Matthew · chapter 9 · verse 2
Matthew 9:2 in Kannada
ಇಗೋ, ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಆತನ ಬಳಿಗೆ ತಂದರು; ಮತ್ತು ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು.
Igo, haasigeya mele malagidda obba paarshvavaayu rogiyannu janaru aatana balige tandaru; mattu yesu avara nambikeyannu nodi aa paarshvavaayu rogige--magane, dhairyavaagiru, ninna paapagalu kshamisalpattive andanu.
Matthew 9:2 in English
- King James Version (KJV)
- And, behold, they brought to him a man sick of the palsy, lying on a bed: and Jesus seeing their faith said unto the sick of the palsy; Son, be of good cheer; thy sins be forgiven thee.
- World English Bible (WEB)
- Behold, they brought to him a man who was paralyzed, lying on a bed. Jesus, seeing their faith, said to the paralytic, “Son, cheer up! Your sins are forgiven you.”
- American Standard Version (ASV)
- And behold, they brought to him a man sick of the palsy, lying on a bed: and Jesus seeing their faith said unto the sick of the palsy, Son, be of good cheer; thy sins are forgiven.
- Bible in Basic English (BBE)
- And they took to him a man stretched on a bed who had no power of moving; and Jesus, seeing their faith, said to the man who was ill, Son, take heart; you have forgiveness for your sins.
- Darby Translation (DBY)
- And behold, they brought to him a paralytic, laid upon a bed; and Jesus, seeing their faith, said to the paralytic, Be of good courage, child; thy sins are forgiven.
- Webster's Bible (WBS)
- And behold, they brought to him a man sick with the palsy, lying on a bed: and Jesus, seeing their faith, said to the sick of the palsy, Son, be of good cheer; thy sins are forgiven thee.
- Young's Literal Translation (YLT)
- and lo, they were bringing to him a paralytic, laid upon a couch, and Jesus having seen their faith, said to the paralytic, 'Be of good courage, child, thy sins have been forgiven thee.'
Read in context
- 1ಆಗ ಆತನು ದೋಣಿಯನ್ನು ಹತ್ತಿ ಅಲ್ಲಿಂದ ಹೊರಟು ತನ್ನ ಸ್ವಂತ ಪಟ್ಟಣಕ್ಕೆ ಬಂದನು.
- 2ಇಗೋ, ಹಾಸಿಗೆಯ ಮೇಲೆ ಮಲಗಿದ್ದ ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಆತನ ಬಳಿಗೆ ತಂದರು; ಮತ್ತು ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ಧೈರ್ಯವಾಗಿರು, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು.
- 3ಆಗ ಇಗೋ, ಶಾಸ್ತ್ರಿಗಳಲ್ಲಿ ಕೆಲವರು-- ಈ ಮನುಷ್ಯನು ದೇವದೂಷಣೆ ಮಾಡುತ್ತಾನೆ ಎಂದು ತಮ್ಮತಮ್ಮಲ್ಲಿ ಅಂದುಕೊಂಡರು.
- 4ಯೇಸು ಅವರ ಆಲೋಚನೆಗಳನ್ನು ತಿಳಿದು--ನೀವು ಯಾಕೆ ನಿಮ್ಮ ಹೃದಯಗಳಲ್ಲಿ ಕೆಟ್ಟದ್ದನ್ನು ಯೋಚಿಸುತ್ತೀರಿ?
Cross references
- Mark 2:1–12 ಮಾರ್ಕನು 2:1–12ಕೆಲವು ದಿವಸಗಳಾದ ಮೇಲೆ ಆತನು ತಿರಿಗಿ ಕಪೆರ್ನೌಮಿಗೆ ಬಂದನು; ಆಗ ಆತನು ಮನೆಯಲ್ಲಿದ್ದ ಸುದ್ದಿಯು ಹರಡಿತು. ಕೂಡಲೆ ಅನೇಕರು ಕೂಡಿಬಂದದ್ದರಿಂದ ಅವರನ್ನು ಸೇರಿಸಿಕೊಳ್ಳುವದಕ್ಕೆ ಬಾಗಲಿನ ಬಳಿಯಲ್ಲಾದರೂ ಸ್ಥಳವಿರಲಿಲ್ಲ; ಆತನು ಅವರಿಗೆ ವಾಕ್ಯವನ್ನು ಸಾರು ತ್ತಿದ್ದನು; ಆಗ ಒಬ್ಬ ಪಾರ್ಶ್ವವಾಯು ರೋಗಿಯನ್ನು ನಾಲ್ವರು ಹೊತ್ತುಕೊಂಡು ಆತನ ಬಳಿಗೆ ಬಂದರು. ಜನಸಂದಣಿಯ ನಿಮಿತ್ತ ಅವರು ಆತನ ಹತ್ತಿರಕ್ಕೆ ಬರಲಾರದೆ ಆತನಿದ್ದ ಮನೆಯ ಮೇಲ್ಚಾವಣಿಯನ್ನು ಬಿಚ್ಚಿ ಅದನ್ನು ಮುರಿದು ಪಾರ್ಶ್ವವಾಯು ರೋಗಿಯು ಮಲಗಿದ್ದ ಹಾಸಿಗೆಯನ್ನು ಕೆಳಗೆ ಇಳಿಸಿದರು. ಯೇಸು ಅವರ ನಂಬಿಕೆಯನ್ನು ನೋಡಿ ಆ ಪಾರ್ಶ್ವವಾಯು ರೋಗಿಗೆ--ಮಗನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು. ಆದರೆ ಅಲ್ಲಿ ಕೂತುಕೊಂಡಿದ್ದ ಶಾಸ್ತ್ರಿಗಳಲ್ಲಿ ಕೆಲವರು-- ಈ ಮನುಷ್ಯನು ಯಾಕೆ ಹೀಗೆ ದೇವದೂಷಣೆಗಳನ್ನು ಮಾಡುತ್ತಾನೆ? ದೇವರೊಬ್ಬನೇ ಹೊರತು ಮತ್ತಾರು ಪಾಪಗಳನ್ನು ಕ್ಷಮಿಸಬಲ್ಲರು ಎಂದು ತಮ್ಮ ಹೃದಯ ಗಳಲ್ಲಿ ಅಂದುಕೊಂಡರು. ಹೀಗೆ ಅವರು ತಮ್ಮೊಳಗೆ ಅಂದುಕೊಂಡದ್ದನ್ನು ಯೇಸು ಕೂಡಲೆ ತನ್ನ ಆತ್ಮದಲ್ಲಿ ತಿಳಿದುಕೊಂಡು ಅವರಿಗೆ--ನೀವು ನಿಮ್ಮ ಹೃದಯ ಗಳಲ್ಲಿ ಯಾಕೆ ಇವುಗಳನ್ನು ಆಲೋಚಿಸುತ್ತೀರಿ ಎಂದು ಹೇಳಿ ಪಾರ್ಶ್ವವಾಯು ರೋಗಿಗೆ--ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಅನ್ನುವದೋ? ಯಾವದು ಸುಲಭ? ಆದರೆ ಪಾಪಗಳನ್ನು ಕ್ಷಮಿಸಿಬಿಡುವದಕ್ಕೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಅಧಿಕಾರ ಉಂಟೆಂಬದು ನಿಮಗೆ ತಿಳಿಯಬೇಕು ಎಂದು ಹೇಳಿ (ಪಾರ್ಶ್ವವಾಯು ರೋಗಿಗೆ)-- ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು. ಕೂಡಲೆ ಅವನು ಎದ್ದು ತನ್ನ ಹಾಸಿಗೆಯನ್ನು ತೆಗೆದುಕೊಂಡು ಎಲ್ಲರ ಮುಂದೆ ಹೊರಟುಹೋದನು. ಅದಕ್ಕೆ ಎಲ್ಲರೂ ಬೆರಗಾಗಿ--ನಾವು ಇಂಥದನ್ನು ಎಂದಿಗೂ ನೋಡಲಿಲ್ಲ ಎಂದು ಹೇಳುತ್ತಾ ದೇವರನ್ನು ಮಹಿಮೆಪಡಿಸಿದರು.
- Luke 5:18–26 ಲೂಕನು 5:18–26ಆಗ ಇಗೋ, ಪಾರ್ಶ್ವವಾಯು ರೋಗವಿದ್ದ ಒಬ್ಬ ಮನುಷ್ಯನನ್ನು ಕೆಲವರು ಹಾಸಿಗೆಯಲ್ಲಿ ಹೊತ್ತು ಕೊಂಡು ಬಂದು ಅವನನ್ನು ಒಳಗೆ ಆತನ ಎದುರಿಗೆ ತರುವ ವಿಧಾನವನ್ನು ಹುಡುಕಿದರು. ಆದರೆ ಅಲ್ಲಿದ್ದ ಜನಸಮೂಹದವರ ನಿಮಿತ್ತ ಅವರು ಅವನನ್ನು ಒಳಗೆ ತರುವ ಯಾವ ವಿಧಾನವನ್ನೂ ಕಾಣದೆ ಮನೆಯಮೇಲೆ ಹೋಗಿ ಹಂಚುಗಳನ್ನು ತೆಗೆದು ಅವನನ್ನು ಹಾಸಿಗೆಯೊಂದಿಗೆ ನಡುವೆ ಯೇಸುವಿನ ಮುಂದೆ ಇಳಿಸಿದರು. ಆಗ ಆತನು ಅವರ ನಂಬಿಕೆಯನ್ನು ನೋಡಿ ಅವನಿಗೆ-- ಮನುಷ್ಯನೇ, ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಎಂದು ಹೇಳಿದನು. ಆಗ ಶಾಸ್ತ್ರಿಗಳೂ ಫರಿ ಸಾಯರೂ--ದೇವದೂಷಣೆಗಳನ್ನು ಮಾಡುವದಕ್ಕೆ ಇವನು ಯಾರು? ದೇವರೊಬ್ಬನೇ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು ಎಂದು ತಮ್ಮಲ್ಲಿ ಮಾತನಾಡಿಕೊಂಡರು. ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು ಪ್ರತ್ಯುತ್ತರವಾಗಿ ಅವರಿಗೆ--ನೀವು ನಿಮ್ಮ ಹೃದಯಗಳಲ್ಲಿ ಅಂದು ಕೊಳ್ಳುತ್ತಿರುವದೇನು? ಯಾವದು ಸುಲಭ-- ನಿನ್ನ ಪಾಪಗಳು ನಿನಗೆ ಕ್ಷಮಿಸಲ್ಪಟ್ಟಿವೆ ಅನ್ನುವದೋ? ಇಲ್ಲವೆ--ಎದ್ದು ನಡೆ ಅನ್ನುವದೋ? ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸುವದಕ್ಕೆ ಭೂಮಿಯ ಮೇಲೆ ಅಧಿಕಾರವುಂಟೆಂದು ನೀವು ತಿಳಿಯಬೇಕು (ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ)--ಎದ್ದು ನಿನ್ನ ಹಾಸಿಗೆಯನ್ನು ತಕ್ಕೊಂಡು ನಿನ್ನ ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ ಅಂದನು. ಕೂಡಲೆ ಅವನು ಅವರ ಮುಂದೆ ಎದ್ದು ತಾನು ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು ದೇವರನ್ನು ಕೊಂಡಾಡುತ್ತಾ ತನ್ನ ಸ್ವಂತ ಮನೆಗೆ ಹೊರಟುಹೋದನು. ಅಲ್ಲಿದ್ದವ ರೆಲ್ಲರೂ ವಿಸ್ಮಯಗೊಂಡು ದೇವರನ್ನು ಮಹಿಮೆ ಪಡಿಸಿದರು. ಮತ್ತು ಅವರು ಭಯದಿಂದ ಕೂಡಿದ ವರಾಗಿ--ನಾವು ಈ ದಿನ ಅಪೂರ್ವವಾದವುಗಳನ್ನು ನೋಡಿದ್ದೇವೆ ಅಂದರು.
- Jeremiah 31:33–34 ಯೆರೆಮೀಯ 31:33–34ಆದರೆ ನಾನು ಇಸ್ರಾಯೇಲಿನ ಮನೆತನದವರ ಸಂಗಡ ಮಾಡುವ ಒಡಂಬಡಿಕೆ ಇದೇ. ಆ ದಿನಗಳಾದ ಮೇಲೆ ನಾನು ನನ್ನ ನ್ಯಾಯಪ್ರಮಾಣವನ್ನು ಅವರೊಳಗೆ ಇಟ್ಟು ಅವರ ಹೃದಯದಲ್ಲಿ ಅದನ್ನು ಬರೆಯುವೆನು; ನಾನು ಅವರಿಗೆ ದೇವರಾಗಿರುವೆನು ಅವರು ನನಗೆ ಪ್ರಜೆ ಯಾಗಿರುವರು ಎಂದು ಕರ್ತನು ಅನ್ನುತ್ತಾನೆ. ನೆರೆ ಯವನಿಗೆ ನೆರೆಯವನೂ ಸಹೋದರನಿಗೆ ಸಹೋ ದರನೂ-- ಕರ್ತನನ್ನು ತಿಳಿಯಿರಿ ಎಂದು ಇನ್ನು ಮೇಲೆ ಬೋಧಿಸುವದಿಲ್ಲ; ಅವರೆಲ್ಲರೂ ಚಿಕ್ಕವನು ಮೊದಲು ಗೊಂಡು ದೊಡ್ಡವನ ವರೆಗೂ ನನ್ನನ್ನು ತಿಳಿಯುವ ರೆಂದು ಕರ್ತನು ಅನ್ನುತ್ತಾನೆ; ಅವರ ಅಕ್ರಮವನ್ನು ಮನ್ನಿಸುವೆನು; ಪಾಪಗಳನ್ನು ಇನ್ನು ಮೇಲೆ ಜ್ಞಾಪಕ ಮಾಡುವದಿಲ್ಲ.
- Matthew 9:22 ಮತ್ತಾಯನು 9:22ಆದರೆ ಯೇಸು ಹಿಂತಿರುಗಿ ಆಕೆಯನ್ನು ನೋಡಿ--ಮಗಳೇ, ಸಮಾಧಾನದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ ಅಂದನು. ಅದೇ ಗಳಿಗೆಯಲ್ಲಿ ಆ ಸ್ತ್ರೀಯು ಸ್ವಸ್ಥಳಾದಳು.
- Psalm 32:1–2 ಕೀರ್ತನೆಗಳು 32:1–2ಯಾವನ ದ್ರೋಹವು ಕ್ಷಮಿಸಲ್ಪಟ್ಟದೆಯೋ, ಯಾವನ ಪಾಪವು ಮುಚ್ಚಲ್ಪಟ್ಟಿದೆಯೋ, ಅವನೇ ಧನ್ಯನು. ಕರ್ತನು ಯಾವನಿಗೆ ಅಪರಾಧ ವನ್ನು ಎಣಿಸುವದಿಲ್ಲವೋ, ಯಾವನ ಹೃದಯದಲ್ಲಿ ವಂಚನೆ ಇರುವದಿಲ್ಲವೋ, ಆ ಮನುಷ್ಯ ಧನ್ಯನು.
- Luke 7:47–50 ಲೂಕನು 7:47–50ಆದದರಿಂದ ನಾನು ಹೇಳುವದೇ ನಂದರೆ--ಬಹಳವಾಗಿರುವ ಅವಳ ಪಾಪಗಳು ಕ್ಷಮಿಸ ಲ್ಪಟ್ಟಿವೆ. ಯಾಕಂದರೆ ಅವಳು ಬಹಳವಾಗಿ ಪ್ರೀತಿಸಿ ದಳು; ಆದರೆ ಯಾವನಿಗೆ ಸ್ವಲ್ಪವಾಗಿ ಕ್ಷಮಿಸಲ್ಪಡು ವದೋ ಅವನು ಸ್ವಲ್ಪವಾಗಿ ಪ್ರೀತಿಸುವನು. ಆತನು ಆಕೆಗೆ--ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು. ಆತನ ಸಂಗಡ ಊಟಕ್ಕೆ ಕೂತವರು ತಮ್ಮೊಳಗೆ--ಪಾಪಗಳನ್ನು ಸಹ ಕ್ಷಮಿಸುವದಕ್ಕೆ ಈತನು ಯಾರು ಎಂದು ತಮ್ಮಲ್ಲಿ ಅಂದುಕೊಳ್ಳಲಾರಂಭಿಸಿದರು.ಆಗ ಆತನು ಆ ಸ್ತ್ರೀಗೆ--ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿಯದೆ, ಸಮಾಧಾನದಿಂದ ಹೋಗು ಅಂದನು. ಆಗ ಆತನು ಆ ಸ್ತ್ರೀಗೆ--ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿಯದೆ, ಸಮಾಧಾನದಿಂದ ಹೋಗು ಅಂದನು.
- Colossians 1:12–14 ಕೊಲೊಸ್ಸೆಯವರಿಗೆ 1:12–14ಬೆಳಕಿ ನಲ್ಲಿರುವ ಪರಿಶುದ್ದರ ಬಾಧ್ಯತೆಯಲ್ಲಿ ಪಾಲುಗಾರ ರಾಗುವದಕ್ಕೆ ನಮ್ಮನ್ನು ಯೋಗ್ಯರನ್ನಾಗಿ ಮಾಡಿದ ತಂದೆಗೆ ಕೃತಜ್ಞತಾಸ್ತುತಿ ಮಾಡುವವರಾಗಿರಬೇಕೆಂತಲೂ ನಾನು ಆಶಿಸುತ್ತೇನೆ. ಆತನು (ದೇವರು) ನಮ್ಮನ್ನು ಅಂಧಕಾರದ ಶಕ್ತಿಯಿಂದ ಬಿಡಿಸಿ ತನ್ನ ಪ್ರಿಯಕುಮಾರನ ರಾಜ್ಯ ದೊಳಗೆ ಸೇರಿಸಿದನು. ಆತನಲ್ಲಿ (ಆ ಕುಮಾರನಲ್ಲಿ) ಆತನ ರಕ್ತದ ಮೂಲಕ ನಮಗೆ ವಿಮೋಚನೆಯು ಅಂದರೆ ಪಾಪಪರಿಹಾರವು ಉಂಟಾಯಿತು.
- James 2:18 ಯಾಕೋಬನು 2:18ಹೌದು, ಒಬ್ಬ ಮನುಷ್ಯನು--ನಿನಗೆ ನಂಬಿಕೆಯುಂಟು, ನನಗೆ ಕ್ರಿಯೆಗಳುಂಟು; ನೀನು ಕ್ರಿಯೆಗಳಿಲ್ಲದೆ ನಿನ್ನ ನಂಬಿಕೆ ಯನ್ನು ನನಗೆ ತೋರಿಸು; ನಾನು ನನ್ನ ಕ್ರಿಯೆಗಳ ಮುಖಾಂತರ ನನ್ನ ನಂಬಿಕೆಯನ್ನು ನಿನಗೆ ತೋರಿಸುತ್ತೇನೆ ಎಂದು ಹೇಳಬಹುದು.
- Romans 4:6–8 ರೋಮಾಪುರದವರಿಗೆ 4:6–8ದೇವರು ಯಾವನನ್ನು ಕ್ರಿಯೆ ಗಳಿಲ್ಲದೆ ನೀತಿವಂತನೆಂದು ಎಣಿಸುತ್ತಾನೋ ಅವನು ಧನ್ಯನೆಂದು ದಾವೀದನು ಸಹ ಹೇಳುತ್ತಾನೆ. ಹೇಗಂ ದರೆ--ಯಾರ ಅಪರಾಧಗಳು ಕ್ಷಮಿಸಲ್ಪಟ್ಟಿವೆಯೋ ಯಾರ ಪಾಪಗಳು ಮುಚ್ಚಿವೆಯೋ ಅವರೇ ಧನ್ಯರು; ಕರ್ತನು ಯಾವನ ಪಾಪವನ್ನು ಲೆಕ್ಕಕ್ಕೆ ತರುವ ದಿಲ್ಲವೋ ಆ ಮನುಷ್ಯನೇ ಧನ್ಯನು ಎಂಬದು.
- Acts 19:12 ಅಪೊಸ್ತಲರ ಕೃತ್ಯಗಳು 19:12ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು.
- Matthew 8:16 ಮತ್ತಾಯನು 8:16ಸಾಯಂಕಾಲವಾದಾಗ ದೆವ್ವಗಳು ಹಿಡಿದಿದ್ದ ಬಹಳ ಜನರನ್ನು ಅವರು ಆತನ ಬಳಿಗೆ ತಂದರು; ಮತ್ತು ಆತನು ತನ್ನ ಮಾತಿನಿಂದ ದೆವ್ವಗಳನ್ನು ಬಿಡಿಸಿ ದ್ದಲ್ಲದೆ ಅಸ್ವಸ್ಥವಾಗಿದ್ದವರೆಲ್ಲರನ್ನೂ ಸ್ವಸ್ಥ ಮಾಡಿದನು.
- Matthew 4:24 ಮತ್ತಾಯನು 4:24ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು. ಆತನು ಅವರನ್ನು ಸ್ವಸ್ಥಪಡಿಸಿದನು.ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು.
Original words (Greek)
- And · G2532καί kaí
- behold · G2400ἰδού idoú
- brought · G4374προσφέρω prosphérō
- him · G846αὐτός autós
- palsy · G3885παραλυτικός paralytikós
- lying · G906βάλλω bállō
- on · G1909ἐπί epí
- bed · G2825κλίνη klínē
- and · G2532καί kaí
- Jesus · G2424Ἰησοῦς Iēsoûs
- seeing · G1492εἴδω eídō
- their · G846αὐτός autós
- faith · G4102πίστις pístis
- said · G2036ἔπω épō
- palsy · G3885παραλυτικός paralytikós