಸಲೇಮಿನಿಂದ ಗಾಜಕ್ಕೆ ಹೋಗುವ ದಾರಿಯಲ್ಲಿ ಹೋಗು, ಅದು ಅಡವಿ ಎಂದು ಹೇಳಿದನು. ಅವನು ಎದ್ದು ಹೊರಟು ಹೋಗುತ್ತಿರುವಾಗ ಇಗೋ, ಐಥಿಯೋಪ್ಯದವರ ರಾಣಿಯಾಗಿದ್ದ ಕಂದಾಕೆಯ ಕೈಕೆಳಗೆ ದೊಡ್ಡ ಅಧಿಕಾ ರಿಯೂ ಆಕೆಯ ಎಲ್ಲಾ ಖಜಾನೆಯ ಮೇಲ್ವಿಚಾರಕನೂ ಆಗಿದ್ದ ಐಥಿಯೋಪ್ಯದವನಾದ ಒಬ್ಬ ಕಂಚುಕಿಯು ಆರಾಧನೆಗೋಸ್ಕರ ಯೆರೂಸಲೇಮಿಗೆ ಬಂದು ಹಿಂತಿರುಗಿ ಹೋಗುವಾಗ ತನ್ನ ರಥದಲ್ಲಿ ಕೂತು ಕೊಂಡು ಯೆಶಾಯ ಪ್ರವಾದಿಯ ಗ್ರಂಥವನ್ನು ಓದು ತ್ತಿದ್ದನು; ಆಗ ಆತ್ಮನು ಫಿಲಿಪ್ಪನಿಗೆ--ನೀನು ಆ ರಥದ ಹತ್ತಿರ ಹೋಗಿ ಅದನ್ನು ಸಂಧಿಸು ಎಂದು ಹೇಳಿದನು.
- Matthew 26:18–19 ಮತ್ತಾಯನು 26:18–19ಅದಕ್ಕೆ ಆತನು--ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ-- ನನ್ನ ಸಮಯವು ಸವಿಾಪವಾಗಿದೆ; ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಅವನಿಗೆ ಹೇಳಿರಿ ಅಂದನು. ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಪಡಿಸಿದರು.
- 1 Samuel 10:2–7 1 ಸಮುವೇಲನು 10:2–7ನೀನು ಈ ಹೊತ್ತು ನನ್ನನ್ನು ಬಿಟ್ಟು ಹೋದಾಗ ಬೆನ್ಯಾವಿಾನನ ಮೇರೆಯಾದ ಚೆಲ್ಚಹಿ ನಲ್ಲಿರುವ ರಾಹೇಲಳ ಸಮಾಧಿಯ ಬಳಿಯಲ್ಲಿ ಇಬ್ಬರು ಮನುಷ್ಯರನ್ನು ಕಂಡುಕೊಳ್ಳುವಿ. ಅವರು ನಿನಗೆ--ನೀನು ಹುಡುಕಲು ಹೋದ ಕತ್ತೆಗಳು ಸಿಕ್ಕಿದವು; ಇದಲ್ಲದೆ ಇಗೋ, ನಿನ್ನ ತಂದೆಯು ಕತ್ತೆಗಳ ಚಿಂತೆ ಬಿಟ್ಟು ನಿನಗೋಸ್ಕರ ಚಿಂತೆಪಟ್ಟು--ನನ್ನ ಮಗನಿಗೋ ಸ್ಕರ ಏನು ಮಾಡಲಿ? ಅನ್ನುತ್ತಾನೆಂದು ಹೇಳುವರು. ನೀನು ಆ ಸ್ಥಳವನ್ನು ಬಿಟ್ಟು ಆ ಕಡೆ ದಾಟಿ ತಾಬೋರಿನ ಬಯಲಿಗೆ ಬರುವಾಗ ಒಬ್ಬನು ಮೂರು ಮೇಕೆಯ ಮರಿಗಳನ್ನೂ ಮತ್ತೊಬ್ಬನು ಮೂರು ರೊಟ್ಟಿಗಳನ್ನೂ ಇನ್ನೊಬ್ಬನು ದ್ರಾಕ್ಷಾರಸವಿರುವ ಒಂದು ಬುದ್ದಲಿ ಯನ್ನೂ ಹೊತ್ತುಕೊಂಡು ದೇವರ ಬಳಿಗೆ ಬೇತೇಲಿಗೆ ಹೋಗುವ ಮೂವರನ್ನು ಕಾಣುವಿ. ಅವರು ನಿನ್ನ ಕ್ಷೇಮ ಸಮಾಚಾರವನ್ನು ವಿಚಾರಿಸಿ ನಿನಗೆ ಎರಡು ರೊಟ್ಟಿಗಳನ್ನು ಕೊಡುವರು; ಅವುಗಳನ್ನು ನೀನು ಅವರ ಕೈಯಿಂದ ತೆಗೆದುಕೊಳ್ಳುವಿ. ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು. ಆಗ ಕರ್ತನ ಆತ್ಮನು ನಿನ್ನ ಮೇಲೆ ಬರುವನು; ನೀನು ಅವರ ಸಂಗಡ ಪ್ರವಾದಿಸುವಿ; ಬೇರೆ ಮನುಷ್ಯನಾಗಿ ಮಾರ್ಪಡುವಿ. ಈ ಗುರುತು ಗಳೆಲ್ಲಾ ನಿನಗೆ ಸಂಭವಿಸಿದಾಗ ದೇವರು ನಿನ್ನ ಸಂಗಡ ಇರುವದರಿಂದ ನೀನು ಆ ವೇಳೆಯಲ್ಲಿ ನಿನಗೆ ಅನು ಕೂಲವಾದದ್ದನ್ನು ಮಾಡು.
- Luke 19:29–40 ಲೂಕನು 19:29–40ಇದಾದ ಮೇಲೆ ಆತನು ಎಣ್ಣೇಮರಗಳ ಗುಡ್ಡವೆಂದು ಕರೆಯಲ್ಪಟ್ಟ ಗುಡ್ಡದ ಕಡೆಗೆ ಇರುವ ಬೇತ್ಫಗೆಗೂ ಬೇಥಾನ್ಯಕ್ಕೂ ಸವಿಾಪಿಸಿದಾಗ ತನ್ನ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ-- ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ನೀವು ಅದ ರೊಳಗೆ ಪ್ರವೇಶಿಸುತ್ತಿರುವಾಗ ಅಲ್ಲಿ ಕಟ್ಟಿರುವ ಮತ್ತು ಯಾವ ಮನುಷ್ಯನೂ ಅದರ ಮೇಲೆ ಹತ್ತದಿರುವ ಒಂದು ಕತ್ತೇ ಮರಿಯನ್ನು ಕಾಣುವಿರಿ; ಅದನ್ನು ಬಿಚ್ಚಿ ಇಲ್ಲಿಗೆ ತಕ್ಕೊಂಡು ಬನ್ನಿರಿ; ಯಾವನಾದರೂ ನಿಮಗೆ--ಯಾಕೆ ಅದನ್ನು ಬಿಚ್ಚುತ್ತೀರಿ ಎಂದು ಕೇಳಿದರೆ ನೀವು ಅವನಿಗೆ--ಇದು ಕರ್ತನಿಗೆ ಬೇಕಾಗಿದೆ ಎಂದು ಹೇಳಿರಿ ಅಂದನು. ಕಳುಹಿಸಲ್ಪಟ್ಟವರು ತಮ್ಮ ಮಾರ್ಗವಾಗಿ ಹೊರಟು ಹೋಗಿ ಆತನು ತಮಗೆ ಹೇಳಿದಂತೆಯೇ ಕಂಡರು. ಅವರು ಆ ಕತ್ತೇ ಮರಿ ಯನ್ನು ಬಿಚ್ಚುತ್ತಿರುವಾಗ ಆದರ ಯಜಮಾನರು ಅವರಿಗೆ--ನೀವು ಕತ್ತೇಮರಿಯನ್ನು ಯಾಕೆ ಬಿಚ್ಚುತ್ತೀರಿ ಎಂದು ಕೇಳಿದ್ದಕ್ಕೆ ಅವರು--ಅದು ಕರ್ತನಿಗೆ ಬೇಕಾಗಿದೆ ಅಂದರು. ಅವರು ಅದನ್ನು ಯೇಸು ವಿನ ಬಳಿಗೆ ತಂದು ತಮ್ಮ ಬಟ್ಟೆಗಳನ್ನು ಕತ್ತೇಮರಿಯ ಮೇಲೆ ಹಾಕಿ ಅದರ ಮೇಲೆ ಯೇಸುವನ್ನು ಕೂಡ್ರಿಸಿ ದರು. ಆತನು ಹೋಗುತ್ತಿರುವಾಗ ಅವರು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇದಲ್ಲದೆ ಆತನು ಎಣ್ಣೇಮರಗಳ ಗುಡ್ಡದಿಂದ ಇಳಿಯುವ ಸ್ಥಳಕ್ಕೆ ಸವಿಾಪಿಸಿದಾಗ ಶಿಷ್ಯ ಸಮೂಹವೆಲ್ಲಾ ತಾವು ನೋಡಿದ್ದ ಎಲ್ಲಾ ಮಹತ್ಕಾರ್ಯಗಳಿಗಾಗಿ ಸಂತೋಷ ಪಡುತ್ತಾ ಮಹಾಧ್ವನಿಯಿಂದ ದೇವರನ್ನು ಕೊಂಡಾಡ ಲಾರಂಭಿಸಿ-- ಕರ್ತನ ಹೆಸರಿನಲ್ಲಿ ಬರುವ ಅರ ಸನು ಸ್ತುತಿಹೊಂದಲಿ; ಪರಲೋಕದಲ್ಲಿ ಸಮಾಧಾನ, ಮತ್ತು ಅತ್ಯುನ್ನತದಲ್ಲಿ ಮಹಿಮೆ ಎಂದು ಹೇಳಿದರು. ಜನಸಮೂಹದೊಳಗಿಂದ ಕೆಲವು ಫರಿಸಾಯರು ಆತನಿಗೆ--ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು ಅಂದರು. ಆಗ ಆತನು ಪ್ರತ್ಯುತ್ತರವಾಗಿ ಅವ ರಿಗೆ--ಇವರು ಸುಮ್ಮನಿರುವದಾದರೆ ಈ ಕಲ್ಲುಗಳು ಕೂಡಲೆ ಕೂಗುವವು ಎಂದು ನಾನು ನಿಮಗೆ ಹೇಳು ತ್ತೇನೆ ಅಂದನು.