Matthew · chapter 8 · verse 25
Matthew 8:25 in Kannada
ಆಗ ಆತನ ಶಿಷ್ಯರು ಬಂದು ಆತನನ್ನು ಎಬ್ಬಿಸಿ--ಕರ್ತನೇ ನಮ್ಮನ್ನು ರಕ್ಷಿಸು; ನಾವು ನಾಶವಾಗುತ್ತೇವೆ ಅಂದರು.
Aaga aatana shishyaru bandu aatanannu ebbisi--kartane nammannu rakshisu; naavu naashavaagutteve andaru.
Matthew 8:25 in English
- King James Version (KJV)
- And his disciples came to [him], and awoke him, saying, Lord, save us: we perish.
- World English Bible (WEB)
- The disciples came to him and woke him up, saying, “Save us, Lord! We are dying!”
- American Standard Version (ASV)
- And they came to him, and awoke him, saying, Save, Lord; we perish.
- Bible in Basic English (BBE)
- And they came to him, and, awaking him, said, Help, Lord; destruction is near.
- Darby Translation (DBY)
- And the disciples came and awoke him, saying, Lord save: we perish.
- Webster's Bible (WBS)
- And his disciples came to [him] , and awoke him, saying, Lord, save us: we perish.
- Young's Literal Translation (YLT)
- and his disciples having come to him, awoke him, saying, 'Sir, save us; we are perishing.'
Read in context
- 23ಆತನು ದೋಣಿಯನ್ನು ಹತ್ತಿದಾಗ ಆತನ ಶಿಷ್ಯರು ಆತನನ್ನು ಹಿಂಬಾಲಿಸಿದರು.
- 24ಆಗ ಇಗೋ, ಸಮುದ್ರದಲ್ಲಿ ದೊಡ್ಡ ತುಫಾನು ಎದ್ದ ಕಾರಣ ದೋಣಿಯು ತೆರೆಗಳಿಂದ ಮುಚ್ಚಲ್ಪಟ್ಟಿತು; ಆದರೆ ಆತನು ನಿದ್ರಿಸುತ್ತಿದ್ದನು.
- 25ಆಗ ಆತನ ಶಿಷ್ಯರು ಬಂದು ಆತನನ್ನು ಎಬ್ಬಿಸಿ--ಕರ್ತನೇ ನಮ್ಮನ್ನು ರಕ್ಷಿಸು; ನಾವು ನಾಶವಾಗುತ್ತೇವೆ ಅಂದರು.
- 26ಆಗ ಆತನು ಅವರಿಗೆ--ಓ ಅಲ್ಪ ವಿಶ್ವಾಸಿಗಳೇ, ನೀವು ಯಾಕೆ ಭಯಪಡುತ್ತೀರಿ ಎಂದು ಹೇಳಿ ಎದ್ದು ಗಾಳಿಯನ್ನೂ ಸಮುದ್ರವನ್ನೂ ಗದರಿಸಿದನು. ಆಗ ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
- 27ಆದರೆ ಅವರು ಆಶ್ಚರ್ಯದಿಂದ--ಈತನು ಎಂಥಾ ಮನುಷ್ಯ ನಾಗಿರಬಹುದು! ಗಾಳಿಯೂ ಸಮುದ್ರವೂ ಈತನಿಗೆ ವಿಧೇಯವಾಗುತ್ತವಲ್ಲಾ ಅಂದರು.
Cross references
- Jonah 1:6 ಯೋನ 1:6ಆಗ ಹಡಗಿನ ಯಜಮಾನನು ಅವನ ಬಳಿಗೆ ಬಂದು--ನಿದ್ರೆಮಾಡುವವನೇ, ನಿನಗೆ ಏನಾಯಿತು? ಎದ್ದು ನಿನ್ನ ದೇವರನ್ನು ಕೂಗು; ಒಂದು ವೇಳೆ ನಾವು ನಾಶವಾಗದ ಹಾಗೆ ದೇವರು ನಮ್ಮನ್ನು ಜ್ಞಾಪಕ ಮಾಡ್ಯಾನು ಅಂದನು.
- Mark 4:38–39 ಮಾರ್ಕನು 4:38–39ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬಿನ ಮೇಲೆ ನಿದ್ರಿಸುತ್ತಿದ್ದನು. ಆಗ ಅವರು ಆತನನ್ನು ಎಬ್ಬಿಸಿ ಆತನಿಗೆ--ಒಡೆಯನೇ, ನಾವು ನಾಶವಾಗುತ್ತೇವೆಂದು ನಿನಗೆ ಚಿಂತೆಯಿಲ್ಲವೋ ಅಂದರು. ಆಗ ಆತನು ಎದ್ದು ಗಾಳಿಯನ್ನು ಗದರಿಸಿ ಸಮುದ್ರಕ್ಕೆ--ಶಾಂತವಾಗಿ ಮೌನವಾಗಿರು ಎಂದು ಹೇಳಿದನು. ಆಗ ಗಾಳಿಯು ನಿಂತು ಅಲ್ಲಿ ದೊಡ್ಡ ಶಾಂತತೆ ಉಂಟಾಯಿತು.
- Psalm 44:22–23 ಕೀರ್ತನೆಗಳು 44:22–23ಹೌದು, ನಿನ್ನ ನಿಮಿತ್ತ ದಿನ ವೆಲ್ಲಾ ಕೊಲ್ಲಲ್ಪಡುತ್ತೇವೆ; ಕೊಯ್ಗುರಿಗಳ ಹಾಗೆ ಎಣಿಸಲ್ಪಡುತ್ತೇವೆ. ಓ ಕರ್ತನೇ, ಎಚ್ಚರವಾಗು, ಯಾಕೆ ನಿದ್ರೆ ಮಾಡುತ್ತೀ? ಎದ್ದೇಳು; ಸದಾಕಾಲಕ್ಕೂ ನಮ್ಮನ್ನು ತಳ್ಳಿಬಿಡಬೇಡ.
- 2 Chronicles 14:11 2 ಪೂರ್ವಕಾಲವೃತ್ತಾಂತ 14:11ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.
- 2 Chronicles 20:12 2 ಪೂರ್ವಕಾಲವೃತ್ತಾಂತ 20:12ಓ ನಮ್ಮ ದೇವರೇ, ನೀನು ಅವರಿಗೆ ನ್ಯಾಯತೀರಿಸುವದಿಲ್ಲವೋ? ನಮಗೆ ವಿರೋಧವಾಗಿ ಬರುವ ಈ ಮಹಾಗುಂಪನ್ನು ಎದು ರಿಸಲು ನಮಗೆ ಶಕ್ತಿ ಇಲ್ಲ. ನಾವು ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ ನಮ್ಮ ಕಣ್ಣುಗಳು ನಿನ್ನ ಮೇಲೆ ಅವೆ ಅಂದರು.
- Luke 8:24 ಲೂಕನು 8:24ಆಗ ಅವರು ಆತನ ಬಳಿಗೆ ಬಂದು ಆತನನ್ನು ಎಬ್ಬಿಸಿ--ಬೋಧ ಕನೇ, ಬೋಧಕನೇ, ನಾವು ನಾಶವಾಗುತ್ತೇವೆ ಅಂದರು. ಆಗ ಆತನು ಎದ್ದು ಗಾಳಿಯನ್ನೂ ಏರಿ ಬರುತ್ತಿದ್ದ ನೀರನ್ನೂ ಗದರಿಸಿದನು; ಆಗ ಅವು ನಿಂತು ಹೋಗಿ ಅಲ್ಲಿ ಶಾಂತತೆ ಉಂಟಾಯಿತು.
- Isaiah 51:9–10 ಯೆಶಾಯ 51:9–10ಓ ಕರ್ತನ ತೋಳೇ, ಎಚ್ಚರಗೊಳ್ಳು, ಎಚ್ಚರ ಗೊಳ್ಳು, ಬಲವನ್ನು ಹೊಂದಿಕೋ; ಹಿಂದಿನ ಜನಾಂಗ ಗಳಲ್ಲಿ ಪೂರ್ವಕಾಲದ ದಿವಸಗಳಲ್ಲಿ ಎಚ್ಚರವಿದ್ದಂ ತೆಯೇ ಎಚ್ಚರವಾಗು. ರಹಬನ್ನು ಕಡಿದುಬಿಟ್ಟದ್ದೂ, ಘಟಸರ್ಪವನ್ನು ಗಾಯಪಡಿಸಿದ್ದೂ ನೀನಲ್ಲವೋ? ಸಮುದ್ರವನ್ನೂ ದೊಡ್ಡ ಅಗಾಧದ ನೀರನ್ನು ಬತ್ತಿಸಿ, ವಿಮುಕ್ತರಾದವರು ಹಾದು ಹೋಗುವದಕ್ಕೆ ಸಮು ದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದಂಥವನು ನೀನಲ್ಲವೋ?
- Psalm 10:1 ಕೀರ್ತನೆಗಳು 10:1ಓ ಕರ್ತನೇ, ನೀನು ದೂರದಲ್ಲಿ ನಿಂತು ಕೊಳ್ಳುವದೂ ಕಷ್ಟಕಾಲಗಳಲ್ಲಿ ನಿನ್ನನ್ನು ಮರೆಮಾಡಿಕೊಳ್ಳುವದೂ ಯಾಕೆ?