Matthew · chapter 9 · verse 21
Matthew 9:21 in Kannada
ಯಾಕಂದರೆ--ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಆಕೆಯು ತನ್ನೊಳಗೆ ಅಂದುಕೊಂಡಿದ್ದಳು.
Yaakandare--naanu aatana udupannu muttidare saaku, gunavaaguvenu endu aakeyu tannolage andukondiddalu.
Matthew 9:21 in English
- King James Version (KJV)
- For she said within herself, If I may but touch his garment, I shall be whole.
- World English Bible (WEB)
- for she said within herself, “If I just touch his garment, I will be made well.”
- American Standard Version (ASV)
- for she said within herself, If I do but touch his garment, I shall be made whole.
- Bible in Basic English (BBE)
- Because, she said to herself, if I may but put my hand on his robe, I will be made well.
- Darby Translation (DBY)
- for she said within herself, If I should only touch his garment I shall be healed.
- Webster's Bible (WBS)
- For she said within herself, If I may but touch his garment, I shall be whole.
- Young's Literal Translation (YLT)
- for she said within herself, 'If only I may touch his garment, I shall be saved.'
Read in context
- 19ಆಗ ಯೇಸು ಎದ್ದು ತನ್ನ ಶಿಷ್ಯರೊಂದಿಗೆ ಅವನ ಹಿಂದೆ ಹೋದನು.
- 20ಆಗ ಇಗೋ, ಹನ್ನೆರಡು ವರುಷಗಳಿಂದಲೂ ರಕ್ತಸ್ರಾವ ರೋಗವಿದ್ದ ಒಬ್ಬ ಸ್ತ್ರೀಯು ಹಿಂದೆ ಬಂದು ಆತನ ಉಡುಪಿನ ಅಂಚನ್ನು ಮುಟ್ಟಿದಳು.
- 21ಯಾಕಂದರೆ--ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಆಕೆಯು ತನ್ನೊಳಗೆ ಅಂದುಕೊಂಡಿದ್ದಳು.
- 22ಆದರೆ ಯೇಸು ಹಿಂತಿರುಗಿ ಆಕೆಯನ್ನು ನೋಡಿ--ಮಗಳೇ, ಸಮಾಧಾನದಿಂದಿರು; ನಿನ್ನ ನಂಬಿಕೆಯು ನಿನ್ನನ್ನು ಸ್ವಸ್ಥ ಮಾಡಿಯದೆ ಅಂದನು. ಅದೇ ಗಳಿಗೆಯಲ್ಲಿ ಆ ಸ್ತ್ರೀಯು ಸ್ವಸ್ಥಳಾದಳು.
- 23ತರುವಾಯ ಯೇಸು ಆ ಅಧಿಕಾರಿಯ ಮನೆ ಯೊಳಗೆ ಬಂದು ಕೊಳಲೂದುವವರನ್ನೂ ಗೊಂದಲ ಮಾಡುವ ಜನರನ್ನೂ ನೋಡಿ
Cross references
- Mark 5:26–33 ಮಾರ್ಕನು 5:26–33ಅನೇಕ ವೈದ್ಯರಿಂದ ಬಹು ಕಷ್ಟಗಳನ್ನು ಅನುಭವಿಸಿ ತನಗಿದ್ದದ್ದನ್ನೆಲ್ಲಾ ವೆಚ್ಚ ಮಾಡಿದ್ದಾಗ್ಯೂ ರೋಗವು ಹೆಚ್ಚಾಯಿತೇ ಹೊರತು ಗುಣವಾಗಲಿಲ್ಲ. ಆಗ ಆಕೆಯು ಯೇಸುವಿನ ವಿಷಯ ಕೇಳಿ ಜನರ ಗುಂಪಿನ ಹಿಂದೆ ಬಂದು ಆತನ ಉಡುಪನ್ನು ಮುಟ್ಟಿ ದಳು. ಯಾಕಂದರೆ ಆಕೆಯು--ನಾನು ಆತನ ಉಡುಪುಗಳನ್ನು ಮುಟ್ಟಿದರೆ ಸಾಕು, ಗುಣವಾಗುವೆನು ಎಂದು ಅಂದುಕೊಂಡಿದ್ದಳು. ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು. ತಕ್ಷಣವೇ ಯೇಸು ತನ್ನಿಂದ ಶಕ್ತಿಯು ಹೊರಟಿತೆಂದು ತನ್ನಲ್ಲಿ ತಿಳುಕೊಂಡು ಗುಂಪಿ ನಲ್ಲಿ ಹಿಂತಿರುಗಿ--ನನ್ನ ಉಡುಪುಗಳನ್ನು ಮುಟ್ಟಿದವರು ಯಾರು ಎಂದು ಕೇಳಲು ಆತನ ಶಿಷ್ಯರು ಆತನಿಗೆ --ಜನಸಮೂಹವು ನಿನ್ನನ್ನು ನೂಕುವದನ್ನು ನೋಡಿ ಯೂ--ನನ್ನನ್ನು ಯಾರು ಮುಟ್ಟಿದರೆಂದು ನೀನು ಹೇಳುತ್ತೀಯಲ್ಲಾ ಅಂದರು. ಆದರೆ ಆತನು ಇದನ್ನು ಮಾಡಿದವಳನ್ನು ಕಾಣಬೇಕೆಂದು ಸುತ್ತಲೂ ನೋಡಿದನು. ಆದರೆ ಆ ಸ್ತ್ರೀಯು ತನ್ನಲ್ಲಿ ಆದದ್ದನ್ನು ತಿಳುಕೊಂಡು ಭಯದಿಂದ ನಡುಗುತ್ತಾ ಬಂದು ಆತನ ಮುಂದೆ ಅಡ್ಡಬಿದ್ದು ಸತ್ಯವನ್ನೆಲ್ಲಾ ಆತನಿಗೆ ತಿಳಿಸಿದಳು.
- Luke 8:45–47 ಲೂಕನು 8:45–47ಆಗ ಯೇಸು--ನನ್ನನ್ನು ಮುಟ್ಟಿದವರು ಯಾರು ಅಂದನು. ಎಲ್ಲರೂ ಅಲ್ಲಗಳೆದಾಗ ಪೇತ್ರನು ಮತ್ತು ಅವನ ಕೂಡ ಇದ್ದವರು ಆತನಿಗೆ--ಬೋಧಕನೇ, ಸಮೂಹವು ನಿನ್ನನ್ನು ನೂಕುತ್ತಾ ನಿನ್ನ ಮೇಲೆ ಬೀಳುತ್ತಿರಲಾಗಿ ನೀನು--ನನ್ನನ್ನು ಯಾರು ಮುಟ್ಟಿದರು ಎಂದು ಕೇಳುತ್ತೀಯಲ್ಲಾ ಅಂದರು. ಆದರೆ ಯೇಸು--ಯಾರೋ ಒಬ್ಬರು ನನ್ನನ್ನು ಮುಟ್ಟಿದ್ದಾರೆ; ಯಾಕಂದರೆ ನನ್ನಿಂದ ಶಕ್ತಿಯು ಹೊರಟಿತೆಂದು ನನಗೆ ತಿಳಿಯಿತು ಅಂದನು. ಆ ಸ್ತ್ರೀಯು ತಾನು ಮರೆಯಾಗಿಲ್ಲವೆಂದು ತಿಳಿದು ನಡುಗುತ್ತಾ ಬಂದು ಆತನ ಮುಂದೆ ಬಿದ್ದು ಯಾವ ಕಾರಣದಿಂದ ಆಕೆಯು ಆತನನ್ನು ಮುಟ್ಟಿದ ಳೆಂದೂ ಹೇಗೆ ತಾನು ಕೂಡಲೆ ಸ್ವಸ್ಥಳಾದಳೆಂದೂ ಎಲ್ಲಾ ಜನರ ಮುಂದೆ ಆತನಿಗೆ ತಿಳಿಯಪಡಿಸಿದಳು.
- Acts 19:12 ಅಪೊಸ್ತಲರ ಕೃತ್ಯಗಳು 19:12ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ ಉಡಿವಸ್ತ್ರಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರವರ ರೋಗಗಳು ವಾಸಿಯಾದವು, ದೆವ್ವಗಳೂ ಬಿಟ್ಟುಹೋದವು.