Micah · chapter 1 · verse 16
Micah 1:16 in Kannada
ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
Ninna muddu makkaligoskara talebolisikondu kshaura maadisiko; haddinante ninna bolutanavannu agala maadiko; avaru ninnannu bittu sereyaagi hogiddaare.
Micah 1:16 in English
- King James Version (KJV)
- Make thee bald, and poll thee for thy delicate children; enlarge thy baldness as the eagle; for they are gone into captivity from thee.
- World English Bible (WEB)
- Shave your heads, and cut off your hair for the children of your delight. Enlarge your baldness like the vulture, for they have gone into captivity from you!
- American Standard Version (ASV)
- Make thee bald, and cut off thy hair for the children of thy delight: enlarge thy baldness as the eagle; for they are gone into captivity from thee.
- Bible in Basic English (BBE)
- Let your head be uncovered and your hair cut off in sorrow for the children of your delight: let the hair be pulled from your head like an eagle's; for they have been taken away from you as prisoners.
- Darby Translation (DBY)
- Make thee bald, and poll thee for the children of thy delights; enlarge thy baldness as the eagle, for they are gone into captivity from thee.
- Webster's Bible (WBS)
- Make thee bald, and poll thee for thy delicate children; enlarge thy baldness as the eagle; for they are gone into captivity from thee.
- Young's Literal Translation (YLT)
- Make bald and shave, for thy delightful sons, Enlarge thy baldness as an eagle, For they have removed from thee!
Read in context
- 14ಹೀಗಿರುವದರಿಂದ ಮೋರೆಷತ್ ಗತ್ ಊರಿಗೆ ದಾನಗಳನ್ನು ಕೊಡುವಿ, ಅಕ್ಜೀಬಿನ ಮನೆತನಗಳು ಇಸ್ರಾಯೇಲಿನ ಅರಸರಿಗೆ ಸುಳ್ಳಾಗಿರುವವು.
- 15ಮಾರೇ ಷದ ನಿವಾಸಿಯೇ, ಇನ್ನೂ ಬಾಧ್ಯನನ್ನು ನಿನ್ನ ಬಳಿಗೆ ತರುವೆನು; ಅವನು ಇಸ್ರಾಯೇಲಿನ ಮಹಿಮೆಯಾದ ಅದುಲ್ಲಾಮಿನ ಮಟ್ಟಿಗೂ ಬರುವನು.ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
- 16ನಿನ್ನ ಮುದ್ದು ಮಕ್ಕಳಿಗೋಸ್ಕರ ತಲೆಬೋಳಿಸಿಕೊಂಡು ಕ್ಷೌರ ಮಾಡಿಸಿಕೊ; ಹದ್ದಿನಂತೆ ನಿನ್ನ ಬೋಳುತನವನ್ನು ಅಗಲ ಮಾಡಿಕೊ; ಅವರು ನಿನ್ನನ್ನು ಬಿಟ್ಟು ಸೆರೆಯಾಗಿ ಹೋಗಿದ್ದಾರೆ.
Cross references
- Isaiah 22:12 ಯೆಶಾಯ 22:12ಆ ದಿವಸದಲ್ಲಿ ಸೈನ್ಯಗಳ ದೇವರಾದ ಕರ್ತನು --ಅಳಬೇಕೆಂದು, ದುಃಖಿಸಬೇಕೆಂದು, ತಲೆಬೋಳಿಸಿ ಕೊಳ್ಳಬೇಕೆಂದು, ಗೋಣೀತಟ್ಟನ್ನು ಸುತ್ತಿಕೊಳ್ಳಬೇ ಕೆಂದು ಆತನು ಕರೆದನು.
- Job 1:20 ಯೋಬನು 1:20ಆಗ ಯೋಬನು ಎದ್ದು ತನ್ನ ನಿಲುವಂಗಿಯನ್ನು ಹರಿದು ತನ್ನ ತಲೆಬೋಳಿಸಿಕೊಂಡು ನೆಲಕ್ಕೆ ಬಿದ್ದು ಆರಾಧಿಸಿ
- Jeremiah 7:29 ಯೆರೆಮೀಯ 7:29ಯೆರೂಸಲೇಮೇ, ನಿನ್ನ ಕೂದಲನ್ನು ಕತ್ತರಿಸಿ ಬಿಸಾಡಿಬಿಡು; ಉನ್ನತ ಸ್ಥಳಗಳಲ್ಲಿ ಗೋಳಾಟವನ್ನು ಎತ್ತು; ಕರ್ತನು ತನ್ನ ಉಗ್ರದ ಸಂತತಿಯನ್ನು ನಿರಾಕರಿಸಿ ತಳ್ಳಿ ಬಿಟ್ಟಿದ್ದಾನೆ;
- Amos 8:10 ಆಮೋಸ 8:10ನಿಮ್ಮ ಹಬ್ಬಗಳನ್ನು ದುಃಖಕ್ಕೂ ನಿಮ್ಮ ಹಾಡುಗಳನ್ನೆಲ್ಲಾ ಗೋಳಾಟಕ್ಕೂ ಬದಲಾಯಿಸುವೆನು; ಎಲ್ಲರೂ ಸೊಂಟಗಳಿಗೆ ಗೋಣೀತಟ್ಟನ್ನು ಕಟ್ಟಿಕೊಂಡು ತಲೆಗಳನ್ನು ಬೋಳಿಸಿಕೊಳ್ಳುವಂತೆ ಮಾಡುವೆನು; ಅದನ್ನು ಒಬ್ಬನೇ ಮಗನಿಗಾಗಿ ದುಃಖಿಸುವಂತೆಯೂ ಅದರ ಅಂತ್ಯವು ಕಹಿಯಾದ ದಿನವಾಗುವಂತೆಯೂ ಮಾಡುವೆನು.
- Jeremiah 16:6 ಯೆರೆಮೀಯ 16:6ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು; ಅವರು ಹೂಣಿಡಲ್ಪಡುವದಿಲ್ಲ, ಅವರಿ ಗೋಸ್ಕರ ಯಾರೂ ಗೋಳಾಡುವದಿಲ್ಲ; ಅವರಿ ಗೋಸ್ಕರ ತಮ್ಮನ್ನು ಕೊಯ್ದು ಕೊಳ್ಳುವದಿಲ್ಲ, ಬೋಳಿಸಿ ಕೊಳ್ಳುವದೂ ಇಲ್ಲ.
- Isaiah 39:6–7 ಯೆಶಾಯ 39:6–7ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನ ವರೆಗೆ ನಿನ್ನ ಮನೆಯಲ್ಲಿ ಸಂಗ್ರಹವಾದ ದ್ದೆಲ್ಲವೂ ಬಾಬೆಲಿಗೆ ಒಯ್ಯಲ್ಪಡುವ ದಿವಸವು ಬರು ವದು. ಇಲ್ಲೇನೂ ಉಳಿಯುವದಿಲ್ಲ. ನಿನ್ನಿಂದ ಹುಟ್ಟುವಂಥ ನೀನು ಪಡೆದ ನಿನ್ನ ಮಕ್ಕಳನ್ನು ತೆಗೆದು ಕೊಂಡು ಹೋಗುವರು; ಬಾಬೆಲಿನ ಅರಸನ ಅರಮನೆ ಯಲ್ಲಿ ಅವರು ಕಂಚುಕಿಗಳಾಗಿರುವರು ಎಂದು ಕರ್ತನು ಹೇಳುತ್ತಾನೆ ಅಂದನು.ಆಗ ಹಿಜ್ಕೀಯನು--ಹೇಗೂ ನನ್ನ (ದಿನಗಳಲ್ಲಿ) ಜೀವಮಾನ ದಲ್ಲಿ ಸಮಾಧಾನವು ಸತ್ಯವು ಇರುವವು ಎಂದು ಅಂದುಕೊಂಡು ಯೆಶಾಯ ನಿಗೆ--ನೀನು ಹೇಳಿದ ಕರ್ತನ ವಾಕ್ಯವು ಒಳ್ಳೇದೆ ಅಂದನು.
- Jeremiah 6:26 ಯೆರೆಮೀಯ 6:26ನನ್ನ ಜನರ ಕುಮಾರಿಯೇ, ಗೋಣಿತಟ್ಟನ್ನು ಕಟ್ಟಿಕೋ, ಬೂದಿಯಲ್ಲಿ ಹೊರಳಾಡು; ಒಬ್ಬನೇ ಮಗನಿಗೋಸ್ಕರ ಮಾಡುವ ದುಃಖದ ಪ್ರಕಾರ ಬಹುಕಠಿಣವಾದ ಗೋಳಾಟವನ್ನು ಮಾಡು; ಸೂರೆ ಮಾಡುವವನು ಫಕ್ಕನೆ ನಮ್ಮ ಮೇಲೆ ಬರುವನು.
- Lamentations 4:5–8 ಪ್ರಲಾಪಗಳು 4:5–8ರುಚಿ ಯಾದವುಗಳನ್ನು ತಿಂದವರು ಬೀದಿಗಳಲ್ಲಿ ಹಾಳಾಗಿ ದ್ದಾರೆ; ಸಕಲಾತಿಗಳಲ್ಲಿ ಬೆಳೆಸಲ್ಪಟ್ಟವರು ತಿಪ್ಪೆಗಳನ್ನು ಅಪ್ಪಿಕೊಳ್ಳುತ್ತಾರೆ. ನನ್ನ ಜನರ ಮಗಳ ಅಕ್ರಮದ ದಂಡನೆಯು ಸೊದೋಮಿನ ಪಾಪದ ದಂಡನೆಗಿಂತ ದೊಡ್ಡದು; ಅದು ಕ್ಷಣಮಾತ್ರದಲ್ಲಿ ಕೆಡವಿ ಹಾಕಲ್ಪಟ್ಟಿತು! ಅವಳನ್ನು ಯಾವ ಕೈಗಳೂ ತಡೆಯಲಿಲ್ಲ. ಅವಳ ನಜರೀಯರು ಹಿಮಕ್ಕಿಂತಲೂ ಸ್ವಚ್ಛವಾಗಿದ್ದರು, ಹಾಲಿಗಿಂತಲೂ ಬೆಳ್ಳಗಿದ್ದರು, ಅವರು ಮೈ ಕಟ್ಟಿನಲ್ಲಿ ಹವಳಕ್ಕಿಂತಲೂ ಕೆಂಪಾಗಿದ್ದರು; ಅವರ ಹೊಳಪು ಇಂದ್ರನೀಲಮಣಿಯ ಹಾಗಿತ್ತು. ಈಗ ಅವರ ರೂಪವು ಕಲ್ಲಿದ್ದಲಿಗಿಂತ ಕಪ್ಪಾಗಿದೆ, ಬೀದಿಗಳಲ್ಲಿ ಅವರು ಯಾರೆಂಬದು ತಿಳಿಯಲಿಲ್ಲ; ಅವರ ಚರ್ಮವು ಅವರ ಎಲುಬುಗಳಿಗೆ ಹತ್ತಿಕೊಂಡಿದೆ, ಅದು ಒಣಗಿ ಕಡ್ಡಿಯ ಹಾಗೆ ಆಗಿದೆ.
- 2 Kings 17:6 2 ಅರಸುಗಳು 17:6ಹೋಶೇ ಯನ ಒಂಭತ್ತನೇ ವರುಷದಲ್ಲಿ ಅಶ್ಶೂರಿನ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು ಇಸ್ರಾಯೇಲನ್ನು ಅಶ್ಶೂರಿಗೆ ಸೆರೆಯಾಗಿ ಒಯ್ದು ಗೋಜಾನು ನದಿಯ ಬಳಿಯಲ್ಲಿರುವ ಹಲಹುನಲ್ಲಿಯೂ ಹಾಬೋರಿನ ಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.
- Isaiah 15:2 ಯೆಶಾಯ 15:2ಬಯಿತ್ ಮತ್ತು ದೀಬೋನಿನವನು ಎತ್ತರವಾದ ಸ್ಥಳಗಳಿಗೆ ಅಳುವದಕ್ಕಾಗಿ ಹೋಗಿದ್ದಾನೆ; ನೆಬೋವಿಗೋಸ್ಕರವೂ ಮೇದೆಬಕ್ಕೋಸ್ಕರವೂ ಮೋವಾಬು ಗೋಳಾಡುತ್ತದೆ. ಅವರೆಲ್ಲರ ತಲೆಗಳೆಲ್ಲಾ ಬೋಳಾಗಿರುವವು, ಪ್ರತಿ ಯೊಬ್ಬರ ಗಡ್ಡವು ಕತ್ತರಿಸಿಹಾಕಲ್ಪಡುವದು.
- Isaiah 3:16–26 ಯೆಶಾಯ 3:16–26ಇದಲ್ಲದೆ ಕರ್ತನು ಇಂತೆನ್ನುತ್ತಾನೆ --ಚೀಯೋನ್ ಕುಮಾರ್ತೆಯರು ಅಹಂಕಾರಿಗಳಾಗಿದ್ದು ಕತ್ತು ತೂಗುತ್ತಾ ಕಣ್ಣುಗಳನ್ನು ತಿರುಗಿಸುತ್ತಾ ನಾಜೂಕಿ ನಿಂದ ಹೆಜ್ಜೆಇಡುತ್ತಾ ಕಾಲುಗೆಜ್ಜೆ ಜಣಜಣಿಸುತ್ತಾ ನಡೆ ಯುವವರಾಗಿರುವದರಿಂದ, ಚೀಯೋನ್ ಕುಮಾ ರ್ತೆಯರ ತಲೆಯ ಮೇಲ್ಭಾಗವನ್ನು ಕಜ್ಜಿಯಿಂದ ಕರ್ತನು ಹೊಡೆಯುವನು, ಅವರ ಗುಪ್ತಾಂಗಗಳನ್ನು ಬೈಲುಪಡಿಸುವನು. ಆ ದಿನದಲ್ಲಿ ಕರ್ತನು ಅವರ ಅಂದುಗೆ, ತುರುಬುಬಲೆ, ಅರ್ಧಚಂದ್ರ, ಸರ, ಬಳೆ, ಮುಂಡಾಸ, ಟೊಪ್ಪಿಗೆ, ಕಾಲಸರಪಣಿ, ಶಿರೋ ವೇಷ್ಟನ, ಗಂಧದ ಡಬ್ಬಿ, ಓಲೆ, ಉಂಗುರ, ಮೂಗುತಿ, ಬದಲಾಯಿಸತಕ್ಕ ಬಟ್ಟೆ, ಶಾಲು, ತಲೆಕೌದಿ, ಅಲಂ ಕಾರದ ಪಿನ್ನುಗಳು, ಕೈಗನ್ನಡಿ, ನಾರು ಮಡಿ, ಮೇಲ್ಹೊ ದಿಕೆ ಮುಸುಕು ಈ ಎಲ್ಲಾ ಭೂಷಣಗಳನ್ನು ತೆಗೆದು ಹಾಕುವನು. ಆಗ ಸುವಾಸನೆಯ ಬದಲಾಗಿ ದುರ್ವಾಸನೆ, ಡಾಬಿಗೆ ಬದಲಾಗಿ ಹಗ್ಗ; ಜಡೆಯ ಬದಲಾಗಿ ಬೋಳುತಲೆ; ನಡುವಿನ ಶಲ್ಯಕ್ಕೆ ಪ್ರತಿಯಾಗಿ ಗೋಣೀತಟ್ಟು; ಸೌಂದರ್ಯಕ್ಕೆ ಬದಲಾಗಿ ಬರೆ, ಇವು ಆಗುವವು; ನಿನ್ನ ಗಂಡಸರು ಕತ್ತಿಯಿಂದಲೂ ನಿನ್ನ ಶೂರರು ಯುದ್ಧದಲ್ಲಿಯೂ ಬೀಳುವರು.ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು. ಅವರ ಬಾಗಲುಗಳಲ್ಲಿ ಪ್ರಲಾಪವು ದುಃಖವು ತುಂಬಿರು ವದು; ಅವಳು ಹಾಳಾಗಿ ನೆಲದ ಮೇಲೆ ಕುಳಿತು ಕೊಳ್ಳುವಳು.
- Deuteronomy 28:41 ಧರ್ಮೋಪದೇಶಕಾಂಡ 28:41ಕುಮಾರ ಕುಮಾರ್ತೆಯರನ್ನು ಪಡೆಯುವಿ; ಆದರೆ ಅವರ ಕೂಡ ಸಂತೋಷಿಸು ವದಿಲ್ಲ; ಯಾಕಂದರೆ ಅವರು ಸೆರೆಯಾಗಿ ಹೋಗು ವರು.