Matthew · chapter 8 · verse 26
Matthew 8:26 in Kannada
ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
Aaga aatanu avarige--o alpa vishvaasigale, neevu yaake bhayapadutteeri endu heli eddu gaaliyannoo samudravannoo gadarisidanu. Aaga alli dodda shaantate untaayitu.
Matthew 8:26 in English
- King James Version (KJV)
- And he saith unto them, Why are ye fearful, O ye of little faith? Then he arose, and rebuked the winds and the sea; and there was a great calm.
- World English Bible (WEB)
- He said to them, “Why are you fearful, O you of little faith?” Then he got up, rebuked the wind and the sea, and there was a great calm.
- American Standard Version (ASV)
- And he saith unto them, Why are ye fearful, O ye of little faith? Then he arose, and rebuked the winds and the sea; and there was a great calm.
- Bible in Basic English (BBE)
- And he said to them, Why are you full of fear, O you of little faith? Then he got up and gave orders to the winds and the sea; and there was a great calm.
- Darby Translation (DBY)
- And he says to them, Why are ye fearful, O ye of little faith? Then, having arisen, he rebuked the winds and the sea, and there was a great calm.
- Webster's Bible (WBS)
- And he saith to them, Why are ye fearful, O ye of little faith? Then he arose, and rebuked the winds and the sea; and there was a great calm.
- Young's Literal Translation (YLT)
- And he saith to them, 'Why are ye fearful, O ye of little faith?' Then having risen, he rebuked the winds and the sea, and there was a great calm;
Read in context
- 24ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಆತನು ನಿದ್ರಿಸುತ್ತಿದ್ದನು.
- 25ಆಗ ಆತನ ಶಿಷ್ಯರು ಬಂದು ಆತನನ್ನು ಎಬ್ಬಿಸಿ--ಕರ್ತನೇ ನಮ್ಮನ್ನು ರಕ್ಷಿಸು; ನಾವು ನಾಶವಾಗುತ್ತೇವೆ ಅಂದರು.
- 26ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
- 27ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
- 28ಆತನು ಆಚೆಯ ದಡದ ಗದರೇನರ ದೇಶಕ್ಕೆ ಬಂದಾಗ ದೆವ್ವಗಳು ಹಿಡಿದಿದ್ದ ಇಬ್ಬರು ಸಮಾಧಿ ಗಳೊಳಗಿಂದ ಆತನ ಎದುರಿಗೆ ಬಂದರು. ಅವರು ಬಹು ಉಗ್ರತೆಯುಳ್ಳವರಾಗಿದ್ದದರಿಂದ ಯಾವ ಮನು ಷ್ಯನೂ ಆ ಮಾರ್ಗವಾಗಿ ಹೋಗುವ ಹಾಗಿದ್ದಿಲ್ಲ.
Cross references
- Isaiah 41:10–14 ಯೆಶಾಯ 41:10–14ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ. ಇಗೋ, ನಿನಗೆ ವಿರೋಧ ವಾಗಿ ಉರಿಗೊಂಡವರೆಲ್ಲರೂ ಅವಮಾನಹೊಂದಿ, ಆಶಾಭಂಗಪಡುವರು; ನಿನ್ನ ಸಂಗಡ ವ್ಯಾಜ್ಯವಾಡಿದ ವರು ನಾಶವಾಗಿ ಇಲ್ಲದೆ ಹೋಗುವರು; ನಿನ್ನೊಡನೆ ಹೋರಾಡಿದವರನ್ನು ಹುಡುಕಿದರೂ ಅವರು ನಿನಗೆ ಕಾಣಿಸರು; ನಿನ್ನ ಸಂಗಡ ಯುದ್ಧಮಾಡಿದವರು ಇಲ್ಲದೆ ಹೋಗಿ ನಿರ್ನಾಮವಾಗುವರು. ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ. ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
- Psalm 65:7 ಕೀರ್ತನೆಗಳು 65:7ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,
- Psalm 107:28–30 ಕೀರ್ತನೆಗಳು 107:28–30ಆಗ ಅವರು ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಿದರು; ಆತನು ಅವರ ಸಂಕಟಗಳೊಳಗಿಂದ ಅವರನ್ನು ಹೊರಗೆ ಬರಮಾಡಿ ಬಿರುಗಾಳಿಯನ್ನು ಶಾಂತಮಾಡುತ್ತಾನೆ; ಹೀಗೆ ಅದರ ತೆರೆಗಳು ನಿಂತು ಹೋಗುವವು. ಅವು ಶಾಂತವಾದಾಗ ಅವರು ಸಂತೋಷಪಡುತ್ತಾರೆ; ಹೀಗೆ ಅವರು ಅಪೇಕ್ಷಿಸಿದ ರೇವಿಗೆ ಅವರನ್ನು ನಡೆಸುತ್ತಾನೆ.
- Psalm 89:9 ಕೀರ್ತನೆಗಳು 89:9ನೀನು ಸಮುದ್ರದ ಉಬ್ಬರವನ್ನು ಆಳುತ್ತೀ; ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀ.
- Matthew 6:30 ಮತ್ತಾಯನು 6:30ಆದದರಿಂದ ಈ ಹೊತ್ತು ಇದ್ದು ನಾಳೆ ಒಲೆಗೆ ಹಾಕಲ್ಪಡುವ ಹೊಲದ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಓ ಅಲ್ಪ ವಿಶ್ವಾಸಿಗಳೇ, ಆತನು ಇನ್ನೂ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸುವನಲ್ಲವೇ?
- Luke 8:24–25 ಲೂಕನು 8:24–25ಆಗ ಅವರು ಆತನ ಬಳಿಗೆ ಬಂದು ಆತನನ್ನು ಎಬ್ಬಿಸಿ--ಬೋಧ ಕನೇ, ಬೋಧಕನೇ, ನಾವು ನಾಶವಾಗುತ್ತೇವೆ ಅಂದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರನ್ನೂ ಗದರಿಸಿದನು; ಆಗ ಅವು ನಿಂತು ಹೋಗಿ ಅಲ್ಲಿ ಶಾಂತತೆ ಉಂಟಾಯಿತು. ಆಗ ಆತನು ಅವರಿಗೆ--ನಿಮ್ಮ ನಂಬಿಕೆ ಎಲ್ಲಿ ಅಂದನು. ಆಗ ಅವರು ಹೆದರಿದವರಾಗಿ ಆಶ್ಚರ್ಯದಿಂದ ಒಬ್ಬರಿಗೊಬ್ಬರು-- ಈತನು ಎಂಥಾ ಮನುಷ್ಯನು? ಯಾಕಂದರೆ ಈತನು ಗಾಳಿಗೂ ನೀರಿಗೂ ಅಪ್ಪಣೆ ಕೊಡುತ್ತಾನೆ. ಅವುಗಳು ಆತನಿಗೆ ವಿಧೇಯವಾಗು ತ್ತವಲ್ಲಾ ಎಂದು ಮಾತನಾಡಿಕೊಂಡರು.
- Mark 4:39–41 ಮಾರ್ಕನು 4:39–41ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು. ಮತ್ತು ಆತನು ಅವರಿಗೆ--ಯಾಕೆ ನೀವು ಇಷ್ಟೊಂದು ಭಯಭರಿತರಾಗಿದ್ದೀರಿ? ನಿಮಗೆ ನಂಬಿಕೆ ಇಲ್ಲದಿರುವದು ಹೇಗೆ ಅಂದನು.ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು. ಆಗ ಅವರು ಇನ್ನಷ್ಟು ಭಯಪಟ್ಟವರಾಗಿ--ಈತನು ಎಂಥ ಮನುಷ್ಯನಾಗಿರಬಹುದು? ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ! ಎಂದು ಒಬ್ಬರಿ ಗೊಬ್ಬರು ಮಾತನಾಡಿಕೊಂಡರು.
- Romans 4:20 ರೋಮಾಪುರದವರಿಗೆ 4:20ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ ಅವನು ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ; ಆದರೆ ದೇವರನ್ನು ಘನಪಡಿಸುವವನಾಗಿ ದೃಢನಂಬಿಕೆಯುಳ್ಳ ವನಾದನು.
- Matthew 8:27 ಮತ್ತಾಯನು 8:27ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
- Isaiah 50:2–4 ಯೆಶಾಯ 50:2–4ನಾನು ಬಂದಾಗ ಯಾಕೆ ಅಲ್ಲಿ ಒಬ್ಬನೂ ಇರಲಿಲ್ಲ? ನಾನು ಕರೆದಾಗ ಯಾಕೆ ಯಾರೂ ಉತ್ತರ ಕೊಡಲಿಲ್ಲ? ನನ್ನ ಹಸ್ತವು ವಿಮೋಚಿಸದಂಥಾ ಮೋಟುಗೈಯೋ? ಇಲ್ಲವೇ ಬಿಡಿಸುವದಕ್ಕೆ ನನ್ನಲ್ಲಿ ಶಕ್ತಿಯಿಲ್ಲವೋ? ಇಗೋ, ನನ್ನ ಗದರಿಕೆಯಿಂದ ನಾನು ಸಮುದ್ರವನ್ನು ಒಣಗಿಸುತ್ತೇನೆ. ನಾನು ನದಿಗಳನ್ನು ಅರಣ್ಯವನ್ನಾಗಿ ಮಾಡುತ್ತೇನೆ. ನೀರಿಲ್ಲದ ಕಾರಣ ಅಲ್ಲಿಯ ವಿಾನುಗಳು ಬಾಯಾರಿ ಸತ್ತುನಾರುವವು. ನಾನು ಆಕಾಶಗಳಿಗೆ ಅಂಧಕಾರವನ್ನು ಹೊದಿಸಿ ಗೋಣೀತಟ್ಟನ್ನು ಅದರ ಹೊದಿಕೆಯನ್ನಾಗಿ ಮಾಡುವೆನು. ಬಳಲಿ ಹೋದವನನ್ನು ಹೇಗೆ ಮಾತಿನಿಂದ ಆದರಿಸುವಿ ಎಂಬದನ್ನು ನಾನು ತಿಳಿಯುವ ಹಾಗೆ ಕರ್ತನಾದ ದೇವರು ಶಿಕ್ಷಿತ ನಾಲಿಗೆಯನ್ನು ನನಗೆ ಕೊಟ್ಟಿದ್ದಾನೆ. ಆತನು ಹೊತ್ತಾರೆಯಿಂದ ಹೊತ್ತಾರೆಗೆ ನನ್ನನ್ನು ಎಚ್ಚರಿಸಿ ಸುಶಿಕ್ಷಿತರಂತೆ ನಾನು ಕೇಳುವ ಹಾಗೆ ನನ್ನ ಕಿವಿಯನ್ನು ಆತನು ಜಾಗರೂಕಗೊಳಿಸುತ್ತಾನೆ.
- Matthew 16:8 ಮತ್ತಾಯನು 16:8ಯೇಸು ಅದನ್ನು ತಿಳುಕೊಂಡವನಾಗಿ ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ರೊಟ್ಟಿಯನ್ನು ತಕ್ಕೊಂಡು ಬರಲಿಲ್ಲವೆಂದು ನಿಮ್ಮಲ್ಲಿ ಯಾಕೆ ಅಂದುಕೊಳ್ಳುತ್ತೀರಿ?
- Mark 6:48–51 ಮಾರ್ಕನು 6:48–51ಗಾಳಿಯು ಅವರಿಗೆ ಎದುರಾಗಿ ಇದ್ದದರಿಂದ ಅವರು ಕಷ್ಟಪಟ್ಟು ಹುಟ್ಟು ಹಾಕುತ್ತಿರು ವದನ್ನು ಆತನು ನೋಡಿ ಸುಮಾರು ರಾತ್ರಿಯ ನಾಲ್ಕನೇ ಜಾವದಲ್ಲಿ ಸಮುದ್ರದ ಮೇಲೆ ನಡೆಯುತ್ತಾ ಅವರ ಬಳಿಗೆ ಬಂದು ಅವರನ್ನು ದಾಟಿ ಹೋಗಬೇಕೆಂದಿದ್ದನು. ಆದರೆ ಆತನು ಸಮುದ್ರದ ಮೇಲೆ ನಡೆಯುತ್ತಿರು ವದನ್ನು ಅವರು ನೋಡಿದಾಗ ಅದೊಂದು ಭೂತ ವೆಂದು ಭಾವಿಸಿ ಕೂಗಿಕೊಂಡರು. ಯಾಕಂದರೆ ಅವರೆಲ್ಲರು ಆತನನ್ನು ನೋಡಿ ಕಳವಳಗೊಂಡರು. ಆತನು ಕೂಡಲೆ ಅವರ ಕೂಡ ಮಾತನಾಡಿ ಅವರಿಗೆ --ಧೈರ್ಯವಾಗಿರ್ರಿ, ನಾನೇ; ಅಂಜಬೇಡಿರಿ ಅಂದನು. ಆತನು ದೋಣಿಯನ್ನು ಹತ್ತಿ ಅವರ ಬಳಿಗೆ ಬಂದನು; ಆಗ ಗಾಳಿಯು ನಿಂತಿತು; ಅವರು ಅತ್ಯಧಿಕವಾಗಿ ತಮ್ಮೊಳಗೆ ದಿಗ್ಭ್ರಮೆಯುಳ್ಳವರಾಗಿ ಆಶ್ಚರ್ಯಪಟ್ಟರು.
Original words (Greek)
- And · G2532καί kaí
- saith · G3004λέγω légō
- them · G846αὐτός autós
- Then · G5119τότε tóte
- arose · G1453ἐγείρω egeírō
- rebuked · G2008ἐπιτιμάω epitimáō
- winds · G417ἄνεμος ánemos
- and · G2532καί kaí
- sea · G2281θάλασσα thálassa
- and · G2532καί kaí
- was · G1096γίνομαι gínomai
- great · G3173μέγας mégas
- calm · G1055γαλήνη galḗnē